ರಾಜ್ಯದ ೧೦ಕ್ಕೂ ಹೆಚ್ಚು ಶಿಬಿರ, ಮೃಗಾಲಯದಲ್ಲಿ ಕರಿಪಡೆಯ ಕಷ್ಟಕರ ಬದುಕು
ಮುಖ್ಯಾಂಶಗಳು
-ಸಾಕಾನೆ ಶಿಬಿರಗಳ ಮೇಲೆ ವಿಶೇಷ ಗಮನ ಬೇಕು
-ಮಾವುತ, ಕವಾಡಿಗಳಿಗೆ ತರಬೇತಿ ಕೊಡಬೇಕು
-ಆರೋಗ್ಯ ತಪಾಸಣೆ, ಆಹಾರದ ಕಡೆ ನಿಗಾ ಇಡಬೇಕು
-ಹೊಸ ಶಿಬಿರಗಳ ರಚನೆಗಿಂತ ರಚನಾತ್ಮಾಕ ಯೋಜನೆ ಮುಖ್ಯ
ಅನಿಲ್ ಅಂತರಸಂತೆ
ಅಂತರಸಂತೆ: ಆನೆಗಳು ಎಂದರೆ ಯಾರಿಗೆ ತಾನೆ ಇಷ್ಟವಾಗಲ್ಲ. ದಪ್ಪ ಕಾಲುಕಾಲುಗಳ ಉದ್ದನೆಯ ಸೊಂಡಿಲ ಆನೆ ನಡೆದರೆ ಮಕ್ಕಳಿಂದ ಹಿಡಿದು ಹಿರಿಯರು ಸಹ ಬೆರಗು ಕಣ್ಣಿನಿಂದ ನೋಡುವಂತಹ ಅದ್ಬುತ ಪ್ರಾಣಿ ಆನೆ. ವಿಶ್ವ ವಿಖ್ಯಾತ ಜಂಬೂ ಸವಾರಿಯಿಂದ ಪ್ರಸ್ತುತದ ಪ್ರವಾಸೋದ್ಯಮದ ಉನ್ನತಿಗೆ ಆನೆಗಳ ಕೊಡುಗೆ ಅಪಾರವಾಗಿದೆ. ಇಂತಹ ಆನೆಗಳು ಕಾಡಿನಷ್ಟೇ ನಾಡಿನಲ್ಲಿಲ್ಲೂ ಕೆಲಬಾರಿ ಅಪಾಯಗಳನ್ನು ಎದುರಿಸುತ್ತಿದ್ದು,ಅರಣ್ಯ ಇಲಾಖೆಯ ಉಪಚಾರದ ನಡುವೆ ದಿನ ಕಳೆಯುತ್ತಿವೆ.
ಮುಂದಿನ ಅಂಬಾರಿ ಹೊರುವ ಆನೆೆಯೊಂದು ನಿರೀಕ್ಷಿಸಲಾಗಿದ್ದ ಗೋಪಾಲಸ್ವಾಮಿ ಕಾಡಿನಲ್ಲಿ ಮೇಯಲು ಬಿಟ್ಟಾಗ ಮತ್ತೊಂದು ಕಾಡಾನೆೊಂದಿಗೆ ಕಾದಾಟ ನಡೆಸಿ ದುರಂತ ಅಂತ್ಯ ಕಂಡಿತ್ತು. ಆದರೆ ಇದು ಮೊದಲೇನಲ್ಲ, ಸಾಕಷ್ಟು ಬಾರಿ ಕಾವಲುಗಾರರ ಕಣ್ತಪ್ಪಿಸಿ ಸಾಕಾನೆಗಳು ಬಲಿಯಾಗುತ್ತಲೇ ಇವೆ. ಬಳ್ಳೆಯಲ್ಲಿ ದ್ರೋಣ ಎಂಬ ಆನೆ ವಿದ್ಯುತ್ ತಗುಲಿ ಸಾವನ್ನಪ್ಪಿದ ಹಾಗೂ ಭರತ ಎಂಬ ಆನೆ ಕ್ಷಯ ರೋಗಕ್ಕೆ ತುತ್ತಾಗಿದ್ದು, ಜೊತೆಗೆ ಶ್ರೀರಾಮ ಎಂಬ ಆನೆ ಗಜೇಂದ್ರ ಆನೆಯ ದಾಳಿಯಿಂದ ಮೃತಪಟ್ಟಿರುವ ಘಟನೆಗಳು ನಿರ್ಲಕ್ಷ್ಯದಿಂದಲೂ ಸಾವನ್ನಪ್ಪಿರುವ ಉದಾಹರಣೆಗಳು ಸಾಕಷ್ಟಿವೆ. ಇವುಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಮುನ್ನೇಚ್ಚರಿಕೆಯನ್ನು ವಹಿಸುತ್ತಲೆ ಬಂದಿದೆ.
ನಿರ್ವಹಣೆ ಹೇಗೆ: ಸಾಕಾನೆಗಳನ್ನು ನೋಡಿಕೊಳ್ಳಲು ಮಾವುತ, ಕಾವಾಡಿಗರ ಜೊತೆಗೆ ಆನೆ ಜಮೇದಾರರನ್ನು ನಿಯೋಜನೆ ಮಾಡಿರುವ ಸರ್ಕಾರ ಒಂದು ಆನೆಗೆ ಅಂದಾಜು ತಿಂಗಳಿಗೆ ೧ ರಿಂದ ೧.೫ ಲಕ್ಷದಷ್ಟು ಹಣವನ್ನು ಖರ್ಚು ,ಮಾಡುತ್ತಿದೆ. ಸಾಕಾನೆಗಳ ದಿನಚರಿ ವಿಶೇಷವಾಗಿರುತ್ತದೆ. ಬೆಳಗ್ಗೆ ಶಿಬಿರಗಳಲ್ಲಿ ಹುರುಳಿ, ರಾಗಿ ಮತ್ತು ಅಕ್ಕಿ ಅಥವಾ ಭತ್ತದ ಮುದ್ದೆಗಳನ್ನು ಆನೆಗಳಿಗೆ ನೀಡಲಾಗುತ್ತದೆ. ಬಳಿಕ ವಿಶೇಷ ತರಬೇತಿ, ಸ್ನಾನದ ಬಳಿಕ ಆನೆಗಳನ್ನು ರಾತ್ರಿಯ ವೇಳೆ ಕಾಡಿಗೆ ಮೇಯಲ್ಲು ಬಿಟ್ಟು, ಮತ್ತೇ ಮುಂಜಾನೆ ಅದರ ಸರಪಳಿ ಗುರುತು ಆಧರಿಸಿ ಹುಡುಕಿ ಮಾವುತ ಮತ್ತು ಕಾವಾಡಿಗಳು ಆನೆಯನ್ನು ಕಾಡಿನ ಕ್ಯಾಂಪಿಗೆ ಕರೆತರುತ್ತಾರೆ.
ಸಾಕಾನೆಗಳಿಗಾಗಿ ಸುರಕ್ಷತೆಯ ಕ್ರಮಗಳು: ಸಾಕಾನೆಗಳು ಮೇಯಲು ಕಾಡಿಗೆ ಬಿಡುವ ವೇಳೆ ಸಾಕಷ್ಟು ಬಾರಿ ಕಾಡಾನೆಯೊಂದಿಗೆ ಕಾದಾಟ ನಡೆಸುವ ಸನ್ನಿವೇಶಗಳಿವೆ. ಅಲ್ಲದೆ ಕೆಲ ಬಾರಿ ಸಾಕಾನೆಗಳು ಸಂಗಾತಿ ಅರಸಿ ಕಾಡಾನೆಗಳ ಗುಂಪು ಸೇರಿ ತಿಂಗಳುಗಟ್ಟಲೆ ಕಾಡನಲ್ಲಿ ಉಳಿದು ನಾಪತ್ತೆಯಾದ ಪ್ರಕರಣಗಳು ಸಾಕಷ್ಟಿವೆ. ಸಿಬ್ಬಂದಿಗಳು ಸಾಕಾನೆಗಳನ್ನು ಕಾಡಿಗೆ ಬಿಡುವ ವೇಳೆ ಸುತ್ತಮುತ್ತ ಕಾಡಾನೆಗಳ ಗುಂಪು ಇಲ್ಲದನ್ನು ಗಮನಿಸಿಕೊಳ್ಳುತ್ತಾರೆ. ಅಲ್ಲದೆ ಆನೆಗಳು ಮಸ್ತಿಗೆ ಬರುವ ವೇಳೆಯಲ್ಲಿ ಬೇರೆಯಾವುದೆ ಸಲಗಗಳು ಇಲ್ಲದ ಕಡೆಗಳಲ್ಲಿ ಸಾಕಾನೆಗಳನ್ನು ಮೇವಿಗೆ ಬಿಡಲಾಗುತ್ತಿದೆ. ಸದ್ಯ ಗೋಪಾಲಸ್ವಾಮಿ ಪ್ರಕರಣದ ಬಳಿಕ ಆನೆ ಮಸ್ತಿಗೆ ಬಂದಾಗ ಮಾವುತ ಹಾಗೂ ಕಾವಾಡಿಗರು ಆನೆಯೊಂದಿಗೆ ಇರಬೇಕು ಎಂಬ ಮಾರ್ಗದರ್ಶನವನ್ನು ನಾಗರಹೊಳೆ ಅರಣ್ಯ ಇಲಾಖೆ ನೀಡಿದೆ.
ಆರೋಗ್ಯ ಪರೀಕ್ಷೆ : ಕಾಡಿನಿಂದ ಸಾಕಾನೆಗಳನ್ನು ಕ್ಯಾಂಪಿಗೆ ಕರೆತಂದ ಬಳಿಕ ಸ್ಥಾನ ವಾಡಿಸಿ, ಆನೆಯ ತಲೆಗೆ ಹರಳೆಣ್ಣೆ ಹಾಗೂ ಕಾಲಿಗೆ ಸರಪಳಿಯ ಗಾಯಗಳಾಗಬಾರದಂತೆ ಬೇವಿನ ಎಣ್ಣೆಯನ್ನು ಹಚ್ಚಿಲಾಗುತ್ತದೆ. ಇದರೊಂದಿಗೆ ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿ ಭಾಗಿಯಾಗಲು ಆನೆಗಳಿಗೆ ವಿಶೇಷ ತರಬೇತಿ ಜೊತೆಗೆ ಆಗಾಗೆ ಆನೆಗಳಿಗೆ ಆರೋಗ್ಯ ತಪಾಸಣೆಗಳ ಮೂಲಕ ನಿಗಾ ವಹಿಸಿದೆ. ಇಷ್ಟಿದ್ದರು ಕಣ್ತಪ್ಪಿನಿಂದ ಸಾಕಾನೆಗಳು ಮೃತ ಪಡುತ್ತಿದ್ದು, ಮತ್ತಷ್ಟು ಬಿಗಿ ರಕ್ಷಣೆಗಳೊಂದಿಗೆ ಅರಣ್ಯ ಇಲಾಖೆ ಆನೆಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದೆ.
ಶಿಬಿರದಲ್ಲಿ ಎಷ್ಟು ಆನೆಗಳಿವೆ?
ಕರ್ನಾಟಕದ ನಾನಾ ಕಡೆ ಸೆರೆಹಿಡಿದ ಆನೆಗಳನ್ನು ಪಳಗಿಸಿ ಆನೆ ಶಿಬಿರದಲ್ಲಿ ನೋಡಿಕೊಳ್ಳಲಾಗುತಿದೆ. ಅವುಗಳಲ್ಲಿ ಪ್ರಮುಖವಾಗಿ ಮೈಸೂರು ಜಿಲ್ಲೆಯಲ್ಲಿ ಬಳ್ಳೆ ಶಿಬಿರದಲ್ಲಿ ೫ ಆನೆಗಳು, ಮತ್ತೀಗೋಡು ಶಿಬಿರದಲ್ಲಿ ೧೭ ಆನೆಗಳ ಜೊತೆಗೆ ದೊಡ್ಡಹರವೆ ಮತ್ತು ಭೀಮನಕಟ್ಟೆ ಆನೆ ಶಿಬಿರಗಳಲ್ಲಿ ಸಾಕಾನೆಗಳನ್ನು ನೋಡಿಕೊಳ್ಳಲಾಗುತ್ತಿದೆ. ಇನ್ನೂ ಬಂಡೀಪುರದ ರಾಂಪುರ ಆನೆ ಶಿಬಿರದಲ್ಲಿ ೧೯ ಆನೆಗಳು, ಕೆ.ಗುಡಿ ಆನೆ ಶಿಬಿರದಲ್ಲಿ ೧-೨ ಆನೆಗಳನ್ನು ನೋಡಿಕೊಳ್ಳಲಾಗುತ್ತಿದೆ. ಕೊಡಗಿನ ಹಾರಂಗಿ ಆನೆ ಶಿಬಿರ ಮತ್ತು ದುಬಾರೆಯಲ್ಲಿ ೩೩, ಶಿವಮೊಗ್ಗದ ಸಕ್ಕರೆಬೈಲು, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪನ್ಸೋಲಿ ಶಿಬಿರಗಳಲ್ಲಿ ಸಾಕಾನೆಗಳನ್ನು ೫೦ಕ್ಕೂ ಕಾಣಬಹುದಾಗಿದೆ. ಮೈಸೂರು, ಬನ್ನೇರುಘಟ್ಟ, ಪಿಲಿಕುಳ ಮೃಗಾಲಯ, ದೇವಾಲಯಗಳನ್ನೊಳಗೊಂಡು ೨೦೦ಕ್ಕೂ ಅಧಿಕ ಸಾಕಾನೆಗಳು ಕರ್ನಾಟಕದಲ್ಲಿವೆ.
—
ಸಾಕಾನೆಗಳಿಗಾಗಿ ವಿಶೇಷವಾದ ಗಮನ ನೀಡಲಾಗುತ್ತಿದೆ. ಕಾಡಿಗೆ ಬಿಟ್ಟಾಗ ಕಾಡಾನೆಯೊ೦ದಿಗೆ ಕಾದಾಡಿ ಗಾಯಗೊಳ್ಳುವುದು ಅಥವ ಸಾವನ್ನಪ್ಪುವ ಸನ್ನಿವೇಶಗಳಿವೆ.ಮಸ್ತಿನಲ್ಲಿದ್ದಾಗ ಸಂಗಾತಿ ಅರಸಿ ಕಾಡಿನಲ್ಲೆ ಉಳಿದು ಬಿಡುವುದರಿಂದ ಕಾಡಿಗೆ ಬಿಡುವ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಆಗಾಗ ಆರೋಗ್ಯ ತಪಾಸಣೆ, ವಿಶೇಷ ತರಬೇತಿ ನೀಡಲಾಗುತ್ತಿದೆ.
-ಡಾ.ರಮೇಶ್‌ಕುಮಾರ್, ಸಿಎಫ್, ಬಂಡೀಪುರ
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…