ಚಾಮರಾಜನಗರ

ಮೈಸೂರಿನ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರಕ್ಕೆ ಜನರ ಒತ್ತಾಯವೂ ಇದೆ: ಸಚಿವ ರಾಮಲಿಂಗಾರೆಡ್ಡಿ

ಹನೂರು: ಮೈಸೂರಿನ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರಕ್ಕೆ ಜನರ ಒತ್ತಾಯವೂ ಇದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಈ ಬಗ್ಗೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರಿಂದಲೂ ಒತ್ತಾಯ ಇದ್ದಿದ್ದರಿಂದ ಪ್ರಾಧಿಕಾರ ರಚನೆ ಮಾಡಿದ್ದೇವೆ. ಆದರೆ, ರಾಜಮನೆತನದವರು ಕೋರ್ಟ್‌ಗೆ ಹೋಗಿದ್ದು, ಈಗ ಯಥಾಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ನಾನು ಅದರ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ ಎಂದರು.

ಇನ್ನು ಕಾಂಗ್ರೆಸ್‌ ಪ್ರತಿಭಟನೆ ವೇಳೆ ರಾಜ್ಯಪಾಲರ ಭಾವಚಿತ್ರಕ್ಕೆ ಚಪ್ಪಲಿಯಿಂದ ಒಡೆದು, ದಹನ ಮಾಡಿ ಅವಮಾನ ಮಾಡಲಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದನ್ನು ಬಿಜೆಪಿಯವರೇ ಮಾಡಿ ನಮ್ಮ ಮೇಲೆ ಎತ್ತಿ ಹಾಕಿರಬಹುದು. ಆರೋಪ ಮಾಡಲು ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ. ನಮ್ಮವರು ಯಾರೂ ಸಹ ಅವಾಚ್ಯ ಶಬ್ಧಗಳನ್ನು ಬಳಸಿಲ್ಲ ಎಂದು ಕಿಡಿಕಾರಿದರು.

 

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

140ನೇ ‘ಮನ್ ಕಿ ಬಾತ್’ | ಡ್ರಗ್ಸ್ ವಿರುದ್ಧ ಜಾಗೃತಿ, ಮೊಬೈಲ್ ಸುರಕ್ಷತೆಗೆ ಪ್ರಧಾನಿ ಮೋದಿ ಒತ್ತು

ನವದೆಹಲಿ: ಮೊಬೈಲ್ ಕಳೆದುಹೋದರೆ ಏನು ಮಾಡಬೇಕು? 140ನೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಸಂಚಾರ್ ಸಾಥಿ’ ಬಳಸುವಂತೆ…

1 hour ago

ಆಶಾ ಕಾರ್ಯಕರ್ತೆಯರ ಧರಣಿ ಅಂತ್ಯ | ಮಾಸಿಕ ಗೌರವಧನ ₹2,000 ಹೆಚ್ಚಳ

ಬೆಂಗಳೂರು: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರ ಧರಣಿಗೆ ತೆರೆ ಬಿದ್ದಿದೆ. ಮಾಸಿಕ ಗೌರವಧನವನ್ನು ಎರಡು ಸಾವಿರ ರೂಪಾಯಿ ಹೆಚ್ಚಿಸಲು ರಾಜ್ಯ…

1 hour ago

ಓದುಗರ ಪತ್ರ: ‘ಮಂತ್ರ ಮಾಂಗಲ್ಯ’ ಮದುವೆಗಳು ಹೆಚ್ಚಾಗಲಿ

ಕರ್ನಾಟಕ ವಿಧಾನಸಭೆಯ ಅತ್ಯಂತ ಕಿರಿಯ ಶಾಸಕ, ನಂಜನಗೂಡು ಮೀಸಲು ಕ್ಷೇತ್ರವನ್ನು ಪ್ರತಿನಿಧಿಸುವ ದರ್ಶನ್ ಧ್ರುವನಾರಾಯಣರ ಸರಳ ‘ಮಂತ್ರ ಮಾಂಗಲ್ಯ’ ಮದುವೆ…

4 hours ago

ಓದುಗರ ಪತ್ರ: ಇ- ಖಾತಾ ಆಯ್ತು ಇನ್ನು ಸಿಆರ್ ವಿಶೇಷ ಅಭಿಯಾನ

ಮೈಸೂರಿನಲ್ಲಿ ಸುಮಾರು ವರ್ಷಗಳಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾನೂನು ಉಲ್ಲಂಘನೆಯಾದ ಕಟ್ಟಡಗಳು ಪೂರ್ಣಗೊಂಡಿದ್ದರೂ ಸಿ.ಆರ್. (ಕಟ್ಟಡ ಪ್ರಮಾಣ ಪತ್ರ )…

4 hours ago

ಓದುಗರ ಪತ್ರ: ಜಲಾಶಯಗಳ ಹೂಳೆತ್ತುವ ಕಾರ್ಯ ಚಾಲನೆಗೊಳ್ಳಲಿ

ರಾಜ್ಯದ ಪ್ರಮುಖ ೧೪ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ೧೩೫ ಟಿಎಂಸಿ ನೀರಿನ ಕೊರತೆಯಿದ್ದು, ಕೇವಲ ೬೫ ಟಿಎಂಸಿ ನೀರು ಮಾತ್ರ…

4 hours ago

ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಎನ್‌ಡಿಎ ನಿಗೂಢ ಕಸರತ್ತು

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ಜನಗಣತಿಯ ಜನಸಂಖ್ಯೆ ಗಣನೆ ಬದಲಿಗೆ ಎಲ್ಲ ರಾಜ್ಯಗಳ ಲೋಕಸಭೆ ಮತ್ತು…

4 hours ago