ಜಿಲ್ಲೆಗಳು

ಅವೈಜ್ಞಾನಿಕ ರೈಲ್ವೆ ಅಂಡರ್ ಪಾಸ್: ಪಾಲಿಕೆ ಸದಸ್ಯರ ಪ್ರತಿಭಟನೆ

ಮೈಸೂರು: ನಗರದಿಂದ ಕೆಆರ್‌ಎಸ್‌ಗೆ ಸಾಗುವ ಮಾರ್ಗದಲ್ಲಿರುವ ರಿಂಗ್ ರಸ್ತೆಯ ಬಲಭಾಗದಿಂದ ಮಣಿಪಾಲ್ ಆಸ್ಪತ್ರೆಗೆ ಸಾಗುವ ಮಾರ್ಗದಲ್ಲಿ ಮೂರು ಕಡೆ ರೈಲ್ವೆ ಮಲ್ಸೇತುವೆಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದ್ದು, ಸಮಸ್ಯೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ನಗರಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಶುಕ್ರವಾರ ನಗರದ ಮೇಟಗಳ್ಳಿ ಬಳಿಯ ವರ್ತುಲ ರಸ್ತೆಯ ಬಳಿ ಸ್ಥಳೀಯರೊಂದಿಗೆ ಆಗಮಿಸಿದ ಶ್ರೀಧರ್, ಪ್ರೇಮಾ ಶಂಕರೇಗೌಡ ಅವರು ಸಮಸ್ಯೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಶ್ರೀಧರ್, ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಬೆಂಗಳೂರು ನಂತರ ಸಾಂಸ್ಕೃತಿಕ ನಗರಿ ಮೈಸೂರು ಸ್ಥಾನ ಪಡೆದುಕೊಂಡಿದೆ. ಇಲ್ಲಿ ಕೈಗಾರಿಕಾ ಕ್ರಾಂತಿ ಒಂದೆಡೆಯಾದರೆ, ಅದಕ್ಕೆ ಪರ್ಯಾಯವಾಗಿ ಪ್ರವಾಸೋದ್ಯಮ ವಲಯ ನಿರೀಕ್ಷೆಗೂ ಮೀರಿ ಬೆಳೆಯುತ್ತಿರುವುದನ್ನು ದಾಖಲೆಗಳೇ ದೃಢೀಕರಿಸುತ್ತವೆ ಎಂದರು.
ಆದರೆ, ಇಂದು ಮೈಸೂರು ಅಪಘಾತಗಳ ವಲಯವಾಗಿ ಮಾರ್ಪಟ್ಟಿರುವುದನ್ನು ಪೊಲೀಸ್ ಇಲಾಖೆಯಲ್ಲಿ ಪ್ರಕರಣಗಳೇ ಸಾಕ್ಷೀಕರಿಸುತ್ತಿವೆ. ಅಧಿಕಾರಿ ವಲಯದ ಅಸಡ್ಡೆ ಪರಿಣಾಮ ಮೈಸೂರು ನಗರದಲ್ಲಿ ನಿತ್ಯ ಅಪಘಾತ ಸಂಭವಿಸುತ್ತಿದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಆರ್‌ಎಸ್‌ಗೆ ಸಾಗುವ ಮಾರ್ಗದಲ್ಲಿರುವ ರಿಂಗ್ ರಸ್ತೆಯ ಬಲಭಾಗದಿಂದ ಮಣಿಪಾಲ್ ಆಸ್ಪತ್ರೆಗೆ ಸಾಗುವ ಮಾರ್ಗದಲ್ಲಿ ಮೂರು ಕಡೆ ಅಂಡರ್ ಪಾಸ್ ರೈಲ್ವೆ ಮಲ್ಸೇತುವೆಗಳಿವೆ. ೧೫ ವರ್ಷಗಳ ಹಿಂದೆ ರೂಪಿಸಿದ ಅವೈಜ್ಞಾನಿಕ ಯೋಜನೆಯಿಂದಾಗಿ ಇಂದು ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ ಎಂದರು.

