ಜಿಲ್ಲೆಗಳು

‘ಗೋಪಾಲಸ್ವಾಮಿ ನಮ್ಮ ಕುಟುಂಬ ಸದಸ್ಯನಂತಿತ್ತು’ : ಕಾವಾಡಿ ಮಂಜು

ಮೃತಪಟ್ಟ ಮೆಚ್ಚಿನ ಆನೆಯ ನೆನೆದು ಕಣ್ಣೀರಾದ ಕಾವಾಡಿ ಮಂಜು

 


ದಾ.ರಾ.ಮಹೇಶ್ 

ವೀರನಹೊಸಹಳ್ಳಿ: ‘ಗೋಪಾಲಸ್ವಾಮಿ ಒಂದು ಆನೆ ಮಾತ್ರವಲ್ಲ, ಆಟದ ಸಂಗಾತಿ, ನಮ್ಮ ಮನೆಯ ಸದಸ್ಯನಂತೆ ಕೂಡ ಇತ್ತು. ಅದನ್ನು ಕಳೆದುಕೊಂಡಿರುವುದರಿಂದ ನಮ್ಮ ಕುಟುಂಬ ಸದಸ್ಯರೊಬ್ಬರನ್ನೇ ಕಳೆದುಕೊಂಡಂತಹ ನೋವು ಉಂಟಾಗಿದೆ’.

ಈಚೆಗೆ ಕಾಡಾನೆ ಜತೆ ಕಾದಾಟದಲ್ಲಿ ಮೃತಪಟ್ಟ ಗೋಪಾಲಸ್ವಾಮಿ ಆನೆಯ ಕಾವಾಡಿ ಮಂಜು ಅವರು ತಮ್ಮ ಮತ್ತು ಗೋಪಾಲಸ್ವಾಮಿ ನಡುವೆ ಇದ್ದ ಆತ್ಮೀಯತೆಯನ್ನು ವರ್ಣಿಸಿದ್ದು ಹೀಗೆ.
ಅಗಲಿದ ಗಜರಾಜನ ನೆನೆದು ಪತ್ರಿಕೆಯೊಡನೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಕಾವಾಡಿ ಮಂಜು, ಬೃಹತ್ ಕಾಯ್ದೆ ಆನೆಯಿರಲಿ, ಪುಟ್ಟ ಗಾತ್ರದ ಅಳಿಲೇ ಇರಲಿ, ಮನುಷ್ಯ ಕೊಂಚ ಅಕ್ಕರೆ ತೋರಿದರೂ ಸಾಕು, ಬದಲಿಗೆ ಆತನಿಗೆ ನಿಷ್ಕಲ್ಮಶ ಪ್ರೀತಿಯ ಖಜಾನೆಯನ್ನೇ ಮರಳಿಸುತ್ತವೆ. ಪ್ರಾಣಿ ಮತ್ತು ಮನುಷ್ಯನ ಗಾಢ ಸ್ನೇಹ ಎಂತಹ ಕಟುಕರ ಮನಸ್ಸನ್ನೂ ಭಾವುಕವಾಗಿಸಬಲ್ಲದು. ಅಂತಹ ಅಪರೂಪದ ನಡುವಿನ ಸ್ನೇಹ ನಮ್ಮದು ಎಂದು ತಮ್ಮ ಅಚ್ಚುಮೆಚ್ಚಿನ ಆನೆಯ ಬಗ್ಗೆ ಹೇಳುತ್ತಾ ಭಾವುಕರಾದರು.

ಹಲವು ವರ್ಷಗಳ ಕಾಲ ಅಕ್ಕರೆಯಿಂದ ನೋಡಿಕೊಂಡ ಗಜರಾಜನಿಗೆ ವಿದಾಯ ಹೇಳುವ ಸಮಯ ಬಂದಾಗ, ನನ್ನ ಕಣ್ಣಾಲಿಗಳು ತುಂಬಿ ಬಂದವು ಎಂದು ಸುಮಾರು ಹತ್ತು ವರ್ಷ ಕಾಲ ಆನೆಗಳನ್ನು ನೋಡಿಕೊಳ್ಳುತ್ತಿದ್ದ ಮಂಜು ಹೇಳಿದರು.

