ಕೊಡಗು

ಅನಾರೋಗ್ಯ ಹಿನ್ನಲೆ ದುಬಾರೆ ಸಾಕಾನೆ ʻತಕ್ಷʼ ಸಾವು

ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ.

ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ ಆನೆಯು ಅನಾರೋಗ್ಯದಿಂದ ಸಾವನಪ್ಪಿದೆ. ತಕ್ಷ ಆನೆಯನ್ನು ೨೦೨೪ರ ಡಿ.೨೮ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸೆರಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ಕರೆತರಲಾಗಿತ್ತು. ಕಳೆದ ಜು.೨೧ರಂದು ಎಲ್ಲಾ ರೀತಿಯ ತರಬೇತಿ ನೀಡಿ ಕ್ರಾಲ್‌ನಿಂದ ಹೊರಗೆ ಬಿಡಲಾಗಿತ್ತು.

ಕಳೆದ ೧೦ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತಕ್ಷ ಆನೆಯ ಆರೋಗ್ಯದಲ್ಲಿ ಡಿ.೬ರಿಂದ ತೀವ್ರ ವ್ಯತ್ಯಾಸ ಕಂಡುಬಂದಿತ್ತು. ವೈದ್ಯಾಧಿಕಾರಿ ಡಾ. ಮುಜೀಬ್ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಕೊನೆಯುಸಿರೆಳೆದಿದೆ.

ಮಂಗಳವಾರ ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವಿಷ್ಟಿ ಉಪಸ್ಥಿತಿಯಲ್ಲಿ ಪಶು ವೈದ್ಯಾಧಿಕಾರಿಗಳಾದ ಡಾ. ಮುಜೀಬ್, ಡಾ. ಚಿಟ್ಟಿಯಪ್ಪ ಹಾಗೂ ಡಾ. ಸಂಜೀವ್ ಕುಮಾರ್ ಸಿಂಧೆ ಇವರಿಂದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆನೆಯ ಸ್ಯಾಂಪಲ್ಸ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಮಡಿಕೇರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಅಭಿಷೇಕ್, ಸೋಮವಾರಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ್, ಕುಶಾಲನಗರ ವಲಯ ಅರಣ್ಯಾಧಿಕಾರಿ ಆರ್. ರಕ್ಷಿತ್, ದುಬಾರೆ ಕ್ಯಾಂಪಿನ ಉಪ ವಲಯ ಅರಣ್ಯಾಧಿಕಾರಿ ಕೆ.ಪಿ. ರಂಜನ್, ದುಬಾರೆ ಶಾಖಾ ಉಪ ವಲಯ ಅರಣ್ಯಾಧಿಕಾರಿ ವೆಂಕಟೇಶ್ ನಲವಾಡಿ ಹಾಗೂ ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.

 

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ | ಪ್ರಾಣಿ, ಪಕ್ಷಿಗಳಿಗೆ ನೀರು ಕೊಡಿ

ಬೇಸಿಗೆ ಆರಂಭವಾಗುವುದೇ ತಡ ಪ್ರತಿಯೊಬ್ಬರಿಗೂ ಬಾಯಾರಿಕೆ ಹೆಚ್ಚಾಗಿ, ಜಾಸ್ತಿ ನೀರು ಕುಡಿಯಬೇಕಾಗುತ್ತದೆ. ಬಿಸಿಲಿನ ಬೇಗೆ ಹೆಚ್ಚಾಗುವುದರಿಂದ ಎಂತಹವರಿಗೂ ವಿವಿಧ ರೀತಿಯ…

27 mins ago

ಓದುಗರ ಪತ್ರ | ಸರ್ಕಾರಿ ಶಾಲೆಗಳಿಗೆ ಲ್ಯಾಪ್ ಟಾಪ್, ವೈಫೈ ಸೌಲಭ್ಯ ಕಲ್ಪಿಸಿ

ಈಗ ಶಾಲೆಯಲ್ಲಿ ಶಿಕ್ಷಕರು ಕೇವಲ ಪಠ್ಯ ಬೋಧಕರಾಗಿ ಮಾತ್ರ ಉಳಿದಿಲ್ಲ. ಬೋಧನೆಯ ಜೊತೆ ಜೊತೆಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುವುದು, ಮಧ್ಯಾಹ್ನದ…

57 mins ago

ಆಂದೋಲನ ವಿಶೇಷ ; ಸೋನಂ ವಾಂಗ್ಚುಕ್ ದಿಢೀರ್ ಬಿಡುಗಡೆ ‌

• ಆರೋಪ ಸಾಬೀತು ಮಾಡಲು ಕೇಂದ್ರ ವಿಫಲ • ಸುಪ್ರೀಂ ಮುಜುಗರದಿಂದ ಪಾರು? ಪರಿಸರ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಾಡಿದ…

3 hours ago

ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆಗೆ ಸಕಲ ಸಿದ್ಧತೆ

ಮಹಾದೇಶ್‌ ಎಂ.ಗೌಡ ಹನೂರು : ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸೋಮವಾರದಿಂದ ಪ್ರಾರಂಭವಾಗಿರುವ ಯುಗಾದಿ ಜಾತ್ರಾ ಮಹೋತ್ಸವ ಮಾರ್ಚ್ 19ರವರೆಗೆ…

3 hours ago

ಮತ್ತೆ ಚಿಗುರೊಡೆದ ಎಂಡಿಎ ಹೊಸ ಬಡಾವಣೆಯ ಕನಸು

ಅಧಿಕಾರಿಗಳ ಮನವೊಲಿಕೆಗೆ ಸಮ್ಮತಿಸುತ್ತಿರುವ ಭೂ ಮಾಲೀಕರು ಕೆ.ಬಿ.ರಮೇಶನಾಯಕ ಮೈಸೂರು : ದಶಕಗಳಿಂದಲೂ ಬಡ-ಮಧ್ಯಮ ವರ್ಗದ ಜನರಿಗೆ ನಿವೇಶನ ಹಂಚಿಕೆ ಮಾಡಲು,…

3 hours ago

ಕೇರ್ ಟೇಕರ್ ಕೆಲಸಕ್ಕೆ ಸೇರಿ ಮನೆ ದರೋಡೆ; ಆರೋಪಿ ಬಂಧನ

ಮಡಿಕೇರಿ: ವಯೋವೃದ್ಧರೊಬ್ಬರ ಮನೆಯಲ್ಲಿ ಹೋಂ ನರ್ಸಿಂಗ್(ಕೇರ್ ಟೇಕರ್) ಕೆಲಸಕ್ಕೆಂದು ಸೇರಿಕೊಂಡು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ…

14 hours ago