ರಿಂಗ್ ರಸ್ತೆಯನ್ನು ೪ ಪಥದ ರಸ್ತೆಯನ್ನಾಗಿ ೧೫ ವರ್ಷದ ಹಿಂದೆ ನಿರ್ಮಿಸಿದ್ದು, ಅರಸೀಕೆರೆ ಸಾಗುವ ರೈಲ್ವೆ ಮಾರ್ಗ, ಬೆಲವತ್ತ ರೈಲ್ವೆ ಮಾರ್ಗ ಹಾಗೂ ಆರ್‌ಬಿಐ ಸಮೀಪದ ರೈಲ್ವೆ ಮಾರ್ಗ ಸೇರಿದಂತೆ ಮೂರೂ ರೈಲ್ವೆ ಟ್ರ್ಯಾಕ್ ಅಂಡರ್ ಪಾಸ್ ಬಳಿ ರಸ್ತೆಯನ್ನು ೪ ಪಥದ ಬದಲು ೨ ಪಥಕ್ಕೆ ಇಳಿಸಲಾಗಿದೆ. ಇದರಿಂದ ವಾಹನ ಸವಾರರು ಮುಖಾಮುಖಿ ಡಿಕ್ಕಿ ಹೊಡೆದುಕೊಂಡು ನಿರಂತರವಾಗಿ ಅಪಘಾತಗಳಾಗಿ ಸಾವು, ನೋವುಗಳು ಸಂಭವಿಸುತ್ತಿವೆ ಎಂದು ಆರೋಪಿಸಿದರು.
ಮುಂದಾಲೋಚನೆ ಹಾಗೂ ದೂರದೃಷ್ಟಿತ್ವ ಇಲ್ಲದ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದ ಪರಿಣಾಮ ಆಗುತ್ತಿರುವ ಅನಾಹುತಗಳಿಗೆ ಹೊಣೆ ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಮೈಸೂರಿಗೆ ಹೆಚ್ಚಾಗಿ ಪ್ರವಾಸಿಗರು ಬರುವುದರಿಂದ ಅವರಿಗೆ ಈ ಬಗ್ಗೆ ಗೊತ್ತಿರುವುದಿಲ್ಲ ಎಂದು ಹೇಳಿದರು.

ವರ್ತುಲ ರಸ್ತೆಯಲ್ಲಿ ಎರಡೂ ಬದಿಯಿಂದ ವೇಗವಾಗಿ ಬರುವ ವಾಹನಗಳು ದಾರಿ ಚಿಕ್ಕದಾಗಿರುವುದನ್ನು ಗಮನಿಸದೆ ಹಲವು ಬಾರಿ ಅಪಘಾತಗಳು ಸಂಭವಿಸಿ ಸಾವು, ನೋವುಗಳು ಉಂಟಾಗುತ್ತಿವೆ. ಅಮೂಲ್ಯ ಜೀವಗಳ ಸಾವಿನ ಸರಣಿ ಇಲ್ಲಿ ಮುಂದುವರಿದಿದೆ. ಹಾಗಾಗಿ, ಮೂರೂ ಭಾಗದಲ್ಲಿರುವ ರೈಲ್ವೆ ಅಂಡರ್ ಪಾಸ್ ಸೇತುವೆಯನ್ನು ವಿಸ್ತರಿಸಿ ನಾಲ್ಕು ಪಥದ ರಸ್ತೆಯನ್ನಾಗಿ ಮಾಡಲೇಬೇಕು. ಇಲ್ಲವಾದರೆ, ಇನ್ನಷ್ಟು ಅಮಾಯಕ ಜೀವಗಳು ಬಲಿಯಾಗುವುದರಲ್ಲಿ ಯಾವುದೇ ರೀತಿಯ ಅನುಮಾನ ಇಲ್ಲವಾಗಿದೆ ಎಂದು ಹೇಳಿದರು.

ಕೆಆರ್‌ಎಸ್ ಮಾರ್ಗದಲ್ಲಿ ಮುಂದುವರೆದರೆ ಕಾಫಿ ಬೋರ್ಡ್ ಸಮೀಪ ಲೆವೆಲ್ ಕ್ರಾಸಿಂಗ್‌ನಲ್ಲಿ ಇದೇ ಪರಿಸ್ಥಿತಿ ಇದ್ದು, ನಿತ್ಯ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಲೇ ಇವೆ. ದಸರಾ ವೇಳೆ ಉಂಟಾಗುವ ವಾಹನಗಳ ದಟ್ಟಣೆಯಿಂದ ನೂರಾರು ವಾಹನಗಳು ಕಿಲೋಮೀಟರ್ ದೂರಕ್ಕೆ ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿದೆ. ಆದಕಾರಣ, ಈ ಭಾಗದಲ್ಲಿ ತುರ್ತಾಗಿ ಮೇಲ್ಸೇತುವೆ ಆಗಬೇಕಿದೆ ಎಂದು ಆಗ್ರಹಿಸಿದರು.

ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಶಿವಣ್ಣ, ರಮೇಶ್, ರಾಮಕೃಷ್ಣ, ಪ್ರಸನ್ನ, ಸ್ವಾಮೀಗೌಡ, ರವಿ, ರಾಮಚಂದ್ರ, ಬೋರೇಗೌಡ, ಈಶ್ವರ, ಶಿವಣ್ಣ, ದಿನೇಶ್, ಕೃಷ್ಣಪ್ಪ, ಪ್ರಭಾಲರ ಮುಂತಾದವರು ಸ್ಥಳದಲ್ಲಿದ್ದರು.

andolanait

Recent Posts

ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್‌ ಒಡೆಯರ್‌

ಕೊಪ್ಪಳ: ಐತಿಹಾಸಿಕ ಅಂಜನಾದ್ರಿಗೆ ಸಂಸದ ಯದುವೀರ್  ಒಡೆಯರ್‌ ಭೇಟಿ ನೀಡಿ ದೇವರ ದರ್ಶನ ಪಡೆದರು. ಹನುಮ ಹುಟ್ಟಿದ ನಾಡು ಎಂದು…

48 mins ago

7 ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಬರೋಬ್ಬರಿ 7 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಲಿದ್ದಾರೆ. ಸೆಪ್ಟೆಂಬರ್‌ 12ರಂದು ದೆಹಲಿಗೆ…

55 mins ago

ಓದುಗರ ಪತ್ರ: ಕುಕ್ಕರಹಳ್ಳಿಕೆರೆ ಅಂಗಳದಲ್ಲಿ ನಾಯಿಗಳ ಹಾವಳಿ ನಿಯಂತ್ರಿಸಿ

ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…

6 hours ago

ಓದುಗರ ಪತ್ರ: ಸಚಿವರುಗಳೇ ಮುಖ್ಯಮಂತ್ರಿಗಳ ಮಾತನ್ನು ಕಾರ್ಯರೂಪಕ್ಕೆ ತನ್ನಿ

ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…

6 hours ago

ಓದುಗರ ಪತ್ರ: ಡಿಜಿಟಲ್ ಸಮೀಕ್ಷೆ ರೈತರಿಗೆ ಕಂಟಕ?

ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಕಡ್ಡಾಯಗೊಳಿಸಿರುವುದು ತಾಂತ್ರಿಕವಾಗಿ ಉತ್ತಮ ಹೆಜ್ಜೆಯಾದರೂ, ವಾಸ್ತವದಲ್ಲಿ ಇದು ರೈತರಿಗೆ ಕಂಟಕವಾಗುತ್ತಿದೆ. ರಾಜ್ಯದಲ್ಲಿ ಶೇ.೮೦ಕ್ಕೂ…

6 hours ago

ಆತ್ಮಹತ್ಯೆ ತಡೆಗೆ ಇರಲಿ ಮಾನವೀಯ ಸುರಕ್ಷಾ ಜಾಲ

ಡಾ. ಕೆ. ಪಿ. ಸಿದ್ಧಲಿಂಗಸ್ವಾಮಿ, ಸಂಶೋಧಕರು, ಸಿಎಸ್‌ಎಸ್‌ಐ, ಮಂಗಳೂರು ವಿಶ್ವವಿದ್ಯಾನಿಲಯ ಸೆಪ್ಟೆಂಬರ್ ೧೦ ವಿಶ್ವ ಆತ್ಮಹತ್ಯೆ ತಡೆ ದಿನ. ಇದು…

7 hours ago