ಟಿಬೆಟ್ ಬೌದ್ಧ ಧರ್ಮಗುರು ಮತ್ತು ಜಾಗತಿಕ ಶಾಂತಿದೂತ ಎಂದು ಪ್ರಖ್ಯಾತರಾದ ದಲೈಲಾಮಾ ಅವರು ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ತಮ್ಮ 90ನೇ ವಯಸ್ಸಿನಲ್ಲಿ ಬೆಸ್ಟ್ ಆಡಿಯೋ ಬುಕ್, ನರೇಷನ್ ಅಂಡ್ ಸ್ಟೋರಿಟೆಲ್ಲಿಂಗ್ ರೆಕಾರ್ಡಿಂಗ್ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ಪಡೆಯುವ ಮೂಲಕ ಅವರು ಹೊಸ ದಾಖಲೆ ಬರೆದಿದ್ದಾರೆ. ಜಾಲತಾಣಗಳ ಮೂಲಕ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಈ ಪ್ರಶಸ್ತಿಯು ದಲೈಲಾಮಾ ಅವರ ಶಾಂತಿ, ಕರುಣೆ ಮತ್ತು ಮಾನವೀಯತೆಯ ಸಂದೇಶಗಳಿಗೆ ಸಂದ ಜಾಗತಿಕ ಗೌರವವಾಗಿದೆ.
ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ದಿ ರೆಕಾರ್ಡಿಂಗ್ ಅಕಾಡೆಮಿ ಆಯೋಜಿಸಿದ್ದ 68ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಈ ಗೌರವವನ್ನು ಘೋಷಣೆ ಮಾಡಲಾಯಿತು. ಈ ಪ್ರಶಸ್ತಿಯು ಕೇವಲ ಸಂಗೀತಕ್ಕೆ ಮಾತ್ರ ಸೀಮಿತವಾಗದೇ ಆಧ್ಯಾತ್ಮಿಕತೆ ಮತ್ತು ಸಾಮಾಜಿಕ ಪ್ರಜ್ಞೆಗೆ ಸಂದ ಅಂತರಾಷ್ಟ್ರೀಯ ಗೌರವವೆಂದು ಪರಿಗಣಿಸಲಾಗಿದೆ.
ಮೈಸೂರು: 2028ರಲ್ಲೂ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ. ಅವರ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಸತೀಶ್…
ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…
ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…
ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…
ವೈಡ್ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…
ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…