ಮೈಸೂರು : ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಕರಣ ನಡೆದ 24 ಗಂಟೆಯಲ್ಲಿ ಆರೋಪಿ ಪತ್ತೆ ಹಚ್ಚಲಾಗಿದೆ. ಈ ಕೊಲೆಯ ಪ್ರಮುಖ ಆರೋಪಿ ಸಿದ್ದೇಶ್ ಮೇಸ್ತ್ರಿಯಾಗಿದ್ದ. ಆರೋಪಿ ಸಿದ್ದೇಶ್‌ನನ್ನು ಜವರಪ್ಪ ತನ್ನ ಮನೆಗೆ ಒಮ್ಮೆ ಕರೆದುಕೊಂಡು ಹೋಗಿದ್ದ. ಈ ವೇಳೆ ಜವರಪ್ಪನ ಹೆಂಡತಿ ಅಮೃತ ಪರಿಚಯವಾಗುತ್ತಾಳೆ. ಬಳಿಕ ಫೋನ್ ನಂಬರ್ ಪಡೆದು ಮಾತುಕತೆ ನಡೆಸುತ್ತಿರುತ್ತಾರೆ.
ಈ ವಿಚಾರವಾಗಿ ಆಗಾಗ ಪತಿ-ಪತ್ನಿ ನಡುವೆ ಸಣ್ಣ ಪುಟ್ಟದಾಗಿ ಗಲಾಟೆಯಾಗುತ್ತಿತ್ತು. ಪತ್ನಿ ಯಾವಾಗಲು ಫೋನ್‌ನಲ್ಲಿ ಹೆಚ್ಚು ಮಾತನಾಡುತ್ತಿರುತ್ತಾಳೆ ಎಂದು ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಇದೇ ಏಪ್ರಿಲ್.14ರಂದು ಅಮೃತ ತನ್ನ ಮಕ್ಕಳ ಜೊತೆ ತವರು ಮನೆಗೆ ಹೋಗಿರುತ್ತಾಳೆ. ಈ ವೇಳೆ ಹೆಂಡತಿ ನೋಡಲು ಬರುತ್ತೇನೆ ಎಂದು ಹೆಂಡತಿಗೂ ಮಾಹಿತಿ ನೀಡಿದ್ದ. ಗಂಡ ಬರುವ ಮಾಹಿತಿಯನ್ನು ಆರೋಪಿ ಸಿದ್ದೇಶ್‌ಗೆ ಅಮೃತ ತಿಳಿಸಿರುತ್ತಾಳೆ. ತನ್ನ ಗಂಡನ ಎಲ್ಲಾ ಚಲನವಲನವನ್ನು ಸಿದ್ದೇಶ್‌ಗೆ ಮಾಹಿತಿ ನೀಡುತ್ತಿರುತ್ತಾಳೆ. ಪತಿ ಇದ್ರೆ ಇಬ್ಬರ ಸಂಬಂಧಕ್ಕೆ ಅಡ್ಡಿ ಬರುತ್ತಾನೆ ಎಂದು ಕೊಲೆಗೆ ಸಂಚು ರೂಪಿಸಿದ್ದಾರೆ. ಸಿದ್ದೇಶ್ ತನ್ನ ಕಾರಿನಲ್ಲಿ ಮೃತ ಜವರಪ್ಪನನ್ನು ಬಾರ್ ಗೆ ಕರೆದುಕೊಂಡು ಹೋಗುತ್ತಾನೆ. ಈ ವೇಳೆ ಕಂಠ ಪೂರ್ತಿ ಕುಡಿಸಿ ಮನೆಗೆ ಬಿಡುವುದಾಗಿ ತಿಳಿಸುತ್ತಾನೆ. ಬಳಿಕ ಕಾರಿನಲ್ಲಿ ಬರುವ ವೇಳೆ ಮಾರ್ಗ ಮದ್ಯೆ ಜವರಪ್ಪನನ್ನು ಹೊಡೆದು ಉಸಿರುಗಟ್ಟಿಸಿ ಕೊಲೆ ಮಾಡುತ್ತಾನೆ. ನಂತರ ಮೃತ ದೇಹವನ್ನು ರಸ್ತೆಯಲ್ಲಿ ಬಿಸಾಡಿ ಅಪಘಾತ ಎಂದು ಬಿಂಬಿಸಲು ಮುಂದಾಗುತ್ತಾನೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತ ದೇಹದ ಗಾಯದ ಗುರುತನ್ನು ಗಮನಿಸಿ ಕೊಲೆ ಶಂಕೆ ವ್ಯಕ್ತಪಡಿಸುತ್ತಾರೆ. ಕೊಲೆ ಸಂಬಂಧ ಸ್ಥಳಕ್ಕೆ ನಾನು ಭೇಟಿ ನೀಡಿ ಎರಡು ತಂಡ ರಚಿಸಲಾಗಿತ್ತು. ಘಟನೆ ನಡೆದ 24 ಗಂಟೆ ಅವಧಿಯಲ್ಲಿ ಕೊಲೆಯ ರಹಸ್ಯ ಬಯಲಾಗಿದೆ. ಆರೋಪಿಯನ್ನು ಬಂದಿಸಲಾಗಿದೆ. ಈ ಕೊಲೆಯ ಸಂಚಿನಲ್ಲಿ ಅಮೃತಾಳ ಕೈವಾಡವು ಇದೆ ಎಂದು ಮಾಹಿತಿ ನೀಡಿದರು.
ನವದೆಹಲಿ: ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ನಡೆಸಿದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ…
ರೈಲ್ವೆ ಇಲಾಖೆಯಿಂದ ಅನುಮತಿ ಪಡೆದ ಮಾರಾಟಗಾರರು ಪ್ರತಿನಿತ್ಯ ರೈಲುಗಳಲ್ಲಿ ಕಾಫಿ, ಟೀ, ಇಡ್ಲಿ, ರೈಸ್ ಬಾತ್ ಮೊದಲಾದ ಆಹಾರ ಪದಾರ್ಥಗಳು,…
ಕರ್ನಾಟಕ ವಿದ್ಯುತ್ ಮಂಡಳಿಯು ರಾಜದ್ಯಂತ ಗೃಹ ಜ್ಯೋತಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಮನೆ ಬಾಗಿಲಿಗೆ ಬಂದು ಸಮೀಕ್ಷೆ ಕಾರ್ಯ ಮಾಡುತ್ತಿದೆ.…
ಕರ್ನಾಟಕದಲ್ಲಿ ಶೇ.೬೦ ಕ್ಕಿಂತ ಹೆಚ್ಚು ಮಳೆ ಕೊರತೆಯಾಗಿದ್ದು, ಮೈಸೂರು, ವಿಜಯಪುರ, ಧಾರವಾಡ, ಗದಗ, ಬೆಳಗಾವಿ, ಕೊಪ್ಪಳ, ಕಲಬುರಗಿ,ಬೀದರ್, ಹಾಸನ, ದಾವಣಗೆರೆ,…
ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಹೊಸದಿಲ್ಲಿಯಲ್ಲಿ ಕಾಕ್ರೋಚ್ ಜನತಾ ಪಕ್ಷ…
ಶುಭಾ ಖಟಾವಕರ ಮ್ಹೆತ್ರಸ್ ಸುಪ್ರೀಂ ಕೋರ್ಟ್‌ನಲ್ಲಿ ಸ್ವತಃ ಅಟಾರ್ನಿ ಜನರಲ್ ಹೇಳಿಕೆ! ೨೦೨೩ರ ನಂತರ ತಯಾರಾದ ವಾಹನಗಳಿಗೆ ಮಾತ್ರ ಇ-೨೦…