ಅದು ಎಷ್ಟು ವಿಧೇಯ ಆನೆೆಯೇ ಆಗಿತ್ತು ಎಂದರೆ, ಅದಕ್ಕೆ ಯಾವತ್ತೂ ಏಟು ಹೊಡೆದಿಲ್ಲ. ಗದರಿದ ಪ್ರಸಂಗವು ಕೂಡ ಇಲ್ಲ. ರಾಜ್ಯದಲ್ಲೇ ಅಲ್ಲದೆ ಅಂತರ ರಾಜ್ಯದಲ್ಲೂ ಆನೆ ಮತ್ತು ಹುಲಿ ಹಿಡಿಯುವ ಕಾರ್ಯಾಚರಣೆಯಲ್ಲಿ ನನ್ನ ಆನೆ ಎಂದಿಗೂ ಮುಂದೆ ಇತ್ತು ಎಂದು ತಿಳಿಸಿದರು.

ನಾವು ಹೇಳುವ ಭಾಷೆಯನ್ನು ಬರೀ ಸನ್ನೆಯ ಮೂಲಕ ಅರ್ಥ ಮಾಡಿಕೊಂಡು ಇತರೆ ಆನೆಗಳನ್ನು ಜೊತೆಯಲ್ಲಿ ಕರೆದುಕೊಂಡು ಕ್ಯಾಪ್ಟನ್ ಶಿಪ್ ವಹಿಸುತ್ತಿತ್ತು. ಅಲ್ಲದೆ ೨೦೨೧ ಸಾಲಿನಲ್ಲಿ ಶ್ರೀರಂಗಪಟ್ಟಣದಲ್ಲಿ ನಡೆದ ದಸರಾ ಮಹೋತ್ಸವದಲ್ಲಿ ಅಲ್ಲಿನ ದೇವರ ವಿಗ್ರಹವನ್ನು ಹೊತ್ತು ಸಾಗಿತ್ತು. ಅದನ್ನು ಕಳೆದುಕೊಂಡ ನೋವು ಸದಾ ಇರುತ್ತದೆ ಎಂದು ದುಃಖ ತೋಡಿಕೊಂಡರು.

ಬೆಳಿಗ್ಗೆ ಮುದ್ದಾಡಿಸಿದ ಆನೆ ರಾತ್ರಿ ಸಾವಿಗೀಡಾಗಿದ್ದನ್ನು ನಂಬಲಾಗುತ್ತಿಲ್ಲ. ಅದು ನಮ್ಮ ಜತೆ ಆಡಿದ್ದ ಕಣ್ಣಾಮುಚ್ಚಾಲೆ ಆಟ, ವಾಲಿಬಾಲ್, ಮಕ್ಕಳೊಂದಿಗೆ ನಡೆಸಿದ ತುಂಟಾಟವನ್ನು ಎಂದಿಗೂ ಮರೆಯುವುದಿಲ್ಲ.

andolanait

Recent Posts

ಆಕಾಶನನ್ನು ಬಾನಿನಲ್ಲಿ ಹಾರಾಡಲು ಕಲಿಸಿದ ಮೈಸೂರಿನ ವಾಕ್- ಶ್ರವಣ ಸಂಸ್ಥೆ

ಅಕ್ಷತಾ ಹೆಣ್ಣಿನ ತಾಯ್ತನ ಆಕೆ ಗರ್ಭವತಿಯೆಂದು ತಿಳಿದಾಗಿನಿಂದಲೇ ಜಾಗೃತವಾಗುತ್ತದೆ. ತನಗೆ ಹುಟ್ಟಲಿರುವ ಮಗುವಿನ ಬಗ್ಗೆ ಅಂದಿನಿಂದಲೇ ಬಣ್ಣಬಣ್ಣದ ಕನಸುಗಳನ್ನು ಕಾಣಲಾರಂಭಿಸುತ್ತಾಳೆ.…

3 hours ago

ವೀರಗಾಸೆಯೇ ಜೀವವಾಗಿರುವ ಕಿರಾಳು ಮಹೇಶ್

ಸಿರಿ ಮೈಸೂರು ಮುಖಕ್ಕೆ ಪ್ರಸಾದನ ಮಾಡಿಕೊಂಡು, ಭಾರೀ ವಸ್ತ್ರ ಧರಿಸಿ, ಕತ್ತಿ ಹಿಡಿದು, ವೀರಭದ್ರನ ಧ್ಯಾನ ಮಾಡಿ ವೇದಿಕೆ ಏರಿ…

3 hours ago

ಕಾಡ ನೋಡಹೋಗಿ ಲಂಟಾನ ಕಂಡು ಬಂದೆ

ಸ್ವಾಮಿ ಪೊನ್ನಾಚಿ ಮಹದೇಶ್ವರನ ಬೆಟ್ಟದ ಪೋಡಿನಿಂದ ಬಂದು ನಮ್ಮ ಮನೆಯಲ್ಲಿ ದನ ಮೇಯಿಸುತ್ತಿದ್ದ ಬೊಮ್ಮ ನನ್ನು ಕಂಡರೆ ನನಗೆ ಅಸಾಧ್ಯ…

3 hours ago

‘ಜನರ ಸೇವೆಗೆ ಎಟುಕದ ಅರಕೆರೆ ನಾಡಕಚೇರಿ’

ಸಿದ್ದೇಗೌಡ ಕೊಡಿಯಾಲ ಸಮಯಕ್ಕೆ ಬಾರದ ಅಧಿಕಾರಿ-ಸಿಬ್ಬಂದಿ:ಜನತೆ ಹೈರಾಣ ಶ್ರೀರಂಗಪಟ್ಟಣ: ತಾಲ್ಲೂಕಿನ ಅರಕೆರೆ ನಾಡಕಚೇರಿಯು ಅವ್ಯವಸ್ಥೆಯ ಗೂಡಾಗಿ ಮಾರ್ಪಟ್ಟಿದೆ. ಈ ನಾಡಕಚೇರಿಯಲ್ಲಿ…

3 hours ago

ಗಣಗೂರು ವ್ಯಾಪ್ತಿಯಲ್ಲಿ ಹೆಚ್ಚಿದ ಕಾಡಾನೆಗಳ ಹಾವಳಿ

ಲಕ್ಷ್ಮೀಕಾಂತ್ ಕೋಮಾರಪ್ಪ ಫಸಲು ನಾಶ, ಕಂಗಾಲಾದ ಕೃಷಿಕರು; ಸೂಕ್ತ ಕ್ರಮಕ್ಕೆ ಬೆಳೆಗಾರರ ಒತ್ತಾಯ ಸೋಮವಾರಪೇಟೆ: ತಾಲ್ಲೂಕಿನ ಗಣಗೂರು ಗ್ರಾಮ ಪಂಚಾಯಿತಿ…

3 hours ago

ಮೈಸೂರು ಆಯ್ತು; ಈಗ ಜಿಲ್ಲೆಗೂ ಹಬ್ಬಿದ ಮಾದಕ ವಸ್ತುವಿನ ಘಾಟು

ಎಚ್.ಎಸ್.ದಿನೇಶ್ ಕುಮಾರ್ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ನಿಲ್ಲದ ದಂಧೆ; ಪ್ರತಿ ಬಾರಿಯೂ ದಂಧೆಗೆ ಹೊಸ ದಾರಿ ಹುಡುಕುವ ದುರುಳರು ಮೈಸೂರು:…

3 hours ago