ಮೈಸೂರು: ಲೋಕಸಭಾ ಚುನಾವಣೆಗೆ ತಡವಾಗಿ ಟಿಕೆಟ್ ಸಿಕ್ಕಿದ್ದಕ್ಕೆ ಯಾವುದೇ ಬೇಸರವಿಲ್ಲ. ನಮ್ಮ ರೀತಿಯಲ್ಲಿಯೇ ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಿನ ಪ್ರಮಾಣದಲ್ಲಿರುತ್ತಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸವಿತ್ತು ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಹೇಳಿದ್ದಾರೆ.
ನಾನು ರಾಜಕಾರಣಕ್ಕೆ ಅಪರಿಚಿತನೇನೂ ಅಲ್ಲ ಮೂರು ಲೋಕಸಭಾ, ಮೂರು ವಿಧಾನ ಪರಿಷತ್ ಮತ್ತು ನಮ್ಮ ತಂದೆಯ ನಾಲ್ಕು ವಿಧಾನಸಭಾ ಚುನಾವಣೆ ಮಾಡಿರುವ ಅನುಭವ ನನಗಿದೆ ಎಂದರು.
ಚಾಮರಾಜನಗರದ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿರುವುದನ್ನು ಉಲ್ಲೇಖಿಸಿದ ಸುನೀಲ್, ರಾಜಕಾರಣ ಯಾವತ್ತಿಗೂ ನಿಂತ ನೀರಲ್ಲ, ಪ್ರಸಾದ್ ಅವರನ್ನು ನಮ್ಮ ಬಾಲ್ಯದಿಂದ ನೋಡುತ್ತಾ ಬೆಳೆದಿದ್ದೇವೆ. ತನ್ನ ತಂದೆಯವರಿಗಾಗಲೀ ಅಥವಾ ತನಗಾಗಲೀ ಅವರ ವಿರುದ್ಧ ವೈಯಕ್ತಿಕವಾಗಿ ಏನೂ ವೈರತ್ವವಿಲ್ಲ. ಸಿದ್ದಾಂತ ಎಂದು ಬಂದಾಗ ನಾವು ವಿರೋಧಿಗಳಾಗಿದ್ದೇವೆ ಎಂದು ಹೇಳಿದರು.
50 ವರ್ಷಗಳ ಕಾಲ ಸುದೀರ್ಘ ರಾಜಕಾರಣ ಬಳಿಕ ನಿವೃತ್ತಿ ಘೋಷಿಸಿರುವ ಪ್ರಸಾದ್ ಅವರು ನನಗೆ ಒಳ್ಳೆಯದಾಗಲಿ ಅಂತ ಹರಸಿ ಕಳಿಸಿದ್ದಾರೆ ಎಂದು ಟಿವಿ9 ಜೊತೆ ಮಾತನಾಡುವಾಗ ಸುನೀಲ್ ಬೋಸ್ ಮಾಹಿತಿ ಹಂಚಿಕೊಂಡಿದ್ದಾರೆ.
ನವೀನ್ ಡಿಸೋಜ ಗುಡ್ಡದ ಮೇಲೆ ಅವೈಜ್ಞಾನಿಕವಾಗಿ ಸುರಿದಿದ್ದ ಕಸ ವಿಂಗಡಣೆ ಕೆಲಸ ಚುರುಕು ಮಡಿಕೇರಿ: ವಾಯು ಗುಣಮಟ್ಟದಲ್ಲಿ ದೇಶದಲ್ಲೇ ಹೆಸರಾಗಿರುವ…
ಇತ್ತೀಚಿನ ದಿನಮಾನಗಳಲ್ಲಿ ಸಕ್ಕರೆ ಕಾಯಿಲೆ ಎಂಬುದು ಸಾಮಾನ್ಯವಾಗಿ ಬಿಟ್ಟಿದೆ. ಈ ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಂಡಾಗ ಗ್ಯಾಂಗ್ರಿನ್ ರೂಪ ಪಡೆದುಕೊಳ್ಳುತ್ತದೆ.…
ಎಸ್.ಎಸ್.ಭಟ್ ನಂಜನಗೂಡು: ಮೈಸೂರು ನಗರದಿಂದ ನಂಜನಗೂಡಿಗೆ ತೆರಳುವ ಬಸ್ ಹತ್ತುವ ಪ್ರಯಾಣಿಕ ಆಘಾತಕ್ಕೆ ಒಳಗಾಗುವುದು ಗ್ಯಾರಂಟಿ. ಮೈಸೂರು ಬಸ್ ನಿಲ್ದಾಣದಿಂದ…
ಮಂಜು ಕೋಟೆ ಕೋಟೆ ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷರಾಗಿ ಮೊಳಿಯೂರು ಆನಂದ್ ಮುಂದುವರಿಕೆಗೆ ನ್ಯಾಯಾಲಯದ ತೀರ್ಪು ಎಚ್.ಡಿ.ಕೋಟೆ: ತಾಲ್ಲೂಕು ಕುರುಬ…
ಕೆ.ಬಿ.ರಮೇಶನಾಯಕ ಬಡವರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶ ಮೈಸೂರು: ಬಡವರ ಕೈಗೆಟುಕುವ ದರದಲ್ಲಿ ಗುಣಮಟ್ಟದ ತಿಂಡಿ, ಊಟವನ್ನು…