ಜಿಲ್ಲೆಗಳು

ತಂಗುದಾಣದತ್ತ ಬಾರದ ಬಸ್‌ಗಳು

ಅವ್ಯವಸ್ಥೆಯ ಕಿರಿಕಿರಿಯಿಂದ ತಂಗುದಾಣದತ್ತ ಸುಳಿಯದ ಪ್ರಯಾಣಿಕರು

ಎಚ್.ಎಸ್.ದಿನೇಶ್ ಕುಮಾರ್

ಮೈಸೂರು: ಮುರಿದು ಬೀಳುವ ಹಂತದಲ್ಲಿರುವ ಚಾವಣಿ… ಕುಡುಕರ ಹಾವಳಿ… ರಾತ್ರಿ ವೇಳೆ ಕಗ್ಗತ್ತಲು… ಫುಟ್‌ಪಾತ್ ವ್ಯಾಪಾರಿಗಳ ತಾಣ… ಮೋರಿಯ ಮೇಲೆ ತಂಗುದಾಣ… ಇದು ನಗರದ ಬಸ್ ತಂಗುದಾಣಗಳ ಸ್ಥಿತಿ.

ಬಸ್‌ನಲ್ಲಿ ಪ್ರಾಂಣಿಸುವವರ ಅನುಕೂಲಕ್ಕಾಗಿ ಸರ್ಕಾರ, ಜಿಲ್ಲಾಡಳಿತ, ಮುಡಾ ಹಾಗೂ ನಗರಪಾಲಿಕೆ ಅನುದಾನದಲ್ಲಿ ಬಸ್ ತಂಗುದಾಣಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಅದರ ನಿರ್ವಹಣೆಯ ಹೊಣೆಯನ್ನು ಮಾತ್ರ ಯಾರೊಬ್ಬರೂ ಹೊರಲು ಸಿದ್ಧರಿಲ್ಲ.

ಗಾಯತ್ರಿಪುರಂ, ಡಾ.ರಾಜಕುಮಾರ್ ರಸ್ತೆ, ಎನ್.ಆರ್.ಮೊಹಲ್ಲಾ, ರಾಜೀವ್ ನಗರ ಹೀಗೆ ವಿವಿಧ ಬಡಾವಣೆಗಳಲ್ಲಿ ನಿರ್ಮಾಣ ಮಾಡಲಾಗಿರುವ ತಂಗುದಾಣಗಳು ಇಂದು ಸಮಸ್ಯೆಗಳ ಆಗರವಾಗಿವೆ.

ಕುಡುಕರ ತಾಣ: ನಗರದ ಗಾಯತ್ರಿಪುರಂ ಬಳಿ ಸಂದೇಶ್ ನಾಗರಾಜ್ ಅವರು ವಿಧಾನಪರಿಷತ್ ಸದಸ್ಯರಾಗಿದ್ದಾಗ ನೀಡಿದ್ದ ಅನುದಾನದಲ್ಲಿ ನಿರ್ಮಿಸಲಾಗಿರುವ ತಂಗುದಾಣವಿದೆ. ಬೆಳಗಿನ ಹೊತ್ತು ಮಾತ್ರ ಈ ತಂಗುದಾಣ ಪ್ರಯೋಜನಕ್ಕೆ ಬರುತ್ತದೆ.

ತಂಗುದಾಣದಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ದೀಪಗಳನ್ನು ಕಿಡಿಗೇಡಿಗಳು ಕಿತ್ತುಹಾಕಿದ್ದಾರೆ. ಹೀಗಾಗಿ ಕತ್ತಲಾಗುತ್ತಿದ್ದಂತೆ ಪ್ರಯಾಣಿಕರು ಈ ತಂಗುದಾಣದತ್ತ ಸುಳಿಯುವುದಿಲ್ಲ. ಕಾರಣ ಕತ್ತಲೆಯನ್ನೇ ಬಂಡವಾಳ ಮಾಡಿಕೊಂಡ ಮದ್ಯ ವ್ಯಸನಿಗಳು ಬಿಯರ್ ಬಾಟಲಿನೊಂದಿಗೆ ಅಲ್ಲಿ ಹಾಜರಾಗುತ್ತಾರೆ. ಗಂಟೆಗಟ್ಟಲೆ ಕುಡಿಯುತ್ತಾ ಕೂರುವ ಅವರು ನಂತರ ಖಾಲಿ ಬಾಟಲಿಗಳನ್ನು ಅಲ್ಲಿಯೇ ಬಿಟ್ಟು ತೆರಳುತ್ತಾರೆ.

