ಜಾತ್ರೆ ಸಮೀಪಿಸುತ್ತಿದೆ ಈ ಬಣಗಳ ಜಗಕ್ಕೆ ನಾಂದಿಹಾಡುವಂತೆ ಗ್ರಾಮಸ್ಥರ ಒತ್ತಾಯ
ಕೊಳ್ಳೇಗಾಲ: ಪ್ರಸಿದ್ಧ ಸಿದ್ದಪ್ಪಾಜಿ ದೇವಾಲಯ ಇರುವ ಚಿಕ್ಕಲ್ಲೂರು ಕ್ಷೇತ್ರದಲ್ಲಿ ಆಸ್ತಿ ಹಾಗೂ ಆಡಳಿತ ಸಂಬಂಧ ಎರಡು ಬಣಗಳು ಹುಟ್ಟಿಕೊಂಡಿದ್ದು ಈ ಸಂಬಂಧ ಎರಡು ಪ್ರತ್ಯೇಕ ದೂರುಗಳು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಮಳವಳ್ಳಿ ತಾಲ್ಲೂಕಿನ ಬೊಪ್ಪೇಗೌಡನಪುರದ ಧರೆಗೆ ದೊಡ್ಡವರ ಸಂಸ್ಥಾನ ಮಠ ಮತ್ತು ಚಿಕ್ಕಲ್ಲೂರು ಕ್ಷೇತ್ರದಲ್ಲಿ ಆಡಳಿತ ನಡೆಸುತ್ತಿದ್ದ ಪ್ರಭುದೇವರಾಜೇ ಅರಸ್ ಮಗ ಭರತ್‌ರಾಜೇ ಅರಸ್ ನಡುವೆ ವಿವಾದ ಹುಟ್ಟಿಕೊಂಡಿದ್ದು ಭರತ್ ರಾಜೇ ಅರಸ್ ರವರನ್ನು ಇಲ್ಲಿಂದ ಪದಚ್ಯುತಿಗೊಳಿಸಲು ಜ್ಞಾನನಂದ ಅರಸ್‌ರವರ ಪತ್ನಿ ಸಮ್ಮತಿ ಅರಸ್ ತಮ್ಮ ದಾಖಲಾತಿಗಳೊಡನೆ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಅದೇ ರೀತಿ ಭರತ್‌ರಾಜೇ ಅರಸ್‌ರವರು ಕೂಡ ತಮ್ಮ ತಂದೆಯ ಕಾಲದಿಂದಲೂ ಆಡಳಿತ ನಡೆಸುತ್ತಿರುವುದಾಗಿ ತಮ್ಮ ದಾಖಲಾತಿಗಳನ್ನು ಠಾಣೆಗೆ ನೀಡಿದ್ದಾರೆ. ಎರಡು ಗುಂಪುನಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಬೇಕೆಂದು ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.
ಕಳೆದ ತಿಂಗಳು ಇದೇ ಸಂಬಂಧ ಚಿಕ್ಕಲ್ಲೂರು ದೇವಸ್ಥಾನಕ್ಕೆ ಸೇರಿದ ಸಾಮಗ್ರಿಗಳು ತುಂಬಿದ್ದ ಗೋಡೌನ್‌ಗೆ ಬೆಂಕಿ ಹಾಕಿ ಬೆಲೆಬಾಳುವ ವಸ್ತುಗಳು ಸುಟ್ಟು ಭಸ್ಮವಾಗಿತ್ತು. ಈ ಸಂಬಂಧ ಕೂಡ ಠಾಣೆಯಲ್ಲಿ ದೂರು ದಾಖಲಾಗಿದೆ.
ಜನವರಿ ತಿಂಗಳು ಐದು ದಿನಗಳ ಜಾತ್ರೆ ಇರುವುದರಿಂದ ಜಿಲ್ಲಾಡಳಿತ ಅಷ್ಟರೊಳಗೆ ಎರಡು ಬಣಗಳ ನಡುವೆ ಇರುವ ವೈಮನಸ್ಸುಗಳಿಗೆ ನಾಂದಿ ಹಾಡಬೇಕೆಂಬುದು ಈ ಜನರ ಒತ್ತಾಯವಾಗಿದೆ.
ಬಳ್ಳಾರಿ : ಬಿಜೆಪಿ ನಾಯಕ ಜನಾರ್ದನ ರೆಡ್ಡಿ ಮನೆ ಮುಂದೆ ವಾಲ್ಮೀಕಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ…
ಬಳ್ಳಾರಿ : ಜನಾರ್ಧನ ರೆಡ್ಡಿ ಮನೆ ಮುಂದೆ ವಾಲ್ಮೀಕಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು,…
ಚಾಮರಾಜನಗರ : ತಾಲ್ಲೂಕಿನ ನಂಜೇದೇವಪುರ ಬಳಿ ನಾಲ್ಕು ಮರಿಗಳ ಜೊತೆ ತಾಯಿ ಹುಲಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವುಗಳ ಸೆರೆಗಾಗಿ ಕೂಂಬಿಂಗ್…
ಮೈಸೂರು : ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ ಗುರುವಾರ ಅಧಿಕಾರ ಸ್ವೀಕಾರ ಮಾಡಿದರು. ಮಂಡ್ಯ ಜಿಲ್ಲೆಯ ಎಸ್‌ಪಿ…
ಗುಂಡ್ಲುಪೇಟೆ: ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಿ ಏಳು ಬಾರಿ ಶಾಸಕಿ ,ಸಚಿವೆಯಾಗಿ ಮೊದಲ ಮಹಿಳಾ ಸ್ಪೀಕರ್ ಆದಂತಹ ಗಟ್ಟಿಗಿತ್ತಿ ಕೆ.ಎಸ್.ನಾಗರತ್ನಮ್ಮ ಅವರ…
ಗುಂಡ್ಲುಪೇಟೆ: ಪಟ್ಟಣದ ಕೂತನೂರು ಗುಡ್ಡ ಹಾಗೂ ತೆರಕಣಾಂಬಿ ಭಾಗದಿಂದ ಅಧಿಕ ಭಾರಹೊತ್ತು ಸಾಗುವ ಟಿಪ್ಪರ್ ಗಳ ಸಂಚಾರ ನಡೆಸುತಿದ್ದರು ಆರ್…