ಚಾಮರಾಜನಗರ

ಯಳಂದೂರು | ಕೆರೆಗಳಿಂದ ಅಕ್ರಮ ಮಣ್ಣು ಸಾಗಾಟ ; ಅಧಿಕಾರಿಗಳ ಜಾಣಮೌನ

ಯಳಂದೂರು : ತಾಲ್ಲೂಕಿನ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತುಂಬಲಾಗುತ್ತಿದೆ. ಅಕ್ರಮಕ್ಕೆ ಕಡಿವಾಣ ಹಾಕಿಬೇಕಿದ್ದ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ. ಮಣ್ಣು ಮಾಫಿಯಾ ತಡೆಗಟ್ಟಬೇಕಿದ್ದ ಭೂ ಮತ್ತು ಗಣಿ ಇಲಾಖೆ, ಕಂದಾಯ ಹಾಗೂ ನೀರಾವರಿ ಇಲಾಖೆಗಳು ಜಾಣ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ತಾಲ್ಲೂಕಿನ ಅಂಬಳೆ, ವೈ.ಕೆ.ಮೋಳೆ, ಗುಂಬಳ್ಳಿ, ಯರಗಂಬಳ್ಳಿ, ಕೃಷ್ಣಾಪುರ, ವಡಗೆರೆ, ಗೌಡಹಳ್ಳಿ, ಮಲಾರಪಾಳ್ಯ ಸುತ್ತಮುತ್ತಲಿನ ಕೆರೆಗಳಲ್ಲಿ ಜೆಸಿಬಿ ಯಂತ್ರದ ಮೂಲಕ ನೂರಾರು ಟ್ರಾಕ್ಟರ್‌ಗಳಲ್ಲಿ ಮಣ್ಣನ್ನು ತುಂಬಿಕೊಂಡು ರಾಜಾರೋಷವಾಗಿ ಸಾಗಾಣಿಕೆ ಮಾಡಲಾಗುತ್ತಿದೆ. ಇದಕ್ಕಾಗಿಯೇ ಕೆಲವರು ಇದನ್ನು ದಂಧೆ ಮಾಡಿಕೊಂಡು ಕೆರೆಗಳ ಗರ್ಭವನ್ನು ಅಗೆದು ಲಕ್ಷಾಂತರ ರೂ. ಲಾಭವನ್ನು ಮಾಡಿಕೊಳ್ಳುತ್ತಿದ್ದಾರೆ.

ತಾಲ್ಲೂಕಿನ ಕೃಷ್ಣಾಪುರ, ಯರಗಂಬಳ್ಳಿ, ವಡಗೆರೆ, ಗೌಡಹಳ್ಳಿ ಕೆರೆಗಳಲ್ಲಿ ಸಿಗುವ ಮಣ್ಣು ಗ್ರಾವೆಲ್ ಆಗಿದೆ. ಇದನ್ನು ಕಟ್ಟಡಗಳ ನಿರ್ಮಾಣದ ಅಡಿಪಾಯ ಹಾಗೂ ನೆಲ ಮಹಡಿಗಳಿಗೆ ಭರ್ತಿ ಹಾಕಲು ಬಳಸಲಾಗುತ್ತದೆ. ಪ್ರಸ್ತುತ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಟ್ರಾಕ್ಟರ್‌ಗೆ 1,300 ರೂ.ನಿಂದ 2,500 ಸಾವಿರ ರೂ.ವರೆಗೆ ಇದನ್ನು ಮಾರಾಟ ಮಾಡಲಾಗುತ್ತದೆ. ಇದನ್ನು ತುಂಬುವ ಉದ್ದೇಶದಿಂದ ಕೆರೆಗಳಲ್ಲಿ ಹತ್ತಾರು ಅಡಿ ಆಳದ ಹಳ್ಳಗಳೂ ಆಗಿವೆ. ಕೆಲ ಕೆರೆಗಳು ಬಿಆರ್‌ಟಿ ಹುಲಿ ರಕ್ಷಿತ ಪ್ರದೇಶದ ಕಾಡಂಚಿನಲ್ಲೂ ಇವೆ. ಇಲ್ಲಿಗೆ ನೀರನ್ನರಸಿ ಬರುವ ಕಾಡು ಪ್ರಾಣಿಗಳು ಮಣ್ಣು ತೋಡಿರುವ ಆಳವಾದ ಕಂದಕ್ಕೆ ಬೀಳುವ ಅಪಾಯವನ್ನೂ ತಳ್ಳಿ ಹಾಕುವಂತಿಲ್ಲ. ಇದರಿಂದ ಕೆರೆಯಲ್ಲಿನ ಜಲಚರಗಳಿಗೂ ತೊಂದರೆಯಾಗುವ ಅಪಾಯವೂ ಇದೆ. ಇದನ್ನು ಪರಿಗಣಿಸಿ ಸಂಬಂಧಪಟ್ಟವರು ಕ್ರಮ ವಹಿಸಬೇಕಿದೆ.

ಈ ಬಗ್ಗೆ ಆಂದೋಲನದೊಂದಿಗೆ ಮಾತನಾಡಿರುವ ತಾಹಶೀಲ್ದಾರ್ ನಯನ ಅವರು, ಕೆರೆಗಳಲ್ಲಿ ಅನುಮತಿ ಇಲ್ಲದೆ ಅಕ್ರಮವಾಗಿ, ಅವೈಜ್ಞಾನಿಕವಾಗಿ ಮಣ್ಣು ಎತ್ತುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಯಾರೂ ಕೂಡ ದೂರು ನೀಡಿಲ್ಲ. ಸಂಬಂಧಪಟ್ಟವರಿಂದ ಈ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು, ಅಕ್ರಮ ಎಸಗಿದವರ ವಿರುದ್ಧ ಕಾನೂನು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ದಸರಾ ಚಿತ್ರೋತ್ಸವ ರದ್ದಾಗದಿರಲಿ

ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…

3 hours ago

ಚಲನೆ ಕೇವಲ ವ್ಯಾಯಾಮವಲ್ಲ ಆರೋಗ್ಯದ ಶಕ್ತಿ

ಇಂದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ‘ನಿಶ್ಯಬ್ದ ಕ್ರಾಂತಿ’ ಸಂಭವಿಸುತ್ತಿದೆ. ಒಂದು ಕಾಲದಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು…

3 hours ago

ಒಂದು ಸೈನ್ಯದ ಆತ್ಮಾಹುತಿ ತಡೆದಿದ್ದರು ಅರಸು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರು…

3 hours ago

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

13 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

15 hours ago