ಇನ್ನು ಡಾ.ರಾಜಕುಮಾರ್ ರಸ್ತೆಯಲ್ಲಿರುವ ಬಸ್ ತಂಗುದಾಣವನ್ನು ಫುಟ್‌ಪಾತ್ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ. ನೆರಳಿರುವ ಕಾರಣ ಅವರು ಸಾರ್ವಜನಿಕರಿಗೆ ಮೀಸಲಾಗಿರುವ ತಂಗುದಾಣವನ್ನು ವ್ಯಾಪಾರದ ಸ್ಥಳವನ್ನಾಗಿಸಿಕೊಂಡಿದ್ದಾರೆ. ಜೊತೆಗೆ ಅಲ್ಲಿಯೂ ವಿದ್ಯುತ್ ದೀಪಗಳಿಲ್ಲ.
ಇನ್ನು ಫೌಂಟೇನ್ ವೃತ್ತದ ಬಳಿ ನಿರ್ಮಿಸಲಾಗಿರುವ ಬಸ್ ತಂಗುದಾಣಕ್ಕೆ ಪ್ರಾಂಣಿಕರು ಕಾಲಿಡುವ ಪರಿಸ್ಥಿತಿ ಇಲ್ಲ. ಏಕೆಂದರೆ, ಅಲ್ಲಿ ಜನರು ಕುಳಿತುಕೊಳ್ಳಲು ಹಾಕಿಸಿದ್ದ ಹಾಸುಗಳು ನಾಪತ್ತೆಾಂಗಿವೆ. ವಿದ್ಯುತ್ ದೀಪಗಳನ್ನು ಕಿಡಿಗೇಡಿಗಳು ಕದ್ದೊಯ್ದಿದ್ದಾರೆ.

ಇಡೀ ಬಸ್ ತಂಗುದಾಣ ತೆರೆದ ಮೋರಿಯ ಮೇಲೆ ನಿಂತಿದೆ. ಮೈಸೂರು-ಬೆಂಗಳೂರು ಮುಖ್ಯ ರಸ್ತೆಯಲ್ಲಿರುವ ಈ ತಂಗುದಾಣವನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎಂಬ ಕನಿಷ್ಠ ಜ್ಞಾನವೂ ಸಂಬಂಧಿಸಿದವರಿಗೆ ಇಲ್ಲ ಎಂಬುದನ್ನು ಈ ಬಸ್ ತಂಗುದಾಣ ತೋರಿಸುತ್ತದೆ.

ಉದಯಗಿರಿ, ಶಾಂತಿನಗರ, ರಾಜೀವ್ ನಗರ, ರಾಜೇಂದ್ರ ನಗರದ ವಿವಿಧೆಡೆ ಬಸ್ ತಂಗುದಾಣಗಳು ಸುಸ್ಥಿತಿಯಲಿದ್ದರೂ ವಿದ್ಯುತ್ ದೀಪದ ಸಮಸ್ಯೆ ಮಾತ್ರ ಬಹುತೇಕ ತಂಗುದಾಣಗಳಲ್ಲಿ ಎದ್ದು ಕಾಣುತ್ತದೆ. ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಬಸ್ ಪ್ರಾಂಣಿಕರ ತಂಗುದಾಣಗಳನ್ನು ಸುಸ್ಥಿತಿಯಲ್ಲಿಡಲು ಕ್ರಮ ವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

‘ಆಂದೋಲನ’ದ ತಂಗುದಾಣ ಗಟ್ಟಿಮುಟ್ಟು

ನಗರದ ಶಿವಾಜಿ ರಸ್ತೆಯಲ್ಲಿ ಕಳೆದ ೧೫ ವರ್ಷಗಳ ಹಿಂದೆ ‘ಆಂದೋಲನ’ ದಿನಪತ್ರಿಕೆ ವತಿಯಿಂದ ನಿರ್ಮಿಸಲಾಗಿರುವ ಬಸ್ ತಂಗುದಾಣ ಇಂದಿಗೂ ಸುಸ್ಥಿತಿಯಲ್ಲಿದೆ. ಪ್ರಯಾಣಿಕರ ತಂಗುದಾಣದ ಗೋಡೆ ಎಲ್ಲಿಯೂ ಬಿರುಕುಬಿಟ್ಟಿಲ್ಲ. ಪಕ್ಕದಲ್ಲಿಯೇ ಮತ್ತೊಂದು ತಂಗುದಾಣ ಇದ್ದರೂ ಪ್ರಯಾಣಿಕರು ‘ಆಂದೋಲನ’ ತಂಗುದಾಣವನ್ನೇ ಹೆಚ್ಚು ಬಳಸುತ್ತಿರುವುದು ಕಂಡುಬಂತು.

