ಕೊಡಗು

ಮಕ್ಕಳು ಈಗಿನಿಂದಲೇ ದೇಶ ಪ್ರೇಮ ಬೆಳೆಸಿಕೊಳ್ಳಬೇಕು: ಡಾ.ಲವೀನ್ ಚೆಂಗಪ್ಪ ಸಲಹೆ

ಮಡಿಕೇರಿ: ಸ್ವತಂತ್ರ ಹೋರಾಟಗಳು ದಿನ ಒಂದಕ್ಕೆ ಸಿಮೀತವಾಗದೆ ನೂರಾರು ವರ್ಷಗಳ ಸುದೀರ್ಘ ಹೋರಾಟವಾಗಿದ್ದವು.  ಅಂತಹ ಅದೆಷ್ಟೊ ತ್ಯಾಗ ಬಲಿದಾನದ ಮೂಲಕ ಭಾರತೀಯರು ಸ್ವತಂತ್ರ ಪಡೆದಿದ್ದಾರೆ ಎಂದು ರೋಟರಿ ಸಂಸ್ಥೆಯ ವಲಯ ಅಧಿಕಾರಿ ಡಾ. ಲವೀನ್ ಚೆಂಗಪ್ಪ  ಹೇಳಿದರು.

ಸಾಧೀಕ್ ಆರ್ಟ್ ಲಿಂಕ್ಸ್ ವಿರಾಜಪೇಟೆ ಮತ್ತು ರೋಟರಿ ಕ್ಲಬ್ ವಿರಾಜಪೇಟೆ ಶಾಖೆಯ ವತಿಯಿಂದ ರೋಟರಿ ಕ್ಲಬ್‌ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ಕಲಾ ಉತ್ಸವ ೨೦೨೪ ಅಂಗವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಒಂದು ದಿನ ದೇಶ ಭಕ್ತಿ ಬಿಂಬಿಸುವ ಚಿತ್ರ ಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸತತ ಹೋರಾಟದ ಫಲವಾಗಿ ನಮಗೆ ಸ್ವತಂತ್ರ ಲಭಿಸಿದೆ. ಕಿರು ಪ್ರಾಯದ ಮಕ್ಕಳು ಸ್ವತಂತ್ರ ಭಾರತದ ಹೋರಾಟ, ಮಹನೀಯರ ತ್ಯಾಗ ಬಲಿದಾನಗಳ ಕರಾಳ ಚರಿತ್ರೆಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.

ಮಕ್ಕಳು ಈಗಿನಿಂದಲೇ ದೇಶ ಭಕ್ತಿ ಮೈಗೂಡಿಸಿಕೊಂಡು ಜಾಗೃತ ಭಾರತ ನಿರ್ಮಾಣ ಕ್ಕೆ ಮಕ್ಕಳು ಮುಂದಾಗಬೇಕು. ಸದೃಡ ಭಾರತದ ಕನಸು ನನಸಾಗಬೇಕು ಎಂದರು.

ರೋಟರಿ ಕ್ಲಬ್ ವಿರಾಜಪೇಟೆ ಅದ್ಯಕ್ಷರಾದ ಪ್ರಣವ್ ಚಿತ್ರಭಾನು ಮಾತನಾಡಿ, ನಾಡು ನನ್ನದು ದೇಶ ನನ್ನದು ಎಂಬ ಭಾವರ್ಥ ನಮ್ಮ ಧ್ಯೇಯ ವಾಕ್ಯವಾಗಬೇಕು. ಬಾಲ್ಯದಿಂದಲೇ ಸ್ವತಂತ್ರ ಭಾರತ ವೀರ ಚರಿತ್ರೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚಿತ್ರಕಲಾವಿದರಾದ ಸಾಧೀಕ್ ಅವರೊಂದಿಗೆ ಬೆರೆತು ಕಾರ್ಯಕ್ರಮ ಅಯೋಜಿಸಲಾಗಿದೆ. ದೇಶ ಭಕ್ತಿ ಪರಿಕಲ್ಪನೆ ಎಲ್ಲಾ ವಿದ್ಯಾರ್ಥಿಯಲ್ಲಿ ಜಾಗೃತವಾಗಲಿ ಎಂದು ಹೇಳಿದರು.

