ಇಂಡಿಯಾ ಗೇಟ್ ನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಿದ ನೇತಾಜಿ ಸುಭಾಷ್ಚಂದ್ರ ಬೋಸ್ ಅವರು ಗ್ರಾನೈಟ್ ಪ್ರತಿಮೆಯನ್ನು ಕೆತ್ತನೆ ಮಾಡಿದ್ದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರ ತಂಡ. ಈ ಮೂರ್ತಿ ಕೆತ್ತನೆಗೆ ಶಿಲ್ಪಿಗಳ ತಂಡ ಬರೋಬ್ಬರಿ 26 ಸಾವಿರ ಮಾನವ ದಿನಗಳನ್ನು ವ್ಯಯ ಮಾಡಿದೆ.
ಮೈಸೂರು: ಸಾಂಸ್ಕೃತಿಕ ನಗರದ ಶಿಲ್ಪಿ ಅರುಣ್ ಯೋಗಿ ರಾಜ್ ಮತ್ತವರ ತಂಡ ಮತ್ತೆ ಸುದ್ದಿಯಲ್ಲಿದೆ. ಹೊಸದಿಲ್ಲಿಯ ಇಂಡಿಯಾ ಗೇಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಗ್ರಾನೈಟ್ ಪ್ರತಿಮೆಯನ್ನು ಕೆತ್ತನೆ ಮಾಡಿದ್ದು ನಮ್ಮೂರ ಶಿಲ್ಪಿ ಅರುಣ್ ಯೋಗಿರಾಜ್ ಮತ್ತವರ ತಂಡ. ಈ ಮೂರ್ತಿ ಕೆತ್ತನೆಗೆ ಶಿಲ್ಪಿಗಳ ತಂಡ ಬರೋಬ್ಬರಿ 26 ಸಾವಿರ ಮಾನವ ದಿನಗಳನ್ನು ವ್ಯಯ ಮಾಡಿದೆ.
ಸುಮಾರು 280 ಟನ್ ತೂಕವಿರುವ ಗ್ರಾನೈಟ್ನಿಂದ ಈ ಮೂರ್ತಿಯನ್ನು ತೆಲಂಗಾಣದ (Telangana) ಖಮ್ಮಮ್ನಲ್ಲಿ (Khammam) ಕೆತ್ತನೆ ಮಾಡಲಾಯಿತು. ಇದನ್ನು ದೆಹಲಿಗೆ ಸಾಗಿಸುವುದಕ್ಕಾಗಿ 100 ಅಡಿ ಉದ್ದದ 140 ಚಕ್ರ ಹಾಗೂ 14 ಆ್ಯಕ್ಸೆಲ್ಗಳುಳ್ಳ ವಿಶೇಷ ಲಾರಿಯನ್ನು ವಿನ್ಯಾಸ ಮಾಡಲಾಗಿತ್ತು. ಅಲ್ಲದೇ ಇದನ್ನು ಹೆದ್ದಾರಿಯವರೆಗೆ ಸಾಗಿಸಲು ವಿಶೇಷವಾದ ರಸ್ತೆಯನ್ನೂ ನಿರ್ಮಾಣ ಮಾಡಲಾಗಿತ್ತು. ಸುಮಾರು 1,665 ಕಿ.ಮೀ. ದೂರ ಸಾಗಿದ ಈ ಲಾರಿ ಸುರಕ್ಷಿತವಾಗಿ ಮೂರ್ತಿಯನ್ನು ದೆಹಲಿಗೆ ಸ್ಥಳಾಂತರಿಸಿತ್ತು.
ಮೂರ್ತಿಯ ವಿಶೇಷತೆ:
ಈ ಮೂರ್ತಿಯನ್ನು ಸಾಂಪ್ರದಾಯಿಕ ಕೌಶಲ್ಯ ಬಳಸಿ ಕೆತ್ತನೆ ಮಾಡಲಾಗಿದೆ. ಇದೊಂದು ಏಕಾಶಿಲಾ ವಿಗ್ರಹವಾಗಿದ್ದು, ಕಪ್ಪು ಶಿಲೆಯಲ್ಲಿ ಕೆತ್ತಲಾಗಿದೆ. ಈ ಪ್ರತಿಮೆ 28 ಅಡಿ ಎತ್ತರವಾಗಿದ್ದು, ಒಟ್ಟು 65 ಟನ್ ತೂಕವಿದೆ. ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆಯ ವೇಳೆ ಇಂಡಿಯಾ ಗೇಟ್ನಲ್ಲಿ ಅವರ ಮೂರ್ತಿ ಸ್ಥಾಪಿಸುವುದಾಗಿ ಪ್ರಧಾನಿ ಮೋದಿ ಪ್ರಕಟಿಸಿದ್ದರು.
