ಚಾಮರಾಜನಗರ

ಬಂಡೀಪುರದಲ್ಲಿ ಮತ್ತೊಂದು ಸಾಕಾನೆ ಕ್ಯಾಂಪ್

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರದ ಸಭಾಂಗಣದಲ್ಲಿ ೬೮ ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ನಡೆದ ಮಾಧ್ಯಮದವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಹುಲಿ ಯೋಜನೆ ನಿರ್ದೇಶಕ ರಮೇಶ್‌ಕುಮಾರ್ ಮಾತನಾಡಿ ಕಳ್ಳಬೇಟೆ ತಡೆಯುವ ನಿಟ್ಟಿನಲ್ಲಿ ಗನ್ ಸೌಂಡ್ ಗ್ರಹಿಸಿ ಮಾಹಿತಿ ನೀಡುವ ತಂತ್ರಜ್ಞಾನ ಮತ್ತು ಡ್ರೋಣ್ ತಂತ್ರಜ್ಞಾನ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

೨೦೦೬ ರಿಂದ ನಾಲ್ಕು ವರ್ಷಕ್ಕೊಮ್ಮೆ ಹುಲಿ ಗಣತಿ ನಡೆಯುತಿದ್ದು, ೨೦೧೮ ರ ಗಣತಿ ಪ್ರಕಾರ ದೇಶದಲ್ಲಿ ೨೯೬೭ ಹುಲಿಗಳಿದ್ದು, ಬಂಡೀಪುರದ ೬೦೦ ಕಡೆ ಹುಲಿ ಪಟ್ಟೆ ಧೃಡಪಡಿಸಲು ಎರಡು ಬದಿಯಲ್ಲಿ ಕ್ಯಾಮರ ಇಟ್ಟು, ೨೦೨೨ ಮೇ ನಲ್ಲಿ ಸಂಗ್ರಹವಾದ ಡಾಟಾವನ್ನು ಎನ್‌ಟಿಸಿಎ ನೀಡಿದ್ದೇವೆ. ಮಾರ್ಚ್ ವೇಳೆಗೆ ಹುಲಿಗಳ ಸಂಖ್ಯೆ ತಿಳಿಯಲಿದೆ ಎಂದರು. ೧೯೭೩ ರಲ್ಲಿ ಬಂಡೀಪುರ ಹುಲಿ ಯೋಜನೆ ಪ್ರಾರಂಭವಾಗಿದೆ. ಕೋರ್ ಮತ್ತು ಬಫರ್ ಜೋನ್ ಒಳಗೊಂಡು ಉದ್ಯಾನ ೧೨೫೦ ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಅರಣ್ಯದ ಗುಣಮಟ್ಟ ಎಲ್ಲಾ ರೀತಿಯಲ್ಲೂ ಉತ್ತಮ ಆಗಿದೆ. ಇದಕ್ಕಾಗಿ ಉದ್ಯಾನಕ್ಕೆ ೯೭.೫ ಅಂಕ ಬಂದಿದ್ದು, ನಿರ್ವಹಣೆ ವಿಷಯದಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಅಲ್ಲದೇ ಬಂಡೀಪುರ ವಲಯವನ್ನು ಲಂಟಾನ ಮುಕ್ತ ಮಾಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು. ಉದ್ಯಾನದಂಚಿನ ಕೃಷಿ ಭೂಮಿಗಳಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ನಿಗಾ ಇಡಲಾಗಿದ್ದು, ಪ್ರಾದೇಶಿಕ ನಿರ್ದೇಶಕರ ನೇತೃತ್ವದ ಸಭೆಯಲ್ಲಿ ಆದ ತೀರ್ಮಾನದಂತೆ ೧೫೦೦ ಕಡೆಗಳಲ್ಲಿ ಇದುವರೆಗೆ ಒತ್ತುವರಿ ತೆರವು ಮಾಡಿದ್ದೇವೆ ಎಂದು ತಿಳಿಸಿದರು. ಮಾನವ ಪ್ರಾಣಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸೋಲಾರ್ ವಿದ್ಯುತ್ ತಂತಿ ಬೇಲಿ, ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಇತರೆ ಎಲ್ಲಾ ಕ್ರಮಗಳು ಆಗಿದೆ. ಜತೆಗೆ ಈ ಭಾರಿ ಬೆಳೆ ಹಾನಿ ಪರಿಹಾರ ನೀಡಿದ್ದೇವೆ. ಶೇ.೪೦ ನೌಕರರ ಕೊರತೆ ಇರುವುದು ಸಮಸ್ಯೆಯಾಗಿದೆ ಎಂದು ಮಾಹಿತಿ ನೀಡಿದರು. ೧೩ ಕ್ಕಿಂತ ಹೆಚ್ಚಿಗೆ ಆನೆಗಳು ಇರುವಂತಿಲ್ಲ ಎಂಬ ನಿಯಮದ ಹಿನ್ನೆಲೆಯಲ್ಲಿ ಬಂಡೀಪುರ ಕೇಂದ್ರ ಸ್ಥಾನದಲ್ಲಿ ಮತ್ತೊಂದು ಸಾಕಾನೆ ಆನೆ ಕ್ಯಾಂಪ್ ಆರಂಭಿಸುವ ಉದ್ದೇಶ ಇದೆ ಎಂದು ಮಾಹಿತಿ ನೀಡಿದರು.

