ಜಿಲ್ಲೆಗಳು

ಅಕ್ರಮ ಸಕ್ರಮ ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಿ : ಶಾಸಕ ಆರ್ ನರೇಂದ್ರ

ಹನೂರು : ಅಕ್ರಮ ಸಕ್ರಮದಡಿ ಅರ್ಜಿ ಸಲ್ಲಿಸಿರುವ ಕಡತಗಳನ್ನು 15 ದಿನಗಳೊಳಗೆ ವಿಲೇವಾರಿ ಮಾಡಬೇಕೆಂದು ಶಾಸಕ ಆರ್ ನರೇಂದ್ರ ತಹಸೀಲ್ದಾರ್ ಆನಂದಯ್ಯ ರವರಿಗೆ ಸೂಚಿಸಿದರು. ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ಕರೆಯಲಾಗಿದ್ದ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಅಕ್ರಮ ಸಕ್ರಮದಡಿಯಲ್ಲಿ ಇದುವರೆಗೆ 3998 ಅರ್ಜಿಗಳು ಸಲ್ಲಿಕೆಯಾಗಿದ್ದು,311ಅರ್ಜಿಗಳು ತಿರಸ್ಕಾರಗೊಂಡಿದೆ.ಉಳಿಕೆ 3687 ಅರ್ಜಿಗಳನ್ನು ಸರ್ವೆ ಮಾಡಿಸಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಶೀಘ್ರದಲ್ಲಿ ವಿಲೇವಾರಿ ಮಾಡಿ ಅರ್ಹ ಫಲಾನುಭವಿಗೆ ಸಾಗುವಳಿ ಚೀಟಿ ನೀಡಬೇಕು ಎಂದು ತಿಳಿಸಿದರು.

ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಣ್ಣ ನಗರ ಗ್ರಾಮದಲ್ಲಿ ರೈತರಿಗೆ ನೀಡಲಾಗಿದ್ದ ಸರ್ವೆ ನಂಬರ್ ಬದಲಾಗಿ ಇತರೆ ಸರ್ವೇ ನಂಬರ್ ನಲ್ಲಿ ಅನುಭವ ಇರುವುದರಿಂದ ತೊಂದರೆಯಾಗಿತ್ತು.ಇದಲ್ಲದೆ ಹೂಗ್ಯಂ ಗ್ರಾಮದಲ್ಲಿನ 2 ಸಾವಿರ ಎಕರೆ ಪೈಕಿ ಇನ್ 211 ಎಕರೆಯನ್ನು ರೈತರಿಗೆ ಮಂಜೂರು ಮಾಡಲಾಗಿದೆ. ಇಲ್ಲಿಯೂ ಸಹ ಮುಂಜೂರಾಗಿರುವ ನಿವೇಶನ ಬದಲು ಇತರೆ ಸರ್ವೇ ನಂಬರ್ ನಲ್ಲಿ ಅನುಭವ ಇರುವುದರಿಂದ ಇದೂ ಸಹ ತಿದ್ದುಪಡಿ ಮಾಡಿ ಅನುಭವದಲ್ಲಿರುವವರೆಗೆ ಆರ್ ಟಿಸಿ ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಹೊಸ ಕಂದಾಯ ಗ್ರಾಮಗಳಾಗಿ ಪರಿವರ್ತನೆ : ತಾಲ್ಲೂಕಿನ ನಾಗಣ್ಣನಗರ, ಕೆಂಪಯ್ಯನಟ್ಟಿ, ಭೈರನತ್ತ,ನಾಗನತ್ತ ದೊಡ್ಡಮಾಲಾಪುರ, ಚೆನ್ನೂರು,ಮಂಚಾಪುರ, ವಡ್ಡರದೊಡ್ಡಿ, ಹೊಸಳ್ಳಿ, ಕೆ ಗುಂಡಾಪುರ, ಮಂಚಾಪುರ, ಬಿ ಗುಂಡಾಪುರ, ವಡ್ಡರದೊಡ್ಡಿ, ನಾಲ್ ರೋಡ್, ಮಲ್ಲಯನಪುರ ಚಂಗದಾರಹಳ್ಳಿ ಅಂಡೆ ಕುರುಬರದೊಡ್ಡಿ, ಬೋರೆದೊಡ್ಡಿ, ಕೂಡ್ಲೂರು, ನೆಲ್ಲೂರು, ಮಾರಳ್ಳಿ ಗ್ರಾಮಗಳನ್ನು ಹೊಸ ಕಂದಾಯ ಗ್ರಾಮವನ್ನಾಗಿ ಮಾಡಲು ಈಗಾಗಲೇ ಸೂಚನೆ ಹೊರಡಿಸಲಾಗಿದೆ ಎಂದು ತಹಸೀಲ್ದಾರ್ ಆನಂದಯ್ಯ ತಿಳಿಸಿದರು.

ಸ್ಮಶಾನ ಇಲ್ಲದ ಗ್ರಾಮಗಳಿಗೆ ಸ್ಮಶಾನ ಕಲ್ಪಿಸಿ: ತಾಲ್ಲೂಕಿನ ವಿವಿಧ ಗ್ರಾಮಗಳಾದ ಆರ್ ಎಸ್ ದೊಡ್ಡಿ, ದೊಡ್ಡಾಣೆ, ಕೊಕ್ಕಬರೆ, ತೋಕೆರೆ,, ವಡ್ಡರದೊಡ್ಡಿ, ಹುತ್ತೂರು, ಅಂಬಿಕಾಪುರ, ನಾಗಣ್ಣನಗರ,, ಪುದುರಾಮಾಪುರ,, ದೊಮ್ಮನಗದ್ದೆ, ಸತ್ತಿಮಂಗಲ, ಅರ್ಜುನ ದೊಡ್ಡಿ, ಗೊಲ್ಲರದಿಂಬ, ಕೆ ಗುಂಡಾಪುರ ಮಾರಳ್ಳಿ, ಮಂಚಾಪುರ, ಪಚ್ಚೆದೊಡ್ಡಿ, ಬಿ ಜಿ ದೊಡ್ಡಿ ವಿಎಸ್ ದೊಡ್ಡಿ, ಮಾವತ್ತೂರು, ಉದ್ದಟ್ಟಿ, ಜೀರಿಗೆಗದ್ದೆ ಗ್ರಾಮಗಳಲ್ಲಿ ಸ್ಮಶಾನ ಇಲ್ಲದಿರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳಿಂದ ವರದಿ ಪಡೆಯಲಾಗಿದ್ದು ಸರ್ಕಾರಿ ಜಮೀನು ಇರುವ ಕಡೆ ನಿವೇಶನ ಗುರುತಿಸಲಾಗಿದೆ.ತಕ್ಷಣ ಸ್ಮಶಾನ ಇಲ್ಲದಿರುವ ಗ್ರಾಮಗಳಿಗೆ ಸ್ಮಶಾನ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ಇಲ್ಲ : ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ 4ವರ್ಷಗಳಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ,ಮೋಟಾರ್ ದುರಸ್ತಿಗೊಂಡರೆ ತಕ್ಷಣವೇ ಪಿಡಿಒಗಳು ಕ್ರಮಕೈಗೊಳ್ಳಬೇಕು ಎಂದು ಇಒ ಶ್ರೀನಿವಾಸ್ ರವರಿಗೆ ತಿಳಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಆನಂದಯ್ಯ,ಗ್ರೇಡ್-2 ತಹಸೀಲ್ದಾರ್ ಧನಂಜಯ, ಉಪ ತಹಸೀಲ್ದಾರ್ ಗಳಾದ ಉಮಾ, ಸುರೇಖಾ, ಕಂದಾಯ ನಿರೀಕ್ಷಕರು ಗಳಾದ ಮಹದೇವಸ್ವಾಮಿ, ಬಿ ಪಿ ಮಾದೇಶ್, ಶಿವಕುಮಾರ್ ಗ್ರಾಮ ಲೆಕ್ಕಿಗರುಗಳಾದ ಶೇಷಣ್ಣ, ರಾಜು, ವಿನೋದ್, ಮಹದೇವ್ ಪ್ರಸಾದ್,ಕಾರ್ತಿಕ್,ಪುನೀತ್,ಮಾರುತಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

andolanait

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

10 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

12 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

13 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

15 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

16 hours ago