ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 1 ಗುರುವಾರ 2022

ಓದುಗರ ಪತ್ರ

ತೃತೀಯ ಲಿಂಗಿಗಳ ಸಾಧನೆ ಸರ್ವರಿಗೂ ಮಾದರಿ

ಇತ್ತೀಚಿಗೆ ಪ್ರಕಟಗೊಂಡ ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ತೃತೀಯ ಲಿಂಗಿ ಕೋಟಾದಡಿಯಲ್ಲಿ ಮೂವರು ತೃತೀಯ ಲಿಂಗಿಗಳು ಸರ್ಕಾರಿ ಹುದ್ದೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಅವರು ಸಾಧನೆ ಹರ್ಷವೆನಿಸಿದೆ. ತಮ್ಮದಲ್ಲದೆ ತಪ್ಪಿಗೆ ಹೆತ್ತವರು, ಬಂಧು ಬಳಗ ಹಾಗೂ ಸಮಾಜದಲ್ಲಿ ಶೋಷಣೆಗೆ ಒಳಗಾಗಿ ಮುಜುಗರಕ್ಕೆ ಈಡಾಗುವ ಇವರು ಲಿಂಗ ಪರಿವರ್ತನೆ ನಂತರ ಬೀದಿ ಬೀದಿಯಲ್ಲಿ ಭಿಕ್ಷಾಟನೆ ಮಾಡುತ್ತಾ ಜೀವನ ಸಾಗಿಸುವುದು ದುರ್ಗಮ. ಸದ್ಯ ಸುಪ್ರೀಂ ಕೋರ್ಟಿನ ತೀರ್ಪಿನಂತೆ ಶೇ. ೧ ರಷ್ಟು ಮೀಸಲಾತಿ ಸೌಲಭ್ಯ ಇವರಿಗೆ ಸಿಕ್ಕಿದ್ದು, ಅದರ ಸದ್ಬಳಕೆಯಾಗುತ್ತಿರುವುದು ಶ್ಲಾಘನೀಯ. ಇಂದಿನ ಯುವ ಸಮೂಹಕ್ಕೆ ಈ ತೃತೀಯ ಲಿಂಗಿಗಳು ನಿಜಕ್ಕೂ ಪ್ರೇರಣೆಯಾಗಿದ್ದಾರೆ. ಸಾಮಾಜಿಕವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿ ಸಂಕಷ್ಟದ ಜೀವನ ಸಾಗಿಸುತ್ತಾ ನಕಾರಾತ್ಮಕ ದೃಷ್ಟಿಕೋನಗಳಿಂದ ಕಾಣುವ ಸಮೂಹದ ನಡುವೆ ಮೀಸಲಾತಿಯು ವರದಾನ ಹಾಗೂ ನ್ಯಾಯಯುತವಾದ ತನ್ನ ನೈತಿಕ ಹಕ್ಕಿನ ಅರಿವಿನಿಂದ ಛಲ ಬಿಡದ ಇವರು ವಾಡಿದ ಸಾಧನೆ ಸಮಾಜದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡು ಮುನ್ನೆಲೆಗೆ ಬರುತ್ತಿರುವುದು ಸಕರಾತ್ಮಕ ಅಂಶ.

ಅನಿಲ್ ಕುಮಾರ್, ನಂಜನಗೂಡು.


ಮಹಾರಾಜ ಕಾಲೇಜಿನಲ್ಲಿ ಮೂಲ ಸೌಕರ್ಯ ಕಲ್ಪಿಸಿ

ನಾಲ್ವಡಿ ಕೃಷ್ಣರಾಜ ಒಡೆಯರ ರವರ ದೂರದೃಷ್ಟಿಯ ಜನಪರ ಚಿಂತನೆಗಳಿಂದಾಗಿ ಸ್ಥಾಪಿಸಲ್ಪಟ್ಟ ಮೈಸೂರು ವಿವಿಗೆ ೧೫೦ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ವಾರ್ಷಿಕವಾಗಿ ಸುವಾರು ೩೦೦ ಕೋಟಿ ರೂ. ಹೆಚ್ಚು ಬಜೆಟ್ ಲೆಕ್ಕ ತೋರಿಸುವ ವಿವಿಯ ಆಡಳಿತ ವರ್ಗದಿಂದ ವಿದ್ಯಾರ್ಥಿಗಳಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ವಿವಿ ವ್ಯಾಪ್ತಿಯ ಕಾಲೇಜುಗಳ ಕಟ್ಟಡಗಳು ವಿದ್ಯಾರ್ಥಿಗಳಿಗೆ ಯಮನ ರೂಪದಲ್ಲಿವೆ. ಮಹಾರಾಜ ಪದವಿ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಒಣಗಿರುವ ಮರಗಳು, ರೆಂಬೆ ಕೊಂಬೆಗಳು ಬೀಳುವ ಸ್ಥಿತಿಯಲ್ಲಿವೆ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಮಾಡಿದರೂ ಅದಕ್ಕೆ ಬೀಗ ಜಡಿಯಲಾಗಿದೆ. ಕ್ರಿಮಿನಾಲಜಿ ವಿಭಾಗ ಮತ್ತು ಕುಲಸಚಿವರ ನಿವಾಸದ ಪಕ್ಕದ ಮ್ಯಾನ್‌ ಹೋಲ್‌ಗಳು ಕಟ್ಟಿಕೊಂಡಿದ್ದು, ಮಲ, ಮೂತ್ರದ ಕೊಳಚೆ ನೀರನ್ನು ತುಳಿದುಕೊಂಡೇ ವಿದ್ಯಾರ್ಥಿಗಳು ನಡೆದಾಡಬೇಕಿದೆ. ಕುಡಿಯುವ ನೀರಿನ ಶುದ್ಧೀಕರಣ ಘಟಕ ಹಾಳಾಗಿ ಎರಡು ತಿಂಗಳಾದರೂ ಸರಿಪಡಿಸಿಲ್ಲ. ಆಡಳಿತಾಧಿಕಾರಿಗಳು ತಾವು ಕೂರುವ ಜಾಗವನ್ನಷ್ಟೇ ಸರಿಯಾಗಿ ನೋಡಿಕೊಳ್ಳುವ ಬದಲು ವಿದ್ಯಾರ್ಥಿಗಳ ಸಮಸ್ಯೆಗಳಿಗಳನ್ನು ಪರಿಹರಿಸಬೇಕು.

-ಪಿ.ಮಲ್ಲಿಕಾರ್ಜುನಪ್ಪ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿ, ಮಹಾರಾಜ ಕಾಲೇಜು.


ಪೊಲೀಸರು ಸಂಚಾರ ಕೆಲಸ ಮಾಡಲಿ

ಮೈಸೂರು ನಗರದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ ಎನ್ನುವುದನ್ನು ಕಣ್ಣಾರೆ ಕಂಡಾಗ ಬೇಸರವಾಗುತ್ತದೆ. ಹಿಂದೆ ಈಗಿನ ಡಿಜಿಪಿ ಪ್ರವೀಣ್ ಸೂದ್, ಆನಂತರ ಆುುಂಕ್ತರಾಗಿದ್ದ ಸುನೀಲ್ ಅಗರವಾಲ್, ಡಾ.ಎಂ.ಎ.ಸಲೀಂ ಅವರು ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಮೈಸೂರಿನ ಸಂಚಾರ ಸುಧಾರಣೆಗೆ ಗಮನ ನೀಡಿದರು. ಆಗ ಡಿಸಿಪಿ ಆಗಿದ್ದ ರಾಜೇಂದ್ರ ಪ್ರಸಾದ್, ಮಹದೇವಯ್ಯ, ಎಸಿಪಿಗಳಾಗಿದ್ದ ಶಂಕರೇಗೌಡ, ಜಯಕುಮಾರ್, ಪ್ರಭಾಕರ್ ಬಾರ್ಕಿ ಅವರನ್ನೂ ನೆನಪಿಸಿಕೊಳ್ಳಬೇಕು. ಈಗಂತೂ ಡಿಸಿಪಿ, ಎಸಿಪಿ ಅವರು ಕಾರಲ್ಲಿ ಹೋಗುವುದು ಗೊತ್ತಾಗುತ್ತದೆೆಯೇ ವಿನಃ ಸಂಚಾರ ಸುಧಾರಣೆಗೆ ಒತ್ತು ನೀಡಿದ ಒಂದೇ ಒಂದು ಕಾರ್ಯಕ್ರಮವೂ ಕಾಣುತ್ತಿಲ್ಲ. ಸಂಚಾರ ಎಂದರೆ ರಾತ್ರಿ ಹೊತ್ತಲ್ಲಿ ಕುಡಿದು ವಾಹನ ಸವಾರರನ್ನು ಹಿಡಿಯುವುದು ಎನ್ನುವಂತಾಗಿದೆ. ಮೈಸೂರಿನಲ್ಲಿ ಹಲವು ಅನಾಹುತಗಳ ನಂತರವೂ ಡಿಜಿಪಿ ಅವರ ಸೂಚನೆ ಬಳಿಕವೂ ರಸ್ತೆಯಲ್ಲಿ ನಿಂತು ಸಂಚಾರ ಪೊಲೀಸರು ಅಡ್ಡಹಾಕಿ ಬೇಕಾಬಿಟ್ಟಿಯಾಗಿ ಸವಾರರನ್ನು ಹಿಡಿಯುವುದನ್ನು ಪುನಾರಂಭಿಸಿದ್ದಾರೆ. ಪ್ರಮುಖ ವೃತ್ತಗಳಲ್ಲಿ ಸಂಚಾರ ಸಮಸ್ಯೆಗಳು, ಏಕ ಮುಖ ರಸ್ತೆ, ಸಿಗ್ನಲ್‌ಗಳ ದುರಸ್ತಿ, ರಿಂಗ್ ರಸ್ತೆಯಲ್ಲಿ ಸಂಚಾರ ಸುಧಾರಣೆ, ಮಕ್ಕಳು, ಯುವಕರಲ್ಲಿ ಜಾಗೃತಿ, ಪ್ರವಾಸಿಗರಿಗೆ ಮಾಹಿತಿ ನೀಡುವ ಚಟುವಟಿಕೆಗಳನ್ನು ಹೊಸ ಆಯುಕ್ತರು ಗಮನ ಹರಿಸಲಿ ಎನ್ನುವುದು ನಮ್ಮ ಮನವಿ.

-ರವಿಸುಂದರ್, ಗೋಕುಲಂ ಮೈಸೂರು

andolanait

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

14 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

18 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

18 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

18 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

18 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

19 hours ago