ಕೊಳ್ಳೇಗಾಲ : ತಾಲ್ಲೂಕಿನ ಸರಗೂರು- ಚೆಲುವನಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಚಾರಿಗಳಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಸತ್ತೇಗಾಲ ಹ್ಯಾಂಡ್ಪೋಸ್ಟ್ನ ಬೈಕ್ ಸವಾರ ರಮೇಶ್ ಹಾಗೂ ಪಾದಚಾರಿಗಳಾದ ಚೆಲುವನಹಳ್ಳಿ ಗ್ರಾಮದ ರೇವಮ್ಮ, ಕಿನಕಹಳ್ಳಿ ಬಸವಣ್ಣ ಹಾಗೂ ಗೀತಾ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ರಮೇಶ್ನನ್ನು ಚಾ.ನಗರ ಆಸ್ಪತ್ರೆಗೆ ಕಳುಹಿಸಲಾಗಿದೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ. ವಿಚಾರ ತಿಳಿದ ಹನೂರು ಬಿಜೆಪಿ ಮುಖಂಡ ಹಾಗೂ ಯುವ ಉದ್ಯಮಿ ನಿಶಾಂತ್ ರವರು ಆಸ್ಪತ್ರೆಗೆ ತೆರಳಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.
ಹಾಸನ: ಅಕ್ಟೋಬರ್.29ರಿಂದ ನವೆಂಬರ್.11ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಾಸನ ನಗರದ ಸಾಲಗಾಮೆ ರಸ್ತೆಯಲ್ಲಿರುವ ಜಿಲ್ಲಾ ಖಜಾನೆಯಿಂದ…
ಬ್ರೆಜಿಲ್: ಬ್ರೆಜಿಲ್ನ ಅಧ್ಯಕ್ಷೀಯ ಚುನಾವಣೆಯಲ್ಲಿ ಲುಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. ಅಕ್ಟೋಬರ್ 25ರಂದು ನಡೆದ…
ಮೈಸೂರು: ಪ್ರಮೋದಾದೇವಿ ಒಡೆಯರ್ ಅವರು ಸರ್ಕಾರಕ್ಕೆ ಬರೆದಿರುವ ಪತ್ರಕ್ಕೆ ಅಧಿಕೃತವಾಗಿ ಉತ್ತರ ನೀಡಲಾಗುವುದು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ…
ಅವ್ಯವಸ್ಥೆ, ಪೊಲೀಸರ ಅತಿರೇಕದ ವರ್ತನೆ, ಅಧಿಕಾರಿಗಳ ದೌಲತ್ತು, ಜನಸಾಮಾನ್ಯರ ಸಂಕಷ್ಟ- ಈ ಬಾರಿಯ ದಸರಾ ಅನೇಕ ಕಹಿ ಘಟನೆಗಳಿಗೂ ಸಾಕ್ಷಿಯಾಗಿದ್ದು…
ಶಶಿ ಸಂಪಳ್ಳಿ ರೊಬೋಟಿಕ್ ಆನೆಗಳ ಬಳಕೆ ಪರ್ಯಾಯ ಆಯ್ಕೆ ದಸರಾ ಜಂಬೂ ಸವಾರಿಯ ವೇಳೆ ಅಂಬಾರಿಯನ್ನು ಹೊತ್ತ ಆನೆ ದಿಕ್ಕೆಟ್ಟು…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಬಹುತೇಕ ನಿರ್ದೇಶಕರು ಒಂದೊಂದು ಸುಳಿಯಲ್ಲಿ ಸಿಲುಕಿದ್ದರು ವಿಮಾನ ರನ್ ವೇಯಲ್ಲಿ ಓಡುತ್ತಾ ಇದ್ದಕ್ಕಿದ್ದಂತೆ ಮೇಲಕ್ಕೆದ್ದಾಗ…