ಜಿಲ್ಲೆಗಳು

ಕಾಡಾನೆಗಳೇಕೆ ನಾಡಮುಖಿ !

ನಾಡಿನತ್ತ ಮುಖ ಮಾಡುತ್ತಿರುವ ಗಜಪಡೆ ತಡೆಗೆ ಅರಣ್ಯ ಇಲಾಖೆ ಏನು ಮಾಡಬೇಕು?

– ಪ್ರಶಾಂತ್ ಎಸ್ ಮೈಸೂರು

ಮೈಸೂರು: ಆಹಾರ ಅರಸಿ ನಾಡಿಗೆ ಬಂದು ಜನರ ಜೀವ ತೆಗೆದ ಆರೋಪದ ಜತೆಗೆ ತಮ್ಮ ಜೀವವನ್ನೂ ಕಳೆದುಕೊಳ್ಳುತ್ತಿರುವ ಕಾಡಾನೆಗಳ ನಿಯಂತ್ರಣಕ್ಕೆ ಸರ್ಕಾರ ಹಾಗೂ ಅರಣ್ಯ ಇಲಾಖೆ ಏನು ಮಾಡಬೇಕು?. ಕಾಡಿಗೆ ಅಟ್ಟಬೇಕೋ ಅಥವಾ ಸೆರೆ ಹಿಡಿದು ಪಳಗಿಸಬೇಕೋ?. ಇಂಥ ದ್ವಂದ್ವದಲ್ಲಿ ಅರಣ್ಯ ಇಲಾಖೆ ದಶಕಗಳನ್ನೇ ಕಳೆದಿದೆ.

ದೇಶದಲ್ಲಿ ೬,೦೦೦ಕ್ಕಿಂತ ಹೆಚ್ಚೂ ಆನೆಗಳು ಕರ್ನಾಟಕದಲ್ಲಿದೆ. ಆನೆಗಳ ರಕ್ಷಣೆಗೆ ೧೯೯೨ರಲ್ಲಿಯೇ ಆನೆ ಯೋಜನೆಯನ್ನೂ ಜಾರಿಗೊಳಿಸಲಾಗಿದೆ. ದಟ್ಟವಾದ ಅರಣ್ಯಕ್ಕೆ ಸಮೀತವಾಗಿದ್ದ ಗಜರಾಜ ಇತ್ತೀಚಿನ ದಿನಗಳಲ್ಲಿ ಗ್ರಾಮಗಳತ್ತ ಕಾಲಿಡುತ್ತಿರುವುದು ಕ್ರಮೇಣ ಹೆಚ್ಚಾಗಿದೆ. ಇದು ಆತಂಕದ ಜತೆಗೆ ನಿರ್ವಹಣೆ ಸವಾಲುಗಳನ್ನು ತಂದೊಡ್ಡಿದೆ.

ಕರ್ನಾಟಕದಲ್ಲಿ ಪ್ರತಿ ವರ್ಷ ಸಾಯುತ್ತಿರುವ ಆನೆಗಳ ಸಂಖ್ಯೆಯೇ ಸರಾಸರಿ ೧೦೦. ಕಳೆದ ಹತ್ತು ವರ್ಷದಲ್ಲಿ ಒಂದು ಸಾವಿರಕ್ಕೂ ಆನೆಗಳು ಅಂತ್ಯ ಕಂಡಿವೆ. ಇದರಲ್ಲಿ ಸಹಜ ಸಾವಿನ ಪ್ರಮಾಣ ೬೦ರಿಂದ ೬೫ರಷ್ಟಿದ್ದರೆ, ಅಸ್ವಾಭಾವಿಕವಾಗಿ ಶೇ.೩೦ರಿಂದ ೩೫ ರಷ್ಟಿರುವುದು ಅರಣ್ಯ ಇಲಾಖೆ ಅಂಕಿ ಸಂಖ್ಯೆಗಳೇ ಹೇಳುತ್ತವೆ. ಮತ್ತೊಂದು ಕಡೆ ಆನೆ ದಾಳಿಯಿಂದ ಮಾನವ ಸಾವಿನ ಪ್ರಮಾಣವೂ ಏರಿಕೆಯಾಗಿದೆ. ೮ ವರ್ಷದಲ್ಲಿ ಮಾನವ ಹಾನಿ ಪ್ರಮಾಣ ಸರಿ ಸುಮಾರು ೨೦೦. ರಾಜ್ಯದ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ ಸೇರಿ ೧೦ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾಡಾನೆ ಉಪಟಳವಿದ್ದರೆ ಹಾಸನ, ಕೊಡಗು ಜಿಲ್ಲೆಯಲ್ಲಂತೂ ಮಿತಿ ಮೀರಿದೆ. ಇಲ್ಲಿಯೇ ಸಾವಿನ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ.

