ಕು.ಯಶಸ್ವಿನಿ ಭರತನಾಟ್ಯ ರಂಗ ಪ್ರವೇಶ

ನಾದ ವಿದ್ಯಾಲಯ ಸಂಗೀತ ಮತ್ತು ನೃತ್ಯ ಅಕಾಡೆಮಿ ವತಿಯಿಂದ ವಿದುಷಿ ಮಿತ್ರಾನ ನವೀನ್ ಅವರ ಶಿಷ್ಯೆ ಕು.ಯಶಸ್ವಿನಿ ಬಿ.ಎಂ. ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಭಾನುವಾರ ಸಂಜೆ 5.30 ಕ್ಕೆ ಮೈಸೂರಿನ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ನಡೆಯಲಿದೆ.

ಸಮಾರಂಭದ ಮುಖ್ಯ ಅತಿಥಿಗಳಾಗಿ ನಾಟ್ಯಾಚಾರ್ಯ ಪ್ರೊ.ಕೆ.ರಾಮಮೂರ್ತಿರಾವ್, ಅಮೃತ ವಿಶ್ವವಿದ್ಯಾಪೀಠಂನ ಪ್ರಾಂಶುಪಾಲರಾದ ಡಾ.ಜಿ. ರವೀಂದ್ರನಾಥ್ ಹಾಗೂ ನಗರ ಪಾಲಿಕೆ ಸದಸ್ಯ ಎಂ.ಸಿ.ರಮೇಶ್ ಭಾಗವಹಿಸುವರು.

ಕಾರ್ಯಕ್ರಮವನ್ನು ವಿದುಷಿ ಮಿತ್ರನವೀನ್ ನಿರ್ದೇಶಿಸಿ, ನೃತ್ಯ ಸಂಯೋಜಿಸಿದ್ದಾರೆ.ವಿ. ನವೀನ್ ಎಂ.ಎಸ್.ಅಂದಗಾರ್ ಗಾಯನ, ವಿ. ವಿವೇಕ ಕೃಷ್ಣ ಕೊಳಲು, ವಿ.ಜಿ.ಎಸ್. ನಾಗರಾಜ್ ಮೃದಂಗ ಸಹಕಾರ ನೀಡಲಿದ್ದಾರೆ. ಡಾ.ಭುವನೇಶ್ವರಿ ನಿರೂಪಣೆ ನಡೆಸಿಕೊಡುವರು.

ಕು.ಯಶಸ್ವಿನಿ ಬಿ.ಎಂ.ಅವರು ಮಂಜುನಾಥ್ ಮತ್ತು ಭವಾನಿ ದಂಪತಿಯ ಪುತ್ರಿ, ವಿದುಷಿ ಮಿತ್ರಾ ನವೀನ್ ಅವರ ಬಳಿ 15 ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ಅಮೃತ ವಿದ್ಯಾಪೀಠಂ ನಲ್ಲಿ ದ್ವಿತೀಯ ವರ್ಷದ ಬಿ.ಕಾಂ. ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.


‘ಮೇರಿ ಆವಾಜ್ ಸುನೋ’ ಗಾನ ಸುಧೆ

ಮೈಸೂರಿನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಭಾನುವಾರ ಸಂಜೆ 5-30 ಕ್ಕೆ ‘ಮೇರಿ ಆವಾಜ್ ಸುನೋ’ ಹಳೆಯ ಹಿಂದಿ ಚಲನ ಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.ಗಾಯನ ಕ್ಷೇತ್ರದಲ್ಲಿ ಆಸಕ್ತಿ ಇರಿಸಿಕೊಂಡಿರುವ ವೃತ್ತಿಯಲ್ಲಿ ವಕೀಲರಾದ ಚಂದ್ರಶೇಖರ್ ಅವರು ತಮ್ಮ ಸ್ನೇಹಿತರೊಡಗೂಡಿ ಈ ಗಾಯನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮೈಸೂರಿನ ಗಾಯಕರಾದ ಅಮೂಲ್ಯ, ದೇವಿಕಾ, ಡಾ.ರೇಖಾ, ಸುಭಾಷ್, ಪುಷ್ಪಲತಾ, ಜಾಯ್ಸ್, ಗುರುರಾಜ್, ವಕೀಲ ಚಂದ್ರಶೇಖರ್ ಅವರು ಖ್ಯಾತ ಗಾಯಕರಾದ ಕಿಶೋರ್ ಕುಮಾರ್, ಮಹಮದ್ ರಫಿ, ಆಶಾಬೋಸ್ಲೆ, ಲತಾಂಗೇಶ್ಕರ್ ಅವರ ಕಂಠಸಿರಿಯಿಂದ ಹೊರಹೊಮ್ಮಿರುವ ಜನಪ್ರಿಯ ಗೀತೆಗಳ ಗಾಯನ ಸುಧೆಯನ್ನು ಹರಿಸಲಿದ್ದಾರೆ.

ಕೀಬೋರ್ಡ್: ಪ್ರಸನ್ನಕುಮಾರ್ ಹಾಗೂ ದೀಪಕ್, ತಬಲಾ: ಕಿರಣ್, ರಘುನಾಥ್, ರಿದಂ: ವಿನ್ಸಂಟ್, ಗಿಟಾರ್: ವಿನಯ್ ಹಾಗೂ ನೀತೂ ನಿನಾದ್ ಕೊಳಲು ಸಹಕಾರ ನೀಡಲಿದ್ದಾರೆ. ಸಂಜೆ 5.30ಕ್ಕೆ ಆರಂಭವಾಗುವ ಕಾರ್ಯಕ್ರಮ ರಾತ್ರಿ 9.30 ರ ವರೆಗೂ ನಡೆಯಲಿದೆ.


ಪಂ.ವೆಂಕಟೇಶ್ ಕುಮಾರ್ ಗಾಯನ ನಾಳೆ

ಶ್ರೀ ಪಂಚಾಕ್ಷರ ಗವಾಯಿಗಳವರ 131 ನೇ ಜನ್ಮದಿನ ಹಾಗೂ ಪದ್ಮಭೂಷಣ ಡಾ.ಎಂ. ಪುಟ್ಟರಾಜಗವಾಯಿಗಳವರ 109 ನೇ ಜನ್ಮದಿನ ಆಚರಣೆ ಮತ್ತು ಸಂಗೀತೋತ್ಸವ ಕಾರ್ಯಕ್ರಮವನ್ನು ಹುಣಸೂರಿನ ಶಿಕ್ಷಕರ ಭವನದಲ್ಲಿ ಭಾನುವಾರ ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ.

ಸಂಜೆ 4 ಗಂಟೆಗೆ ವೇದಿಕೆ ಕಾರ್ಯಕ್ರಮವಿದ್ದು, 6 ಗಂಟೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಡಿತ್ ವೆಂಕಟೇಶ್‌ಕುಮಾರ್ ಅವರಿಂದ ಗಾಯನ ಕಾರ್ಯಕ್ರಮವಿದೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿಗಳ ಸಂಗೀತ ಪಾಠಶಾಲೆಯ ಮಕ್ಕಳಿಂದ ಗಾಯನ ಕಾರ್ಯಕ್ರಮವಿದೆ.

andolanait

Recent Posts

ಮದ್ದೂರಿನಲ್ಲಿ ನಿವೃತ್ತ ಹಾಸ್ಟೆಲ್ ಅಧೀಕ್ಷಕನ ಮನೆ ಮೇಲೆ ಲೋಕಾಯುಕ್ತ ದಾಳಿ

ಮದ್ದೂರು: ಮದ್ದೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ಹಾಸ್ಟೆಲ್…

36 mins ago

ಮಂಡ್ಯದಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ

ಮಂಡ್ಯ: ನಗರದ ಗಾಂಧಿನಗರದಲ್ಲಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಗಾಂಧಿನಗರ ನಿವಾಸಿ 47 ವರ್ಷದ ಪುರುಷೋತ್ತಮ್…

3 hours ago

ಓದುಗರ ಪತ್ರ: ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಸ್ವಾಗತಾರ್ಹ

ಮೈಸೂರು ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತೆಯ ಜೀವನಾಡಿಗಳಾಗಿರುವ ಪೌರಕಾರ್ಮಿಕರಿಗೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ…

8 hours ago

ಓದುಗರ ಪತ್ರ: ನಿಜವಾದ ಭಾವೈಕ್ಯತೆಯ ಸಂಗಮ

ಮಂಡ್ಯ ಜಿಯ ಮದ್ದೂರಿನಲ್ಲಿ ಭಾನುವಾರ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಗೌರಿ -ಗಣೇಶ ಮೂರ್ತಿಗಳನ್ನು ಹೊತ್ತ ಟ್ರ್ಯಾಕ್ಟರ್…

9 hours ago

ಓದುಗರ ಪತ್ರ: ನಾಡಿಗೆ ಮಾದರಿ!

ನಾಡಿಗೆ ಮಾದರಿ! ವಿವಿಧ ಧರ್ಮ ಸಮುದಾಯಗಳ ಮನಸುಗಳ ಅಕ್ಕರೆಯಲಿ ಬೆಸೆವ ಸ್ನೇಹ ಸೌಹಾರ್ದ ಸಾಮರಸ್ಯದ ಪ್ರತೀಕ, ಹಬ್ಬ ಉತ್ಸವಗಳು! ನಾಡಿಗೆ…

9 hours ago

ಓದುಗರ ಪತ್ರ: ಪ್ರೀತಿಯ ಅಣ್ಣ ಪ್ರತಾಪ್ ಸಿಂಹ…

ನಾವಿಬ್ಬರು ಪ್ರೊ. ಬಿ. ಪಿ. ಮಹೇಶ್ ಚಂದ್ರ ಗುರುಗಳ ಶಿಷ್ಯರು. ನಮ್ಮಿಬ್ಬರಿಗೂ ಪ್ರೊ. ಗುರು ಇಷ್ಟ. ನೀನು ಮಂಗಳೂರು ವಿವಿ,…

9 hours ago