ಜಿಲ್ಲೆಗಳು

ಮನೆ ಬಾಡಿಗೆ ನೀಡುವ ಮುನ್ನ ಮಾಲೀಕರೇ ಇರಲಿ ಎಚ್ಚರ!

ಮನೆ, ರೂಮ್ ಬಾಡಿಗೆ ಪಡೆಯುವವರ ಪೂರ್ವಾಪರ ದಾಖಲಾತಿಗಳ ಪರಿಶೀಲನೆ ಅಗತ್ಯ

ಬಿ.ಎನ್.ಧನಂಜಯಗೌಡ 
ಮೈಸೂರು: ಅನ್ಯ ಸ್ಥಳಗಳಿಂದ ನಗರಕ್ಕೆ ಆಗಮಿಸುವವರಿಗೆ ಮನೆ, ರೂಮ್‌ಗಳನ್ನು ಬಾಡಿಗೆ ನೀಡುವ ಮುನ್ನ ಮಾಲೀಕರು ಎಚ್ಚರವಹಿಸಬೇಕಿರುವುದು ಅಗತ್ಯ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರಿಖ್ ಮೈಸೂರಿನ ಲೋಕನಾಯಕನಗರದಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದ ಎಂಬ ವಿಚಾರವೇ ಈಗ ಬಾಡಿಗೆ ನೀಡುವ ಮುನ್ನ ಯಾಕೆ ಎಚ್ಚರಿಕೆ ವಹಿಸಬೇಕು ಎಂಬುದಕ್ಕೆ ಸಾಕ್ಷಿಯಾಗಿದೆ.
ಸಾಂಸ್ಕೃತಿಕ ನಗರ, ಸ್ವಚ್ಛ ನಗರ, ವಿದ್ಯಾ ನಗರ, ಶಾಂತಿಪ್ರಿಯ ನಗರ ಎಂದೆಲ್ಲಾ ಮನ್ನಣೆಗಳನ್ನು ಪಡೆದಿರುವ ಮೈಸೂರು, ಭಯೋತ್ಪಾದನಾ ಚಟುವಟಿಕೆಗಳಿಗೆ ಸುರಕ್ಷಿತ ನಗರ ಎಂಬ ಭಾವನೆ ಉಗ್ರರಲ್ಲಿ ಇದೆ. ಹಾಗಾಗಿಯೇ, ಇಂತಹ ಚಟುವಟಿಕೆಗಳಲ್ಲಿ ನಿರತರಾಗಿರುವವರು ಮೈಸೂರಿನಲ್ಲಿ ವಾಸ್ತವ್ಯ ಹೂಡಬಹುದು. ಆದ್ದರಿಂದ, ಮನೆ ಅಥವಾ ರೂಮ್‌ಗಳನ್ನು ಬಾಡಿಗೆ ನೀಡುವಾಗ ಮಾಲೀಕರು ಜಾಗ್ರತೆಯಿಂದ ಪರಿಶೀಲನೆ ಮಾಡಬೇಕಿದೆ.
ಹೀಗೊಂದು ಪ್ರಕರಣ: ಇನ್ನು ಕೆಲವರು ಮನೆ, ರೂಮ್, ಮಳಿಗೆಗಳನ್ನು ಬಾಡಿಗೆಗೆ ಪಡೆದು, ಮನೆ ಕಳ್ಳತನ, ಸರಗಳ್ಳತನದಂತಹ ಕೃತ್ಯವನ್ನು ಎಸಗಬಹುದು ಎಂಬುದಕ್ಕೆ ಇಲ್ಲೊಂದು ಪ್ರಕರಣ ಸಾಕ್ಷಿಯಿದೆ.
೨೦೧೯ರ ಆಗಸ್ಟ್‌ನಲ್ಲಿ ಮನೆ ಮತ್ತು ಮಳಿಗೆಯ ಬಾಡಿಗೆದಾರನೂ ಆದ ಹಣ್ಣಿನ ವ್ಯಾಪಾರಿ, ಹಾಡಹಗಲೇ ತನ್ನ ಮಳಿಗೆ ಮಾಲೀಕರ ಮನೆಗೆ ನುಗ್ಗಿ, ಮನೆಯಲ್ಲಿದ್ದ ವೃದ್ಧೆಯ ಬಾಯಿಗೆ ಬಟ್ಟೆ ತುರುಕಿ ಅವರ ಕೈಗಳಲ್ಲಿದ್ದ ೭ ಚಿನ್ನದ ಬಳೆಗಳನ್ನು ದೋಚಿ ಪರಾರಿಯಾಗಿದ್ದ. ಇಂತಹ ಆಘಾತಕಾರಿ ಘಟನೆ ಮೈಸೂರಿನ ಜಿಲ್ಲಾ ನ್ಯಾಯಾಲಯ ಎದುರಿನ ಚಾಮರಾಜಪುರಂನಲ್ಲಿ ಸಂಭವಿಸಿತ್ತು. ಅಪರಾಧಿಯನ್ನು ಲಕ್ಷ್ಮೀಪುರಂ ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದರು.
ಮೈಸೂರಿಗೆ ಉಗ್ರರ ನಂಟು ಹೊಸದೇನಲ್ಲ : ೨೦೦೬ರಲ್ಲಿ ಹಿನಕಲ್ ಜಂಕ್ಷನ್ ಬಳಿ ಅನುಮಾನಾಸ್ಪದವಾಗಿ ಕಂಡುಬಂದ ಇಬ್ಬರನ್ನು ವಿಜಯನಗರ ಠಾಣೆ ಪೊಲೀಸರು ಸೆರೆಹಿಡಿಯಲು ಮುಂದಾದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆಗ ಪೊಲೀಸರು ಅವರನ್ನು ಹಿಡಿಯಲು ಗುಂಡು ಹಾರಿಸಿದ್ದರು. ಅಂತಿಮವಾಗಿ ಫಹಾದ್ ಮತ್ತು ಸಲೀಂ ಹುಸೇನ್ ಎಂಬವರನ್ನು ಬಂಧಿಸಲಾಗಿತ್ತು. ಊಟದ ಬಾಕ್ಸ್‌ನಲ್ಲಿ ಬಾಂಬ್ ಇಟ್ಟು ಸ್ಫೋಟಿಸಲು ಅವರು ಸಂಚು ನಡೆಸಿದ್ದರು ಎಂಬ ಅಂಶ ತನಿಖೆಯಿಂದ ತಿಳಿದು ಬಂದಿತ್ತು. ೨೦೧೬ರಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಕುಕ್ಕರ್ ಸ್ಫೋಟಿಸಿದ್ದರು. ಈ ಸಂಬಂಧ ಐವರನ್ನು ಬಂಧಿಸಲಾಗಿತ್ತು.
————-

ಮಾಲೀಕರು ವಹಿಸಬೇಕಾದ ಜಾಗ್ರತೆಗಳೇನು?
* ಮನೆ ಬಾಡಿಗೆ ಪಡೆಯಲು ಬಂದವರ ಪೂರ್ವಾಪರವನ್ನು ಮೊದಲು ತಿಳಿಯಲು ಸೂಕ್ಷ್ಮ ಪ್ರಯತ್ನ ಮಾಡುವುದು.
* ಬಾಡಿಗೆದಾರರ ಆಧಾರ್ ಸೇರಿದಂತೆ ಮನೆ ಬಾಡಿಗೆ ಕರಾರಿಗೆ ತೆಗೆದುಕೊಳ್ಳುವ ದಾಖಲಾತಿಗಳನ್ನು ಒಂದಷ್ಟು ಸಮಯ ತೆಗೆದುಕೊಂಡು ಪರಿಶೀಲನೆ ಮಾಡಬೇಕು.
* ಬಾಡಿಗೆ ನೀಡಿದ ನಂತರವೂ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ಜೊತೆಗೆ ದಾಖಲಾತಿಯ ನಕಲುಗಳನ್ನು ನೀಡಬೇಕು.  


ಆಧಾರ್ ಕಾರ್ಡ್ ನೀವೇ ಪರಿಶೀಲಿಸಬಹುದು?
ತಕ್ಷಣಕ್ಕೆ ಆಧಾರ್ ಕಾರ್ಡ್ ಪರಿಶೀಲನೆ ಮಾಡುವುದು ಹೇಗಾಗುತ್ತದೆ? ಎಂಬ ಗೊಂದಲವಿದ್ದರೆ ಅದನ್ನು ಬಿಡಿ. ಒಂದೆರಡು ಗಂಟೆ ಸಮಯ ತೆಗೆದುಕೊಂಡು ಆಧಾರ್ ಕಾರ್ಡ್ ನಕಲಿಯೋ ಅಥವಾ ಅಸಲಿಯೋ? ಎಂಬುದನ್ನು ಹೀಗೆ ಪರಿಶೀಲಿಸಿ.
* ಮೊದಲಿಗೆ ಅಧಿಕೃತ UIDAI ಪೋರ್ಟಲ್ uidai.gov.in ಗೆ ಭೇಟಿ ನೀಡಿ.
* ಇಲ್ಲಿ ’ My Aadhaar’ ಮೇಲೆ ಕ್ಲಿಕ್ ಮಾಡಿ.
* ’ My Aadhaar’  ಅನ್ನು ಕ್ಲಿಕ್ ಮಾಡಿದ ನಂತರ, ಅದಕ್ಕೆ ಸಂಬಂಧಿಸಿದ ಎಲ್ಲಾ ಸೇವೆಗಳ ಪಟ್ಟಿಯು ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.
* ಈ ಪಟ್ಟಿಯಲ್ಲಿ, ವೆರಿಫೈ ಆನ್ ಆಧಾರ್ ಸಂಖ್ಯೆಯನ್ನು ಕ್ಲಿಕ್ ಮಾಡಿ.
* ಅದರ ನಂತರ ೧೨ ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ ಪರಿಶೀಲನೆಯನ್ನು ಮಾಡಿ.
* ಈಗ  Proceed to verify ಮೇಲೆ ಕ್ಲಿಕ್ ಮಾಡಿ.
ಈ ವೇಳೆ ಈ ಆಧಾರ್ ಸಂಖ್ಯೆ ಇದೆಯೇ, ಈ ಆಧಾರ್‌ನಲ್ಲಿ ಎಲ್ಲಾ ಮಾಹಿತಿಗಳೂ ಸರಿಯಾಗಿದೆಯೇ ಎಂಬುದು ತಿಳಿಯಲಿದೆ.


ಮನೆ, ರೂಮ್, ಮಳಿಗೆಗಳನ್ನು ಬಾಡಿಗೆ ನೀಡುವ ಮುನ್ನ ಮಾಲೀಕರು ಜಾಗ್ರತೆ ವಹಿಸಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಉಂಟಾಗಬೇಕು. ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ನಗರದಲ್ಲಿ ಬಾಡಿಗೆ ಮನೆ ಹಾಗೂ ಬಾಡಿಗೆ ರೂಮ್‌ಗಳಲ್ಲಿ ವಾಸವಿರುವ ಬಾಡಿಗೆದಾರರ ದಾಖಲಾತಿಗಳನ್ನು ಮನೆಯ ಮಾಲೀಕರು ಕಡ್ಡಾಯವಾಗಿ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ನೀಡಬೇಕು. ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಸೂಚನೆ ನೀಡಲಾಗುವುದು.
-ರಮೇಶ್ ಬಾನೋತ್, ನಗರ ಪೊಲೀಸ್ ಆಯುಕ್ತ, ಮೈಸೂರು.

andolanait

Recent Posts

ಕಾವೇರಿ ನದಿಗಿಳಿದ ನಾಗಲ್ಯಾಂಡ್ ಮೂಲದ ಇಬ್ಬರು ಯುವಕರು ನಾಪತ್ತೆ

ಕುಶಾಲನಗರ: ಕಾವೇರಿ ನದಿಗೆ ಇಳಿದ ನಾಗಲ್ಯಾಂಡ್ ಮೂಲದ ಇಬ್ಬರು ಯುವಕರು ನಾಪತ್ತೆಯಾಗಿರುವ ಘಟನೆ ಕುಶಾಲನಗರ ರಸೂಲ್ ಲೇಔಟ್ ಬಳಿ ಬುಧವಾರ…

6 hours ago

ಪಾಕ್‌ನಿಂದ ಆಫ್ಗಾನಿಸ್ತಾನದ ಮೇಲೆ ವಾಯು ದಾಳಿ ; 13 ಮಂದಿ ಸಾವು; 14 ಮಂದಿಗೆ ಗಾಯ

ಕಾಬೂಲ್ : ಪಾಕಿಸ್ತಾನವು ಬುಧವಾರ ನಡೆಸಿದ ಹೊಸ ವಾಯುದಾಳಿಗಳಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನ ತಿಳಿಸಿದೆ. ಪಾಕ್…

8 hours ago

ಭಾರತಿರಾಜ್‌ ಅಂತಿಮ ದರ್ಶನ ಪಡೆದ ರಜನಿ, ಕಮಲ್‌, ಸಿ.ಎಂ.ವಿಜಯ್‌

ಚೆನ್ನೈ : ತಮಿಳಿನ ಖ್ಯಾತ ನಿರ್ದೇಶಕ, ಪದ್ಮಶ್ರೀ ಭಾರತಿರಾಜ್ ನಿಧನಕ್ಕೆ ಹೆಸರಾಂತ ನಟರು ಕಂಬನಿ ಮಿಡಿದಿದ್ದಾರೆ. ಅವರ ಅಂತಿಮ ದರ್ಶನಕ್ಕೆ…

10 hours ago

ಎಚ್.ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನಕ್ಕೆ ದಲಿತ ಸಂಘಟನೆಗಳ ಆಗ್ರಹ

ವರುಣ : ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡಬೇಕು ಎಂದು ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಲಿತ ಸಂಘಟನೆಗಳ…

11 hours ago

ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಬಿಟ್ಟು ಬೇರೇನೂ ಮಾಡಲಿಲ್ಲ ಸಿದ್ದರಾಮಯ್ಯ: ಟೀಕೆ

ಮೈಸೂರು : ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು ಕೇಂದ್ರ ಸರ್ಕಾರದೊಂದಿಗೆ ಸೌಹಾರ್ದದಿಂದ ಸಂಪರ್ಕ ಸಾಧಿಸಿ ರಾಜ್ಯದ ಅಭಿವೃದ್ಧಿ…

11 hours ago

ರಾಜ್ಯಸಭಾ ಸ್ಥಾನ ಕೇಳಿಲ್ಲ, ಚರ್ಚೆಯೂ ನಡೆಸಿಲ್ಲ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು: ರಾಜ್ಯಸಭಾ ಸ್ಥಾನಕ್ಕೆ ಟಿಕೆಟ್‌ ತಪ್ಪಿದೆ ಎಂಬ ಕಾರಣದಿಂದ ನನ್ನ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಸಂಬಂಧ…

14 hours ago