ಜಿಲ್ಲೆಗಳು

ಮದ್ದೂರು ತಾಲ್ಲೂಕು ಸಮ್ಮೇಳನ ಅಧ್ಯಕ್ಷರಾಗಿ ಮಾಜಿ ಪತ್ರಕರ್ತ ಡಾ.ಬೆಳ್ಳೂರು ವೆಂಕಟಪ್ಪ ಆಯ್ಕೆ

ಮದ್ದೂರು: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ತೀರ್ಮಾನಿಸಿರುವುದಾಗಿ ಕಸಾಪ ಜಿಲ್ಲಾಧ್ಯಕ್ಷ ರವಿಕುಮಾರ್ ಚಾಮಲಾಪುರ ತಿಳಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು, ಮಾರ್ಚ್.೨ರ ಗುರುವಾರದಂದು ಪಟ್ಟಣದ ಹಳೇ ಬಸ್‌ ನಿಲ್ದಾಣದಲ್ಲಿ ತಾಲೂಕು ಸಮ್ಮೇಳನವನ್ನು ಹಮ್ಮಿಕೊಂಡಿದ್ದು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕವಿ ಹಾಗೂ ವಿಮರ್ಶಕ, ಡಾ. ಬೆಳ್ಳೂರು ಸಿ.ವೆಂಕಟಪ್ಪ ಅವರನ್ನು ಆಯ್ಕೆ ಮಾಡಲಾಗಿದೆ  ಎಂದರು.
ಪಟ್ಟಣದಲ್ಲಿ ನಡೆಯುವ ೯ನೇ ಕನ್ನಡ ಸಾಹಿತ್ಯ ಸಮ್ಮೆಳನವನ್ನು ಕನ್ನಡದ ಹಬ್ಬದಂತೆ ಆಚರಿಸಲು ಪ್ರತಿಯೊಬ್ಬ ಅಭಿಮಾನಿಯು ಶ್ರಮಿಸುವ ಜತೆಗೆ ತಮ್ಮ ಸಹಕಾರ ಅತ್ಯಗತ್ಯವಾಗಿದ್ದು ಸಾಹಿತ್ಯಾಸಕ್ತರು, ಪ್ರಗತಿಪರ ಸಂಘಟನೆಗಳ ಚಿಂತಕರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.

