ಮೈಸೂರು : ನಗರದ ದಸರಾ ವಸ್ತು ಪ್ರದರ್ಶನದಲ್ಲಿ ಇಂದು ಕನಕದಾಸರ 535ನೇ ಜಯಂತಿಯ ಅಂಗವಾಗಿ ಪಿ ಕಾಳಿಂಗರಾವ್ ಗಾನ ಮಂಟಪದಲ್ಲಿ ವಿದ್ವಾನ್ ರಘುರಾಮ್ ತಂಡದವರ ವತಿಯಿಂದ ಭಾವ ರಾಗ ತಾಳ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ ಗೌಡರವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ ಗೌಡ ರವರು ಮಾತನಾಡಿ ಕನಕದಾಸರು ಭಕ್ತಿಪಂಥದ ಹರಿದಾದರಲ್ಲಿ ಒಬ್ಬರು, ಉಡುಪಿಯ ವ್ಯಾಸರಾಯರ ಶಿಷ್ಯರಾಗಿ ಕಾಗಿನೆಲೆ ಆದಿಕೇಶವ ಅಂಕಿತನಾಮದ ಮೂಲಕ ಸಮಾಜದ ಅಂಕುಡೊಂಕುಗಳನ್ನ ಸರಿಪಡಿಸಲು ತಮ್ಮ ಕೀರ್ತನೆಗಳ ಮೂಲಕ ಸಮಸಮಾಜವನ್ನ ನಿರ್ಮಿಸಿದ ಮಹಾನ್ ಸಂತ, ತತ್ವಜ್ಞಾನಿ, ಕವಿಗಳಾದ ಕನಕದಾಸರು 15-16ನೇ ಶತಮಾನದಲ್ಲಿ ಭಕ್ತಿಮಾರ್ಗವನ್ನ ಜನಸಮೂಹಕ್ಕೆ ಸಾರಿದರು, ಮಹಾಕಾವ್ಯಕೃತಿಗಳಾದ ಮೋಹನ ತರಂಗಿಣಿ, ರಾಮಧಾನ್ಯ ಚರಿತೆ, ನಳಚರಿತ್ರೆ ಹರಿಭಕ್ತಿಸಾಗರ, ನೃಸಿಂಸ್ತವ ಮತ್ತು 316ಕ್ಕೂ ಹೆಚ್ಚು ಕೀರ್ತನೆಗಳನ್ನ ರಚಿಸಿ ಕನ್ನಡ ಭಾಷೆ ಸಾಹಿತ್ಯ ಲೋಕವನ್ನ ಶ್ರೀಮಂತಗೊಳಿಸಿದ್ದಾರೆ ಎಂದರು.
ಸಂಗೀತ ಪಕ್ಕವಾದ್ಯದಲ್ಲಿ ತಬಲವಾದನದಲ್ಲಿ ವಿದ್ವಾನ್ ನಾಗರಾಜ್, ಕೀಬೋರ್ಡ್ ನಲ್ಲಿ ರವಿಶಂಕರ್, ರಿದಂ ಪ್ಯಾಡ್ ನಲ್ಲಿ ಶ್ರೀನಿವಾಸ್ ಸೇರಿದಂತೆ ಭಾವರಾಗತಾಳ ಸಂಗೀತ ಶಾಲೆಯ ಮಕ್ಕಳು ಭಾಗವಹಿಸಿದ್ದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸಗೌಡ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ರುದ್ರೇಶ್, ಫನ್ ವರ್ಲ್ಡ್ ರೆಸಾರ್ಟ್ ಮುಖ್ಯಸ್ಥಸರಾದ ಮಲ್ಲಿಕಾರ್ಜುನ, ಕಾಯಕ ಯೋಗಿ ವಿಕಾಸ ವೇದಿಕೆ ಅಧ್ಯಕ್ಷರಾದ ಡಾ.ಮಾಲೇಗೌಡ, ಪ್ರಧಾನಕಾರ್ಯದರ್ಶಿ ಪುರುಷೋತ್ತಮ್ ಮರೀಗೌಡ, ನಿರ್ದೇಶಕರಾದ ರೇವಣ್ಣ, ನಿರೂಪಕ ಅಜಯ್ ಶಾಸ್ತ್ರಿ, ತಿಮ್ಮೇಗೌಡ, ಮಾದೇಸ್ವಾಮಿ, ಮಾದೇಶ್, ಡಾ.ಗೋಪಿ, ಪುರುಷೋತ್ತಮ್, ಬಸವಾರಜು ಉಪನ್ಯಾಸಕರಾದ ನಿಂಗಪ್ಪ ಇನ್ನಿತರರು ಇದ್ದರು
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…