ಜಿಲ್ಲೆಗಳು

ಬೈಕ್ ಗೆ ಕ್ಯಾಂಟರ್ ಡಿಕ್ಕಿ: ವ್ಯಕ್ತಿ ಸ್ಥಳದಲ್ಲಿಯೇ ಸಾವು

ಮಂಡ್ಯ: ಮಂಡ್ಯ ನಗರದ ರೈಲ್ವೆ ನಿಲ್ದಾಣದ ಮುಂಭಾಗ ಬೆಂಗಳೂರು-ಮೈಸೂರು ಹೆದ್ದಾರಿಯ ಬಾಟ(BATA) ಶೋರೂಮ್ ಬಳಿ ಕ್ಯಾಂಟರ್ ಬೈಕ್ ಗೆ ಹಿಂಬದಿಯಿಂದ ಗುದ್ದಿದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಂಡ್ಯ ನಗರದ ರಾಜ್ ಕುಮಾರ್ ಬಡಾವಣೆಯ ಆಂಟೋನಿಯವರ ಪುತ್ರ ಜಾರ್ಜ್ ವಿಜಯ್ ಕುಮಾರ್ ಪಿ.ಎ(54) ಎಂಬುವರೇ ಮೃತಪಟ್ಟವರು.

ಬಾಟ ಶೋರೂಂ ಬಳಿ ಇಂದು ರಾತ್ರಿ ಏಳು ಗಂಟೆ ಸುಮಾರಿಗೆ ಲಾರಿಯೊಂದು ಕ್ಯಾಂಟರ್ ಹಿಂಬದಿಗೆ ಗುದ್ದಿದ ಪರಿಣಾಮ ಕ್ಯಾಂಟರ್ ಬೈಕ್ ನಲ್ಲಿದ್ದ ಜಾರ್ಜ್ ವಿಜಯ್ ಕುಮಾರ್ ಅವರಿಗೆ ಗುದ್ದಿದೆ.ಕ್ಯಾಂಟರ್ ಗುದ್ದಿದ ರಭಸಕ್ಕೆ ಜಾರ್ಜ್‌ ವಿಜಯ್ ಕುಮಾರ್ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

ನಿನ್ನೆಯಷ್ಟೇ ಕಾರೆಮನೆ ಗೇಟ್ ಬಳಿ ರಸ್ತೆ ಗುಂಡಿಗೆ ನಿವೃತ್ತ ಯೋಧ ಕುಮಾರ್ ದುರ್ಮರಣಕ್ಕೀಡಾಗಿದ್ದರು. ಈ ಬೆನ್ನಲ್ಲೇ ಇಂದು ಈ ಅವಘಡ ನಡೆದಿರುವುದು ಆಘಾತ ಉಂಟು ಮಾಡಿದೆ.

ಮೃತ ವ್ಯಕ್ತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮಧ್ಯಮ ವರ್ಗದ ಕುಟುಂಬದವರಾದ ಇವರು ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

andolana

Recent Posts

ಉತ್ತರ ಪ್ರದೇಶದಲ್ಲಿ ಮುಂದುವರಿದ ಮಳೆಯ ಆರ್ಭಟ

ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಾಜ್ಯದ 63 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ…

2 hours ago

ರಾಜ್ಯದಲ್ಲಿ ಬರ ತಾಂಡವ: ಪರಿಶೀಲನೆಗೆ ಕೇಂದ್ರದ ತಂಡ ರಾಜ್ಯಕ್ಕೆ ಆಗಮನ

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಹಂಗಾಮಿನಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿ ಪರಿಶೀಲಿಸಲು ಕೇಂದ್ರ ಸರ್ಕಾರದ ತಂಡ ರಾಜ್ಯಕ್ಕೆ…

2 hours ago

ರಾಜ್ಯದಲ್ಲಿ ಸದ್ಯಕ್ಕೆ ಲೋಡ್‌ ಶೆಡ್ಡಿಂಗ್‌ ಪ್ರಶ್ನೆ ಇಲ್ಲ: ಸಚಿವ ಕೆ.ಜೆ.ಜಾರ್ಜ್

ಮೈಸೂರು: ವಿದ್ಯುತ್‌ ಕೊರತೆ ಹಾಗೂ ರಾಜ್ಯದ ವಿದ್ಯುತ್‌ ಪರಿಸ್ಥಿತಿ ಕುರಿತು ಮಾತನಾಡಿರುವ ಸಚಿವ ಕೆ.ಜೆ.ಜಾರ್ಜ್‌ ರಾಜ್ಯದಲ್ಲಿ ಸದ್ಯಕ್ಕೆ ಲೋಡ್‌ ಶೆಡ್ಡಿಂಗ್‌…

3 hours ago

ಎಐ ಮನುಷ್ಯನನ್ನು ಆಳಲಾಗದು!

ಮೊನ್ನೆ ತುಮಕೂರು ರಸ್ತೆ ಹಿಡಿದು ಬೆಂಗಳೂರಿನ ಕಡೆ ಬರುತ್ತಿರುವಾಗ, ರಸ್ತೆಯ ಬಲಭಾಗದಲ್ಲಿ ದೊಡ್ಡ ಕಲ್ಲು ಬೆಟ್ಟ ಕಾಣಿಸಿತು. ಕುಂಬಳಕಾಯಿಯನ್ನು ಚಾಕುವಿನಿಂದ…

9 hours ago

ಭಯಗೊಳಿಸುವ ಸಿನೆಮಾ ಕಥೆ ನಿಜವಾಗುವ ಸಾಧ್ಯತೆ!

ಐಟಿ, ಆರೋಗ್ಯ, ಆಡಳಿತ ಹೀಗೆ ಎಲ್ಲೆಲ್ಲಿ ಎಐ ಬಳಕೆ ಸಾಧ್ಯವೋ ಅಲ್ಲೆಲ್ಲಾ ಪ್ರಾಥಮಿಕ ಹಂತದ ಉದ್ಯೋಗ ಗಳು ಕಡಿತವಾಗಲಿವೆ. ಎಐ…

10 hours ago

‘ಎಐ’ ಅತಿ ಬಳಕೆಯ ವ್ಯಸನದ ಬಗ್ಗೆ ಎಚ್ಚರದಿಂದಿರಿ

‘ಕೃತಕ ಬುದ್ಧಿವಂತಿಕೆ’ಯನ್ನು ನಮ್ಮ ಸಹಾಯಕನಾಗಿ ಬಳಸಿಕೊಳ್ಳಬೇಕೇ ಹೊರತು, ಅದರ ಮೇಲೆ ಅವಲಂಬಿತರಾಗಬಾರದು; ಇಂದು ಶಾಲೆ, ಕಾಲೇಜಿನ ಪ್ರಾಧ್ಯಾಪಕರಿಂದ ‘ಎಲ್ಲರ ಅಸೈನ್‌ಮೆಂಟೂ…

10 hours ago