Andolana originals

60 ದಿನಗಳಲ್ಲಿ ಕಲ್ಲಂಗಡಿ ಬೆಳೆದು ಲಾಭ ಗಳಿಸಿದ ರೈತ

ಮಾಗಳಿ ರಾಮೇಗೌಡ

ಬೆಟ್ಟದಪುರ: ಕೇವಲ ೬೦ ದಿನಗಳಲ್ಲಿ ಉತ್ಪಲ ಕಂಪೆನಿಯ ತೃಪ್ತಿ ತಳಿಯ ಕಲ್ಲಂಗಡಿ ಹಣ್ಣನ್ನು ಬೆಳೆದು ಒಂದೂವರೆ ಲಕ್ಷ ರೂ. ಲಾಭ ಗಳಿಸಿದ ಯುವ ರೈತ ಹೊನ್ನಾಪುರ ಶಶಿ ಗಮನ ಸೆಳೆದಿದ್ದಾರೆ.

ಪಿರಿಯಾಪಟ್ಟಣ ತಾಲ್ಲೂಕಿನ ಹೊನ್ನಾಪುರ ಗ್ರಾಮದ ಪ್ರಗತಿಪರ ಯುವ ರೈತ ಶಶಿರವರು ಕೇವಲ ೬೦ ದಿನಗಳಲ್ಲಿ ಉತ್ಪಲ ಕಂಪೆನಿಯ ತೃಪ್ತಿ ತಳಿಯ ಕಲ್ಲಂಗಡಿ ಗಿಡಗಳನ್ನು ನಾಟಿ ಮಾಡಿ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಪಡೆದು ಒಂದೂವರೆ ಲಕ್ಷ ರೂ. ಲಾಭ ಗಳಿಸಿದ್ದಾರೆ.

ರೈತ ಹೊನ್ನಾಪುರ ಶಶಿ ಮಾತನಾಡಿ, ಹರೀಶ್‌ರವರ ಮಾರ್ಗದರ್ಶನದಲ್ಲಿ ಈ ವರ್ಷ ಮೊದಲನೇ ಬಾರಿಗೆ ೩೦ ಕುಂಟೆ ಜಾಗದಲ್ಲಿ ಮಲ್ಚಿಂಗ್ ಶೀಟ್ ಅಳವಡಿಸಿಕೊಂಡು ಹನಿ ನೀರಾವರಿ ಪದ್ಧತಿಯಲ್ಲಿ ಉತ್ಪಲ ಕಂಪೆನಿಯ ತೃಪ್ತಿ ತಳಿಯ ೩ ಸಾವಿರ ಕಲ್ಲಂಗಡಿ ಗಿಡಗಳನ್ನು ನಾಟಿ ಮಾಡಿ ಕಲ್ಲಂಗಡಿ ಹಣ್ಣನ್ನು ಬೆಳೆದಿದ್ದೇನೆ. ಈ ಬೆಳೆಗೆ ರೋಗ ಕಡಿಮೆ ಇದೆ. ಉತ್ತಮ ಇಳುವರಿ ಬಂದಿದೆ. ಅಂಡಾಕಾರದ ಹಣ್ಣುಗಳಿದ್ದು ಕೆಂಪಾಗಿ, ತಿನ್ನಲು ಸಿಹಿಯಾಗಿದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು ಮುಂಬೈ, ದಿಲ್ಲಿ, ಚೆನ್ನೈ, ಕೋಲ್ಕತಾ ನಗರಗಳಿಗೆ ಸಾಗಣೆ ಮಾಡಲಾಗುತ್ತದೆ ಎಂದರು.