ಬಿ ಕೆ ಸಿಂಗ್‌ ಮತ್ತು ರಂಗರಾವ್‌ ರವರು

ಸಮಸ್ಯೆಗಳ ನಾನಾ ಮುಖ: ಮತ್ತೊಂದು ಕಡೆ ಆನೆಗಳ ಸಂಘರ್ಷ ತಪ್ಪಿಸಲು ಸಮಸ್ಯೆ ಇರುವ ಹಳೆ ಮೈಸೂರು ಭಾಗದ ಹಲವು ಕಡೆ ರೈಲು ಕಂಬಿ ಅಳವಡಿಸಲಾಗುತ್ತಿದೆ. ಇದನ್ನು ವೈಜ್ಞಾನಿಕವಾಗಿ ರೂಪಿಸಿಲ್ಲ . ಸರ್ಕಾರ ಯೋಜನೆಗೆ ಅನುದಾನವನ್ನು ಸೂಕ್ತ ಸಮಯದಲ್ಲಿ ಒದಗಿಸದಿದ್ದರೆ ಯೋಜನೆ ಉದ್ದೇಶವೇ ಈಡೇರುವುದೇ ಇಲ್ಲ ಎನ್ನುವ ಅಭಿಪ್ರಾಯಗಳು ಅರಣ್ಯ ಇಲಾಖೆಯಲ್ಲೇ ಇದೆ.
ಇದನ್ನೇ ಪಿಸಿಸಿಎಫ್ ಆಗಿ ದಕ್ಷತೆಯಿಂದ ಕೆಲಸ ಮಾಡಿ ನಿವೃತ್ತರಾಗಿ ಈಗಲೂ ಬೇರೆ ರಾಜ್ಯಗಳ ಅರಣ್ಯ ಸಮಿತಿಗಳಲ್ಲಿ ಸಕ್ರಿಯರಾಗಿರುವ ಬಿ.ಕೆ.ಸಿಂಗ್ ಅವರು ಒತ್ತಿ ಹೇಳುತ್ತಾರೆ.
ಆನೆಗಳು ಹಾಗೂ ವಾನವನ ಸಂಘರ್ಷ ತಡೆುಂಲು ಸರ್ಕಾರ ಈಗಾಗಲೇ ಕೈಗೊಂಡಿರುವ ಯೋಜನೆ ಸರಿಯಿಲ್ಲ. ಯಾಕೆಂದರೆ ಆನೆಗಳು ಇರುವ ಎಲ್ಲ ಕಡೆ ರೈಲ್ವೆ ಕಂಬಿ ಹಾಕಿದರೆ ಆನೆಗಳು ಹೊರಗೆ ಬರುವುದಿಲ್ಲ ಅಂದುಕೊಂಡಿದ್ದಾರೆ. ಆದರೆ ಹೆಚ್ಚು ಆನೆಗಳು ಇರುವ ಜಾಗಕ್ಕೆ ಹೆಚ್ಚು ಗಮನಕೊಟ್ಟು ಮೊದಲು ಆ ಭಾಗಕ್ಕೆ ರೈಲ್ವೆ ಕಂಬಿ ವ್ಯವಸ್ಥೆ ಮಾಡಿದಲ್ಲಿ ಮಾತ್ರ ಈ ಸಂಘರ್ಷ ಕಡಿಮೆ ಆಗುತ್ತದೆ ಎನ್ನುವ ಬಿಕೆ ಸಿಂಗ್ ಅವರ ಅಭಿಪ್ರಾಯ ಸಮಸ್ಯೆಯ ಆಳ ಅಗಲವನ್ನು ತೆರೆದಿಡುತ್ತದೆ.

ಸೆರೆ ಕಾರ್ಯಾಚರಣೆ ಸೂಕ್ತ: ೮ ವರ್ಷದ ಹಿಂದೆ ಹಾಸನ ಹಾಗೂ ಕೊಡಗಿನಲ್ಲಿ ಕಾರ್ಯಾಚರಣೆ ನಡೆಸಿ ೨೨ ಆನೆಗಳನ್ನು ಸೆರೆ ಹಿಡಿಯಲಾಗಿದೆ. ಕಾರ್ಯಾಚರಣೆ ನಡೆಯದೇ ಮತ್ತೆ ಆನೆಗಳ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿದೆ.

೨೦೧೪ರಲ್ಲಿ ಹಾಸನ– ಕೊಡಗಿನಲ್ಲಿ ಆನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಹಿರಿಯ ಐಎಫ್‌ಎಸ್ ಅಧಿಕಾರಿ ಜಿ.ವಿ.ರಂಗರಾವು ಅವರು ಈ ಸಮಸ್ಯೆಗೆ ನೀಡುವ ಸಲಹೆ ಸೂಕ್ತವೇ ಆಗಿದೆ. ಪ್ರತಿ ವರ್ಷ ೩೦ರಿಂದ ೪೦ ಮಂದಿ ಆನೆ ದಾಳಿಗೆ ಬಲಿಯಾಗುತ್ತಿದ್ದಾರೆ. ಬೆಳೆ ನಷ್ಟ, ಮನೆ ಹಾನಿ ಸೇರಿ ಪರಿಹಾರವನ್ನೂ ನೀಡಲೇಬೇಕಿದೆ. ವರ್ಷಕ್ಕೆ ಇದೇ ೫ರಿಂದ ೬ ಕೋಟಿ ದಾಟಲಿದೆ. ಇದರ ಬದಲು ಆನೆಗಳ ಸೆರೆ ಕಾರ್ಯಾಚರಣೆ ಮಾಡಿದರೆ ೧ ಕೋಟಿ ರೂ.ಗಳಷ್ಟು ಬೇಕಾಗಬಹುದು. ಜನರ ನೆಮ್ಮದಿಗಿಂತ ಮತ್ತೇನಿದೆ ಎಂದು ಪ್ರಶ್ನಿಸುವ ಅವರ ಮಾತುಗಳಲ್ಲಿಯೇ ಈ ಸಮಸ್ಯೆಗೆ ಸಲಹೆಯಿದೆ.

ಅರಣ್ಯ ಇಲಾಖೆ ರೂಪಿಸಿದ ಯೋಜನೆಗಳು ವೈಜ್ಞಾನಿಕ ಹಾಗೂ ಶಾಶ್ವತ ಪರಿಹಾರ ನೀಡುವಂತಿರಬೇಕು. ಸರ್ಕಾರದ ಆರ್ಥಿಕ ನೆರವು ಸಮರ್ಪಕವಾಗಿರಬೇಕು. ಆನೆ ಹಾವಳಿ ಇರುವ ಪ್ರದೇಶದಲ್ಲಿ ನಿರಂತರ ಜಾಗೃತಿ ಮೂಡಿಸಿ ಜೀವ ಹಾನಿ ತಡೆಯಬೇಕು ಎನ್ನುವ ಸಲಹೆಗಳನ್ನು ಸರ್ಕಾರಕ್ಕೆ ದಶಕದ ಹಿಂದೆ ರೂಪಿಸಿದ ಟಾಸ್ಕ್ ಫೋರ್ಸ್ ನೀಡಿತ್ತು. ಈಗಲೂ ಅದನ್ನು ಜಾರಿಗೊಳಿಸಿದರೆ ಮತ್ತೊಂದು ಟಾಸ್ಕ್‌ಫೋರ್ಸ್ ಅಗತ್ಯವೇ ಇಲ್ಲ ಎಂದು ಹಲವರು ಸಲಹೆ ನೀಡುತ್ತಾರೆ.

==============


ಆನೆ ನೋಡುವುದಕ್ಕೆ ಆಳೆತ್ತರವಿದ್ದರೂ ಮೃದು ಸ್ವಭಾವವುಳ್ಳ ಅಪರೂಪದ ಪ್ರಾಣಿ. ಯಾರ ಮೇಲೂ ಏಕಾಏಕಿ ದಾಳಿ ಮಾಡುವುದಿಲ್ಲ. ಆಹಾರ ಅರಸಿ ಬರುವ ಜತೆಗೆ ಆನೆ ಹೆಚ್ಚು ನಡೆಯುತ್ತದೆ. ಸಮಸ್ಯೆ ಇರುವ ಕಡೆಗೆ ಅರಣ್ಯ ಅಧಿಕಾರಿಗಳು ಆಗಾಗ್ಗೆ ಆನೆಗಳ ಬಗ್ಗೆ ಜಾಗೃತಿ ಮೂಡಿಸಿದರೆ ಸಂಘರ್ಷ ತಗ್ಗಿಸಬಹುದು.
-ಮನೋಜ್ ಗಾನಾ, ವನ್ಯಜೀವಿ ಪ್ರಿಯರು



ಸರ್ಕಾರದ ಆದೇಶದಂತೆ ಸಮಯಕ್ಕೆ ಸರಿಯಾಗಿ ಕಾರ್ಯಪಡೆ ಸಮಿತಿ ಮಾಡುತ್ತಿದ್ದು, ಆನೆ ಮತ್ತು ಮಾನವ ಸಂಘರ್ಷ ತಡೆಯಲು ಈಗಾಗಲೇ ಸೂಕ್ತ ವ್ಯವಸ್ಥೆ ಮಾಡಿದೆ.ಹೆಚ್ಚು ಆನೆಗಳು ಇರುವ ಪ್ರದೇಶದಲ್ಲಿ ರೈಲ್ವೆ ಕಂಬಿ, ಸೋಲಾರ್ ಅಳವಡಿಕೆ ವ್ಯವಸ್ಥೆ ಮಾಡಿ ಪರಿಸ್ಥಿತಿ ನಿಯಂತ್ರಿಸಲಾಗುತ್ತಿದೆ.
– ಶಾಶ್ವತಿ ಮಿಶ್ರಾ ಆನೆ ಯೋಜನೆ ನಿರ್ದೇಶಕರು.

andolanait

Recent Posts

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

39 mins ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

4 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

4 hours ago

ಕಸ್ತೂರಿ ರಂಗನ್ ವರದಿ: ದೇವರ ಕಾಡುಗಳಿಗೂ ಆತಂಕ

ಲಕ್ಷ್ಮೀ ಕಾಂತ್ ಕೊಮಾರಪ್ಪ ಕೃಷಿ, ಧಾರ್ಮಿಕ ಆಚರಣೆಗಳಿಗೆ ಧಕ್ಕೆ ಬಾರದಂತೆ ತಿದ್ದುಪಡಿ ತರಲು ಆಗ್ರಹ  ಸೋಮವಾರಪೇಟೆ: ಕೊಡಗು ಜಿಲ್ಲೆಯ ಅರ್ಧದಷ್ಟು…

4 hours ago

ರಸ್ತೆ ಡುಬ್ಬ ನಿರ್ಮಿಸಿ; ಅಪಘಾತ ತಪ್ಪಿಸಿ

ಪ್ರಶಾಂತ್ ಎಸ್. ಬೊಂತಗಳ್ಳಿ ಸೇತುವೆ, ತಂತಿಗುಳ್ಳು ತಿರುವಿನಲ್ಲಿ ಹಂಪ್, ಬ್ಯಾರಿಕೇಡ್‌ಗಳನ್ನು ಅಳವಡಿಸಲು ಗ್ರಾಮಸ್ಥರ ಆಗ್ರಹ  ಮೈಸೂರು: ಬನ್ನೂರು ಮುಖ್ಯ ರಸ್ತೆಯಲ್ಲಿನ…

4 hours ago

ಕಾಲ್ಚೆಂಡು ಮೈದಾನ ಈಗ ಬಿಡಾಡಿ ದನಗಳ, ವಾಹನಗಳ ತಂಗುದಾಣ

ಕೆ.ಬಿ.ರಮೇಶನಾಯಕ ಮೈದಾನ ಸಂರಕ್ಷಿಸಿಕೊಳ್ಳದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ; ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲ್ಚೆಂಡು ಮೈದಾನ ಈಗ ಬಿಡಾಡಿ ದನಗಳ,…

5 hours ago