ಬಳಿಕ ಕಲಾವಿದರ ಆಯ್ಕೆಗೆ ಜನವರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ನಡೆಸಲಾಗಿತ್ತು. ಆರು ಕಲಾವಿದರ ಕಲಾ ಕೌಶಲ್ಯ, ಹಿಂದಿನ ಕೆಲಸ ಹಾಗೂ ಸಾಧನೆಯನ್ನು ಚರ್ಚೆ ಮಾಡಲಾಗಿತ್ತು. ಅಂತಿಮವಾಗಿ 6 ತಲೆಮಾರಿನಿಂದ ಶಿಲ್ಪ ಕಲಾಕೃತಿ ಮಾಡಿಕೊಂಡು ಬಂದಿರುವ ಯೋಗಿರಾಜ್ ಕುಟುಂಬಕ್ಕೆ ಈ ಅವಕಾಶ ದೊರೆತಿತ್ತು ಇದೇ ಸಂದರ್ಭದಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿದ್ದ ಅರುಣ್ ಅವರಿಗೆ 2 ಅಡಿ ಎತ್ತರದ ನೇತಾಜಿ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ್ದರು.
ಗಣರಾಜ್ಯ ಕಾರ್ಯಕ್ರಮಕ್ಕೆ ಆಹ್ವಾನ
ನೇತಾಜಿ ಪ್ರತಿಮೆ ಅನಾವರಣ ಬಳಿಕ, ಕರ್ತವ್ಯಪಥ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದ ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮುಂಬರುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು. ಶಿಲ್ಪಿ ಅರುಣ್ ಯೋಗಿ ಮತ್ತವರ ತಂಡ ಮುಂಬರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಕರ್ತವ್ಯಪಥವಾಯಿತು ರಾಜಪಥ
ಇತ್ತ ನವೀಕೃತ ಕರ್ತವ್ಯಪಥ ಮತ್ತು ಶಿಲ್ಪಿ ಅರುಣ್ ನಿರ್ಮಿಸಿರುವ 28 ಅಡಿ ಎತ್ತರದ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಈ ಹಿಂದೆ ರಾಜಪಥವೆಂದು ಕರೆಯಲಾಗುತ್ತಿದ್ದ ರಾಷ್ಟ್ರಪತಿ ಭವನ ಮತ್ತು ಇಂಡಿಯಾ ಗೇಟ್ ನಡುವಿನ ಸ್ಥಳದ ಹೆಸರನ್ನು ಕರ್ತವ್ಯಪಥ ಎಂದು ಬದಲಾಯಿಸಿದ್ದು, ದೇಶಕ್ಕೆ ಹೊಸ ಶಕ್ತಿ ಮತ್ತು ಸ್ಫೂರ್ತಿಯನ್ನು ನೀಡಿದೆ. ಗುಲಾಮತನದ ಸಂಕೇತವಾಗಿದ್ದ ಕಿಂಗ್ವೇ ಅಥವಾ ರಾಜಪಥವನ್ನು ಇದೀಗ ಇತಿಹಾಸದ ಪುಟಗಳಿಗೆ ಸೇರಿಸಲಾಗಿದ್ದು, ಈ ಮೂಲಕ ಅದನ್ನು ಶಾಶ್ವತವಾಗಿ ಅಳಿಸಿಹಾಕಲಾಗಿದೆ ಎಂದರು.
‘ಇಂದು ನಾವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬೃಹತ್ ಪುತ್ಥಳಿಯನ್ನು ಇಂಡಿಯಾ ಗೇಟ್ ಬಳಿ ಅಳವಡಿಸಿದ್ದೇವೆ. ಈ ಹಿಂದೆ ಬ್ರಿಟಿಷರ ಪ್ರತಿನಿಧಿಯೊಬ್ಬರ ಪ್ರತಿಮೆ ಇಲ್ಲಿ ಸ್ಥಾಪನೆಯಾಗಿತ್ತು. ಇದೀಗ ನೇತಾಜಿ ಪುತ್ಥಳಿ ಸ್ಥಾಪನೆಯೊಂದಿಗೆ ನಾವು ಸಬಲೀಕರಣಗೊಂಡ ಭಾರತದ ಹೊಸ ಪಥವನ್ನು ಸ್ಥಾಪಿಸಿದ್ದೇವೆ ಎಂದು ಮೋದಿ ಹೇಳಿದರು.
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗದೊಂದಿಗೆ ಸಭೆ ನಡೆಸಿ ಕಾಂಗ್ರೆಸ್ ಸರ್ಕಾರ ರೈತರ…
ಹಾಸನ: ಈ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ನೀಡಿದ ಕೊಡುಗೆ ಏನು ಎಂದು ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ…
ಮೈಸೂರು: ಎಂಎಲ್‌ಸಿ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೇಕ್ ಎನ್‌ಕೌಂಟರ್ ಮಾಡಲು ಯತ್ನಿಸಿದ್ದರು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…
50 ವರ್ಷಗಳ ದೂರದೃಷ್ಟಿಯ ಡಿಪಿಆರ್ ಸಿದ್ಧ ಆಗಬೇಕು • ಭಾಮಿ ವಿ ಶೆಣೈ, ಮೈಸೂರು ಗ್ರಾಹಕರ ಪರಿಷತ್ ಮೈಸೂರು ಜಿಲ್ಲಾ…
ಹಾಸನ: ಸಿ.ಟಿ.ರವಿ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು;…
ಬೆಂಗಳೂರು: ರಾಜ್ಯದ ವಿವಿಧ ಕೈಗಾರಿಕಾ ವಲಯಗಳಲ್ಲಿ ಒಟ್ಟು ರೂ. 9,823 ಕೋಟಿ ರೂ. ಮೊತ್ತದ 10 ಪ್ರಸ್ತಾವನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ…