ಹೆಚ್.ಡಿ.ಕೋಟೆ: ಸಮೀಪದ ಮುಳ್ಳೂರು ಗ್ರಾಮದಲ್ಲಿರುವ ಸುಮಾರು 800 ವರ್ಷಗಳ ಇತಿಹಾಸವಿರುವ ಲಕ್ಷ್ಮೀ ಕಾಂತಸ್ವಾಮಿ ದೇವಾಲಯದ ಆವರಣದಲ್ಲಿದ್ದ ಅನೇಕ ಮರಗಳನ್ನು ಹನನ ಮಾಡಿರುವ ಸ್ಥಳಕ್ಕೆ ಖ್ಯಾತ ಪರಿಸರವಾದಿ ಭಾನುಮೋಹನ್ ಭೇಟಿ ನೀಡಿ ಪರಿಶೀಲಿಸಿದರು.
ದೇವಾಲಯದಲ್ಲಿ ಗಾರ್ಡನ್ ಕೆಲಸಕ್ಕೆ ಪುರಾತತ್ವ ಇಲಾಖೆಯಿಂದ ನೇಮಕಗೊಂಡಿರುವ ಗೋಪಾಲಸ್ವಾಮಿ ಅರಣ್ಯ, ಪುರಾತ್ವ ಇಲಾಖೆ, ಸ್ಥಳೀಯ ಗ್ರಾಮಪಂಚಾಯ್ತಿಗೂ ಮಾಹಿತಿ ನೀಡದೇ ಕಳೆದವಾರ ಅಕ್ರಮವಾಗಿ
ಮರಗಳನ್ನು ಕಡಿದು ಸಾಗಿಸುವ ವೇಳೆ ಗ್ರಾಮಸ್ಥರಿಗೆ ಸಿಕ್ಕಿಬಿದ್ದಿದ್ದ.
ಗ್ರಾಮಸ್ಥರೆಲ್ಲರೂ ಒಗ್ಗೂಡಿ ಅರಣ್ಯ ಇಲಾಖೆಗೆ ದೂರು ನೀಡಿದ ನಂತರ ಪ್ರಕರಣ ದಾಖಲಾಗಿರುವುದಷ್ಟೇ ಬಿಟ್ಟರೇ ಮುಂದಿನ ಕ್ರಮ ಕೈಗೊಂಡಿಲ್ಲ, ಈ ಬಗ್ಗೆ ಅರಣ್ಯ ಇಲಾಖೆಯಾಗಲಿ, ಬೆಂಗಳೂರಿನ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಖುದ್ದು ಭೇಟಿ ನೀಡಿ, ದೂರು ನೀಡಿದರೂ ಸಹ ತಪ್ಪಿತಸ್ಥನ ವಿರುದ್ಧ ಇಲಾಖೆಗಳು ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಇದೇ ತಪ್ಪನ್ನು ಸಾರ್ವಜನಿಕರು ಮಾಡಿದ್ದರೆ ಅಧಿಕಾರಿಗಳು ಕ್ಷಣಾರ್ಧದಲ್ಲಿ ಬಂಧಿಸುತ್ತಿದ್ದರು. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಈ 2 ಇಲಾಖೆಗಳೇ ಆತನನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅನುಮಾನ ಮೂಡುತ್ತಿದೆ ಎಂದು ಅವಲತ್ತುಕೊಂಡರು.
ಕೇಂದ್ರ ಸರ್ಕಾರಿ ನೌಕರರು ಪ್ರತಿ 5 ವರ್ಷಗಳಿಗೊಮ್ಮೆ ವರ್ಗಾವಣೆಯಾಗಬೇಕೆಂಬ ನಿಯಮವಿದ್ದರೂ ಸಹ ಗೋಪಾಲಸ್ವಾಮಿ ಕಳೆದ 15 ವರ್ಷಗಳಿಂದಲೂ ನಮ್ಮೂರಿನಲ್ಲೇ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ದೇವಾಲಯದಲ್ಲಿರುವ ನಿಧಿ, ನಿಕ್ಷೇಪಗಳ ಜತೆಗೆ, ಈ ಹಿಂದೆ ಶ್ರೀಗಂಧ, ಸಾಗುವಾನೆ ಮರಗಳನ್ನು ಕಡಿದು, ಕಳ್ಳತನ ಮಾಡಿರಬಹುದು ಆದ್ದರಿಂದ ಈತನನ್ನು ಈ ಕೂಡಲೆ ಬಂಧಿಸಿ, ವಿಚಾರಣೆಗೊಳಪಡಿಸಿದರೆ ಇನ್ನಷ್ಟು ಸತ್ಯ ಹೊರಬರುತ್ತದೆ ಎಂದು ತಿಳಿಸಿದರು.
ಪರಿಸರವಾದಿ ಭಾನುಮೋಹನ್ ಮಾತನಾಡಿ, ಉಸಿರಾಡಲು ಪ್ರತಿಯೊಬ್ಬರಿಗೂ ಮರಗಳ ಅವಶ್ಯಕತೆಯಿದೆ, ಮರಗಳನ್ನೇ ಬೆಳೆಸದಿರುವ ಪ್ರಸ್ತುತ ದಿನಗಳಲ್ಲಿ ಪರಿಸರ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿರುವುದರ ಜತಗೆ ಮುಂದಿನ ಪೀಳಿಗೆಗೆ ಅವಶ್ಯವಿರುವುದರಿಂದ ಪರಿಸರವನನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಈ ಕೃತ್ಯ ಎಸಗಿರುವವರು ಯಾರೇ ಆಗಿದ್ದರೂ ಅವರ ವಿರುದ್ಧ ಇಲಾಖೆ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ಸಂಬಂಧಿಸಿದ ಇಲಾಖೆಗಳ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಮದ ಮುಖಂಡರಾದ ಸಿದ್ದನಾಯಕ, ಮಹೇಶ್, ಚಿನ್ನಸ್ವಾಮಿ, ಗೋವಿಂದನಾಯಕ ಸೇರಿದಂತೆ ಅನೇಕರಿದ್ದರು
ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…
ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…
ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…
ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…