ಜಿಲ್ಲೆಗಳು

ಅರಣ್ಯ ಹುತಾತ್ಮರ ದಿನ: ಕಾಡುಗಳ್ಳನ ಊರಲ್ಲಿ ಅರಣ್ಯಾಧಿಕಾರಿ ಪುತ್ಥಳಿ ಅನಾವರಣ

ಹನೂರು: ಒಳಿತು ಮಾತ್ರ ಶಾಶ್ವತ ಎಂಬುದಕ್ಕೆ ಈ ಊರು ಇಂದು ಸಾಕ್ಷಿಯಾಗಿದೆ. ಕಾಡನ್ನು ಕಡಿದು, ಜನರನ್ನು ಕೊಂದಿ ವ್ಯಕ್ತಿ ಅಳಿಯುತ್ತಿದ್ದರೇ ಜನರ ಕಲ್ಯಾಣಕ್ಕೆ ದುಡಿದ ವ್ಯಕ್ತಿ ಹೆಚ್ಚೆಚ್ಚು ಪ್ರಸ್ತುತರಾಗಿ ಜನಮಾನಸದಲ್ಲಿ ನೆಲೆಯೂರುತ್ತಿದ್ದಾರೆ.

ತಾಲೂಕಿನ ಕಾಡುಗಳ್ಳ, ದಂತಚೋರ ವೀರಪ್ಪನ್ ನ ಹುಟ್ಟೂರಾದ ಗೋಪಿನಾಥಂನಲ್ಲಿ ಅರಣ್ಯಾಧಿಕಾರಿ ಪಿ.ಶ್ರೀನಿವಾಸ್ ಅವರ ಪುತ್ಥಳಿ ಅನಾವರಗೊಂಡಿದೆ. ಗೋಪಿನಾಥಂ ಗ್ರಾಮದ ಜನರು ವೀರಪ್ಪನ್ ವಂಚನೆಗೆ ಬಲಿಯಾದ ಅರಣ್ಯಾಧಿಕಾರಿ ಪಿ.ಶ್ರೀನಿವಾಸ್ ಅವರ ಪುತ್ಥಳಿ ನಿರ್ಮಿಸಿ ಅಭಿಮಾನ ಮೆರೆದಿದ್ದಾರೆ.

ಅವರು ಕಟ್ಟಿಸಿದ ದೇಗುಲ: ಇಂದು ಪುತ್ಥಳಿ ಅನಾವರಣಗೊಂಡಿರುವ ಮಾರಿಯಮ್ಮ ದೇವಾಲಯವು ಪಿ.ಶ್ರೀನಿವಾಸ್ ಅವರೇ ಕಟ್ಟಿಸಿದ ದೇಗುಲಾಗಿದ್ದು ಅವರು ಹತರಾದ ಬಳಿಕ ದೇವಾಲಯದಲ್ಲಿ ಶ್ರೀನಿವಾಸ್ ಅವರಿಗೇ ಮೊದಲ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ.

ಈ ಹಿಂದೆ ಚಾಮರಾಜನಗರ ಸಿಸಿಎಫ್ ಆಗಿದ್ದ ಮನೋಜ್ ಕುಮಾರ್ ಗೋಪಿನಾಥಂಗೆ ಭೇಟಿ ನೀಡಿದ ಸಂದರ್ಭ ಗ್ರಾಮದ ಅಭಿವೃದ್ಧಿ ಮತ್ತು ದೇವಾಲಯ ಅಭಿವೃದ್ಧಿಗೆಂದು 2 ಲಕ್ಷ ರೂ. ನೀಡಲು ಬಂದಿದ್ದಾರೆ.‌ ಆಗ ಗ್ರಾಮಸ್ಥರು ನಮಗೆ ಹಣ ಬೇಡ, ಡಿಎಫ್ಒ ಪಿ.ಶ್ರೀನಿವಾಸ್ ಅವರ ಪುತ್ಥಳಿ ಮಾಡಿಸಿಕೊಡಿ ಎಂದು ಮನವಿ ಮಾಡಿದ್ದಾರೆ.

