ಚಾಮರಾಜನಗರ

ಚಾ.ನಗರ ಸನಿಹವೇ ಸುಳಿದಾಡುತ್ತಿರುವ ಹುಲಿರಾಯ!

ಚಾಮರಾಜನಗರ: ಕಾಡು ಪ್ರಾಣಿಗಳು ಈ ಭಾಗದಲ್ಲಿ ಊರು ಪ್ರವೇಶಿಸುವುದನ್ನು ಕೇಳಿದ್ದೇವೆ- ಕಂಡಿದ್ದೇವೆ. ಆದರೆ ಹುಲಿಯೊಂದು ಚಾಮರಾಜನಗರ ಜಿಲ್ಲಾ ಕೇಂದ್ರದ ಸನಿಹದಲ್ಲೇ ಮೇಲಿಂದ ಮೇಲೆ ಸುಳಿದಾಡುತ್ತಿದ್ದು ಸಹಜವಾಗಿಯೇ ಇದರಿಂದ ಜನತೆ ಭಯಭೀತರಾಗಿದ್ದಾರೆ.

ಚಾಮರಾಜನಗರ -ನಂಜನಗೂಡು ಮುಖ್ಯರಸ್ತೆಯಲ್ಲಿರುವ ಮಕಾವ್ ಹೋಟೆಲ್ ಹತ್ತಿರದ ಕಾಳನಹುಂಡಿ ರಸ್ತೆಯಲ್ಲಿ ಸಿಗುವ ಕಟ್ಟೇಪುರದಲ್ಲಿ ಹುಲಿ ಇತ್ತೀಚೆಗೆ ಕರುವನ್ನು ಕೊಂದು ತಿಂದಿತ್ತು.

ಚಾ.ನಗರ ಪ್ರವೇಶ ದ್ವಾರದಿಂದ ಸುಮಾರು 5 ಕಿ.ಮೀ ದೂರದ ಕಟ್ಟೇಪುರದಲ್ಲಿ ಚಾಮರಾಜನಗರದ ಎಸ್‌ಪಿ ಎಸ್ ಸಾಹುಕಾರ್ ಜಿಯಾವುಲ್ಲಾ ಷರೀಫ್ ಅವರ ತೋಟವಿದ್ದು ಅಲ್ಲಿ ಕಟ್ಟಲಾಗಿದ್ದ ಕರುವನ್ನು ಏ.2ರಂದು ತಿಂದಿತ್ತು.

ಅರಣ್ಯ ಇಲಾಖೆ ಡಿಆರ್‌ಎಫ್ಒ ಸುರೇಶ್, ಫಾರೆಸ್ಟರ್ ಶ್ವೇತಾದ್ರಿ ಇತರರು ಪರಿಶೀಲನೆ ನಡೆಸಿದಾಗ ಮಾರನೇ ದಿನ ಕರುವಿನ ಕಳೇಬರ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಹುಲಿಯ ಚಲನವಲನ ತಿಳಿಯಲು ಘಟನಾ ಸ್ಥಳದಲ್ಲಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿತ್ತು. ಸೆರೆಗೆ ಬೋನನ್ನೂ ಇಟ್ಟು ಅದರ ಒಳಗಡೆ ಮೇಕೆ ಮರಿಯನ್ನು ಕಟ್ಟಲಾಗಿದೆ.

ಮೇಕೆ ತಿನ್ನುವ ಆಸೆಯಿಂದ ಬಂದು ಬೋನಿಗೆ ಬೀಳಲೆಂದು ಹೀಗೆ ಮಾಡಲಾಗಿದೆ. ಆದರೆ, ಚಾಲಾಕಿ ಹುಲಿ ಬೋನಿನತ್ತ ಸುಳಿಯದೇ‌ ಅದರ ಹತ್ತಿರದಲ್ಲೇ ಮಂಗಳವಾರ (ಏ.8) ಮತ್ತೆ ನಡೆದು ಹೋಗಿರುವುದು, ಅದರ ಹೆಜ್ಜೆ ಗುರುತುಗಳು ಮೂಡಿರುವುದು ನೋಡಿ ಅಲ್ಲಿನ ತೋಟದ ಮನೆಗಳವರು ಆತಂಕಗೊಂಡಿದ್ದಾರೆ.

ಅರಣ್ಯ ಇಲಾಖೆಯವರು ಹೇಳುವ ಪ್ರಕಾರ ಕಟ್ಟೆ ಪುರದಲ್ಲಿ ಏ.2ರಂದು ಕರುವನ್ನು ಕೊಂದು ತಿಂದಿದ್ಧ ಹುಲಿಯೇ ಏ.6ರ ಭಾನುವಾರ ಅರಕಲವಾಡಿ ಬಳಿಯ ಲಿಂಗಣಾಪುರದಲ್ಲಿಯೂ ರೈತರೊಬ್ಬರ ಕರುವನ್ನು ಕೊಂದು ತಿಂದಿದೆ. ಹುಲಿ ಕರುಗಳ ಮೇಲೆ ದಾಳಿ ಮಾಡಿರುವ ಈ ಎರಡೂ ಗ್ರಾಮಗಳ ನಡುವಿನ ಅಂತರ ದೂರ ಇದೆಯಾದರೂ ಹುಲಿ ಈ ಪ್ರದೇಶವನ್ನು ತನ್ನ ಎಲ್ಲೆಯಾಗಿ ಮಾಡಿಕೊಂಡಿದೆ. ಅದು ಆಗಾಗ್ಗೆ ಸಂಚಾರ ಮಾಡುತ್ತಿರುತ್ತದೆ. ಜನರು ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ ಅರಣ್ಯ ಇಲಾಖೆಯವರು.

ಆಂದೋಲನ ಡೆಸ್ಕ್

Recent Posts

ಯುದ್ಧಕ್ಕೆ ದಿನಾಂಕ ಫಿಕ್ಸ್: ‘ವಿಜಯದಶಮಿ’ಗೆ ಸಮರ ಸಾರಿದ ಕೇಂದ್ರ ಸಚಿವ ಎಚ್‌ಡಿಕೆ

ಹಾಸನ: ಇಡೀ ದೇಶವೇ ಅಲ್ಲೋಲ, ಕಲ್ಲೋಲ ಆಗುವ ಸುದ್ದಿ ಕೊಡುತ್ತೇನೆ ಎಂಬ ಮಾತನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪುನರುಚ್ಛರಿಸಿದ್ದಾರೆ. ಈ…

12 hours ago

ಉಗ್ರ ಮಸೂದ್‌ ಅಜರ್‌ ಸುಳಿವು ಕೊಟ್ಟವರಿಗೆ 24 ಲಕ್ಷ ರೂ ಬಹುಮಾನ ಘೋಷಿಸಿದ ಪಾಕ್‌

ಇಸ್ಲಾಮಾಬಾದ್:‌ ಉಗ್ರ ಮಸೂದ್‌ ಅಜರ್‌ ಸುಳಿವು ಕೊಟ್ಟವರಿಗೆ 24 ಲಕ್ಷ ರೂ ಬಹುಮಾನ ನೀಡುವುದಾಗಿ ಪಾಕಿಸ್ತಾನ ಘೋಷಣೆ ಮಾಡಿದೆ. ದೇಶದ…

12 hours ago

ಸೆಪ್ಟೆಂಬರ್ ತಿಂಗಳಲ್ಲೇ ಕರ್ನಾಟಕದಲ್ಲಿ ಬಿರು ಬೇಸಿಗೆಯ ವಾತಾವರಣ

ಬೆಂಗಳೂರು: ಮುಂಗಾರು ಮಳೆಯ ಅಬ್ಬರ ಕಾಣಬೇಕಿದ್ದ ಸೆಪ್ಟೆಂಬರ್ ತಿಂಗಳಲ್ಲೇ ಕರ್ನಾಟಕದಲ್ಲಿ ಬಿರು ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ…

14 hours ago

ಅದ್ದೂರಿ ಶ್ರೀರಂಗಪಟ್ಟಣ ದಸರಾ ಬದಲು ಸಾಂಪ್ರದಾಯಿಕ ಆಚರಣೆ: ಸಚಿವ ಎನ್. ಚಲುವರಾಯಸ್ವಾಮಿ

ಮಂಡ್ಯ: ಮೈಸೂರು ದಸರಾಗಿಂತಲೂ ಪುರಾತನವಾದ ಶ್ರೀರಂಗಪಟ್ಟಣ ದಸರಾವನ್ನು ಈ ಬಾರಿ ಬರಗಾಲದ ಹಿನ್ನೆಲೆಯಲ್ಲಿ ಅದ್ದೂರಿತನದ ಬದಲು ಸಾಂಪ್ರದಾಯಿಕವಾಗಿ ಆಚರಿಸಲು ತೀರ್ಮಾನಿಸಲಾಗಿದೆ…

14 hours ago

ಹನೂರು: ಬಿಸಿಯೂಟಕ್ಕೂ ನೀರಿಲ್ಲ – ಖಾಲಿ ಬಿಂದಿಗೆ ಹಿಡಿದು ವಿದ್ಯಾರ್ಥಿಗಳ ಪ್ರತಿಭಟನೆ

ಹನೂರು: ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂದನಪಾಳ್ಯ ಗ್ರಾಮದ ಸೆಂಟ್ ಆಂಥೋನಿ ಶಾಲೆಯಲ್ಲಿ ಕಳೆದ ಆರು ತಿಂಗಳಿನಿಂದ ಕುಡಿಯುವ…

14 hours ago

ಮದ್ದೂರಿನಲ್ಲಿ ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ: ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವು

ಮಂಡ್ಯ: ಬೈಕ್‌ಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ…

18 hours ago