ಚಾಮರಾಜನಗರ: ಜಮೀನೊಂದರಲ್ಲಿ ಮೇವು ಮೇಯುತ್ತಿದ್ದ ಜಿಂಕೆ ಮೇಲೆ ಹುಲಿ ದಾಳಿ ನಡೆಸಿದ ಪರಿಣಾಮ ಜಿಂಕೆ ಸ್ಥಳದಲ್ಲೇ ಪ್ರಾಣ ಬಿಟ್ಟ ಘಟನೆ ಗುಂಡ್ಲುಪೇಟೆಯ ಪಡಗೂರು ಗ್ರಾಮದಲ್ಲಿ ನಡೆದಿದೆ.
ಪಡಗೂರು ಗ್ರಾಮದ ಹೊರವಲಯದ ಜಮೀನಿನ ಕಡೆ ಮೇವು ಹರಸಿ ಬಂದಿದ್ದ ಜಿಂಕೆ ಮೇಲೆ ಹುಲಿ ಹಠಾತ್ ದಾಳಿ ನಡೆಸಿದೆ. ಇದನ್ನ ಕಂಡ ಸ್ಥಳೀಯರು ಕೂಗಿಕೊಂಡಿದ್ದು, ಪರಿಣಾಮ ಜಿಂಕೆಯನ್ನು ಅಲ್ಲೆ ಬಿಟ್ಟು ಹುಲಿ ಪರಾರಿಯಾಗಿದೆ. ಹುಲಿ ದಾಳಿಗೆ ಸಿಲುಕಿದ ಜಿಂಕೆ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ.
ಚಿರತೆ ಮರಿ ಪತ್ತೆ
ಪಡಗೂರು ಗ್ರಾಮದ ಶಿವಕುಮಾರ್ ಎಂಬುವವರ ಕಬ್ಬಿನ ಗದ್ದೆಯಲ್ಲಿ ಜಿರತೆಯೊಂದು ತನ್ನ ಮರಿ ಬಿಟ್ಟು ಹೋಗಿದೆ. ಬೇಟೆ ಹುಡುಕಿಕೊಂಡು ತಾಯಿ ಚಿರತೆ ತೆರಳಿರುವ ಸಾಧ್ಯತೆ ಇದ್ದು, ಮರಿಗಾಗಿ ವಾಪಸ್ ಬರಲಿದೆ ಎಂದು ಅರಣ್ಯ ಇಲಾಖೆ ಸ್ಥಳದಲ್ಲಿ ಬೋನಿರಿಸಿದೆ. ಚಿರತೆ ಸೆರೆ ಕಾರ್ಯಚರಣೆ ಮುಂದುವರೆದಿದೆ.
ಜಮೀನಿಗೆ ತೆರಳಲು ಗ್ರಾಮಸ್ಥರ ಹಿಂದೇಟು
ಪಡಗೂರು ಗ್ರಾಮ ಒಂದರಲ್ಲೇ ಜಿಂಕೆ ಮೇಲೆ ಹುಲಿ ದಾಳಿ ಹಾಗೂ ಚಿರತೆ ಇರುವುದು ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ. ಪರಿಣಾಮ ಗ್ರಾಮದ ಸುತ್ತಮುತ್ತಲಿನ ಜನರು ಜಮೀನಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…