ಜಿಲ್ಲೆಗಳು

ಕೊರೊನಾ ಹಿನ್ನೆಲೆ ಮೈಸೂರಿನ ಶುಕವನ ಬಂದ್‌

ನೆರೆ ರಾಜ್ಯ ಕೇರಳದಲ್ಲಿ ಕೊವಿಡ್‌ನ ಉಪತಳಿ ಜೆಎನ್‌ 1 ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕರ್ನಾಟಕದಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಂದು ಚಿಕ್ಕಮಗಳೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿಯೂ ಮೊದಲ ಕೊವಿಡ್‌ ಕೇಸ್‌ ಪತ್ತೆಯಾಗಿದೆ.

ಇನ್ನು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕಳೆದ ಐದು ದಿನಗಳ ಹಿಂದೆಯೇ ಕೊವಿಡ್‌ಗೆ 64 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹೀಗೆ ರಾಜ್ಯದ ಎಲ್ಲೆಡೆ ಕೊವಿಡ್‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮೈಸೂರಿನಲ್ಲಿ ಶುಕವನವನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗುತ್ತಿದೆ.

ಈ ವಾರಾಂತ್ಯದಿಂದ ಕ್ರಿಸ್‌ಮಸ್‌ ಪ್ರಯುಕ್ತ ಹಾಗೂ ಹೊಸ ವರ್ಷದ ಪ್ರಯುಕ್ತ ಹಲವಾರು ಪ್ರವಾಸಿಗರು ಕೇರಳದಿಂದ ಮೈಸೂರಿಗೆ ಆಗಮಿಸಲಿದ್ದು ಈ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ. ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಶುಕವನ, ಬೋನ್ಸಾಯಿ ವನ ಹಾಗೂ ವಿಶ್ವಂ ವಸ್ತು ಸಂಗ್ರಹಾಲಯಗಳನ್ನೂ ಸಹ ಮುಚ್ಚಲು ನಿರ್ಧರಿಸಲಾಗಿದೆ. ಶುಕವನದಲ್ಲಿ ಪ್ರಪಂಚದ ವಿವಿಧ ಭಾಗಗಳ 2000ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳಿದ್ದು, ಇದು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿತ್ತು. ಸದ್ಯ ಮುಚ್ಚಲಿರುವ ಶುಕವನ ಮುಂದಿನ ಆದೇಶದವರೆಗೂ ಪ್ರವಾಸಿಗರ ಭೇಟಿಗೆ ಅಲಭ್ಯವಾಗಿರಲಿದೆ.

andolana

Recent Posts

ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ

ಕಠ್ಮಂಡು: ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತದ ಆರ್ಭಟ ಮುಂದುವರಿದಿದ್ದು, ಕೇವಲ 8 ಸೆಕೆಂಡ್‌ಗಳಲ್ಲಿ ಪರ್ವತವೇ ಕುಸಿದು ಬಿದ್ದಿದೆ! ವಿವಿಧೆಡೆ ಸಂಭವಿಸಿದ…

8 hours ago

ಕಾಡುಹಂದಿ ದಾಳಿ: ರೈತನಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪಳನಿಮೇಡ್ ಗ್ರಾಮದಲ್ಲಿ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದು,…

8 hours ago

ಶೀಘ್ರದಲ್ಲೇ ಅಕ್ರಮ ಸೈಟ್‌ಗಳ ಪಟ್ಟಿ ಬಿಡುಗಡೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮುಡಾ 50:50 ಸೈಟ್‌ ವಿಚಾರದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಅಕ್ರಮ ಸೈಟ್‌ಗಳ…

10 hours ago

ಮೈಸೂರು ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿಲ್ಲ: ಗವಿಸಿದ್ಧೇಶ್ವರ ಶ್ರೀಗಳಿಂದ ಸ್ಪಷ್ಟನೆ

ಕೊಪ್ಪಳ: ಮೈಸೂರು ದಸರಾ ಉದ್ಘಾಟನೆ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ತೆರೆ ಎಳೆದಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ…

11 hours ago

ಬ್ಯಾಂಕ್‌ ಗ್ರಾಹಕರಿಗೆ ಗುಡ್‌ನ್ಯೂಸ್‌: ಇಂದಿನಿಂದ 3 ದಿನ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರ ಮುಂದೂಡಿಕೆ

ನವದೆಹಲಿ: ಬ್ಯಾಂಕ್‌ ಗ್ರಾಹಕರಿಗೆ ಯಾವುದೇ ಆತಂಕ ಬೇಡ. ಇಂದಿನಿಂದ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್‌ ಮುಷ್ಕರ ಮುಂದೂಡಿಕೆಯಾಗಿದೆ. ಬ್ಯಾಂಕ್‌ ಸೇವೆಗಳಲ್ಲಿ…

11 hours ago

ಎಸ್‌ಐಆರ್: ಜನಾಗ್ರಹಕ್ಕೆ ದೊರೆಯಲಿ ಮನ್ನಣೆ

ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಮೂಲಕ…

15 hours ago