ಮೈಸೂರು: ನಗರದ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫ್ರೆಸೆನಿಯಸ್ ವೈದ್ಯಕೀಯ ಆರೈಕೆ ಡಯಾಲಿಸಿಸ್ ಯಂತ್ರವನ್ನು ಅಳವಡಿಸುವ ಮೂಲಕ ಡಯಾಲಿಸಿಸ್ ಸೇವೆಯನ್ನು ಉನ್ನತೀಕರಿಸಿದೆ.
ಫ್ರೆಸೆನಿಯಸ್ ವೈದ್ಯಕೀಯ ಆರೈಕೆ ಡಯಾಲಿಸಿಸ್ ಯಂತ್ರವು ವಿಶ್ವದ ಅತ್ಯಂತ ವಿಶ್ವಾಸಾರ್ಹ ಡಯಾಲಿಸಿಸ್ ಯಂತ್ರವಾಗಿದ್ದು, ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನೆಫ್ರಾಲಜಿ ವಿಭಾಗಕ್ಕೆ ಈ ೫ ಯಂತ್ರಗಳ ಸೇರ್ಪಡೆಯು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಸುರಕ್ಷತೆಯಲ್ಲಿ ನಿರಂತರ ಸುಧಾರಣೆಯ ಹಾದಿಗೆ ಸಾಕ್ಷಿಯಾಗಿದೆ.
ತೀವ್ರ ನಿಗಾ ಘಟಕದಲ್ಲಿ ಮೂತ್ರಪಿಂಡ ವೈಫಲ್ಯದ ರೋಗಿಗಳಿಗೆ ನೀಡುವ ಡಾಂಲಿಸಿಸ್ ಚಿಕಿತ್ಸೆಯಲ್ಲಿ ಸಸ್ಟ್ತ್ಯೆನ್ಡ್ ಲೊ-ಎಫಿಷಿಯನ್ಸಿ ಡಯಾಲಿಸಿಸ್ ಜನಪ್ರಿಯವಾಗುತ್ತಿರುವ ಚಿಕಿತ್ಸ ವಿಧಾನವಾಗಿದೆ. ಸಸ್ಟ್ತ್ಯೆನ್ಡ್ ಲೊ-ಎಫಿಷಿಯನ್ಸಿ ಡಯಾಲಿಸಿಸ್ ಸಾಂಪ್ರದಾಯಿಕ ಇಂಟರ್ಮಿಟೆಂಟ್ ಹಿಮೋ ಡಯಾಲಿಸಿಸ್ ಮತ್ತು ಕಂಟಿನ್ಯೂಸ್ ರೆನಲ್ ರಿಪ್ಲೇಸೆಮೆಂಟ್ ಥೆರಪಿ ನಡುವಿನ ಮಧ್ಯಂತರ ಹೈಬ್ರಿಡ್ ಡಯಾಲಿಸಿಸ್ ವಿಧಾನವಾಗಿದೆ.
ಸ್ಲೆಡ್ ಚಿಕಿತ್ಸಾ ವಿಧಾನದ ಪ್ರಯೋಜನಗಳೆಂದರೆ ಸಣ್ಣ ದ್ರಾವಣಗಳ ಸಮರ್ಥ ತೆರವು, ಉತ್ತಮ ಹಿಮೋಡೈನಾಮಿಕ್ ಸಹಿಷ್ಣುತೆ. ರೋಗಿಗಳಿಗೆ ಸುಲಭವಾಗಿ ಹೊಂದಿಕೊಳ್ಳುವ ಈ ವಿಧಾನದಿಂದ ರೋಗಿಗಳು ಆಸ್ಪತ್ರೆಯಲ್ಲಿ ಕಳೆಯಬೇಕಾದ ಸಾಮ್ಯ ಹಾಗೂ ಚಿಕಿತ್ಸೆಗೆ ತಗಲುವ ವೆಚ್ಚ ಎರಡೂ ಕಡಿಮೆಯಾಗಲಿವೆ.
ಉಚಿತ ಸಾರಿಗೆ ಸೌಲಭ್ಯ: ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಯಾಲಿಸಿಸ್ ಮಾಡಿಸಿಕೊಳ್ಳುವ ರೋಗಿಗಳಿಗೆ ಉಚಿತ ಸಾರಿಗೆ ಸೇವೆಗಳನ್ನು ಒದಗಿಸುತ್ತಿದೆ. ಈ ಉಚಿತ ಸೇವೆಯು ತುಂಬಾ ಉಪಯುಕ್ತ ವಾಗಿದೆ. ಏಕೆಂದರೆ ಡಯಾಲಿಸಿಸ್‌ಗೆ ಒಳಗಾಗುವ ರೋಗಿಗಳು ದುರ್ಬಲರಾಗುತ್ತಾರೆ ಮತ್ತು ಕಾರ್ಯ ವಿಧಾನದ ನಂತರ ಸ್ನಾಯು ಸೆಳೆತ, ಬಿಪಿ ಏರಿಳಿತಗಳು ಮತ್ತು ಮುಂತಾದವುಗಳನ್ನು ಅನುಭವಿಸುತ್ತಾರೆ. ಸಾರಿಗೆಯನ್ನು ಹುಡುಕುವ ಯಾವುದೇ ಒತ್ತಡವಿಲ್ಲದೆ ರೋಗಿಗಳು ಮನೆಗೆ ತೆರಳಿ ಚೇತರಿಸಿಕೊಳ್ಳಬಹುದಾಗಿದೆ. ಡಯಾಲಿಸಿಸ್ ರೋಗಿಗಳು ಸಹಾಯವಾಣಿ ಸಂಖ್ಯೆ: 8884458893 ಕರೆ ಮಾಡುವ ಮೂಲಕ ಈ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…