ಜಿಲ್ಲೆಗಳು

ಕಾರ್ಕಹಳ್ಳಿ ಗ್ರಾಮದ ಬಸವಪ್ಪ ಸಾವು

ಭಾರತೀನಗರ: ಇಲ್ಲಿಗೆ ಸಮೀಪದ ಕಾರ್ಕಹಳ್ಳಿ ಗ್ರಾಮದ ಶ್ರೀ ಬಸವೇಶ್ವರಸ್ವಾಮಿ ದೇವರ ಬಸ ಪ್ಪ ಅನಾರೋಗ್ಯದಿಂದ ಸಾವನ್ನಪ್ಪಿದೆ. ಕೆ.ಆರ್.ಪೇಟೆ ಮೂಲದ ಈ ಬಸವಪ್ಪನನ್ನು ೬ ತಿಂಗಳ ಕರುವಿದ್ದಾಗ ದೇವಸ್ಥಾನಕ್ಕೆ ಕರೆತರಲಾಗಿತ್ತು. ನಂತರ ರಾಜ್ಯಾ ದ್ಯಂತ ಜನಮನ್ನಣೆ ಗಳಿಸಿತ್ತು. 4 ವರ್ಷ ಪ್ರಾಯದ ಹಳ್ಳಿಕಾರ್ ತಳಿಯ ಬಸವಪ್ಪ ಹಲವು ದಿನಗಳಿಂದ ಕಾಲು ಮುರಿದು ಕೊಂಡು ನೋವಿನಿಂದ ಬಳಲುತ್ತಿದ್ದು, ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

ಈ ದೇವಾಲಯ ಮುಜುರಾಯಿ ಇಲಾಖೆಗೆ ಸೇರಿರುವ ಹಿನ್ನೆಲೆಯಲ್ಲಿ ತಹಸಿಲ್ದಾರ್ ಅವರ ನೇತೃತ್ವದಲ್ಲಿ ಬಸವಪ್ಪನ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ. ಅಂತ್ಯಸಂಸ್ಕಾರಕ್ಕೆ ನೂರಾರು ಜನರು ಆಗಮಿಸಿ ಬಸವಪ್ಪನ ಅಂತಿನ ದರ್ಶನ ಪಡೆದರು.

ಗಣ್ಯರ ಭೇಟಿ: ಶಾಸಕ ಡಿ.ಸಿ.ತಮ್ಮಣ್ಣ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಕಾಂಗ್ರೆಸ್ ಮುಖಂಡರಾದ ಗುರುಚರಣ್, ಆಶತ=ಯ್‌ ಮಧು ಮಾದೇಗೌಡ, ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಬಸವಪ್ಪನ ಅಂತಿಮ ದರ್ಶನ ಪಡೆದರು.

ಮೆರವಣಿಗೆ: ಇದಕ್ಕೂ ಮುನ್ನ ಬಸವಪ್ಪನನ್ನು ಶೃಂಗರಿಸಿ ಎತ್ತುಗಾಡಿಯ ಮೂಲಕ ಮೆರವಣಿಗೆ ಮಾಡಲಾಯಿತು. ಬಳಿಕ ಬನ್ನಿಮರದ ಬಳಿ ಹೂಳಲಾಯಿತು.

andolanait

Recent Posts

ಮೈಸೂರು ಜಿಲ್ಲೆಯಲ್ಲಿ ಮುಂದುವರಿದ ಹುಲಿ ದಾಳಿ ಪ್ರಕರಣಗಳು: ಕಂಗಾಲಾದ ರೈತರು

ಮೈಸೂರು: ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣಗಳು ಮುಂದುವರಿದಿದ್ದು, ಗ್ರಾಮಸ್ಥರಲ್ಲಿ ಭಾರೀ ಆತಂಕ ಮೂಡಿಸಿದೆ. ಹುಣಸೂರು ತಾಲ್ಲೂಕಿನ ಗುರುಪುರ ಕೆರೆ ಬಳಿ…

3 mins ago

ಓದುಗರ ಪತ್ರ:   ಜನೌಷಧ ಕೇಂದ್ರ: ಸುಪ್ರೀಂ ತೀರ್ಮಾನ ಸ್ವಾಗತಾರ್ಹ

ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಸರ್ಕಾರದಿಂದ ಆರಂಭಿಸಲ್ಪಟ್ಟಿದ್ದ ಜನ ಔಷಧ ಕೇಂದ್ರಗಳು ಹಲವು ವರ್ಷಗಳಿಂದ ರಾಜ್ಯದೆಲ್ಲೆಡೆ ಕಾರ್ಯನಿರ್ವಹಿಸುತ್ತಿವೆ. ಕಡು ಬಡಜನರಿಗೆ ಹಾಗೂ…

9 mins ago

ಓದುಗರ ಪತ್ರ:  ಹೀಲಿಯಂ ಗ್ಯಾಸ್ ಬಲೂನ್ ಮಾರಾಟ ನಿಷೇಧಿಸಿ

ಡಿ. 25ರ ಗುರುವಾರ ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಛೋಟ ಸಂಭವಿಸಿದ್ದು, ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯ…

32 mins ago

ಓದುಗರ ಪತ್ರ: ಯಥಾ ರಾಜ.. ತಥಾ ಅಧಿಕಾರಿ

‘ಸರಿಯಾಗಿ ಕೆಲಸ ಮಾಡದಿದ್ದರೆ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ. ನಾಚಿಕೆ ಆಗಲ್ವ ನಿಮಗೆ.. ಜನರನ್ನು ಯಾಕೆ ಹೀಗೆ ಸಾಯಿಸುತ್ತೀರಿ. ಯುವ ಅಧಿಕಾರಿಗಳಾದ…

47 mins ago

ಸೇವಾ ಕೈಂಕರ್ಯದ ಪ್ರತಿರೂಪ ಚೈತನ್ಯ ಚಾರಿಟಬಲ್ ಟ್ರಸ್ಟ್‌

ಮಹಿಳೆಯರು, ಮಕ್ಕಳ ಸಬಲೀಕರಣವೇ ಸಂಸ್ಥೆಯ ಧ್ಯೇಯ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸೇವೆ ಮಾಡುವ ಸಂಸ್ಥೆಗಳು ವಿರಳ. ಅಂತಹ ವಿರಳಾತೀತ ವಿರಳ…

1 hour ago

ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್‌ ಟ್ರೋಫಿಗೆ ಚಾಲನೆ

ಮಡಿಕೇರಿ: ಪಾಂಡಂಡ ಕುಟ್ಟಪ್ಪ ಅವರ ಕನಸಿನ ಕೂಸಾದ ಕೊಡವ ಕೌಟುಂಬಿಕ ಹಾಕಿ ಉತ್ಸವದ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡ ಹಿನ್ನೆಲೆಯಲ್ಲಿ ಕೊಡವ…

3 hours ago