ಜಿಲ್ಲೆಗಳು

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ : ಕಾಡುಪ್ರಾಣಿಗಳ ದಾಳಿ ತಡೆಗೆ ಕ್ಷಿಪ್ರ ಕಾರ್ಯಪಡೆ

* ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕ್ರಮ
* ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಮುನ್ನೇಚ್ಚರಿಕೆ

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟ ಆರ್‌ಟಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕ್ಷಿಪ್ರ ಕಾರ್ಯಾಪಡೆ ರಚಿಸಿ ನಿಯೋಜಿಸಲಾಗಿದೆ.
ಸಂರಕ್ಷಿತಾರಣ್ಯದ ಅಂಚಿನಲ್ಲಿ ರೈತರು ಬೆಳೆದಿರುವ ಕಬ್ಬು, ಬಾಳೆ, ಭತ್ತ, ರಾಗಿ, ಜೋಳ ಮುಂತಾದ ಬೆಳೆಗಳು ಕಟಾವಿಗೆ ಬಂದಿವೆ. ಬೆಳೆಗಳಿಂದ ಕಾಡು ಪ್ರಾಣಿಗಳು ಆಕರ್ಷಿತವಾಗಿ ಕಾಡಿನಿಂದ ಹೊರಗೆ ಬರುವುದನ್ನು ತಡೆಗಟ್ಟಲು, ಬೆಳೆ ಹಾನಿ ಆಗದಂತೆ ತಡೆಯುವುದು ಕಾರ್ಯಪಡೆಯ ಉದ್ದೇಶವಾಗಿದೆ.
ಕಾಡಂಚಿನ ಗ್ರಾಮಗಳ ಜನರಿಗೆ ಕಾರ್ಯಪಡೆ ಸಿಬ್ಬಂದಿ ಈಗಾಗಲೇ ಕರಪತ್ರಗಳನ್ನು ಹಂಚಿಕೆ ಮಾಡಿ ಅರಿವು ಮೂಡಿಸುವ ಕಾರ್ಯ ಕೈಗೊಂಡಿದೆ. ಅಲ್ಲದೆ ಅರಣ್ಯ ಸಹಾಯವಾಣಿ ೧೯೨೬ಕ್ಕೆ ಕರೆ ಮಾಡಿ ಸಂಪರ್ಕಿಸಿ ಎಂದು ಮನವರಿಕೆ ಮಾಡುತ್ತಿದ್ದಾರೆ.
ಕಾಡಾನೆ, ಹುಲಿ, ಚಿರತೆ, ಕರಡಿಗÀಳು ಜನವಸತಿ ಪ್ರದೇಶದಲ್ಲಿ ಕಂಡು ಬಂದಾಗ ತುರ್ತಾಗಿ ಹತ್ತಿರದ ಅರಣ್ಯ ಇಲಾಖೆಯ ಕಚೇರಿಗೆ ಮಾಹಿತಿ ನೀಡಬೇಕು.
ಕಾಡಾನೆಗಳು ಜನವಸತಿ ಪ್ರದೇಶದಲ್ಲಿ ಕಂಡಾಗ ಹೆಚ್ಚು ಜನ ಸೇರಿದಲ್ಲಿ ಆನೆಗಳು ಗಾಬರಿಗೊಂಡು ತೊಂದರೆ ಮಾಡುವ ಸಂಭವವಿರುತ್ತದೆ. ಅನಾವಶ್ಯಕವಾಗಿ ಕಾಡಾನೆಗಳ ಸುತ್ತ ಜನ ಗುಂಪು ಸೇರಬಾರದು. ವನ್ಯಪ್ರಾಣಿಗಳಿಂದ ಜನರು ಆದಷ್ಟು ದೂರವಿರಬೇಕು.
ವನ್ಯಪ್ರಾಣಿಗಳಿಗೆ ತೊಂದರೆಯಾಗುವ ಪಟಾಕಿ ಸಿಡಿಸುವುದು, ಗುಂಡು ಹಾರಿಸುವುದು, ಬೆಂಕಿ
ಜ್ವಾಲೆ ಎಸೆಯುವುದು, ಕಲ್ಲುಗಳನ್ನು ಎಸೆಯುವಂತಹ ಯಾವುದೇ ವರ್ತನೆಗಳನ್ನು ಜನರು ಮಾಡಬಾರದು ಎಂದು ಕರಪತ್ರದಲ್ಲಿ ಮುದ್ರಿಸಲಾಗಿದೆ.
ಈ ಸಂಬAಧ ಭಿತ್ತಿಪತ್ರಗಳನ್ನು ಅರಣ್ಯದ ರಸ್ತೆಗಳಲ್ಲಿ ಹೆಚ್ಚು ಜನರು ಓಡಾಡುವ ಸ್ಥಳಗಳಲ್ಲಿ ಅಂಟಿಸಲಾಗಿದೆ. ಸಂರಕ್ಷಿತಾರಣ್ಯದ ೬ ವಲಯಗಳ ಅಧಿಕಾರಿಗಳ ಮೊ.ಸಂಖ್ಯೆಗಳನ್ನು ನೀಡಲಾಗಿದೆ.

ಅರಣ್ಯಾಧಿಕಾರಿಗಳ ಸಂಪರ್ಕ ಸಂಖ್ಯೆ

ಚಾ.ನಗರ ಪ್ರಾದೇಶಿಕ ವಲಯ : ಉಪ ವಲಯ ಅರಣ್ಯಾಧಿಕಾರಿ ಆರ್. ಚಂದ್ರಕುಮಾರ್ (೯೪೫೬೦೩೭೯೪೪), ಉಪ ವಲಯ ಅರಣ್ಯಾಧಿಕಾರಿ ಸಿ. ಹರ್ಷ (೮೧೪೭೫೮೩೬೪೫), ಉಪ ವಲಯ ಅರಣ್ಯಾಧಿಕಾರಿ ಅಮರನಾಥ್ (೯೪೮೩೯೦೭೭೯೫)
ಕೊಳೇಗಾಲ ವಲಯ : ಗುಂಡಾಲ್ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸಿ. ಪ್ರಭುಸ್ವಾಮಿ ಮೊ.ಸಂ ೯೭೩೧೦೨೫೬೫೭, ಅರೇಪಾಳ್ಯ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಎಂ. ಮಹೇಶ ಮೊ.ಸಂ ೯೦೦೮೮೭೭೪೯೨
ಬೈಲೂರು ವಲಯ : ಉಪ ವಲಯ ಅರಣ್ಯಾಧಿಕಾರಿ ಎಂ. ರವಿಕುಮಾರ್ (೮೬೬೦೩೫೧೪೦೫), ಉಪ ವಲಯ ಅರಣ್ಯಾಧಿಕಾರಿ ಎನ್. ಗಿರೀಶ್ (೮೧೦೫೪೬೨೧೫೦)
ಕೆ.ಗುಡಿ ವಲಯ : ಉಪ ವಲಯ ಅರಣ್ಯಾಧಿಕಾರಿ ಸೈಯದ್ ಇಕ್ರಂಪಾಷಾ (೯೯೦೧೨೩೬೨೫೩), ಉಪ ವಲಯ ಅರಣ್ಯಾಧಿಕಾರಿ ಕೆ. ಮಂಜುನಾಥ (೮೧೪೭೫೮೩೬೪೫), ಉಪ ವಲಯ ಅರಣ್ಯಾಧಿಕಾರಿ ಸಿ. ಸದಾಶಿವಂ (೯೪೮೩೯೦೭೭೯೫).
ಪುಣಜನೂರು ವಲಯ : ಬೂದಿಪಡಗ ಶಾಖೆಯ ಉಪವಲಯ ಅರಣ್ಯಾಧಿಕಾರಿ ಕೃಷ್ಣಮೂರ್ತಿ (೮೯೪೫೯೮೯೯೭೩)
ಯಳಂದೂರು ವಲಯ : ಗುಂಬಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಪಿ.ರಮೇಶ (೯೯೦೦೮೮೮೩೧೩), ಪುರಾಣಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಪುನೀತ್ (೯೯೪೫೧೫೪೫೮೪),

andolanait

Recent Posts

ಓದುಗರ ಪತ್ರ: ಮಹಿಳಾ ಪೌರಕಾರ್ಮಿಕರಿಗೆ ರೇಷ್ಮೆ ಸೀರೆ ವಿತರಣೆ ಶ್ಲಾಘನೀಯ

ಮೈಸೂರು ದಸರಾ ನಿಮಿತ್ತ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಈ ಬಾರಿ ತಲಾ ಎರಡು ಬನಾರಸ್ ರೇಷ್ಮೆ…

2 hours ago

ಓದುಗರ ಪತ್ರ: ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಖಂಡನೀಯ

ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಸಂಸತ್ ಚಲೋ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಪ್ರಹಾರ…

2 hours ago

ಓದುಗರ ಪತ್ರ: ಸದ್ದಿಲ್ಲದೇ ನೀರಿನ ದರ ಏರಿಸಿದ ಪಾಲಿಕೆ

ಮೈಸೂರು ಮಹಾನಗರ ಪಾಲಿಕೆ ಕಳೆದ ತಿಂಗಳಿನಿಂದ ನಗರದ ನೀರು ಬಳಕೆ ಶುಲ್ಕವನ್ನು ಸದ್ದಿಲ್ಲದೇ ಏರಿಸಿದೆ. ಇದರ ಜೊತೆಗೆ ಒಳ ಚರಂಡಿ…

2 hours ago

ಆಧುನೀಕರಣದ ಭರದಲ್ಲಿ ಮೈಸೂರಿನ ಪ್ರಕೃತಿಗೆ ಧಕ್ಕೆ?

ಡಾ.ಎನ್.ಉಷಾ ಅಭಿವೃದ್ಧಿ- ಪರಂಪರೆ ಸಂರಕ್ಷಣೆ ಪರಸ್ಪರ ವಿರೋಧ ಆಗಬೇಕಿಲ್ಲ  ‘ಅರಮನೆಗಳ ನಗರ’ ಮತ್ತು ಕರ್ನಾಟಕದ ಸಾಂಸ್ಕೃತಿಕ ರಾಜ ಧಾನಿ ಎಂದು…

2 hours ago

ದಸರಾ ವೇಳೆಗೆ ಹುರಾ ಭಾಗದ ಕೆರೆಗಳಿಗೆ ನೀರು

ಎಸ್.ಎಸ್.ಭಟ್ ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾಯಣ ಅವರ ಸಂಕಲ್ಪ  ನಂಜನಗೂಡು: ತಾಲ್ಲೂಕಿನ ೨೬ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಹುರಾ…

2 hours ago