ಪ್ರಕೃತಿ ಕರೆ ಇತರೆ ಕಾರಣಗಳಿಗೆ ಉದ್ಯಾನದ ನಡುವಿನ ರಾಷ್ಟಿçÃಯ ಹೆದ್ದಾರಿಯ ಅಲ್ಲಲ್ಲಿ ವಾಹನ ನಿಲುಗಡೆ ತಡೆಯಲು ಚೆಕ್‌ಪೋಸ್ಟ್ಗಳ ಬಳಿ ಶೌಚಾಲಯ ವ್ಯವಸ್ಥೆ ಮಾಡುವ ಭರವಸೆ ನೀಡಿದರು.

ಅರಣ್ಯ ಮತ್ತು ವನ್ಯಜೀವಿ ದೇಶದ ಸಂಪತ್ತಾಗಿದ್ದು, ಇವುಗಳನ್ನು ರಕ್ಷಿಸಲು ಮಾಧ್ಯಮದವರು ಸಹಕಾರ ನೀಡಬೇಕು. ಉದ್ಯಾನದ ಬಗ್ಗೆ ಸಕಾರಾತ್ಮಕ ವರದಿಗಳನ್ನು ಪ್ರಕಟಿಸುವ ಮೂಲಕ ನೆರವಾಗಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ.ಪರಮೇಶ್, ನವೀನಕುಮಾರ್ ಹಾಜರಿದ್ದರು.

andolana

Recent Posts

ಓದುಗರ ಪತ್ರ: ಮಹಿಳಾ ಪೌರಕಾರ್ಮಿಕರಿಗೆ ರೇಷ್ಮೆ ಸೀರೆ ವಿತರಣೆ ಶ್ಲಾಘನೀಯ

ಮೈಸೂರು ದಸರಾ ನಿಮಿತ್ತ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಈ ಬಾರಿ ತಲಾ ಎರಡು ಬನಾರಸ್ ರೇಷ್ಮೆ…

5 hours ago

ಓದುಗರ ಪತ್ರ: ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಖಂಡನೀಯ

ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಸಂಸತ್ ಚಲೋ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಪ್ರಹಾರ…

5 hours ago

ಓದುಗರ ಪತ್ರ: ಸದ್ದಿಲ್ಲದೇ ನೀರಿನ ದರ ಏರಿಸಿದ ಪಾಲಿಕೆ

ಮೈಸೂರು ಮಹಾನಗರ ಪಾಲಿಕೆ ಕಳೆದ ತಿಂಗಳಿನಿಂದ ನಗರದ ನೀರು ಬಳಕೆ ಶುಲ್ಕವನ್ನು ಸದ್ದಿಲ್ಲದೇ ಏರಿಸಿದೆ. ಇದರ ಜೊತೆಗೆ ಒಳ ಚರಂಡಿ…

5 hours ago

ಆಧುನೀಕರಣದ ಭರದಲ್ಲಿ ಮೈಸೂರಿನ ಪ್ರಕೃತಿಗೆ ಧಕ್ಕೆ?

ಡಾ.ಎನ್.ಉಷಾ ಅಭಿವೃದ್ಧಿ- ಪರಂಪರೆ ಸಂರಕ್ಷಣೆ ಪರಸ್ಪರ ವಿರೋಧ ಆಗಬೇಕಿಲ್ಲ  ‘ಅರಮನೆಗಳ ನಗರ’ ಮತ್ತು ಕರ್ನಾಟಕದ ಸಾಂಸ್ಕೃತಿಕ ರಾಜ ಧಾನಿ ಎಂದು…

5 hours ago

ದಸರಾ ವೇಳೆಗೆ ಹುರಾ ಭಾಗದ ಕೆರೆಗಳಿಗೆ ನೀರು

ಎಸ್.ಎಸ್.ಭಟ್ ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾಯಣ ಅವರ ಸಂಕಲ್ಪ  ನಂಜನಗೂಡು: ತಾಲ್ಲೂಕಿನ ೨೬ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಹುರಾ…

5 hours ago