– ಎಚ್.ಎಸ್.ದಿನೇಶ್ ಕುಮಾರ್
ಮೈಸೂರು: ಸಾರ್ವಜನಿಕರ ಆಕರ್ಷಣೆಗಾಗಿ ಜಯ ಚಾಮರಾಜೇಂದ್ರ ವೃತ್ತ(ಹಾರ್ಡಿಂಜ್ ವೃತ್ತ)ದ ಬಳಿ ಅಂಬಾರಿ ಆನೆಯ ಮಾದರಿ, ಸ್ವಚ್ಛತೆ ಕಾಪಾಡಿ, ಶೌಚಾಲಯ ಬಳಸಿ ಎಂಬಿತ್ಯಾದಿ ಸಂದೇಶಗಳನ್ನೊಳಗೊಂಡು ನಿರ್ಮಾಣವಾಗಿದ್ದ ‘ಸೆಲ್ಛಿ ಸ್ಪಾಟ್’ ಇದೀಗ ಅನಾಥವಾಗಿದೆ.
ಈ ಹಿಂದೆ ನಗರಪಾಲಿಕೆ ಆಯುಕ್ತರಾಗಿದ್ದ ಡಾ.ಸಿ.ಜಿ.ಬೆಟಸೂರ ಮಠ ಅವರ ಆಸಕ್ತಿಯಿಂದಾಗಿ ಜಯಚಾಮರಾಜೇಂದ್ರ ವೃತ್ತದ ಸುತ್ತಲಿನ ಸ್ಥಳದಲ್ಲಿ ನೀರಿನ ಕಾರಂಜಿ, ಹುಲ್ಲು ಹಾಸು ಹಾಗೂ ಬೆಳಕಿನ ದೀಪಗಳ ಮೂಲಕ ಜನಾಕರ್ಷಣೆಯನ್ನಾಗಿಸಲಾಗಿತ್ತು. ನಂತರದ ದಿನಗಳಲ್ಲಿ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಅಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿರಲಿಲ್ಲ. ಇದನ್ನು ಗಮನಿಸಿದ ನಗರಪಾಲಿಕೆ ಆುುಂಕ್ತ ಎಚ್.ಕೆ.ಜಗದೀಶ್ ಅವರು, ಅಲ್ಲಿನ ಸ್ಥಳವನ್ನು ಬಳಸಿಕೊಂಡು ಸಾರ್ವಜನಿಕರನ್ನು ಸೆಳೆಯಬಲ್ಲ ಒಂದು ಯೋಜನೆಯನ್ನು ರೂಪಿಸುವ ಬಗ್ಗೆ ಆಲೋಚನೆ ನಡೆಸಿದ್ದರು. ಆಗ ಅವರಿಗೆ ಹೊಳೆದಿದ್ದು ‘ಸೆಲ್ಛಿ ಸ್ಪಾಟ್’ ನಿರ್ಮಾಣ.
ಕೂಡಲೇ ಅಧಿಕಾರಿಗೊಳೊಂದಿಗೆ ಚರ್ಚೆ ನಡೆಸಿದ ಅವರು ವೃತ್ತದ ಎಡಭಾಗದಲ್ಲಿ ಸೆಲ್ಛಿ ಸ್ಪಾಟ್ ನಿರ್ಮಾಣ ಮಾಡಿದ್ದಾರೆ. ಇದಕ್ಕಾಗಿ ನಗರಪಾಲಿಕೆಯ ಯಾವುದೇ ಹಣವನ್ನು ಬಳಸಿಕೊಳ್ಳದೆ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಜಾರಿಗೆ ತಂದಿದ್ದರು. ನಂತರ ಅಲ್ಲಿಗೆ ಬರುತ್ತಿದ್ದ ಸಾರ್ವಜನಿಕರು ಅಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಅಲ್ಲಿ ನೀರಿನ ಒಳಗೆ ಹಂಸ ಪಕ್ಷಿಗಳ ಪ್ರತಿಮೆಗಳು, ಗಾಂಧೀಜಿ ಪ್ರತಿಮೆ, ನಗರಪಾಲಿಕೆಯ ಲಾಂಛನವಾದ ನಂದಿ ವಿಗ್ರಹ ಹಾಗೂ ನಗರಪಾಲಿಕೆಯ ಹೆಸರನ್ನು ಆಕರ್ಷಕವಾಗಿ ಬಳಸಲಾಗಿತ್ತು.
4 ವರ್ಣಗಳ ಕಂಬಗಳು, ಫೈಬರ್‌ನಿಂದ ನಿರ್ಮಿತವಾದ ಆನೆಗಳು ಹಾಗೂ ಅಂಬಾರಿಯ ಮಾದರಿಯನ್ನು ಹುಲ್ಲು ಹಾಸಿನ ನಡುವೆ ಪ್ರದರ್ಶನಕ್ಕಿಡಲಾಗಿದೆ. ಸ್ವಚ್ಛತೆಗೆ ಮಹತ್ವ ನೀಡುವ ಹಿನ್ನೆಲೆಯಲ್ಲಿ ಕಸ ವಿಂಗಡಣೆಯ ವಿಧಾನ, ಪೊರಕೆ ಹಿಡಿದ ಪೌರ ಕಾರ್ಮಿಕರ ಚಿತ್ರಣ, ಕಸ ಸಾಗಿಸುವ ಆಟೋ ಮಾದರಿಯನ್ನು ಅಲ್ಲಿ ನಿರ್ಮಿಸಲಾಗಿದೆ.
ಇದರ ಜೊತೆಗೆ ಮಹಿಳೆಯರಿಗೆ ಮೀಸಲಾದ ಶೌಚಾಲಯ, ಸೂರಿಲ್ಲದವರಿಗೆ ಮನೆಗಳನ್ನು ನೀಡುವ ಆಶ್ರಯ ಯೋಜನೆಯ ಮನೆಗಳ ಮಾದರಿಯನ್ನು ಕೂಡ ಅಲ್ಲಿ ನಿರ್ಮಾಣ ಮಾಡಲಾಗಿತ್ತು. ಸಂಜೆಯ ವೇಳೆಯಲ್ಲಿ ಜನರನ್ನು ಸೆಳೆಯುವ ಉದ್ದೇಶದಿಂದ ವಿಶೇಷ ದೀಪಾಲಂಕಾರ ಹಾಗೂ ನೀರಿನ ಜಲಪಾತವನ್ನು ನಿರ್ಮಿಸಲಾಗಿತ್ತು.
ಆದದೆ, ನಗರಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದೀಗ ಸೆಲ್ಛಿ ಸ್ಪಾಟ್ ಅನಾಥವಾಗಿದೆ. ಆನೆಗಳ ಮಾದರಿಗಳು ಮುರಿದು ಬೀಳುವ ಹಂತದಲ್ಲಿವೆ. ಜಲಪಾತ ನಾಪತ್ತೆಯಾಗಿದೆ. ಜಿಂಕೆ, ಗಾಂಧೀಜಿ ಪ್ರತಿಮೆಗಳಿಗೆ ಮಂಕು ಕವಿದಿದೆ.
ಸೆಲ್ಛಿ ಸ್ಪಾಟ್ ಈಗ ಕಸದ ತಾಣವಾಗಿ ಪರಿಣಮಿಸಿದೆ. ಕೆಲ ತಿಂಗಳುಗಳ ಕಾಲ ಜನನಿಬಿಡ ತಾಣವಾಗಿದ್ದ ಸೆಲ್ಛಿ ಸ್ಪಾಟ್ ಇದೀಗ ಯಾರೂ ತಿರುಗಿ ನೋಡದಂತಾಗಿದೆ. ನಗರದ ಹೃದಯಭಾಗದಲ್ಲಿರುವ ಇಂತಹ ಸ್ಥಳವನ್ನು ಜತನದಿಂದ ಕಾಪಾಡಿಕೊಳ್ಳಬೇಕಾದುದು ನಮ್ಮ ಕರ್ತವ್ಯ ಎಂಬುದನ್ನು ಅಧಿಕಾರಿಗಳು ತಿಳಿದುಕೊಂಡರೆ ಒಳ್ಳೆಯದು ಎಂಬುದು ಸಾರ್ವಜನಿಕರ ಅಭಿಪ್ರಾಯ
ಹಾರ್ಡಿಂಜ್ ವೃತ್ತದಲ್ಲಿರುವ ಸೆಲ್ಛಿ ಸ್ಪಾಟ್‌ನ್ನು ಈಗಾಗಲೇ ಪರಿಶೀಲಿಸಲಾಗಿದೆ. ಅದರ ನಿರ್ವಹಣೆಯನ್ನು ಖಾಸಗಿ ಸಂಸ್ಥೆ ವಹಿಸಿಕೊಂಡಿತ್ತು. ಆದರೆ, ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂಬುದು ತಿಳಿದುಬಂದಿದೆ. ಆದಷ್ಟು ಶೀಘ್ರ ದುರಸ್ತಿ ಕಾರ್ಯ ಕೈಗೆತ್ತಿಕೊಂಡು ಮೊದಲಿನಂತೆ ಸಿದ್ಧಪಡಿಸಲಾಗುವುದು.
-ಲಕ್ಷ್ಮಿ ಕಾಂತರೆಡ್ಡಿ, ನಗರಪಾಲಿಕೆ ಆಯುಕ್ತರು.
ನಗರಪಾಲಿಕೆ ವತಿಯಿಂದ ನಿರ್ಮಾಣ ಮಾಡಲಾಗಿದ್ದ ಸೆಲ್ಛಿ ಸ್ಪಾಟ್ ನಿಜಕ್ಕೂ ಆಕರ್ಷಣೀಯವಾಗಿತ್ತು. ಆದರೆ, ನಗರಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇದೀಗ ಅಲ್ಲಿ ಸಂಪುರ್ಣ ಹಾಳಾಗಿದೆ. ಮತ್ತೆ ಅದನ್ನು ಅಭಿವೃದ್ಧಿಪಡಿಸಿ ಜನಾಕರ್ಷಣೀಯವಾಗಿಸಬೇಕು.
–ರಾಘವೇಂದ್ರ, ವಿದ್ಯಾರಣ್ಯಪುರಂ.
ಹೇಗಿತ್ತು ಸೆಲ್ಛಿ ಸ್ಪಾಟ್?
* ಜಲಪಾತ ಮಾದರಿ
* ನೀರಿನ ಒಳಗೆ ಹಂಸ ಪಕ್ಷಿಗಳ ಪ್ರತಿಮೆಗಳು
* ಗಾಂಧೀಜಿ ಪ್ರತಿಮೆ
* ನಗರಪಾಲಿಕೆಯ ಲಾಂಛನವಾದ ನಂದಿ ವಿಗ್ರಹ
* 4 ವರ್ಣಗಳ ಕಂಬಗಳು
* ಹುಲ್ಲು ಹಾಸಿನ ನಡುವೆ ಅಂಬಾರಿ ಮಾದರಿ ಆನೆಗಳು
* ಸ್ವಚ್ಛತಾ ಕಾರ್ಯದ ಮಾದರಿ
* ಆಶ್ರಯ ಯೋಜನೆಯ ಮನೆಗಳ ಮಾದರಿ
ಈಗ ಹೇಗಿದೆ?
* ಜಲಪಾತ ನಾಪತ್ತೆಯಾಗಿದೆ
* ಹಸಿರು ನೆಲಹಾಸು ಒಣಗಿದೆ
* ಆನೆಗಳ ಮಾದರಿಗಳು ಮುರಿದು ಬೀಳುವ ಹಂತದಲ್ಲಿವೆ
* ಜಿಂಕೆ, ಗಾಂಧೀಜಿ ಪ್ರತಿಮೆಗಳಿಗೆ ಮಂಕು ಕವಿದಿದೆ
ಮೈಸೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿ ದಹಿಸಿದ 98 ನೇ ವರ್ಷದ ನೆಪದಲ್ಲಿ ಪ್ರಸ್ತುತ ಸಂವಿಧಾನ ವಿರೋಧಿ…
ಹುಬ್ಬಳ್ಳಿ : ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿ ಮಗಳನ್ನು ಸ್ವಂತ ತಂದೆ ಸೇರಿ ಇತರರು ಕೊಲೆ ಮಾಡಿ ಗಂಡನ…
ಬೆಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಶಾಸಕ, ಕೊಡುಗೈ ದಾನಿ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಇದೇ 24ರಂದು ಅಖಿಲ ಭಾರತ…
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ…
ಮಂಗಳೂರು: ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಕೊಲ್ಲಮೊಗ್ರು ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿಗಳು ಆರು ತಿಂಗಳಿಂದ ಸರಿಯಾಗಿ ಸಂಬಳ ಆಗದ ಕಾರಣ…
ಮೈಸೂರು: ಮೈಸೂರು ಜಿಲ್ಲೆ ಸರಗೂರಿನ ತಾಲ್ಲೂಕು ಕಚೇರಿ ಹಾಗೂ ಹಾಸನದ ಆಲೂರು ತಾಲ್ಲೂಕು ಕಚೇರಿಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ…