ಚಾಮರಾಜನಗರ : ನೆನ್ನೆ ದಿನ ಸುರಿದ ಮಳೆಗೆ ಜಿಲ್ಲೆಯು ತತ್ತರವಾಗಿದೆ ಮಳೆಯ ಪರಿಣಾಮ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು ಜನರು ಪರಿತಪಿಸುವಂತಾಯಿತು. ಚೆನ್ನೀಪುರಮೊಳೆಯ ಸುಮಾರು ೧೦ ಮನೆಗಳು ಜಲಾವೃತಗೊಂಡಿದ್ದು ಮನೆಗಳ ಒಳಗೆ ಮೊಣಕಾಲಿನ ಮಟ್ಟ ನೀರು ನಿಂತಿರುವ ಸಾಕಷ್ಟು ದೃಶ್ಯಗಳು ಕಂಡುಬಂದಿತು.
ಮತ್ತೊಂದೆಡೆ ಭಾರೀ ಮಳೆ ಹಿನ್ನಲೆ ಅಯ್ಯನಪುರದ ನಿವಾಸಿ ರಾಜಶೇಖರ ಎಂಬುವರಿಗೆ ಸೇರಿದ ಮನೆ ಕುಸಿತಗೊಂಡು ವಾಸಿಸಲು ಮನೆ ಇಲ್ಲದೆ ಕುಟುಂಬ ಪರದಾಡುವಂತಾಯಿತು. ಹೀಗಾಗಿ ಸೂಕ್ತ ಪರಿಹಾರ ನೀಡಿ ಮನೆ ಪುನರ್ನಿರ್ಮಾಣ ಮಾಡಿಕೊಡುವಂತೆ ಒತ್ತಾಯ ಮಾಡಿದ್ದಾರೆ. ಮನೆ ಕುಸಿತಗೊಡಿದ್ದರಿಂದ ಸದ್ಯ ಯಾವುದೇ ಪ್ರಾಣಾಪಾಯು ಸಂಭವಿಸಿಲ್ಲ.
ಮೈದುಂಬಿ ಹರಿದ ಸುವರ್ಣಾವತಿ ನದಿ
ಸತತ ಮಳೆಯಿಂದಾಗಿ ಜಿಲ್ಲೆಯ ಸುವರ್ಣಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಚಾ.ನಗರ ಅವಳಿ ಜಲಾಶಯಗಳಿಂದc ಹೊರ ಅರಿವು ಹೆಚ್ಚಾಗಿದ್ದು ನದಿ ಮೈದುಂಬಿ ಹರಿಯುತ್ತಿದೆ, ತಾಲ್ಲೂಕಿನ ಆಲೂರು ಗ್ರಾಮದ ಅಡಿಕೆ, ಬಾಳೆ, ಕಬ್ಬು ಬೆಳೆ ಜಲಾವೃತಗೊಂಡಿದ್ದು ಅಪಾಯದ ಮಟ್ಟ ಮೀರಿ ಸುವರ್ಣಾವತಿ ನದಿ ಹರಿಯುತ್ತಿದೆ.
ನಮ್ಮ ತಂದೆ ಪೋರ್‌ಬಂದರನ್ನು ಬಿಟ್ಟು ರಾಜ ಕೋಬಿಯ ರಾಜಾಸ್ಥಾನಿಕ ನ್ಯಾಯಾಲಯದ ಸದಸ್ಯರಾಗಿ ಹೊರಟಾಗ, ನನಗೆ ಕೇವಲ ಏಳು ವರ್ಷಗಳು. ಅಲ್ಲಿ…
ಗಾಂಧಿ ಮಹಾತ್ಮನ ಆತ್ಮಕಥೆಗೆ ಶತಮಾನೋತ್ಸವದ ಸಂದರ್ಭದಲ್ಲಿ ‘ಆಂದೋಲನ’ ದಿನಪತ್ರಿಕೆಯ ಗಾಂಧಿ ಅಭಿಯಾನ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಭಾಗಿತ್ವದಲಿ ಎಳೆಯ ಮಕಳ ಅಂಗಳಕೆ…
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಸೃಜನಶೀಲತೆಯ ವೇದಿಕೆಗಳಾಗುವ ಬದಲು ಹಣದಾಸೆಗಾಗಿ ಅಶ್ಲೀಲತೆಯನ್ನು ಪ್ರದರ್ಶಿಸುವ ಮಾರುಕಟ್ಟೆಗಳಾಗುತ್ತಿರುವುದು ಆತಂಕಕಾರಿ ವಿದ್ಯಮಾನ. ಪ್ರಭಾವಿ ವ್ಯಕ್ತಿಗಳು…
೮ ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಆದಿವಾಸಿ ಹೋರಾಟ ಸಮಿತಿ ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಮೆದಗನಾಣೆ…
ಜಿಪಿಎಸ್ ವಾಕಿಟಾಕಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ ಎಸ್‌ಒಪಿ ಬಿಡುಗಡೆ ಮಾಡಿದ ಸಚಿವ ಈಶ್ವರ್ ಖಂಡ್ರೆ ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಇಲಾಖೆ…