ಚಾಮರಾಜನಗರ

ಚಲಿಸುತ್ತಿದ್ದ ವೇಳೆಯೇ ಸಿಡಿದ ಬಸ್‌ ಟೈಯರ್:‌ ಚಾಲಕನ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಹನೂರು: ಕೆಎಸ್‌ಆರ್‌ಟಿಸಿ ಬಸ್‌ ಟೈಯರ್‌ ಸಿಡಿದು 20ಕ್ಕೂ ಹೆಚ್ಚು ಪ್ರಯಾಣಿಕರು ಚಾಲಕನ ಸಮಯಪ್ರಜ್ಞೆಯಿಂದ ಪಾರಾಗಿದ್ದಾರೆ.

ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ ಈ ಘಟನೆ ನಡೆದಿದ್ದು, ಹನೂರು ಪಟ್ಟಣದಿಂದ ಅಜ್ಜೀಪುರ-ರಾಮಾಪುರ ಕೌದಳ್ಳಿ ಮಾರ್ಗವಾಗಿ ದಂಟಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಬಸ್‌ನ ಮುಂಭಾಗದ ಟೈರ್‌ ಏಕಾಏಕಿ ಸಿಡಿದಿದೆ. ಆದರೆ ಚಾಲಕನ ಸಮಯಪ್ರಜ್ಞೆಯಿಂದ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ.

ಘಟನೆ ನಡೆಯುತ್ತಿದ್ದಂತೆ ರೊಚ್ಚಿಗೆದ್ದ ಪ್ರಯಾಣಿಕರು, ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಟೈರ್‌ಗಳು ಕಳಪೆಯಾಗಿದ್ದು, ಅತಿ ಹೆಚ್ಚು ಸವೆದಿರುವ ಟೈರ್‌ಗಳನ್ನು ಹಾಕಿ ಸಂಚಾರ ಮಾಡುತ್ತಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು  ಆರೋಪ ಮಾಡಿದ್ದಾರೆ.

ಇನ್ನು ಹನೂರು ತಾಲ್ಲೂಕಿನ ಕಾಡಂಚಿನಲ್ಲಿರುವ ಬರುವ ದಂಟಳ್ಳಿ ಗ್ರಾಮಕ್ಕೆ ಕಳೆದ ನಾಲ್ಕೈದು ತಿಂಗಳಿನಿಂದ ತಾತ್ಕಾಲಿಕವಾಗಿ ಬಸ್‌ ವ್ಯವಸ್ಥೆ ನಿಲ್ಲಿಸಲಾಗಿತ್ತು. ಆದರೆ ರೈತ ಮುಖಂಡರು ಹಾಗೂ ಸಾರ್ವಜನಿಕರ ಮನವಿ ಮೇರೆಗೆ ಬಸ್‌ ಸಂಚಾರ ಪ್ರಾರಂಭಿಸಲಾಗಿದೆ. ಆದರೆ ಸಂಚಾರಕ್ಕೆ ಯೋಗ್ಯವಾಗಿರುವ ವಾಹನಗಳನ್ನು ನೀಡದೇ ಡಕೋಟಾ ಬಸ್‌ಗಳನ್ನು ನೀಡುತ್ತಿರುವುದರಿಂದ ಎಲ್ಲೆಂದರಲ್ಲಿ ರಿಪೇರಿಯಾಗಿ ಹಾಗೂ ಟೈರ್‌ ಸಮಸ್ಯೆಯಿಂದ ನಿಲ್ಲುತ್ತಿವೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹನೂರು ತಾಲ್ಲೂಕು ವ್ಯಾಪ್ತಿಗೆ ಗುಣಮಟ್ಟದ ಬಸ್‌ಗಳನ್ನು ಬಿಡುವಂತೆ ಒತ್ತಾಯಿಸಿದ್ದಾರೆ.

 

ಮಹಾದೇಶ್ ಎಂ ಗೌಡ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಹನೂರು ಪಟ್ಟಣದವನಾದ ನಾನು ಪಟ್ಟಣದ ಕ್ರಿಸ್ತರಾಜ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಮಾಡಿದ್ದು ಕಳೆದ 11 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ. ರಾಜ್ಯಮಟ್ಟದ ವಿಶ್ವವಾಣಿ, ಜಿಲ್ಲಾ ಮಟ್ಟದ ಸುದ್ದಿ ಬುದ್ಧಿ ಪತ್ರಿಕೆಯಲ್ಲಿ ನಾಲ್ಕು ವರ್ಷ ತಾಲೂಕು ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಕಳೆದ ಹತ್ತು ವರ್ಷಗಳಿಂದ ಆಂದೋಲನ ದಿನಪತ್ರಿಕೆಯಲ್ಲಿ ಹನೂರು ತಾಲೂಕು ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ.