ಚಿತ್ರಕಲಾ ಶಿಬಿರದಲ್ಲಿ ನಾಪೊಕ್ಲು, ಮೂರ್ನಾಡು,ಸಿದ್ದಾಪುರ,ಅಮ್ಮತ್ತಿ,ಪಾಲಿಬೆಟ್ಟ, ಗೋಣಿಕೊಪ್ಪಲು ಮತ್ತು ವಿರಾಜಪೇಟೆ ನಗರದ ವಿವಿಧ ಶಾಲೆಗಳ ಸುಮಾರು 95 ವಿದ್ಯಾರ್ಥಿಗಳು ಚಿತ್ರಕಲಾ ಶಿಭಿರದಲ್ಲಿ ಭಾಗವಹಿಸಿದ್ದರು. ೦೧ ರಿಂದ ೦೨ನೇ ತರಗತಿ, ೦೩ ರಿಂದ ೦೪ ನೇ ತರಗತಿ,೦೫ ರಿಂದ ೦೭ ನೇ ತರಗತಿ,ಮತ್ತು ೦೮ ರಿಂದ ೧೦ ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಎರ್ಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ ದ್ವೀತಿಯ, ಮತ್ತು ತೃತೀಯ ಎಂದು ಪಾರಿತೋಷಕಗಳನ್ನು ನೀಡಲಾಯಿತು.

ರೋಟರಿ ಕ್ಲಬ್ ವಿರಾಜಪೇಟೆಯ ಹಿರಿಯ ಸದಸ್ಯರಾದ ಸುದರ್ಶನ್ ರೈ ,ಸಂಸ್ಥೆಯ ಉಪ ಅದ್ಯಕ್ಷರಾದ ಕೆ.ಹೆಚ್ ಆದಿತ್ಯ, ಕಾರ್ಯಕ್ರಮ ಅಯೋಜಕರಾದ ಸಾಧೀಕ್ ಹಂಸ ಮತ್ತು ತಾಂತ್ರಿಕ ಸದಸ್ಯರು, ರೋಟರಿ ಕ್ಲಬ್ ನ ಸದಸ್ಯರು ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ತಿರುವನಂತಪುರಂ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದ ವಿರುದ್ಧ ಕಾಂಗ್ರೆಸ್‌ ಮತ್ತು ಸಿಪಿಎಂ…

4 mins ago

ಸಭೆ ನಡೆಸುತ್ತಿರುವಾಗಲೇ ತೀವ್ರ ಅಸ್ವಸ್ಥ ; ಡಿಸಿಎಂ ಪವನ್‌ ಕಲ್ಯಾಣ್‌ಗೆ ದಿಢೀರ್‌ ಶಸ್ತ್ರ ಚಿಕಿತ್ಸೆ,

ಹೈದರಾಬಾದ್ : ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಅವರಿಗೆ ಹೈದರಾಬಾದ್‌ನಲ್ಲಿ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ…

32 mins ago

ಸರ್ವಾಧಿಕಾರಿ ಬಿಜೆಪಿಯೇ ಮಹಿಳಾ ವಿರೋಧಿ : ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿ

ಬೆಂಗಳೂರು : ಮಹಿಳಾ ಮೀಸಲಾತಿ ಪರಿಕಲ್ಪನೆ ಕಾಂಗ್ರೆಸ್‌ನ ಕೂಸು. ಮಸೂದೆಗೆ ಸೋಲಾಗಲಿದೆ ಎಂದು ಗೊತ್ತಿದ್ದರೂ ಸರ್ವಾಧಿಕಾರಿಯಂತೆ ಯಾವುದೇ ಚರ್ಚೆ ಮಾಡದೆ,…

1 hour ago

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಕೊಲೆ ಪ್ರಕರಣ : ಎಸ್‌.ಪಿ.ಮಲ್ಲಿಕಾರ್ಜುನ ಹೇಳಿದ್ದೇನು?

ಮೈಸೂರು : ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ…

1 hour ago

ಇಟಲಿಯಲ್ಲಿ ಇಬ್ಬರು ಭಾರತೀಯರಿಗೆ ಗುಂಡಿಕ್ಕಿ ಹತ್ಯೆ

ರೋಮ್‌ : ಇಟಲಿಯ ಬರ್ಗಾಮೊ ಪ್ರಾಂತ್ಯದ ಕೊವೊದಲ್ಲಿ ಇಬ್ಬರು ಭಾರತೀಯರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕೊವೊ ನಿವಾಸಿ ರಾಗಿಂದರ್ ಸಿಂಗ್…

2 hours ago

ಮೈಸೂರು | ಪಬ್‌ನಲ್ಲಿ ಗಲಾಟೆ ; ಓರ್ವ ಯುವಕನ ಕೊಲೆ

ಮೈಸೂರು : ಪಬ್‌ನಲ್ಲಿ ನಡೆದ ಗಲಾಟೆ ಪರಿಣಾಮ ಓರ್ವ ಯುವಕ ಕೊಲೆಯಾಗಿರುವ ಘಟನೆ ಮೈಸೂರಿನ ವಿಜಯನಗರದ ಎರಡನೇ ಹಂತದ ರೆಸ್ಟೋರೆಂಟ್‌ನಲ್ಲಿ…

2 hours ago