ಗ್ರಾಮಸ್ಥರ ಒತ್ತಾಸೆಯಂತೆ ಗೋಪಿನಾಥಂನ ಮಾರಿಯಮ್ಮ ದೇವಾಲಯ ಮುಂಭಾಗದಲ್ಲಿ ಪ್ರತಿಷ್ಠಾಪಿಸಲು ಪಿ.ಶ್ರೀನಿವಾಸ್ ಅವರ ಎರಡು ಅಡಿಯ ಕಂಚಿನ ಪುತ್ಥಳಿಯನ್ನು ಮಾಡಿಸಿಕೊಟ್ಟಿದ್ದಾರೆ. ದೇಗುಲ‌ ಮುಂಭಾಗದಲ್ಲಿ ಮಂಟಪ ನಿರ್ಮಿಸಿ ಪುತ್ತಳಿ ಪ್ರತಿಷ್ಠಾಪಿಸಿ ಲೋಕಾರ್ಪಣೆ ಮಾಡಲಾಗಿದೆ.‌

ಯಾರು ಈ ಪಿ.ಶ್ರೀನಿವಾಸ್:
ಮೂಲತಃ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿಯಲ್ಲಿ 12 ಸೆಪ್ಟೆಂಬರ್ 1954 ರಲ್ಲಿ ಪಿ.ಶ್ರೀನಿವಾಸ್ ಅವರು ಜನಿಸಿದರು. ವೀರಪ್ಪನ್ ಸೆರೆ ಸಲುವಾಗಿ ಕಾರ್ಯಾಚರಣೆಗೆ ನೇಮಕಗೊಂಡಿದ್ದರು.

ವೀರಪ್ಪನ್‌ನನ್ನು ಮನವೊಲಿಸಿ ಮುಖ್ಯವಾಹಿನಿಗೆ ಕರೆ ತರುತ್ತೇನೆಂಬ ನಂಬಿಕೆಯಿಂದ ಕಾರ್ಯಾರಚರಣೆಯಲ್ಲಿ ದಕ್ಷತೆ ಮೆರೆದಿದ್ದರು. 1980ರಲ್ಲಿ ಬೆಂಗಳೂರಿನಲ್ಲಿ ಸಾರ್ಕ್ ಸಮ್ಮೇಳನ ನಡೆಯುತ್ತಿದ್ದ ಸಂದರ್ಭ ವೀರಪ್ಪನ್‌ನನ್ನು ಬಂಸಿದ್ದ ಪೊಲೀಸರು, ಅರಣ್ಯಾಧಿಕಾರಿಯಾಗಿದ್ದ ಪಿ.ಶ್ರೀನಿವಾಸ್‌ಗೆ ಒಪ್ಪಿಸಿದ್ದರು. ವೀರಪ್ಪನ್‌ಗೆ ಚಾಮರಾಜನಗರ ತಾಲೂಕಿ ಬೂದಿಪಡಗ (ರಂಗಸಂದ್ರ) ಗೆಸ್ಟ್‌ಹೌಸ್‌ನಲ್ಲಿ ಮೂರು ದಿನ ವಿಚಾರಣೆಗಿಡಲಾಗಿತ್ತು. ಈ ನಡುವೆ ಗೆಸ್ಟ್‌ಹೌಸ್‌ನಿಂದ ವೀರಪ್ಪನ್ ಪರಾರಿಯಾಗಿದ್ದ. ವೀರಪ್ಪನ್‌ನ ಹಲವು ಸಹಚರರು ಶರಣಾಗತರಾದರು. ವೀರಪ್ಪನ್ ಶರಣಾಗತಿಯ ನಾಟಕವಾಡಿ, 1991 ನ.10 ರಂದು ಎರಕೆಯಂ ಹಳ್ಳದ ಸಮೀಪ ಬರ್ಬರವಾಗಿ ಕೊಂದು ಹಾಕಿದ. ಅವರು ವೀರಪ್ಪನ್ ಕ್ರೌರ್ಯಕ್ಕೆ ಸಿಲುಕಿ ಹುತಾತ್ಮರಾಗಿ 31 ವರ್ಷ ಗತಿಸಿದರೂ ಗ್ರಾಮದ ಜನರು ಮಾರಿಯಮ್ಮ ದೇವಾಲಯದಲ್ಲಿ ಶ್ರೀನಿವಾಸರ ಭಾವಚಿತ್ರವಿಟ್ಟು ಪೂಜಿಸುತ್ತಾರೆ. ಪ್ರತಿ ವರ್ಷ ನಡೆಯುವ ಹಬ್ಬದಲ್ಲಿ ಇವರ ಭಾವಚಿತ್ರದ ಆಹ್ವಾನ ಪತ್ರಿಕೆಗಳೇ ಮನೆ -ಮನೆ ಸೇರುತ್ತವೆ.

ಜನಪರ ಕಾರ್ಯಗಳು:

ಪಿ.ಶ್ರೀನಿವಾಸ್ ಅವರು ಗೋಪಿನಾಥಂನ ಬಡಜನರಿಗೆ ಸುಮಾರು 40 ಮನೆ ನಿರ್ಮಿಸಿ ಕೊಟ್ಟಿದ್ದರು. ಕಾಡಂಚಿನ ಜನರಿಗೆ ವೈದ್ಯಕೀಯ ಸೇವೆ, ಕುಡಿಯುವ ನೀರು, ರಸ್ತೆ, ಸಾರಿಗೆ ಸಂಪರ್ಕವನ್ನು ಸ್ವಂತ ಹಣದಲ್ಲಿ ಕಲ್ಪಿಸಿ ಕೊಟ್ಟಿದ್ದರು. ವೀರಪ್ಪನ್ ನೆಲೆಸಿದ್ದ ಕಾಡಿನ ಸುತ್ತಮುತ್ತಲ ಗ್ರಾಮಸ್ಥರಿಗೆ ಅರಣ್ಯದ ಉಪ ಉತ್ಪನ್ನಗಳ ಮಾರಾಟಕ್ಕೆ ಒತ್ತು ನೀಡಿ ಜಾಗೃತಿ ಮೂಡಿಸುವ ಮೂಲಕ ಅರಣ್ಯ ಸಂಪತ್ತು, ವನ್ಯಪ್ರಾಣಿಗಳನ್ನು ಉಳಿಸುವ ಕಾರ್ಯ ಮಾಡಿದ್ದರು. ಸ್ನೇಹಿತರು ಹಾಗೂ ಬಂಧುಗಳಿಂದಲೂ ಹಣ ಸಂಗ್ರಹಿಸಿ ಅನೇಕ ಜನಹಿತ ಸೇವೆಗೆ ವಿನಿಯೋಗಿಸಿದ್ದರು.

ಗೋಪಿನಾಥಂನ ದೇವರು ಈ ಸಾಹೇಬರು:

1992ರಲ್ಲಿ ಶ್ರೀನಿವಾಸರಿಗೆ ಉನ್ನತ ನಾಗರಿಕ ಶೌರ್ಯ ಪ್ರಶಸ್ತಿಯಾದ ‘ಕೀರ್ತಿಚಕ್ರ’ವನ್ನು ರಾಷ್ಟ್ರಪತಿಗಳು ಮರಣೋತ್ತರವಾಗಿ ಪ್ರದಾನ ಮಾಡಿದರು. 2020 ಸೆ.11 ರಂದು ನಡೆದ ಅರಣ್ಯ ಹುತಾತ್ಮರ ದಿನದಂದು ಎರಕೆಯಂ ಹಳ್ಳದಲ್ಲಿ ಶ್ರೀನಿವಾಸ್ ಅವರ ಸ್ಮಾರಕ ಉದ್ಘಾಟನೆಗೊಂಡಿತು. ಶ್ರೀನಿವಾಸ್ ಮಡಿದ ಸ್ಥಳವೂ ಇದೀಗ ಅರಣ್ಯ ಇಲಾಖೆಯ ಪಾಲಿಗೆ ಪುಣ್ಯಭೂಮಿಯಾಗಿದ್ದು ಇಂದಿಗೂ ಪ್ರತಿವರ್ಷ ಗಣ್ಯರಿಂದ ಗೌರವ ನಮನ ಸಲ್ಲಿಸಲಾಗುತ್ತಿದೆ. ಗೋಪಿನಾಥಂ ಮಿಸ್ಟ್ರಿ ಕ್ಯಾಂಪಿನ ಸಭಾಂಗಣಕ್ಕೆ ಅವರ ಹೆಸರಿನ್ನಿಡಲಾಗಿದೆ. ಗೋಪಿನಾಥಂನಲ್ಲಿ ವೀರಪ್ಪನ್ ನೆನಪು ಅಳಿದರೂ ಡಿಸಿಎ್ ಶ್ರೀನಿವಾಸನ್ ಹೆಸರು ಮಾತ್ರ ಶಾಶ್ವತವಾಗಿ ಉಳಿದಿದೆ.

ಅರಣ್ಯ ಹುತಾತ್ಮರ ದಿನವಾದ ಇಂದು ಪಿ.ಶ್ರೀನಿವಾಸ್ ಅವರ ಪುತ್ತಳಿ ಅನಾವರಣಗೊಂಡಿದ್ದು ಪಿಸಿಸಿಎಫ್ ವಿಜಯಕುಮಾರ್ ಗೊಗೀ, ಹಿರಿಯ ಅರಣ್ಯಾಧಿಕಾರಿಗಳಾದ ಮನೋಜ್ ಕುಮಾರ್, ಉಪೇಂದ್ರಕುಮಾರ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ಶ್ರೀನಿವಾಸ್ ಅವರನ್ನು ಮಾದರಿಯಾಗಿಟ್ಟುಕೊಂಡು ಕಟ್ಟಿರುವ ಯುವಪಡೆ ಗ್ರೀನ್ ವಾರಿಯರ್ಸ್ ತಂಡ ಸಕ್ರಿಯವಾಗಿ ಪಾಲ್ಗೊಂಡಿತ್ತು.

andolanait

Recent Posts

ಓದುಗರ ಪತ್ರ: ಜನರ ಹಿತ ಕಾಯಲಿ!

ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…

32 mins ago

ಓದುಗರ ಪತ್ರ: ಜಾಗೃತಿ, ನಿಯಂತ್ರಣ ಇರಬೇಕು

ಆಹಾರದಲ್ಲಿ ಬಳಸುವ ಉಪ್ಪು, ಸಕ್ಕರೆ ಬಳಕೆ ಪ್ರಮಾಣಕ್ಕೆ ಕಡಿವಾಣ ಹಾಕಲು ಅರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಹಾಗೆಯೇ…

36 mins ago

ಓದುಗರ ಪತ್ರ: ಚಾ.ನಗರ ಜಿಲ್ಲೆಗೆ ವಿಶೇಷ ಅನುದಾನ ನೀಡಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲಿ

ಚಾಮರಾಜನಗರ ಜಿಯ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ರೂ.೫೦೦ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ…

37 mins ago

ಆಯಾ ಕೆಲಸ ಮಾಡಿ ಮಕ್ಕಳನ್ನು ಮಾಸ್ಟರ್ಸ್‌ ಮಾಡಿದ ಸತ್ಯಮ್ಮ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಮಕ್ಕಳು ದೊಡ್ಡ ಹುದ್ದೆಗಳಿಗೆ ಹೋದರೂ ತನ್ನ ಕಾಯಕ ಮುಂದುವರಿಸಿರುವ ‘ಮಹಾತಾಯಿ’ ತೆಲಂಗಾಣದ ಸಂಗಾರೆಡ್ಡಿಯ ರಾಕೇಶ್…

42 mins ago

ಮಂಜಿನ ನಗರಿಯಲ್ಲಿ ರಸ್ತೆಗಳ ದುಸ್ಥಿತಿ

ಪುನೀತ್ ಮಡಿಕೇರಿ ಮಡಿಕೇರಿ ದಸರಾ ಸಮೀಪಿಸುತ್ತಿದ್ದರೂ ಗುಂಡಿಗಳಿಗೆ ಸಿಗದ ಮುಕ್ತಿ ಮಡಿಕೇರಿ ದಸರಾ ಜನೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಆದರೆ, ದಸರಾ…

49 mins ago

ಅ.೧, ೨ರಂದು ಶ್ರೀ ಗುರುಮಲ್ಲೇಶ್ವರ ದಾಸೋಹ ಭವನ ಉದ್ಘಾಟನೆ

ಮಹೇಂದ್ರ ಹಸಗೂಲಿ ದೇಪಾಪುರದಲ್ಲಿ ಗುಡಿಸಲಿನಲ್ಲಿ ಆರಂಭವಾದ ಅನ್ನ ದಾಸೋಹಕ್ಕೆ ಈಗ ದಾಸೋಹ ಭವನದ ರೂಪ ಗುಂಡ್ಲುಪೇಟೆ: ಸಣ್ಣ ಗುಡಿಸಲಿನಲ್ಲಿ ಆರಂಭಗೊಂಡ…

55 mins ago