Recent Posts

ಓದುಗರ ಪತ್ರ: ಸಚಿವರಿಬ್ಬರ ಹೇಳಿಕೆಗಳು ‘ಲಕ್ಷ್ಮಣರೇಖೆ’ ಮೀರದಿರಲಿ

ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಜಲಸಂಪನ್ಮೂಲ ಸಚಿವ ಎನ್.ಚಲುವರಾಯ ಸ್ವಾಮಿಯವರ ನಡುವಿನ ಆರೋಪ ಮತ್ತು ಪ್ರತ್ಯಾರೋಪಗಳು…

3 hours ago

ಓದುಗರ ಪತ್ರ: ‘ಸಂಧ್ಯಾ ಕಿರಣ’ ಯೋಜನೆಯ ವ್ಯಾಪ್ತಿಗೆ ವಯೋನಿಗದಿ ಬೇಡ

ಸರ್ಕಾರವು ೭೦ ವರ್ಷದೊಳಗಿನ ನಿವೃತ್ತ ಸರ್ಕಾರಿ ಪಿಂಚಣಿದಾರರಿಗೆ, ಕುಟುಂಬ ಪಿಂಚಣಿದಾರರಿಗೆ ಮತ್ತು ಅವರ ಅರ್ಹ ಅವಲಂಬಿತ ವಿಕಲಚೇತನ ಮಕ್ಕಳ ಆರೋಗ್ಯ…

3 hours ago

ಓದುಗರ ಪತ್ರ: ಗುರು-ಶಿಷ್ಯರ ಸಂಬಂಧ ವರ್ಣನಾತೀತ

ನಮ್ಮಲ್ಲಿ ಗುರುವಿಗೆ ಅಗ್ರಸ್ಥಾನ ಕೊಟ್ಟಿದ್ದೇವೆ. ಒಂದು ಅಕ್ಷರ ಕಲಿಸಿದವರನ್ನು ಗುರುವೆಂದು ಒಪ್ಪಿಕೊಂಡಿದ್ದೇವೆ. ಗುರುವು ನಮಗೆ ಒಳ್ಳೆಯ ಮಾರ್ಗ,ನಡತೆ ಹಾಗೂ ಜ್ಞಾನವನ್ನು…

3 hours ago

‘ಶಿಕ್ಷಕರ ಮೇಲೆ ಅನಗತ್ಯ ಹೊರೆ: ಗುಣಮಟ್ಟದ ಶಿಕ್ಷಣಕ್ಕೆ ಬರೆ’

ಮೈಸೂರು: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾದ ಶಿಕ್ಷಕರು,…

3 hours ago

ಭಲೇ ಭಲೇ ಸರ್ಕಾರಿ ಶಾಲೆ

ಮೈಸೂರು: ಶಿಕ್ಷಕರ ಒಗ್ಗಟ್ಟಿನ ಬಲ ಹಾಗೂ ಸಕಾರಾತ್ಮಕ ಚಿಂತನೆಗಳಿಂದ, ಖಾಸಗಿ ಶಾಲೆಗಳಿಗೂ ಸಡ್ಡು ಹೊಡೆದಿರುವ ನಗರದ ಸರ್ಕಾರಿ ಶಾಲೆಯೊಂದು ಹೆಮ್ಮೆಯಿಂದ…

3 hours ago

ಸರ್ವಜನಾಂಗದ ಶಾಂತಿಯ ತೋಟದ ದೇವಮಾಲಿ ‘ಗುರು’

ಆರ್.ಎ.ಚೇತನರಾಮ್, ಮೈಸೂರು ಗುರುಚರಣ ಸ್ಪರ್ಶದಲಿ, ಭಯಭಕ್ತಿ ಸೇವೆಯಲಿ ಇದೆ ವಿದ್ಯೆ ಸಂಪ್ರಾಪ್ತಿ, ವಿನಯ ಸಂಸ್ಕಾರ ;ಗುರು ಶಿಷ್ಯ ಸಂಬಂಧ ನದಿಕಡಲ…

3 hours ago