ಚಾಮರಾಜನಗರ

ಚಾ.ನಗರ | ಇತಿಹಾಸ ಅರಿಯದವರಿಂದ ದಸರಾ ರದ್ದು ; ಸಾಹಿತಿ ಸೋಮಶೇಖರ್‌ ಬಿಸಲ್ವಾಡಿ

ಚಾಮರಾಜನಗರ : ನಗರದಲ್ಲಿ ೨೦೧೩ರಿಂದ ಆರಂಭವಾದ ಚಾಮರಾಜನಗರ ಸಾಂಸ್ಕೃತಿಕ ದಸರಾ ೨೦೨೪ರವರೆಗೂ ನಡೆಯಿತು. ಈ ಬಾರಿ ದಸರಾ ರದ್ದಾಗಿರುವುದು ಆಡಳಿತ ವರ್ಗಕ್ಕೆ ಚಾಮರಾಜನಗರದ ಇತಿಹಾಸದ ಅರಿವಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಸಾಹಿತಿ ಸೋಮಶೇಖರ್ ಬಿಸಲ್ವಾಡಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ ಯುವ ಕಲಾವಿದರ ಬಳಗದ ವತಿಯಿಂದ ೨ ದಿನಗಳ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಆಶಯ ನುಡಿಗಳನ್ನಾಡಿದರು.

ಚಾಮರಾಜನಗರದಲ್ಲಿ ಹಿಂದೆ ದಸರಾ ನಡೆದಿತ್ತೇ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಅವರು ಚಾಮರಾಜನಗರ ದಸರಾ ಕಾರ್ಯಕ್ರಮ ರದ್ದುಪಡಿಸಿ, ಜಿಲ್ಲೆಗೆ ಅಪಚಾರ ಮಾಡಿದ್ದಾರೆ ಎಂದರು.

ಕಲಾವಿದರಾದ ನಾವು ಒಟ್ಟಾಗಿ ಚಾಮರಾಜನಗರ ದಸರಾ ಆಚರಿಸೋಣ ಎಂಬ ಸಂಕಲ್ಪ ಮಾಡಿರುವುದು ಪ್ರಶಂಸನೀಯ. ಕಲಾವಿದರೇ ಸ್ವಯಂಪ್ರೇರಿತವಾಗಿ ದಸರಾ ಆಚರಿಸುತ್ತಿರುವುದು ಸರ್ಕಾರಕ್ಕೆ ಕೊಟ್ಟ ಸಂದೇಶವಾಗಿದೆ ಎಂದರು.

ಇದನ್ನೂ ಓದಿ:-ಚಾ.ನಗರ ದಸರಾ ಸಾಂಸ್ಕೃತಿಕ ಮಹೋತ್ಸವಕ್ಕೆ ಚಾಲನೆ ; ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ

ಜಿಲ್ಲಾ ಯುವ ಕಲಾವಿದರ ಬಳಗದ ಅಧ್ಯಕ್ಷ ಶಿವಶಂಕರ್ ಎನ್.ಚಟ್ಟು ಮಾತನಾಡಿದರು. ವೇದಿಕೆಯಲ್ಲಿ ತಿಂಗಾಳು ಮುಳುಗಿದವೋ ರಂಗೋಲಿ ಬೆಳಗಿದವೋ ಎಂಬ ಮಲೆ ಮಹದೇಶ್ವರರ ಭಕ್ತಿಗೀತೆಯನ್ನು ಸಾಮೂಹಿಕವಾಗಿ ಹಾಡಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಕ್ತಿ ಗೀತೆ, ಜಾನಪದ ಗೀತೆ, ಸುಗಮ ಸಂಗೀತ, ಕುಂಚ ಗಾಯನ, ನೀಲಗಾರರ ಪದ, ಸೋಬಾನೆ, ತಂಬೂರಿ ಪದ, ಚಲನಚಿತ್ರ ಗೀತೆಗಳು, ರಂಗ ಗೀತೆಗಳು, ಹೋರಾಟ ಗೀತೆಗಳು, ಹಾಸ್ಯ ಜಾನಪದ, ಭಜನೆ, ವೀರಗಾಸೆ, ಹರಿಕಥೆ, ಗೊರವರ ಕುಣಿತ, ಡೊಳ್ಳು ಕುಣಿತ, ಸ್ಯಾಕ್ರೋಪೋನ್ ವಾದನ, ತತ್ವಪದ, ಭರತನಾಟ್ಯ, ನೃತ್ಯ, ಶಿವತಾಂಡವ ನೃತ್ಯ ನಾಟಕ ಕಲಾ ಪ್ರಕಾರಗಳಿಗೆ ಸಂಬಂಽಸಿದ ಕಲಾ ಪ್ರದರ್ಶನಗಳು ಜರುಗಿದವು.
ವೇದಿಕೆಯಲ್ಲಿ ಕಲಾವಿದ ಮಂಗಲ ಶಿವಣ್ಣ, ಕನ್ನಡಪರ ಸಂಘಟನೆ ಮುಖಂಡ ಚಾ.ರಂ.ಶ್ರೀನಿವಾಸಗೌಡ, ವೇಣುಗೋಪಾಲ್, ಯುವ ಕಲಾವಿದರಾದ ಸಿದ್ದರಾಜು, ಮಂಜು ಶ್ರೀರಾಂ, ದಡದಹಳ್ಳಿ ರಮೇಶ್, ರಾಕ್‌ಗಿರೀಶ್, ಆಲೂರು ದೊರೆಸ್ವಾಮಿ ಜಾನಪದ ಕಲಾವಿದರು ಭಾಗವಹಿಸಿದ್ದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

2 hours ago

ಓದುಗರ ಪತ್ರ: ಖುಷಿ ಕೊಡುವ ಮಾತುಗಳಷ್ಟೇ ಸ್ಪಂದನೆಯೂ ಮುಖ್ಯ

ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…

2 hours ago

ಓದುಗರ ಪತ್ರ: ಬ್ಯಾಂಕ್ ಒಕ್ಕೂಟಗಳಿಗೆ ಜವಾಬ್ದಾರಿ ಇರಲಿ

ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…

2 hours ago

ಪ್ರಶಸ್ತಿ ಪ್ರದಾನದಿಂದ ಚಿತ್ರೋತ್ಸವವರೆಗೆ ಹೊಸ ಪಯಣ

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…

2 hours ago

ಜಂಬೂಸವಾರಿಯಲ್ಲಿ ಸ್ತಬ್ಧ ಚಿತ್ರಗಳ ‘ತ್ರಿಸಂಗಮ’

ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…

2 hours ago