ಚಾಮರಾಜನಗರ: ಇಲ್ಲಿನ ಶ್ರೀ ವಿದ್ಯಾಗಣಪತಿ ಮಂಡಳಿ ವತಿಯಿಂದ ಗುರುನಂಜನಶೆಟ್ಟರ ಛತ್ರದ ಮುಂಭಾಗ ಪೂಜಿಸಲಾಗಿರುವ ಧರ್ಮರಕ್ಷಣಾ ಗಣಪತಿಯ ವಿಸರ್ಜನಾ ಮಹೋತ್ಸವ ನಾನಾ ಕಲಾತಂಡಗಳ ಅದ್ದೂರಿ ಮೆರವಣಿಗೆಯೊಂದಿಗೆ ಶನಿವಾರ ನಡೆಯಲಿದೆ.
ಇದು ೬೦ನೇ ವರ್ಷದ ಗಣೇಶ ವಿಸರ್ಜನೆ. ಗೌರಿಗಣೇಶ ಹಬ್ಬದಂದು ಪ್ರತಿಷ್ಠಾಪಿಸಲಾಗಿತ್ತು. ವಿಸರ್ಜನಾ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬೆಳಿಗ್ಗೆ ೧೦.೩೦ಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಕರ್ನಾಟಕ, ಕೇರಳದ ಹೆಸರಾಂತ ಕಲಾತಂಡಗಳೊoದಿಗೆ ಮೆರವಣಿಗೆ ಮುಂದಡಿ ಇಡಲಿದೆ.
ಹಲವು ಬೀದಿಗಳಲ್ಲಿ ಸಾಗಿ ಅಂತಿಮವಾಗಿ ತಡರಾತ್ರಿ ದೊಡ್ಡ ಅರಸನ ಕೊಳದಲ್ಲಿ ಗಣಪತಿ ವಿಸರ್ಜಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕೊಳದ ಸುತ್ತಲೂ ವೈಭವವಾಗಿ ದೀಪಾಲಂಕಾರ ಮಾಡಲಾಗಿದೆ. ಭಾರಿ ಬಿಗಿಭದ್ರತೆಯೊಂದಿಗೆ ವಿಸರ್ಜನೆ ನಡೆಯುವುದರಿಂದ ಪೊಲೀಸ್ ಗಣಪತಿ ಎಂದೇ ಕರೆಯಲಾಗುತ್ತದೆ. ಮೆರವಣಿಗೆ ವೇಳೆ ಕಟ್ಟಡ-ಮಹಡಿ ಏರುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಪ್ರತಿ ವರ್ಷವೂ ಒಂದೊoದು ಹೆಸರಿನಲ್ಲಿ ಗಣಪತಿ ಪ್ರತಿಷ್ಠಾಪಿಸುತ್ತಾ ಬರಲಾಗಿದೆ. ಅಂತೆಯೇ ಈ ಬಾರಿ ಧರ್ಮರಕ್ಷಣಾ ಗಣಪತಿ ಎಂದು ಹೆಸರಿಡಲಾಗಿದೆ. ಪ್ರತಿಷ್ಠಾಪಿಸಿದ ೫೫ ದಿನಗಳಿಗೆ ಸರಿಯಾಗಿ ವಿಸರ್ಜಿಸಲಾಗುತ್ತಿದೆ ಎಂದು ಶ್ರೀ ವಿದ್ಯಾಗಣಪತಿಮಂಡಳಿ ಅಧ್ಯಕ್ಷ ಮನೋಜ್ ಪಟೇಲ್ ಪತ್ರಿಕೆಗೆ ತಿಳಿಸಿದರು.
ಮೆರವಣಿಗೆ ಸಾಗುವ ಬೀದಿಗಳಲ್ಲಿ ಹಳ್ಳಕೊಳ್ಳಗಳನ್ನು ಮುಚ್ಚುವ, ಸ್ವಚ್ಚತೆ ಮಾಡುವ ಕಾರ್ಯ ನಗರಸಭೆಯಿಂದ ಶುಕ್ರವಾರ ಭರದಿಂದ ನಡೆಯಿತು.
ಕಳೆದ ೧ ವಾರದಿಂದ ದಿನಾಲು ಮಳೆಯಾಗುತ್ತಿದ್ದು ವಿಸರ್ಜನೆ ವೇಳೆ ಮಳೆಯಾಗದಿದ್ದರೆ ಸಮಸ್ಯೆ ಇಲ್ಲ. ಬಿದ್ದರೆ ವಿಸರ್ಜನೆ ವಿಳಂಬ ಆಗಲಿದೆ.
ಚಾಮುಂಡಿ ಬೆಟ್ಟದಲ್ಲಿ ಪ್ರಸಾದ ಯೋಜನೆಯಡಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಮೈಸೂರು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಪ್ರಜ್ಞಾವಂತ…
ಮೈಸೂರು ತಾಲ್ಲೂಕಿನ ಧನಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆಂಚಲಗೂಡು ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ)ಯಿಂದ ನಿರ್ಮಿಸಿರುವ ಬಡಾವಣೆಯಲ್ಲಿ ನೀರು,…
ಮೈಸೂರಿನಲ್ಲಿ ಬಸ್ ನಿಲ್ದಾಣ, ರೈಲು ನಿಲ್ದಾಣ ಮೊದಲಾದ ಕಡೆಗೆ ತೆರಳುವವರು, ಅದರಲ್ಲೂ ಮುಖ್ಯವಾಗಿ ಒಬ್ಬರೇ ಪ್ರಯಾಣಿಸುವವರು ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ…
ರಾಷ್ಟ್ರಕವಿ ಕುವೆಂಪು ಅವರು ವಾಸವಿದ್ದ ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ‘ಉದಯರವಿ’ ಮನೆಯನ್ನು ಸ್ಮಾರಕವನ್ನಾಗಿ ಮಾಡಬೇಕೆಂದು ಸಾಹಿತ್ಯಾಸಕ್ತರು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದರೂ ಸಂಬಂಧಪಟ್ಟವರು…
ಪ್ರೊ.ಆರ್.ಎಂ.ಚಿಂತಾಮಣಿ ನುರಿತ ಹಣಕಾಸು ಆಡಳಿತಗಾರ ಮತ್ತು ದೇಶದ ಹಣಕಾಸು ಮತ್ತು ಬಂಡವಾಳ ಪೇಟೆಗಳ ಬೆಳವಣಿಗೆ ಮತ್ತು ನಿಯಂತ್ರಣದ ಉನ್ನತಾಧಿಕಾರವುಳ್ಳ ಭಾರತೀಯ…
ಲಕ್ಷ್ಮಿಕಾಂತ್ ಕೊಮಾರಪ್ಪ ಹತ್ತಾರು ಸಮಸ್ಯೆಗಳ ನಡುವೆಯೂ ಕಾಫಿ ಬೆಳೆದಿದ್ದವರಿಗೆ ನಷ್ಟದ ಭೀತಿ; ಮತ್ತಷ್ಟು ದರ ಕುಸಿತಗೊಳ್ಳುವ ಸಾಧ್ಯತೆ ಸೋಮವಾರಪೇಟೆ: ಕಾರ್ಮಿಕರ ಕೊರತೆ,…