Andolana originals

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಯ ನೆರಳಿನಂತಿದ್ದ ಕಸ್ತೂರ ಬಾ

ಡಾ.ಪ್ರಮೀಳಾದೇವಿ ಬಿ.ಕೆ

ಗಾಂಧೀಜಿಯ ನೆರಳಿ ನಂತಿದೂ ಅವರ ಚಿಂತನೆಗಳ, ಪ್ರಯೋಗ ಗಳನ್ನು ತಿದ್ದಿ ತೀಡಿದ ಪತ್ನಿ ಕಸ್ತೂರ ಬಾ. ಬಾಲ್ಯ ವಿವಾಹದಿಂದ ಅಲ್ಪ ಮಾತ್ರ ಶಿಕ್ಷಣ ಪಡೆದಿದ್ದರೂ ಮಹಾತ್ಮರ ನೆರಳಿ ನಲ್ಲಿ, ಜೀವನ ಕಲಿಸಿದ ಪಾಠಗಳಿಂದ ಕಲಿತಿದ್ದು ಅಪಾರ. ಗಾಂಧೀಜಿಯವರ ಅನುಯಾಯಿ ಗಳಿಗೆ ಬಾ ಮಾತೆಯಂತಿದ್ದು ಅವರ ಆಶ್ರಮದ ಉಸ್ತುವಾರಿ ನೋಡಿಕೊಳ್ಳುತ್ತಾ, ಗಾಂಧೀಜಿಯವರು ಪ್ರವಾಸದಲ್ಲಿದ್ದರೂ, ಪ್ರತಿಭಟನೆಗಳಲ್ಲಿದ್ದರೂ ಆಶ್ರಮವಾಸಿಗಳ ಅವಶ್ಯಕತೆಗಳಿಗೆ ಸ್ಪಂದಿಸುತ್ತಿದ್ದವರು ಕಸ್ತೂರ ಬಾ. ಆಶ್ರಮ ವಾಸಿಗಳು ಸಂಕುಚಿತತೆಯಿಂದ ಮಹಾತ್ಮರ ಬಳಿ ಹೇಳಿಕೊಳ್ಳಲಾಗದ ಸಮಸ್ಯೆಗಳನ್ನು ಅವರ ಹಿಂಬಾಲಕರು ಮಾ ಬಳಿ ಹೇಳಿಕೊಳ್ಳುತ್ತಿದ್ದುದುಂಟು. ಹಲವಾರು ಬಾರಿ ಮಹಾತ್ಮರನ್ನು ವಿರೋಧಿಸಿದ್ದು ಇದೆ. ಮಹಾತ್ಮರೂ ಕಸ್ತೂರ ಬಾ ಬಳಿ ತಮ್ಮ ಹಲವಾರು ವಿಷಯಗಳನ್ನು ಚರ್ಚಿಸುತ್ತಿದ್ದರು, ಸಲಹೆ ಕೇಳುತ್ತಿದ್ದರು. ಮಹಾತ್ಮರ ಬದುಕಿನ ಆಪ್ತ ಸಮಾಲೋಚಕಿ, ಅವರ ದೊಡ್ಡ ಸಲಹಾಗಾರ್ತಿ ಕಸ್ತೂರ ಬಾ ಗಾಂಧೀಯವರು ಮಹಾತ್ಮರಂತೆ ಅಪೂರ್ವ ಚೇತನಕ್ಷಿ.

ಮಹಾತ್ಮರಂತೆ ಕಸ್ತೂರ ಬಾ ಕೂಡ ಬದುಕಿನ ಹಂತಗಳನ್ನೇರಿ ಬಂದವರು. ಕರಮಚಂದ ಗಾಂಧಿಯವರನ್ನು ವಿವಾಹವಾದಾಗ ಕಸ್ತೂರ ಬಾ ಇನ್ನು ಒಂಬತ್ತು ವರ್ಷದವರು, ಸಂಪ್ರದಾಯಸ್ಥ ಕುಟುಂಬದಿಂದ ಬಂದವರು ಅನಕ್ಷರಸ್ಥೆಯೇ ಆದರೆ ಮನೆಯ ಸಂಪ್ರದಾಯಗಳ ಬಗ್ಗೆ, ಹಿರಿಯರ ಬಗ್ಗೆ ಅಪಾರ ಗೌರವವಿದ್ದವರು. ಹದಿಹರೆಯದಲ್ಲಿಯೇ ಮಕ್ಕಳ ಜವಾಬ್ದಾರಿ ಹೊಂದಿದ್ದು, ಗಾಂಧೀಜಿಯವರು ವಿದೇಶಕ್ಕೆ ಹೊರಟುನಿಂತಾಗ ಮನೆಯ ಎಲ್ಲ ಹೊಣೆಗಾರಿಕೆ, ಅತ್ತೆ ಮಾವನವರ ಆರೈಕೆಯು ಅವರದ್ದಾಗಿತ್ತು. ಕಸ್ತೂರ ಬಾ ರವರಿಗೆ ತಮ್ಮ ಪತಿ ವಿದೇಶಕ್ಕೆ ಹೋಗಿ ಎಲ್ಲಿ ಭ್ರಷ್ಟರಾಗುತ್ತಾರೋ ಅನ್ನುವ ಭಯವೂ ಅವರಲ್ಲಿತ್ತು. ಅದು ಆದದ್ದು ಹಾಗೆಯೇ. ಆದರೆ ಗಾಂಧೀಯವರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡಾಗ ಅವರನ್ನು ಕ್ಷಮಿಸಿದರು. ಗಾಂಧೀಜಿಯವರು ಬ್ಯಾರಿಸ್ಟರಾಗಿ ಬಂದು ಭಾರತದಲ್ಲಿಯೇ ನೆಲಸಬಹುದೆನ್ನುವುದು ಸುಳ್ಳಾಗಿ ಅವರು ಮತ್ತೆ ದಕ್ಷಿಣ ಆಫ್ರಿಕಾಕ್ಕೆ ಹೊರಟು ನಿಂತಾಗ ವಿಧಿಯಿಲ್ಲದೆ ಕಸ್ತೂರ ಬಾ ಗಂಡನನ್ನು ಅನುಸರಿಸಿ ಹೊರ ದೇಶಕ್ಕೆ ಹೋಗಬೇಕಾಯಿತು.

ಅಲ್ಲಿನ ವಾತಾವರಣ ಭಾರತೀಯರಿಗೆ ಪ್ರತಿಕೂಲವಾಗಿದೆಯೆಂಬುದು ಮನದಟ್ಟಾದಾಗ ಗಾಂಧೀಜಿಯವರು ಅಲ್ಲಿನ ಭಾರತೀಯರನ್ನು ಸಂಘಟಿಸಿದ್ದಲ್ಲದೆ ಅವರಿಗೆ ಚಳವಳಿಯ ಮಾರ್ಗವನ್ನು ಹೇಳಿ ಕೊಡುತ್ತಾ ತಮ್ಮ ಸತ್ಯಾಗ್ರಹದ ಅಂಶಗಳನ್ನು ಪರೀಕ್ಷಿಸುತ್ತಾ ಅವರ ತತ್ವಗಳನ್ನು ಅನುವು ಗೊಳಿಸಲು ಫೀನಿಕ್ಸ್ ಫಾರ್ಮ ಮತ್ತು ಟಾಲ್ ಸ್ಟಾಯ್ ಆಶ್ರಮ ಸ್ಥಾಪಿಸಿದಾಗ ಅಲ್ಲಿನ ವ್ಯವಸ್ಥೆ ಕಂಡಾಗ ಅದರಲ್ಲೂ ಎಲ್ಲರೂ ಒಂದೇ ಮನೆಯವರಂತೆ ವಾಸಿಸುವುದು, ಜಾತಿ ಭೇದವಿಲ್ಲದೆ ಒಂದಾಗಿ ಬಾಳುವುದು ಕಸ್ತೂರ ಬಾ ರವರಿಗೆ ಕಿಂಚಿತೂ ಇಷ್ಟವಿರಲ್ಲಿಲ್ಲ. ಆದರೂ ಬದಲಾವಣೆಗಳನ್ನು ಒಪ್ಪಿಕೊಂಡರು. ಸದಾ ಜನಜಂಗುಳಿ ಮಧ್ಯೆಯೇ ಇರುತ್ತಿದ್ದ ಮಹಾತ್ಮರ ಯೋಗಕ್ಷೇಮ ವಿಚಾರಿಸುವುದು, ಮನೆಗೆ ಬಂದವರ ಆತಿಥ್ಯದಲ್ಲಿಯೇ ಅವರ ಸಮಯ ಕಳೆಯುತ್ತಿತ್ತು. ದಕ್ಷಿಣ ಆಫ್ರಿಕಾದ ಭಾರತೀಯರ ಹಕ್ಕುಗಳಿಗಾಗಿ ನಡೆಸಿದ ಚಳವಳಿಯಲ್ಲಿ ಪಾಲ್ಗೊಂಡು ಅಲ್ಲಿನ ಸೆರೆಮನೆಯ ವಾಸದ ಅನುಭವವೂ ಕಸ್ತೂರ ಬಾ ಅವರಿಗಾಗಿತ್ತು. ಒಮ್ಮೆ ಗಾಂಧೀಜಿಯವರು ತಮ್ಮ ಜೊತೆ ಬಂದ ದಲಿತ ವ್ಯಕ್ತಿಗೆ ತಮ್ಮ ಜೊತೆಯಲ್ಲಿಯೇ ಊಟಕ್ಕೆ ಕೂರಿಸಿಕೊಂಡಾಗ, ಸಂಪ್ರದಾಯ ದಲ್ಲಿಯೇ ಬೆಳೆದಿದ್ದ ಕಸ್ತೂರ ಬಾ ಊಟ ಬಡಿಸಲು ನಿರಾಕರಿಸಿ ತಮ್ಮ ಪ್ರತಿಭಟನೆ ತೋರಿ ದರು. ಆದರೆ ಗಾಂಧೀಯವರೂ ಬಗ್ಗದೆ. ಆ ಹುಡುಗನಿಗೆ ಊಟ ಬಡಿಸದಿದ್ದರೇ ತಾವು ಊಟ ಮಾಡುವುದಿಲ್ಲವೆಂದು ಹಠ ಹಿಡಿದರು. ಕೊನೆಗೆ ಕಸ್ತೂರ ಬಾ ರವರೇ ಬಗ್ಗಬೇಕಾಯಿತು. ಇಂತಹ ಹಲವಾರು ಘಟನೆಗಳು ಕಸ್ತೂರ ಬಾರವರಿಗೆ ಎದುರಾದವು. ಫೀನಿಕ್ಸ್ ಆಶ್ರಮ ದಲ್ಲಿ ಆಶ್ರಮವಾಸಿಗಳೆ ಎಲ್ಲ ಕೆಲಸ ಮಾಡಬೇಕಾಯಿತು. ಅಡುಗೆ ಮಾಡುವುದು, ಶುಚಿತ್ವದ ಕೆಲಸ, ಕಕ್ಕಸ್ಸು ತೊಳೆಯುವುದನ್ನು ಎಲ್ಲರೂ ಮಾಡಬೇಕಾದ್ದರಿಂದ ಕಸ್ತೂರ ಬಾ ಸಂತೋಷದಿಂದಲೇ ಹೊಂದಿಕೊಂಡರು. ಭಾರತಕ್ಕೆ ಬಂದ ಮೇಲೆ ಕಸ್ತೂರ ಬಾ ಇನ್ನೂ ಹೆಚ್ಚಿನ ಜವಾಬ್ದಾರಿ ಹೊರಬೇಕಾಯಿತು. ಆಶ್ರಮಗಳು ವಿಸ್ತಾರವಾಗುತ್ತಾ, ಬಂದು ಹೋಗುತ್ತಾ ಇದ್ದವರು, ಅಲ್ಲಿಯೇ ಇರುವವರ ಸಂಖ್ಯೆ ಹೆಚ್ಚಾಯಿತೇ ಹೊರತು ಬದಲಾವಣೆಗಳಾಗಲಿಲ್ಲ. ಇಲ್ಲಿನ ಜವಾಬ್ದಾರಿ ಇನ್ನೂ ಹೆಚ್ಚಾಯಿತು.

ಸ್ವತಂತ್ರ್ಯ ಚಳವಳಿಯ ಬಿರುಸು ಹೆಚ್ಚಾದ ಹಾಗೇ ಗಾಂಧೀಜಿ ಪ್ರವಾಸಗಳು, ಚಟುವಟಿಕೆಗಳು ಬಿರುಸುಗೊಂಡು ಆಗಾಗ ಅವರ ಆರೋಗ್ಯ ಹದಗೆಡುತ್ತಿತ್ತು. ಕಸ್ತೂರಾ ಬಾರವರು ಮತ್ತಷ್ಟು ಜಾಗ್ರತೆಯಿಂದ ತಮ್ಮ ಪತಿಯ ಆರೈಕೆ ಮಾಡುತ್ತಿದ್ದರು. ಪ್ರವಾಸದಲ್ಲಿದ್ದಾಗಲು ಜೊತೆ ಗಾರರಿಂದ ಆರೋಗ್ಯದ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಎಲ್ಲರಿಗೂ ತಿಳಿದಂತೆ ಮಹಾತ್ಮರು ಸರ್ಕಾರದ ಆಜ್ಞೆಗಳನ್ನು ವಿರೋಧಿಸಿ ದೀರ್ಘಕಾಲ ಉಪವಾಸ ಕೈಗೊಳ್ಳುತ್ತಿದ್ದರು. ಆದರೆ ಬಹಿರಂಗಗೊಳ್ಳದ ವಿಷಯವೆಂದರೆ ಮಹಾತ್ಮರು ಉಪವಾಸ ಕೈಗೊಂಡಾಗೆಲ್ಲಾ ಕಸ್ತೂರ ಬಾ ಅವರೂ ತಮ್ಮ ಆಶ್ರಮದೊಳಗೆ ಅಷ್ಟೂ ದಿನಗಳು ಉಪವಾಸದಲ್ಲಿರುತ್ತಿದ್ದುದು. ಗಾಂಧೀಜಿಯವರು ಉಪವಾಸ ಮುರಿದಾಗಲೆ ಕಸ್ತೂರ ಬಾ ತಾವೂ ಊಟ ಮಾಡುತ್ತಿದ್ದದ್ದು. ಇದು ಪತಿ ಸೇವೆಯ ಜೊತೆಗೆ ದೇಶದ ಆಗುಹೋಗುಗಳ ಬಗ್ಗೆಯೂ ಕಸ್ತೂರ ಬಾರವರಿಗೆ ಮಾಹಿತಿ ಇರುತ್ತಿತ್ತು. ಪತಿಯ ಜೊತೆಯಲ್ಲಿ ಅವರು ದೇಶದ ಸ್ವಾತಂತ್ರ್ಯ ಹೋರಾಟದ ವಿಷಯಗಳನ್ನು ಚರ್ಚಿಸುತ್ತಿದ್ದರು. ಆಶ್ರಮದವರಂತೂ ಬಾರವರನ್ನು ಮಾತೆಯೆಂದೇ ಗೌರವಿಸುತ್ತಿದ್ದರು. ಗಾಂಧಿಯವರ ಅನುಪಸ್ಥಿತಿಯಲ್ಲಿ ಆಶ್ರಮದ ಎಲ್ಲ ಚಟುವಟಿಕೆಗಳೂ ಕಸ್ತೂರ ಬಾ ರವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದರಿಂದ ಮಹತ್ಮರ ಬಗ್ಗೆ ಚಿಂತೆ ಇರಲಿಲ್ಲ. ಸಂಜೆಯ ಪ್ರಾರ್ಥನಾ ಸಭೆಗಳಲ್ಲಿ ಭಾಗವಹಿಸುತ್ತಾ, ಚರಕದಲ್ಲಿ ನೂಲುತ್ತಾ ತಮ್ಮ ವಸ್ತ್ರಗಳಿಗೆ ಬೇಕಿದ್ದ ನೂಲನ್ನು ತಾವೇ ಸಿದ್ಧಗೊಳಿಸಿಕೊಳ್ಳುವ ಸ್ವಾವಲಂಬನೆಯ ಪಾಠ ಕಸ್ತೂರ ಬಾರವರಿಗೆ ತಿಳಿದಿತ್ತು. ತಮ್ಮ ಮಕ್ಕಳ್ಳನ್ನು ಅದೇ ಹಾದಿಯಲ್ಲಿ ತರಲು ಪ್ರಯತ್ನಿಸಿದ್ದುದು ಉಂಟು.

ಮಹಾತ್ಮರನ್ನು ಅನುಸರಿಸಿ ಸೆರೆಮನೆಗೂ ಹೋಗುತ್ತಿದ್ದ ಕಸ್ತೂರ ಬಾ ಅವರ ಯೋಗ ಕ್ಷೇಮದ ಬಗ್ಗೆ ಮಾತ್ರವಲ್ಲ ದೇಶದ ಜನತೆಯ ಬಗ್ಗೆಯೂ ಅಪಾರ ಪ್ರೀತಿ ಹೊಂದಿದ್ದರು.

೧೯೪೨ರ ಕ್ವಿಟ್ ಇಂಡಿಯಾ ಹೋರಾಟದ ಸಂದರ್ಭದಲ್ಲಿ ಮಹಾತ್ಮರನ್ನು ಬ್ರಿಟಿಷ್ ಸರ್ಕಾರ ಮುಂಬೈನಲ್ಲಿ ಬಂಧಿಸಿ ಪೂನಾದ ಆಗಾಖಾನ್ ಸೆರೆಮನೆಯಲ್ಲಿಟ್ಟಾಗ ಕಸ್ತೂರ ಬಾ ಅವರೂ ಸೆರೆಯಾದರು. ಸೆರೆಮನೆಯಲ್ಲಿ ಮಹಾತ್ಮರ ಚಟುವಟಿಕೆಗಳಲ್ಲಿ ಪಾಲ್ಗೊಂಡಿ ದ್ದಲ್ಲದೆ, ಅಲ್ಲಿಯೇ ಕಾಯಿಲೆ ಬಿದ್ದರು. ವೈದ್ಯರು ಔಷಧೋಪಚಾರ ನಡೆಸಿದರೂ ಕಾಯಿಲೆ ಉಲ್ಬಣವಾಗುತ್ತಲೇ ಹೋಯಿತು. ವೈದ್ಯರು ನಡೆಸಿದ ಪ್ರಯತ್ನಗಳು ಫಲ ಕಾಣದೆ ೧೯೪೪ರಲ್ಲಿ ಆಗಾಖಾನ್ ಸೆರೆಮನೆಯಲ್ಲಿಯೆ ಕಸ್ತೂರ ಬಾ ನಿಧನರಾದರು. ಅಲ್ಲಿಯೇ ಅವರ ಕ್ರಿಯೆಗಳನ್ನು ನಡೆಸಲಾಯಿತು. ಮಹಾತ್ಮರನ್ನು ತಮ್ಮ ಜೀವನದ ಕೊನೆಯವರೆಗೂ ಅನುಸರಿಸಿ ಅವರ ಕಷ್ಟ ದುಃಖಗಳಲ್ಲಿ ಭಾಗಿಯಾಗಿದ್ದ ಕಸ್ತೂರ ಬಾ ದೇಶದ ಜನರ ಮನಸ್ಸಿನಲ್ಲಿ ಎಂದಿಗೂ ಒಬ್ಬ ಆದರ್ಶ ಮಹಿಳೆಯಾಗಿ ಕಂಡುಬರುವುದು ಆಶ್ಚರ್ಯವೇನಲ್ಲ.

ದೇಶವು ಕಂಡ ಧೀಮಂತ ಮಹಿಳೆಯರಲ್ಲಿ ಕಸ್ತೂರ ಬಾ ಪ್ರಮುಖರು. ಅವರು ಮಹಾತ್ಮರ ಪತ್ನಿಯಾಗಿ ನಡೆಸಿದ ಅಪೂರ್ವ ಸೇವೆ ಜನತೆಯ ಮನಸ್ಸಿನಲ್ಲಿ ನೆಲೆಸಿದ್ದು, ಮಹಾತ್ಮರ ಹಿಂಬಾಲಕರು ಆ ಽಮಂತ ಮಹಿಳೆಗೆ ಗೌರವ ಸಲ್ಲಿಸಲು ಅವರ ಹೆಸರಿನಲ್ಲಿ ನಿಧಿ ಸಂಗ್ರಹಿಸಿ ದೇಶದ ಅಶಕ್ತ ಮಹಿಳೆಯರ ಯೋಗ ಕ್ಷೇಮಕ್ಕ ಕಸ್ತೂರ ಬಾ ಟ್ರಸ್ಟನ್ನು ರಚಿಸಿದ್ದು, ಅದು ಇಂದಿಗೂ ಮಧ್ಯಪ್ರದೇಶದ ಇಂಧೂರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ರಾಜ್ಯದಲ್ಲಿ ಪ್ರಮುಖ ಗಾಂಧಿವಾದಿ ಯಶೋಧರಾ ದಾಸಪ್ಪನವರು ಅರಸೀಕೆರೆಯಲ್ಲಿ ಬಡ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ತರಬೇತಿಗಾಗಿ ಕಸ್ತೂರ ಬಾ ಟ್ರಸ್ಟ್ ಸ್ಥಾಪಿಸಿದರು. ಅದು ಇಂದಿಗೂ ಕಾರ್ಯ ನಿರ್ವಹಿಸುತ್ತಾ ನೂರಾರು ಗ್ರಾಮಾಂತರ ಹೆಣ್ಣುಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಿದೆ.