ಸಮ್ಮೇಳನಾಧ್ಯಕ್ಷರ ಪರಿಚಯ :
ತಾಲ್ಲೂಕಿನ ಕೆ.ಬೆಳ್ಳೂರು ಗ್ರಾಮದ ಚಿಕ್ಕೇಗೌಡ-ದೊಡ್ಡತಾಯಮ್ಮ ದಂಪತಿಗಳ ಪುತ್ರ ಡಾ.ಬೆಳ್ಳೂರು ಸಿ. ವೆಂಕಟಪ್ಪ ಅವರು ೧೯೭೪ರ ಮೇ ೫ರಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ್ದಾರೆ.
ಡಾ.ಬೆಳ್ಳೂರು ಸಿ. ವೆಂಕಟಪ್ಪ ಅವರು ಕವಿ, ವಿಮರ್ಶಕ, ಪತ್ರಕರ್ತ ಹಾಗೂ ಅನುವಾದದಲ್ಲೂ ಆಸಕ್ತಿ ಬೆಳೆಸಿಕೊಂಡಿರುವ ಇವರು ಇತ್ತೀಚೆಗೆ ಖಲೀಲ್‌ಜಿಬ್ರಾನ್ ಅವರ ಫ್ರ್ರೊಪೆಟ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದು ಪ್ರಸಕ್ತ ಇವರು ರಾಮನಗರ ಜಿಲ್ಲೆಯ ಕೂನಗಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಅಧ್ಯಾಪನ ಹಾಗೂ ಅಧ್ಯಯನದಲ್ಲಿ ನಿರತರಾಗಿದ್ದಾರೆ.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ  ಸಂಶೋಧನಾ ವಿದ್ಯಾರ್ಥಿಯಾಗಿ ಡಾ. ರಾಗೌ ಅವರ ಮಾರ್ಗದರ್ಶನದಲ್ಲಿ ೨೦೦೦-೨೦೦೫ರ ತನಕ ಸಂಶೋಧಕರಾಗಿ ’ಪ್ರಗತಿಶೀಲ ಸಾಹಿತ್ಯ ಮತ್ತು ಚಳುವಳಿ’ ಕುರಿತು ನಿಬಂಧವನ್ನು ಬರೆದು ೨೦೦೬ರಲ್ಲಿ ಡಾಕ್ಟರೇಟ್ ಗಳಿಸಿದರು.
ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣವನ್ನು ಕೆ. ಹೊನ್ನಲಗೆರೆ ಸರಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿ ಕಾಲೇಜು ಶಿಕ್ಷಣವನ್ನು ಭಾರತಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಳಿಕ ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂಎ ಪದವಿ ಗಳಿಸಿದ್ದಾರೆ.
ಇವರು ಸಂಜೆವಾಣಿ, ಆಂದೋಲನ, ಪೌರವಾಣಿ, ಸೂರ್ಯೋದಯ ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪಸಂಪಾದಕರಾಗಿ ಕರ್ತವ್ಯನಿರ್ವಹಿಸಿದ್ದು ‘ಮಲ್ಲಿಗೆ ಮೊಗ್ಗು, ಹೊಳೆ ಮೇಲೆ ಮಳೆ’ ಕಾವ್ಯಗಳನ್ನು ರಚಿಸಿ ಪ್ರಗತಿ ಶೀಲ ಸಾಹಿತ್ಯ ಕಥನ, ಪ್ರಗತಿ ಶೀಲ ಚಳುವಳಿ ಬಗ್ಗೆ ಸಂಶೋಧನೆ, ’ದೇವಕಣಗಿಲೆ’ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ವ್ಯಕ್ತಿತ್ವ ಜೀವನ ಚರಿತ್ರೆ ಹಾಗೂ ದೇವರು ಧರ್ಮಹಿಂಸೆ, ಭಾರತರತ್ನ ಪುರಸ್ಕೃತರು ಇನ್ನಿತರೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಿದ್ದ  ಸಮಕಾಲಿನ ಕನ್ನಡ ಸಾಹಿತ್ಯ, ಸೃಜನ ಶೀಲತೆ ಮತ್ತು ಸರಕು ಸಂಸ್ಕೃತಿ, ಹೆಜ್ಜೆ-ಗೆಜ್ಜೆ, ರಂಗವೇದಿಕೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದು, ಮೈಸೂರು ದಸರ ಕವಿಗೋಷ್ಠಿಯಲ್ಲಿ ಕವಿತೆ ವಾಚನ ಮತ್ತು ಆದಿಚುಂಚನಗಿರಿ ಮಠದಲ್ಲಿ ನಡೆದ ರಾಷ್ಟ್ರೀಯ ಕವಿಗೋಷ್ಠಿಯಲ್ಲಿ ಕವಿತಾ ವಾಚನ ನಡೆಸಿಕೊಟ್ಟಿದ್ದಾರೆ.
ಗೋಷ್ಠಿಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ವಿ.ಸಿ. ಉಮಾಶಂಕರ್, ಉಪಾಧ್ಯಕ್ಷ ುು ಮಹಾಲಿಂಗ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಎಂ. ಕ್ರಾಂತಿಸಿಂಹ, ಪದಾಧಿಕಾರಿಗಳಾದ ಬಸವರಾಜು, ತಿಪ್ಪೂರು ರಾಜೇಶ್, ಮನು, ಶಿವಲಿಂಗ, ವಿಷಕಂಠ, ಟಿ.ಸಿ. ವಸಂತ, ಮಂಜುಳಾ, ಜಯಲಕ್ಷ್ಮಿ ದಿವ್ಯ, ಲತಾ, ಶಶಿಕಲಾ, ಪಲ್ಲವಿ, ಲೀಲಮ್ಮ ಇತರರಿದ್ದರು.

andolanait

Recent Posts

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

2 hours ago

ಓದುಗರ ಪತ್ರ: ಟ್ರಾಫಿಕ್ ದಂಡ: ಸುಪ್ರೀಂ ಸಲಹೆ ಸ್ವಾಗತಾರ್ಹ

ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…

2 hours ago

ಓದುಗರ ಪತ್ರ: ಆಕಾಶದಲ್ಲಿ ಶೌರ‍್ಯಪ್ರದರ್ಶನಕ್ಕೊಂದು ಸಲಾಂ

ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಬೈನಿಂದ ಇಸ್ರೇಲ್‌ನ ಅವೀವ್‌ಗೆ ತೆರಳುತ್ತಿದ್ದ -ದುಬೈ ವಿಮಾನ ಹೈಜಾಕ್ ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್…

2 hours ago

ಬ್ರೇಕ್ ಕಿತ್ತ ಬಸ್ಸಿನಲ್ಲಿ ಇಳಿಜಾರಿನಲ್ಲಿ ಸಾಗುತ್ತಿದ್ದೇವೆ…

ಡಾ . ಚೇತನ ಗುರುರಾಜು, ಮುಖ್ಯ ಶಿಕ್ಷಕಿ, ಅರಿವು ವಿದ್ಯಾಸಂಸ್ಥೆ, ಮೈಸೂರು  ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿವೆ ಹಲವು ದೇಶಗಳು…

2 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಸ್ವಾವಲಂಬನೆಯ ಸಂಕೇತ ಮಹಾತ್ಮ ಗಾಂಧೀಜಿ ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ಹಾಗೂ ರಾಷ್ಟ್ರಪಿತ ಎಂದು…

2 hours ago

ಜಗದ ಸೌಹಾರ್ದ ನದಿ ಗಾಂಧಿ

ಪರಶುರಾಮ್, ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ ಗಾಂಧಿ ವಿಚಾರಗಳನ್ನು ಸಂವಾದದ ಮೂಲಕ ಮುನ್ನಡೆಸಲು ಸಾಧ್ಯವೇ? ಅಥವಾ ಅನುಸರಿಸಲು ಸಾಧ್ಯವಾಗದಿರುವ ನಡೆಯನ್ನು…

3 hours ago