ಹಾಸನ

ಹಾಸನಾಂಬೆ ದರ್ಶನ ಪಡೆದ ಮಾಜಿ ಸಚಿವ ಎಚ್‌.ಡಿ.ರೇವಣ್ಣ

ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನದ ಅಧಿದೇವತೆ ಹಾಸನಾಂಬೆ ದೇವಸ್ಥಾನಕ್ಕೆ ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಪತ್ನಿ ಭವಾನಿ ರೇವಣ್ಣ ಜೊತೆ ದೇವಾಲಯಕ್ಕೆ ಆಗಮಿಸಿದ ಎಚ್.ಡಿ.ರೇವಣ್ಣ ಹಾಸನಾಂಬೆ ದರ್ಶನ ಪಡೆದು ಒಳಿತಾಗುವಂತೆ ಪ್ರಾರ್ಥನೆ ಸಲ್ಲಿಸಿದರು.

ಇದನ್ನು ಓದಿ : ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ ; 2 ಕೋಟಿ ಆದಾಯ

ರೇವಣ್ಣ ಕಾರನ್ನು ತಡೆದ ಅಧಿಕಾರಿಗಳು: ಹಾಸನಾಂಬೆ ದರ್ಶನಕ್ಕೆ ಕಾರಿನಲ್ಲಿ ಆಗಮಿಸಿದ್ದ ರೇವಣ್ಣ ಅವರನ್ನು ಕಂದಾಯ ಇಲಾಖೆ ಅಧಿಕಾರಿಗಳು ತಡೆದ ಘಟನೆ ನಡೆಯಿತು. ಶಿಷ್ಟಾಚಾರ ಪಾಲನೆಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೇ ಶಾಸಕ ರೇವಣ್ಣ ಹಾಸನಾಂಬೆ ದರ್ಶನಕ್ಕೆ ತಮ್ಮದೇ ಕಾರಿನಲ್ಲಿ ಭದ್ರತಾ ವ್ಯವಸ್ಥೆಗಳೊಂದಿಗೆ ಆಗಮಿಸಿದ್ದರು.

ಈ ವೇಳೆ ಕಂದಾಯ ಇಲಾಖೆ ಅಧಿಕಾರಿಗಳು ಶಾಸಕ ಎಚ್.ಡಿ.ರೇವಣ್ಣ ಕಾರನ್ನು ತಡೆದರು. ಈ ವೇಳೆ ರೇವಣ್ಣ ಅವರು ಅಧಿಕಾರಿಗಳ ವಿರುದ್ಧ ಗರಂ ಆದ ಘಟನೆ ನಡೆಯಿತು. ಆದರೂ ಅಧಿಕಾರಿಗಳು ಕಾರನ್ನು ದೇವಾಲಯದ ಬಳಿ ಕೊಂಡೊಯ್ಯಲು ಅವಕಾಶವಿಲ್ಲ ಎಂದು ತಿಳಿಸಿದರು. ಬಳಿಕ ಕಾರಿನಿಂದ ಇಳಿದು ರೇವಣ್ಣ ಅವರು ನಡೆದುಕೊಂಡೇ ದೇವಾಲಯಕ್ಕೆ ಹೋಗಿ ಹಾಸನಾಂಬೆ ದೇವಿಯ ದರ್ಶನ ಪಡೆದು ವಾಪಸ್‌ ತೆರಳಿದರು.

ಆಂದೋಲನ ಡೆಸ್ಕ್

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಯ ನೆರಳಿನಂತಿದ್ದ ಕಸ್ತೂರ ಬಾ

ಡಾ.ಪ್ರಮೀಳಾದೇವಿ ಬಿ.ಕೆ ಗಾಂಧೀಜಿಯ ನೆರಳಿ ನಂತಿದೂ ಅವರ ಚಿಂತನೆಗಳ, ಪ್ರಯೋಗ ಗಳನ್ನು ತಿದ್ದಿ ತೀಡಿದ ಪತ್ನಿ ಕಸ್ತೂರ ಬಾ. ಬಾಲ್ಯ…

17 mins ago

ಗಾಂಧಿ ಅಭಿಯಾನ ಅರಿವಿನ ಯಾನ | ಗೊಂದಲಗೊಳಿಸುತಿದ್ದ ಹಲವು ಸಂದೇಹಗಳು

ಬ್ಯಾರಿಸ್ಟರ್ ಎನ್ನಿಸಿಕೊಳ್ಳುವುದು ಸುಲಭವಾಗಿತ್ತು. ಆದರೆ ವಕೀಲಿ ವೃತ್ತಿಯನ್ನು ನಡೆಸುವುದು ಕಷ್ಟವಾಗಿತ್ತು. ನಾನು ಕಾನೂನುಗಳನ್ನೇನೋ ವ್ಯಾಸಂಗ ಮಾಡಿದ್ದೆ. ಅವುಗಳನ್ನು ಕಾರ್ಯ ರೂಪದಲ್ಲಿ…

1 hour ago

ಯುಪಿಯಲ್ಲಿ ತಯಾರಾಗುತ್ತಿರುವ ಬ್ರಹ್ಮೋಸ್‌ ಕ್ಷಿಪಣಿಗಳು ಪಾಕ್‌ ನಿದ್ದೆಗೆಡಿಸಿವೆ: ಅಮಿತ್‌ ಶಾ

ಲಕ್ನೋ: ಉತ್ತರ ಪ್ರದೇಶದಲ್ಲಿ ರಕ್ಷಣಾ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.…

20 hours ago

ಪ್ರಜಾಪ್ರಭುತ್ವ ರಕ್ಷಿಸಲು ಗಾಂಧಿ ಜಯಂತಿಯಂದು ಪ್ರತಿಜ್ಞೆ ಮಾಡೋಣ: ಅಭಿಜಿತ್‌ ದೀಪ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ, ಅಂದರೆ ಸಿಜೆಪಿ ಆಗ್ರಹಿಸಿದೆ. ಸಿಜೆಪಿ…

20 hours ago

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ

ಕೊಡಗು: ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.89 ಮಿ.ಮೀ. ಮಳೆಯಾಗಿದೆ. ಕಳೆದ…

21 hours ago

ಜನರೊಂದಿಗೆ ಬೆರೆಯುವುದು ಅದ್ಭುತ ಅನುಭವ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಸೇವಾ ಸಂಕಲ್ಪ ಅಭಿಯಾನದಡಿ ವಾರಣಾಸಿಯಿಂದ ಗುಜರಾತ್‌ನ ವಡನಗರಕ್ಕೆ ತೆರಳುತ್ತಿರುವ ಯುವಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ವಿಡಿಯೋ…

21 hours ago