ಹನೂರು: ಮಕ್ಕಳ ವಿದ್ಯಾಭ್ಯಾಸ ಹಾಗೂ ಹೊಟ್ಟೆಪಾಡಿಗಾಗಿ ಒಂದು ಶೆಡ್ ಹಾಕಿಕೊಂಡು ಹೋಟೆಲ್ ನಡೆಸುತ್ತಿರುವ ನಮಗೆ ಆರ್‌ಟಿಐ ಕಾರ್ಯಕರ್ತ ಅಪ್ಪಾಜಿ ಕಿರುಕುಳ ನೀಡುತ್ತಿದ್ದಾರೆ ಎಂದು ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ನಿವಾಸಿ ತಾಂಡ ಶೆಟ್ಟಿ ಆರೋಪಿಸಿದ್ದಾರೆ.
ಪಿ.ಜಿ ಪಾಳ್ಯ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪಿಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ನಿವಾಸಿಯಾದ ನಾನು ಈ ಹಿಂದೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೆ ಆದರೆ ವಿದ್ಯುತ್ ಶಾಕ್‌ನಿಂದ ಗಾಯಗೊಂಡ ನಂತರ ಅತಿ ಭಾರದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ನಾಲ್ಕು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗು ಇರುವುದರಿಂದ ಜೀವನ ನಿರ್ವಹಣೆಗಾಗಿ ರಸ್ತೆ ಬದಿಯಲ್ಲಿ ಶೆಡ್ ಹಾಕಿಕೊಂಡು ಕಾಫಿ ತಿಂಡಿ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮಾಡಿ ಜೀವನ ಸಾಕುತ್ತಿದ್ದೇವೆ ಆದರೆ ಆರ್‌ಟಿಐ ಕಾರ್ಯಕರ್ತ ಅಪ್ಪಾಜಿ ನೀನು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಬೇಕಾದರೆ ಇಂತಿಷ್ಟು ಹಣ ಕೊಡಬೇಕು ಇಲ್ಲದಿದ್ದರೆ ನಿನ್ನ ವಿರುದ್ಧ ಅರಣ್ಯ ಇಲಾಖೆ ಪೊಲೀಸ್‌ನವರಿಗೆ ದೂರು ನೀಡಿ ತೆರವು ಮಾಡಿಸುತ್ತೇನೆ ಎಂದು ಕಿರುಕುಳ ನೀಡುತ್ತಿದ್ದಾರೆ. ಇದಲ್ಲದೆ ಬೇರೆಯವರ ಬಳಿ ಇಂತಿಷ್ಟು ಹಣ ಕೊಟ್ಟುಬಿಡಿ ಸುಮ್ಮನೆ ಎದುರಾಕಿಕೊಳ್ಳಬೇಡಿ ಎಂದು ಹೇಳಿ ಕಳುಹಿಸುತ್ತಿದ್ದಾರೆ ಇದರಿಂದ ನಮಗೆ ಜೀವನವೇ ಸಾಕಾಗಿ ಹೋಗಿದೆ ಮುಂದೆ ಇದೇ ರೀತಿ ತೊಂದರೆ ನೀಡಿದರೆ ಕುಟುಂಬ ಸಮೇತ ವಿಷ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಮ್ಮ ಸ್ಥಿತಿಯನ್ನು ಕಂಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಅವರು ಒಡೆಯರ್ ಪಾಳ್ಯ ಗ್ರಾಮದಲ್ಲಿ ಸಾಲ ಕೊಡಿಸಿ ಸಾಮಗ್ರಿಗಳನ್ನು ಕೊಡಿಸಿದ್ದಾರೆ. ಇನ್ನು ಪಬ್ಲಿಕ್ ಟಿವಿ ವ್ಯವಸ್ಥಾಪಕರಾದ ರಂಗನಾಥ್ ಅವರು ಸಹ ನಮಗೆ ಸಹಾಯ ಮಾಡಿದ್ದಾರೆ. ಆದರೆ ಆರ್ ಟಿ ಈ ಕಾರ್ಯಕರ್ತ ಅಪ್ಪಾಜಿ ಕಿರುಕುಳಕ್ಕೆ ಬೇಸತ್ತು ಹೋಗಿದ್ದೇವೆ, ಜೀವನದಲ್ಲಿ ಜಿಗುಪ್ಸೆ ಪ್ರಾರಂಭವಾಗಿದೆ. ನಾವು ಕಷ್ಟಪಟ್ಟು ಜೀವನ ನಡೆಸಲು ಈ ರೀತಿ ತೊಂದರೆ ಕೊಡುತ್ತಿದ್ದರೆ, ನಾವು ಬದುಕುವುದು ಹೇಗೆ? ಸಂಬಂಧಪಟ್ಟ ಜಿಲ್ಲಾಡಳಿತ ನಮಗೆ ಸೂಕ್ತ ರಕ್ಷಣೆ ಕೊಡಬೇಕು ಇಲ್ಲದಿದ್ದರೆ ಮುಂದೆ ಹಾಗೂ ಅನಾಹುತಗಳಿಗೆ ಅಪ್ಪಾಜಿಯೇ ನೇರ ಕಾರಣರಾಗುತ್ತಾರೆ ಎಂದು ಮಾಧ್ಯಮದವರ ಜೊತೆ ಅಳಲು ತೋಡಿಕೊಂಡಿದ್ದಾರೆ.
ತಾಂಡಾ ಶೆಟ್ಟಿ ಎಂಬುವರು ಹೋಟೆಲ್ ನಡೆಸುತ್ತಿರುವುದರಿಂದ ಯಾವುದೇ ತೊಂದರೆ ಇಲ್ಲ ಲೋಕೋಪಯೋಗಿ ರಸ್ತೆ ಒತ್ತುವರಿ ಮಾಡಿಕೊಂಡಿಲ್ಲ, ಅವರು ಜಮೀನಿನ ಬಳಿ ಹಾಕಿಕೊಂಡಿದ್ದಾರೆ, ಅವರಿಂದ ಯಾವುದೇ ತೊಂದರೆ ಇಲ್ಲ ತೊಂದರೆ ಇದ್ದಿದ್ದರೆ ನಾವೇ ಗ್ರಾಮ ಪಂಚಾಯಿತಿಗೆ ದೂರು ನೀಡುತ್ತಿದ್ದೆವು. ಆರ್ ಟಿ ಐ ಕಾರ್ಯಕರ್ತ ಅಪ್ಪಾಜಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಇವರ ವಿರುದ್ಧ ಪೊಲೀಸ ಇಲಾಖೆಯವರು ಕಡಿವಾಣ ಹಾಕಬೇಕು.
– ಕೃಷ್ಣಮೂರ್ತಿ, ಅಧ್ಯಕ್ಷರು ಹಾಲು ಉತ್ಪಾದಕರ ಸಹಕಾರ ಸಂಘ ಪಿ ಜಿ ಪಾಳ್ಯ
ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಬೆನ್ನಲ್ಲೇ ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮೈಸೂರಿನ…
ಕೊಪ್ಪಳ: ಐತಿಹಾಸಿಕ ಅಂಜನಾದ್ರಿಗೆ ಸಂಸದ ಯದುವೀರ್ ಒಡೆಯರ್ ಭೇಟಿ ನೀಡಿ ದೇವರ ದರ್ಶನ ಪಡೆದರು. ಹನುಮ ಹುಟ್ಟಿದ ನಾಡು ಎಂದು…
ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಬರೋಬ್ಬರಿ 7 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಲಿದ್ದಾರೆ. ಸೆಪ್ಟೆಂಬರ್ 12ರಂದು ದೆಹಲಿಗೆ…
ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…
ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…
ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಕಡ್ಡಾಯಗೊಳಿಸಿರುವುದು ತಾಂತ್ರಿಕವಾಗಿ ಉತ್ತಮ ಹೆಜ್ಜೆಯಾದರೂ, ವಾಸ್ತವದಲ್ಲಿ ಇದು ರೈತರಿಗೆ ಕಂಟಕವಾಗುತ್ತಿದೆ. ರಾಜ್ಯದಲ್ಲಿ ಶೇ.೮೦ಕ್ಕೂ…