ಚಾಮರಾಜನಗರ: ಚೆಲುವ ಚಾಮರಾಜನಗರ ರಾಯಭಾರಿಯಾಗಲು ಅವಕಾಶ ದೊರೆತರೆ ನಿಭಾಯಿಸುವದಾಗಿ ಎಂದು ನಟ ರಾಘವೇಂದ್ರ ರಾಜಕುಮಾರ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ವರನಟ ಡಾ.ರಾಜಕುಮಾರ್ ಜಿಲ್ಲಾ ಕಲಾ ಮಂದಿರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ದಿ.ಪುನೀತ್ ರಾಜಕುಮಾರ್ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪುನೀತ್ ಚೆಲುವ ಚಾಮರಾಜನಗರ ರಾಯಭಾರಿಯಾಗಿದ್ದರು. ಅದನ್ನು ತಮ್ಮ ಕುಟುಂಬದ ಯಾರಾದರೂ ಮುಂದುವರಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಪುನೀತ್ ಆಗಲು ಸಾಧ್ಯವಿಲ್ಲ. ಅಂತಹ ಒಂದು ಕೆಲಸ ವಹಿಸಿದರೆ ಅಣ್ಣನಾಗಿ ನಿಭಾಯಿಸಿಕೊಂಡು ಹೋಗುತ್ತೇನೆ ಎಂದರು.
ನಮ್ಮ ಊರಿಗೆ ನಾವು ಬಂದು ಮಾತನಾಡಿದ್ದು, ನಮ್ಮ ಮನೆಯಲ್ಲಿ ಮಾತಾನಾಡಿದಷ್ಟು ಖುಷಿಯಾಗಿದೆ. ನಮ್ಮ ಕುಟುಂಬದಲ್ಲಿ ೨ ಕರ್ನಾಟಕ ರತ್ನ ಮಾಡಿದವರು ಅಭಿಮಾನಿಗಳು. ಅಪ್ಪುಗೆ ಕೊಟ್ಟಿರುವ ಕರ್ನಾಟಕ ರತ್ನ ಪ್ರಶಸ್ತಿ ಅಭಿಮಾನಿಗಳಿಗೆ ಸಲ್ಲುತ್ತದೆ. ಪ್ರಶಸ್ತಿ ಎಲ್ಲ ಅಭಿಮಾನಿಗಳಿಂದ ಬಂದಿದೆ ಎಂದು ಹೇಳಿದರು.
ಗಂದಧಗುಡಿ ಸಿನಿಮಾದಲ್ಲಿ ಉತ್ತಮ ಸಂದೇಶವಿದೆ. ಜನರ ಪ್ರೀತಿ ಸಂಪಾದನೆ ಮಾಡಬೇಕು ಅಂತ ೨೦ ಸಿನಿಮಾ ಮಾಡಿ ಜನರ ಪ್ರೀತಿ ಸಂಪಾದನೆ ಮಾಡಿದ್ದ. ಆ ನಂತರ ಪವರ್ ಸ್ಟಾರ್ ಆದ ಬಳಿಕ ಅದನ್ನು ಕಳಚಿ ಇಟ್ಟು ಒಬ್ಬ ಸಾಮಾನ್ಯ ಪುನೀತ್ ಆಗಿ ಜನರಿಗೆ ಸಂದೇಶ ಕೊಡುತ್ತಾನೆ ಎಂದರು.
‘ಬೊಂಬೆ ಹೇಳುತೈತೆ’ ಹಾಡಿದ ರಾಘು
ಚಾಮರಾಜನಗರ: ಕಲಾಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜಕುಮಾರ್ ಅವರು ‘ಬೊಂಬೆ ಹೇಳುತೈತೆ’ ಹಾಡನ್ನು ಪೂರ್ತಿಯಾಗಿ ಹಾಡಿದರು. ಬಳಿಕ ‘ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು’ ಹಾಡನ್ನು ಹಾಡಿದರು.
ಇದಕ್ಕೂ ಮೊದಲು ವೇದಿಕೆ ಕಾರ್ಯಕ್ರಮದಲ್ಲಿ ಡಾ.ಪುನೀತ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಆದರೆ, ರಾಘವೇಂದ್ರ ರಾಜಕುಮಾರ್ ಮಾತ್ರ ಫೋಟೊಗೆ ಮುತ್ತಿಟ್ಟರು. ಅಪ್ಪು ನನಗಿಂತ ಚಿಕ್ಕವನು. ಆತ ನನ್ನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಬೇಕಿತ್ತು. ಆದರೆ, ಆತನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಸ್ಥಿತಿ ಬಂದಿದೆ. ಆ ಕಾರಣದಿಂದ ಪುಷ್ಪಾರ್ಚನೆ ಮಾಡಲ್ಲ ಎಂದರು.
ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತಸೌಕರ್ಯ ಮರಿಚಿಕೆಯಾಗಿದೆ ಎಂದು ಆರೋಪಿಸಿ ಸಂಶೋಧಕರು ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟವು ಪ್ರತಿಭಟನೆ…
ಕೆ.ಆರ್.ನಗರ : ಪಟ್ಟಣದಲ್ಲಿ ಇಬ್ಬರು ಯುವಕರು ಮಾರುತಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ…
ಮಂಡ್ಯ : ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವಿನೂತನವಾಗಿ “ಮಿಷನ್ 40 ಫಾರ್ 90 ಡೇಸ್” ಅಭಿಯಾನವನ್ನು…
ಬೆಂಗಳೂರು : ಬೆಳಗಾವಿ ಚಳಿಗಾಲದ ಅಧಿವೇಶನದ ಕಲಾಪದಲ್ಲಿ ರಾಜ್ಯ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ್ದ ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ…
ಮುಂಬೈ : ಬಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್ ಸೇರಿದಂತೆ ಎಲ್ಲಾ ವುಡ್‌ಗಳಲ್ಲಿಯೂ ಧುರಂಧರ್‌ದೆ ಹಾವಳಿ. ಈ ವರ್ಷದ ಅತಿ ಹೆಚ್ಚು ಕೆಲಕ್ಷನ್…
ಬೆಂಗಳೂರು : ಅಧಿಕಾರ ಹಸ್ತಾಂತರದ ವಿಚಾರದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹೈಡ್ರಾಮ ಆಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು…