ಮೈಸೂರು: ಸಂತ ಶ್ರೇಷ್ಠ, ದಾರ್ಶನಿಕ ಶ್ರೀ ಭಕ್ತ ಕನಕದಾಸರ 535ನೇ ಜಯಂತ್ಯುತ್ಸವದ ಅಂಗವಾಗಿ ಮೈಸೂರಿನಲ್ಲಿ ಕನಕದಾಸರ ಉತ್ಸವ ಮೂರ್ತಿಯನ್ನು ಅದ್ಧೂರಿ ಮೆರವಣಿಗೆ ನಡೆಸಲಾಯಿತು.
ನಂಜರಾಜ ಬಹದ್ದೂರ್ ಛತ್ರದ ಬುಧವಾರದ ಮೆರವಣಿಗೆಗೆ ವಿಧಾನ ಪರಿಷತ್ ಸದಸ್ಯ ಎಚ್.ಎಚ್.ವಿಶ್ವನಾಥ್, ಕಾಗಿನೆಲೆ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ನಂತರ ಇನ್ನೂರಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭ ಕಳಸ ಹೊತ್ತು ಸಾಗಿದರು. ಬೀರದೇವರ ಕುಣಿತ, ಕಂಸಾಳೆ, ಗೊರವನ ಕುಣಿತ, ಸತ್ತಿಗೆ ಸೂರಪಾನಿ, ಡೊಳ್ಳು ಕುಣಿತ, ನಗಾರಿ, ವೀರಭದ್ರನ ಕುಣಿತ, ಕರಡಿ ಮಜಲು ಕಲಾವಿದರು ದಾರಿಯ ನೃತ್ಯ ಪ್ರದರ್ಶಿಸಿದರು. ತೆರೆದ ವಾಹನದಲ್ಲಿ ಅಲಂಕೃತ ಕನಕದಾಸರ ಮೂರ್ತಿಗಳು ಸಾಗಿದವು.
ಕನಕದಾಸ ಯುವ ಬಳಗದವರು ಕುರುಬನ ರಾಣಿ, ಕವಿರತ್ನ ಕಾಳಿದಾಸ ಚಿತ್ರದ ಮೊದಲಾದ ಚಿತ್ರಗಳಿಗೆ ನೃತ್ಯ ಪ್ರದರ್ಶಿಸಿ ಮತ್ತಷ್ಟು ರಂಗು ತುಂಬಿದರು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಗರಪಾಲಿಕೆ ಸದಸ್ಯ ಜೆ.ಗೋಪಿ, ವಾಜಿ ಮಹಾಪೌರರಾದ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಟಿ.ಬಿ.ಚಿಕ್ಕಣ್ಣ, ನಗರಪಾಲಿಕೆ ಮಾಜಿ ಸದಸ್ಯ ಎಂ.ಸಿ.ಚಿಕ್ಕಣ್ಣ, ಹಿನಕಲ್ ಪ್ರಕಾಶ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಶಿವರಾಮು ಮತ್ತಿತರರು ಪಾಲ್ಗೊಂಡಿದ್ದರು.
ಬೆಂಗಳೂರು : ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಬುಧವಾರ (ಜನವರಿ 7) ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ…
ಮೈಸೂರು : ಮಾದಕ ವ್ಯಸನಿಗಳಾದ ನಾಲ್ವರು ಯುವಕರ ತಂಡ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ನಗದು ಹಾಗೂ ಮೊಬೈಲ್…
ಸಾವಿರಾರು ಹೆಜ್ಜೆಗಳೊಂದಿಗೆ ಆರೋಗ್ಯದ ಸಂದೇಶ ಜ.11ರಂದು ನಡೆಯಲಿರುವ ಜಾಗೃತಿ ಅಭಿಯಾನ ಮೈಸೂರು : ಹಲವು ಮೊದಲುಗಳಿಗೆ ನಾಂದಿ ಹಾಡಿರುವ ಸಾಂಸ್ಕೃತಿಕ…
ರಾಂಚಿ : ಉತ್ತರ ಭಾರತವು ತೀವ್ರ ಶೀತಗಾಳಿಗೆ ತತ್ತರಿಸಿದ್ದು, ಭಾರೀ ಹಿಮಪಾತದಿಂದ ಪಟ್ಟಣಗಳು, ದೇವಾಲಯಗಳು ಮತ್ತು ಸುತ್ತಮುತ್ತಲಿನ ಬೆಟ್ಟಗಳು ದಟ್ಟ…
ಸಿದ್ದಾಪುರ : ವಿರಾಜಪೇಟೆ ತಾಲೂಕು ಮಠ ಗ್ರಾಮದಲ್ಲಿ ಬುಧವಾರ ಸಂಜೆ ಹುಲಿಯೊಂದು ಹಾಲು ಕರೆಯುವ ಹಸುವಿನ ಮೇಲೆ ದಾಳಿ ನಡೆಸಿ…
ಹಾವೇರಿ : ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ ಜಿಲ್ಲೆಯಲ್ಲಿ ಕ್ಯಾನ್ಸರ್, ಟ್ರಾಮಾ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ…