ಮೈಸೂರು: ಕನ್ನಡ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಜನ ಬರುತ್ತಿಲ್ಲ ಎಂಬ ಕೂಗಿನ ನಡುವೇ, ಇತ್ತೀಚೆಗೆ ತೆರೆ ಕಂಡ ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾ ಚಿತ್ರಮಂದಿರಕ್ಕೆ ಜನ ಕರೆತರುವಲ್ಲಿ ಯಶಸ್ವಿ ಕಾಣುತ್ತಿದೆ.
ಚಂದನವನದಲ್ಲಿ ಸಾಕಷ್ಟು ಸೌಂಡ್ ಮಾಡುತ್ತಿರುವ ಭೀಮ ಸಿನಿಮಾವನ್ನು ವಿಜಯ್ ನಿರ್ದೇಶಿಸಿ ನಟಿಸಿದ್ದಾರೆ. ದುನಿಯಾ ವಿಜಯ್ ಸಿನಿಮಾಗಳ ಹಿಟ್ ಲೀಸ್ಟ್ಗೆ ಮತ್ತೊಂದು ಸಿನಿಮಾ ಸೇರಿದೆ. ಆದರೆ ಸಿನಿಮಾ ಪ್ರಮೋಷನ್ ನಟ ದುನಿಯಾ ವಿಜಯ್ ಗೆ ಕಂಟಕವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮಾದಕ ವಸ್ತುಗಳ ಕುರಿತು ಬಿಂಬಿತವಾಗಿರುವ ಭೀಮಾ ಸಿನಿಮಾದಲ್ಲಿ ಅವುಗಳನ್ನು ತೊಡೆದು ಹಾಕಲು ಪೊಲೀಸರು ಹರಸಾಹಸ ಮಾಡುತ್ತಾರೆ. ರಿಲೀಸ್ ಆದ್ಮೇಲೆ ದುನಿಯಾ ವಿಜಯ್ ಸ್ವತಃ ಮಾದಕ ವಸ್ತುಗಳ ಪತ್ತೆ ಹಚ್ಚಿ ರೈಡ್ ಮಾಡಿದ್ದರು. ಅಷ್ಟೇ ಅಲ್ಲದೇ ಸಿನಿಮಾಗಳಲ್ಲಿ ಚೇಸ್ ಮಾಡುವ ರೀತಿ ಬೈಕ್ ಏರಿ ಚೇಸ್ ಮಾಡಿ ಮಾದಕ ಗಾಂಜ ಅಡ್ಡೆಗಳ ಬಳಿ ಹೋಗಿದ್ದರು.
ಇನ್ನೂ ಅಲ್ಲೇ, ಬಿದ್ದಿದ್ದ ಮಾದಕ ವಸ್ತುಗಳನ್ನು ತೋರಿಸಿ ರಿಪೋರ್ಟ್ ಮಾಡಿ ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹರಿಬಿಟ್ಟಿದ್ದರು. ಇನ್ನೂ ಸಿಸಿಬಿ ಕಚೇರಿ ಬಳಿ ಮಾದಕ ವಸ್ತು ಮಾರಾಟವಾಗುತ್ತಿದೆ ಎಂದು ದುನಿಯಾ ವಿಜಯ್ ಆರೋಪಿಸಿದ್ದರು.
ಸದ್ಯ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸಿಸಿಬಿ ಅಧಿಕಾರಿಗಳು ಮಾದಕ ವಸ್ತುಗಳ ಮಾರಾಟ ಜಾಲ ಮತ್ತು ಬಳಸುವವರನ್ನು ಟಾರ್ಗೆಟ್ ಮಾಡಿಕೊಂಡು ದಾಳಿ ನಡೆಸಲು ಸಿದ್ಧವಾಗಿದ್ದಾರೆ ಮತ್ತೊಂದು ಕಡೆ ದುನಿಯಾ ವಿಜಯ್ ಗೆ ನೊಟೀಸ್ ಕೊಟ್ಟು ಕರೆಸಿ ವಿಚಾರಣೆ ನಡೆಸಲು ಪ್ಲಾನ್ ಮಾಡಿಕೊಂಡಿದ್ದಾರೆ.
ಆಗಸ್ಟ್ 9 ಕ್ಕೆ ರಿಲೀಸ್ ಆಗಿರುವ ಭೀಮಾ ಚಿತ್ರ ಬಿಡುಗಡೆಯಾದ ವೇಳೆ ಚಾಮರಾಜನಗರದ ಕೆಲವು ಏರಿಯಾಗಳು ಮಾರುತ್ತಾರೆ ಎಂಬ ಹೇಳಿಕೆ ನೀಡಿದ್ದಾರೆ.
ಸಿಸಿಬಿ ಕಚೇರಿ ಬಳಿ ಡ್ರಗ್ ಮಾರಾಟದ ಬಗ್ಗೆ ಸಾಕ್ಷಿ ಇದೇ ಎಂದು ದುನಿಯಾ ವಿಜಯ್ ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ಮಾಹಿತಿ ಪಡೆದು ವಿಚಾರಣೆ ನಡೆಸಲು ಭೀಮ ನಾಯಕ ವಿಜಿಯನ್ನು ಕರೆಸಲು ಸಿಸಿಬಿ ಅಧಿಕಾರಿಗಳು ಚಿಂತನೆ ಮಾಡಿದ್ದಾರೆ.
ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…
ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…
ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…
ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…
ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…
ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…