ಮೈಸೂರು: ರಾಜ ಕುಟುಂಬದ ಅನುಮತಿ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಚಾಮುಂಡಿಬೆಟ್ಟದ ದೇವಿಕೆರೆಗೆ ಕಾಯಕಲ್ಪ ನೀಡುವ ಪ್ರಯತ್ನ ಶುರುವಾಗಿ ಒಂದು ತಿಂಗಳ ಬಳಿಕ ನಿರ್ಮಾಣ ಕಾರ್ಯಕ್ಕೆ ತಡೆ ಉಂಟಾಗಿದೆ.
ರಾಜವಂಶಸ್ಥರ ಅನುಮತಿ ಪಡೆದಿಲ್ಲ ಎಂದು ಕುಟುಂಬದವರು ತಮ್ಮ ವಕೀಲರ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮತ್ತೊಂದೆಡೆ ಬೆಟ್ಟದ ಅಭಿವೃದ್ಧಿ ಯನ್ನು ವಿರೋಧಿಸಿ ‘ಚಾಮುಂಡಿ ಬೆಟ್ಟ ಉಳಿಸಿ’ ಸಮಿತಿ ಸದಸ್ಯರು ಹೋರಾಟ ಮಾಡಲು ತೀರ್ಮಾನಿಸಿದ್ದಾರೆ.
ಚಾಮುಂಡೇಶ್ವರಿ ತೆಪ್ಪೋತ್ಸವದ ಬಳಿಕೆ ಕೆರೆಯಲ್ಲಿದ್ದ ಕಲುಷಿತ ನೀರನ್ನು ಹೊರಹಾಕಿ, ಒಳ ಭಾಗದಲ್ಲಿ ಹೂಳು ತೆಗೆಯಲಾಗುತ್ತಿದೆ. ಕೆರೆಯ ಸುತ್ತಲೂ ಅಲ್ಲಲ್ಲಿ ಕಲ್ಲುಗಳು ಕುಸಿದಿದ್ದು, ಅದನ್ನು ತಡೆಯಲು ಕಾಂಕ್ರಿಟ್ ಸ್ಲ್ಯಾಬ್ ಕಟ್ಟಲಾಗುತ್ತದೆ. ಬಳಿಕ ಮಣ್ಣು ಕುಸಿದ ಜಾಗದಲ್ಲಿ ಹೊಸ ಕಲ್ಲುಗಳನ್ನು ಜೋಡಿಸಲಾಗುವುದು. ಕೆರೆ ಒಳ ಭಾಗದಲ್ಲಿ ಬಾವಿಯ ತನಕ ಮಾತ್ರ ‘ನಡಿಗೆ ಪಥ’ವಿದೆ. ಹೊಸ ಯೋಜನೆಯಂತ, ಒಳ ಭಾಗದಲ್ಲಿ ಪೂರ್ತಿ ಸುತ್ತ ‘ನಡಿಗೆ ಪಥ’ ತಾಗಿಕೊಂಡು ಬೇಲಿಯನ್ನು ನಿರ್ಮಿಸಲಾಗುತ್ತದೆ. ಈಗಿರುವ ಆವರಣ ಗೋಡೆ ಮೇಲ್ಭಾಗದಲ್ಲಿಯೂ ಮೇ ತಿಂಗಳ ಒಳಗಾಗಿ ಕಾಮಗಾರಿ ಮುಗಿಸಲು ನಿರ್ಧರಿಸಲಾಗಿದ್ದು, ಜೂನ್ ವೇಳೆಗೆ ಮಳೆ ನೀರು ಹರಿದು ಬರಲಿದೆ. ಕೆರೆ ಕಾಮಗಾರಿ ಮುಗಿದ ಬಳಿಕ ಚಾಮುಂಡಿಬೆಟ್ಟದ ಮೇಲ್ಭಾಗದಿಂದ ಕೆರೆಯವರೆಗೂ ಬೀದಿ ದೀಪದ ವ್ಯವಸ್ಥೆ, ಬೋಟಿಂಗ್ ಹೌಸ್ ಸುತ್ತ ರಿಪೇರಿ ಕಾರ್ಯ, ಭಕ್ತರಿಗೆ ಕುರ್ಚಿ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಜೊತೆಗೆ ಮತ್ತಷ್ಟು ಸೌಂದರ್ಯಕರಣಗೊಳಿಸುವ ಕಾರ್ಯ ನಡೆಯಲಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಈಶ್ವರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಾಲಿಗ್ರಾಮ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಚಂದ್ರು ಆರೋಪ ಸಾಲಿಗ್ರಾಮ: ದಲಿತ ಮತ್ತು ಹಿಂದುಳಿದ…
ಕೃಷ್ಣ ಸಿದ್ದಾಪುರ ಸಂತೆಮಾಳದಲ್ಲಿ ತರಕಾರಿ ಜೊತೆ ಸಾಂಕ್ರಾಮಿಕ ರೋಗವೂ ಉಚಿತ ಕ್ರಮಕೈಗೊಳ್ಳದ ಗ್ರಾ.ಪಂ. ವಿರುದ್ಧ ಸಾರ್ವಜನಿಕರ ಅಸಮಾಧಾನ ಸಿದ್ದಾಪುರ: ಸಾರ್ವಜನಿಕ…
ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ಘನತೆಯ ಬದುಕು ಬಯಸುವ ಮನುಷ್ಯನ ಹಕ್ಕನ್ನು ಎತ್ತಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ ಬ್ರಿಟಿಷರ ಗುಲಾಮಗಿರಿಯಲ್ಲಿದ್ದ ಭಾರತಕ್ಕೆ…
ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ತಳಿ ಅನಾವರಣ ಕಾರ್ಯಕ್ರಮದ ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಘರ್ಷಣೆ ಸಂದರ್ಭದಲ್ಲಿ ಗುಂಡೇಟಿನಿಂದ ಕಾಂಗ್ರೆಸ್ ಕಾರ್ಯಕರ್ತ…
ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿವಿ ಅಶೋಕಪುರಂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ೨,೦೦೦ ಇದ್ದ…