ಆಂದೋಲನ ಡೆಸ್ಕ್

Recent Posts

ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ? | ಹಾಲಿನ ದರ ಏರಿಕೆ ನಡುವೆ ಕಾಫಿ,ಟೀ ಬೆಲೆ ಹೆಚ್ಚುವ ಸಾಧ್ಯತೆ

ಬೆಂಗಳೂರು : ಹಾಲಿನ ದರ ಏರಿಕೆ ಕುರಿತು ರಾಜ್ಯದಲ್ಲಿ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್‌ಗಳಲ್ಲಿ ಕಾಫಿ, ಟೀ ಸೇರಿದಂತೆ…

7 mins ago

ಕೆಪಿಎಸ್‌ಸಿ ಅಕ್ರಮ | 1.52 ಕೋಟಿ ಹಣ ಪಾವತಿ ಪತ್ತೆ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಕೀಯ ವೈದ್ಯರ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳ ತನಿಖೆ ಮತ್ತಷ್ಟು ವಿಸ್ತರಿಸಿದ್ದು, ಪ್ರಶ್ನೆಪತ್ರಿಕೆ…

21 mins ago

ಗಾಂಧಿ ಅಭಿಯಾನ ಅರಿವಿನ ಯಾನ | ಗೊಂದಲಗೊಳಿಸುತಿದ್ದ ಹಲವು ಸಂದೇಹಗಳು

ಬ್ಯಾರಿಸ್ಟರ್ ಎನ್ನಿಸಿಕೊಳ್ಳುವುದು ಸುಲಭವಾಗಿತ್ತು. ಆದರೆ ವಕೀಲಿ ವೃತ್ತಿಯನ್ನು ನಡೆಸುವುದು ಕಷ್ಟವಾಗಿತ್ತು. ನಾನು ಕಾನೂನುಗಳನ್ನೇನೋ ವ್ಯಾಸಂಗ ಮಾಡಿದ್ದೆ. ಅವುಗಳನ್ನು ಕಾರ್ಯ ರೂಪದಲ್ಲಿ…

2 hours ago

ಯುಪಿಯಲ್ಲಿ ತಯಾರಾಗುತ್ತಿರುವ ಬ್ರಹ್ಮೋಸ್‌ ಕ್ಷಿಪಣಿಗಳು ಪಾಕ್‌ ನಿದ್ದೆಗೆಡಿಸಿವೆ: ಅಮಿತ್‌ ಶಾ

ಲಕ್ನೋ: ಉತ್ತರ ಪ್ರದೇಶದಲ್ಲಿ ರಕ್ಷಣಾ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.…

20 hours ago

ಪ್ರಜಾಪ್ರಭುತ್ವ ರಕ್ಷಿಸಲು ಗಾಂಧಿ ಜಯಂತಿಯಂದು ಪ್ರತಿಜ್ಞೆ ಮಾಡೋಣ: ಅಭಿಜಿತ್‌ ದೀಪ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ, ಅಂದರೆ ಸಿಜೆಪಿ ಆಗ್ರಹಿಸಿದೆ. ಸಿಜೆಪಿ…

21 hours ago

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ

ಕೊಡಗು: ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.89 ಮಿ.ಮೀ. ಮಳೆಯಾಗಿದೆ. ಕಳೆದ…

21 hours ago