ಡಾ.ರಾಜಕುಮಾರ್ ರಸ್ತೆ ಅಗಲೀಕರಣದ ನಂತರ ಈ ಪ್ರಯಾಣಿಕರ ತಂಗುದಾಣವನ್ನು ನಿರ್ಲಕ್ಷ್ಯ ಮಾಡಲಾಯಿತು. ಅಗಲೀಕರಣದ ನಂತರ ತಂಗುದಾಣವನ್ನು ಸುಸ್ಥಿತಿಗೆ ತರಬೇಕಿತ್ತು. ಆದರೂ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಹೀಗಾಗಿ ಇದು ಸಾರ್ವಜನಿಕರ ಬಳಕೆಯಲ್ಲಿ ಇಲ್ಲ.-ನಯೀಂ, ಸ್ಥಳೀಯ ನಿವಾಸಿ.

ಹಲವಾರು ವರ್ಷಗಳಿಂದ ಈ ತಂಗುದಾಣ ಬಳಕೆಯಲ್ಲಿ ಇಲ್ಲ. ದಾರಿ ಹೋಕರು ಅಲ್ಲಿದ್ದ ವಿದ್ಯುತ್ ದೀಪಗಳು ಹಾಗೂ ಸಲಕರಣೆಗಳನ್ನು ಕದ್ದೊಯ್ದಿದ್ದಾರೆ. ಮೊದಲಿಗೆ ಇಲ್ಲಿ ಹತ್ತಾರು ಜನರು ಬಸ್‌ಗಾಗಿ ಕಾಯುತ್ತಿದ್ದರು. ಇದೀಗ ಯಾರೂ ಹೋಗದಂತಹ ವಾತಾವರಣ ಸೃಷ್ಟಿಯಾಗಿದೆ.-ಆದಿಲ್ ಪಾಷಾ, ಸ್ಥಳೀಯ ನಿವಾಸಿ.

ವ್ಯಾಪಾರಸ್ಥರು ಬೆಳಿಗ್ಗೆಯಿಂದಲೇ ಇಲ್ಲಿ ಬಂದು ಕುಳಿತುಕೊಳ್ಳುವುದರಿಂದ ಪ್ರಯಾಣಿಕರು ತಂಗುದಾಣದತ್ತ ಬರುವುದಿಲ್ಲ. ಬೀಡಿ, ಸಿಗರೇಟು ಸೇದುವವರಿಗೆ ಇದು ತಂಗುದಾಣವಾಗಿದೆ. ಸುತ್ತಲೂ ರೈಲಿಂಗ್ಸ್ ಹಾಕಿಸಿ ವಿದ್ಯುತ್ ದೀಪಗಳನ್ನು ಅಳವಡಿಸಿದಲ್ಲಿ ಜನರಿಗೆ ಅನುಕೂಲವಾಗುತ್ತದೆ.
-ಬಾಲಕೃಷ್ಣ ಸಂಗಾಪುರ, ಸ್ಥಳೀಯ ವಿನಾಸಿ.

andolana

Recent Posts

ಬಂಡೀಪುರ, ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭ : ಸಿಎಂ

ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…

8 hours ago

ಜ.5, 6ರಂದು ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸ ; ತವರಲ್ಲಿ ಸಂಭ್ರಮ ಸಾಧ್ಯತೆ?

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…

8 hours ago

ಜ.4ರಂದು ʼಚಾ.ಬೆಟ್ಟಕ್ಕೆ ನಡಿಗೆʼ ಜಾಗೃತಿ ಜಾಥ ; ಬೆಂಬಲಿಸಲು ಮನವಿ

ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…

8 hours ago

ದೇಶದ ಸ್ವಚ್ಛ ನಗರ ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆಯಿಂದ 11 ಮಂದಿ ಸಾವು!

ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…

9 hours ago

ಬಳ್ಳಾರಿ ಘರ್ಷಣೆ | ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ ; ಬಿವೈವಿ ಆಗ್ರಹ

ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…

11 hours ago

ಬಳ್ಳಾರಿ ಘರ್ಷಣೆ | ಕೈ ಕಾರ್ಯಕರ್ತ ಸಾವು, ಘಟನೆ ಬಗ್ಗೆ ಸಿಎಂ ಹೇಳಿದ್ದೇನು?

ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ  ಬ್ಯಾನರ್‌ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್‌ ಆಗಿ…

12 hours ago