ಮಂಟಿ ಬಿಳಗುಲಿಯ ಅಭಿಷೇಕ್ ಮಾತನಾಡಿದರು. ಪ್ರಗತಿಪರ ಯುವ ರೈತರಾದ ಶಶಿ ಸಹೋದರರನ್ನು ಕಲ್ಲಂಗಡಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಬಹುಮಾನ ನೀಡಿ ಸನ್ಮಾನಿಸಲಾಯಿತು. ಸಮೃದ್ಧವಾಗಿ ಬಂದಿರುವ ಕಲ್ಲಂಗಡಿ ಹಣ್ಣಿನ ಬೆಳೆ ವೀಕ್ಷಣೆ ಮಾಡಲು ಹೊನ್ನಾಪುರ ಸುತ್ತಮುತ್ತಲಿನ ನೂರಾರು ರೈತರು ಆಗಮಿಸಿದ್ದರು. ರೈತರಾದ ಹೊನ್ನಪುರ ಶಿವಣ್ಣ, ಶಶಿ, ಆಂಜನೇಯ, ಪ್ರಕಾಶ್, ಪುಟ್ಟಸ್ವಾಮಿ, ಗಂಗನಕುಪ್ಪೆ ಯೋಗಣ್ಣ, ಅರುಣ್, ಅಡಗೂರು ರಾಜೇಶ್, ಹರೀಶ್, ಕಣಗಾಲ್ ಮಧು, ತಮ್ಮೇಗೌಡ, ಗಣೇಶ್, ಹೆಚ್.ಹೆಚ್.ಆಂಜನೇಯ, ವೆಂಕಟೇಶ್, ರವಿಕುಮಾರ್, ಉತ್ಪಲ ಕಂಪೆನಿಯ ಆರ್. ಎಸ್.ಎಂ.ಸತೀಶ್ ವಾಡೆ, ಟಿ.ಎಸ್.ಎಂ. ಹರೀಶ್, ಅಜಯ್, ನರ್ಸರಿ ಮಾಲೀಕರಾದ ಅಭಿ, ಸುನಿಲ್, ಪುನೀತ್, ನಾಗರಾಜ್, ವಿತರಕರಾದ ಕುಬೇರ್, ವೆಂಕಟೇಶ್, ಸೋಮಣ್ಣ, ಲೋಹಿತ್, ಸ್ವಾಮಿ, ನೂರಾರು ರೈತರು ಹಾಜರಿದ್ದರು.

” ಒಂದು ಹಣ್ಣು ಐದರಿಂದ ಆರು ಕೆಜಿ ತೂಕವಿದೆ. ೬೦ ಸಾವಿರ ರೂ. ಖರ್ಚು ಮಾಡಿದ್ದೇವೆ ೨೦ ಟನ್ ಹಣ್ಣನ್ನು ನಿರೀಕ್ಷೆ ಮಾಡಿದ್ದೇವೆ. ಪ್ರಸ್ತುತಮಾರುಕಟ್ಟೆ ದರ ಪ್ರತಿ ಕೆಜಿಗೆ ೧೦ ರೂ. ಇದ್ದು, ೨ ಲಕ್ಷ ರೂ. ಸಿಗಲಿದೆ. ಖರ್ಚು ಕಳೆದು ೧.೪೦ ಲಕ್ಷ ರೂ. ಲಾಭ ಬರುವ ನಿರೀಕ್ಷೆಯಲ್ಲಿದ್ದೇನೆ.”

-ಹೊನ್ನಾಪುರ ಶಶಿ, ರೈತ 

 

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

53 mins ago

ಓದುಗರ ಪತ್ರ: ಟ್ರಾಫಿಕ್ ದಂಡ: ಸುಪ್ರೀಂ ಸಲಹೆ ಸ್ವಾಗತಾರ್ಹ

ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…

55 mins ago

ಓದುಗರ ಪತ್ರ: ಆಕಾಶದಲ್ಲಿ ಶೌರ‍್ಯಪ್ರದರ್ಶನಕ್ಕೊಂದು ಸಲಾಂ

ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಬೈನಿಂದ ಇಸ್ರೇಲ್‌ನ ಅವೀವ್‌ಗೆ ತೆರಳುತ್ತಿದ್ದ -ದುಬೈ ವಿಮಾನ ಹೈಜಾಕ್ ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್…

57 mins ago

ಬ್ರೇಕ್ ಕಿತ್ತ ಬಸ್ಸಿನಲ್ಲಿ ಇಳಿಜಾರಿನಲ್ಲಿ ಸಾಗುತ್ತಿದ್ದೇವೆ…

ಡಾ . ಚೇತನ ಗುರುರಾಜು, ಮುಖ್ಯ ಶಿಕ್ಷಕಿ, ಅರಿವು ವಿದ್ಯಾಸಂಸ್ಥೆ, ಮೈಸೂರು  ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿವೆ ಹಲವು ದೇಶಗಳು…

60 mins ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಸ್ವಾವಲಂಬನೆಯ ಸಂಕೇತ ಮಹಾತ್ಮ ಗಾಂಧೀಜಿ ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ಹಾಗೂ ರಾಷ್ಟ್ರಪಿತ ಎಂದು…

1 hour ago

ಜಗದ ಸೌಹಾರ್ದ ನದಿ ಗಾಂಧಿ

ಪರಶುರಾಮ್, ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ ಗಾಂಧಿ ವಿಚಾರಗಳನ್ನು ಸಂವಾದದ ಮೂಲಕ ಮುನ್ನಡೆಸಲು ಸಾಧ್ಯವೇ? ಅಥವಾ ಅನುಸರಿಸಲು ಸಾಧ್ಯವಾಗದಿರುವ ನಡೆಯನ್ನು…

1 hour ago