ಜಿಲ್ಲೆಗಳು

ಸಿಎಂ ಆಗಮನಕ್ಕೆ ಸಜ್ಜಾಗಿ ನಿಲ್ಲುವ ಧ್ವಜ

ಮೈಸೂರು: ನಾಡಹಬ್ಬ ಮೈಸೂರು ದಸರಾ ಎಂದರೆ ಬರೀ ಜಂಬೂ ಸವಾರಿ, ಮೆರವಣಿಗೆ ನೆನಪಿಗೆ ಬರುತ್ತದೆ. ಆದರೆ, ಲಕ್ಷಾಂತರಜನರಕಣ್ಮನ ಸೆಳೆಯುವ ಈ ಮೆರವಣಿಗೆಯು ಹೊರಡುವುದೇ ನಂದೀಧ್ವಜ ಪೂಜೆ ಬಳಿಕ ಎಂಬುದು ವಿಶೇಷ. ಹೀಗಾಗಿ ದಸರಾದ ಅವಿಭಾಜ್ಯ ಅಂಗ ನಂದೀಧ್ವಜ ಕುಣಿತವಾಗಿದೆ. ವಿಜಯದಶಮಿ ದಿನದಂದು ಇದಕ್ಕೆಎಲ್ಲಿಲ್ಲದ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಇದು ಇತರ ಜಾತ್ರೆ, ಹಬ್ಬದ ವೇಳೆಯೂ ಪ್ರಮುಖ ಎನಿಸಿರುವ ಜಾನಪದಕಲೆಯಾಗಿದೆ.

ಶಿವನ ಲಾಂಛನಎನ್ನಲಾದ ನಂದೀಧ್ವಜಕ್ಕೆ ಮುಖ್ಯಮಂತ್ರಿಗಳು ಪೂಜೆ ಸಲ್ಲಿಸಿದ ನಂತರವೇ ಜಂಬೂಸವಾರಿ ವಿದ್ಯುಕ್ತವಾಗಿ ಹೊರಡುವುದಕ್ಕೆ ಚಾಲನೆ ಸಿಕ್ಕಿದಂತಾಗಿದೆ.ಚಿನ್ನದ ಅಂಬಾರಿ ಹೊತ್ತ ಗಜಪಡೆಗೆ ಗಣ್ಯರು ಪುಷ್ಪಾರ್ಚನೆ ನೀಡಿದರೂ, ನಂದೀಕಂಬಕ್ಕೆ ಪೂಜೆ ಸಲ್ಲಿಸುತ್ತಿದ್ದಂತೆಕಲಾವಿದರುತಮ್ಮ ನೃತ್ಯ ಪ್ರದರ್ಶನ ನೀಡಿ ಮೆರವಣಿಗೆ ಶುರು ಮಾಡಲಿದ್ದಾರೆ.ಇದಕ್ಕೂ ಮೊದಲುರಾಜರಕಾಲದಲ್ಲಿಯೂ ನಂದೀಧ್ವಜತಂಡವನ್ನು ಓಲಗ, ಬಿರುದಾವಳಿ, ಗೌರವಾದರಗಳೊಡನೆ ಅರಮನೆಗೆಕರೆದೊಯ್ದು, ಅಂಬಾವಿಲಾಸ ಅರಮನೆಯಲ್ಲಿ ಬೆಳಗ್ಗೆ ಊಟ ಮಾಡಿಸಿ ಸತ್ಕರಿಸುವು ಸಂಪ್ರದಾಯವಿತ್ತು.ಬಳಿಕ ತಂಡವನ್ನುಅರಮನೆಯ ಬಲರಾಜದ್ವಾರದ ಬಳಿಗೆ ಕರೆದೊಯ್ದುರಾಜರು ನಂದೀಧ್ವಜಕ್ಕೆ ಪೂಜೆ ಸಲ್ಲಿಸಿದಾಗ ಮೆರವಣಿಗೆಗೆ ಚಾಲನೆ ದೊರೆಯುತ್ತಿತ್ತು.

ಅಲ್ಲದೆ ಈಗಲೂ ಚಾಮುಂಡಿಬೆಟ್ಟದಲ್ಲಿ ನವರಾತ್ರಿ ಚಾಲನೆ ವೇಳೆಯೂ ನಂದೀಧ್ವಜಕ್ಕೆ ಪೂಜೆ ಸಲ್ಲಿಸುವುದು ಈ ಜಾನಪದಕಲೆಯ ಮಹತ್ವ ತಿಳಿಸುತ್ತದೆ.

ಸದ್ದಿಗೆ ತಲೆಬಾಗದವರಿಲ್ಲ: ನಂದೀಧ್ವಜವನ್ನುಗಟ್ಟಿಮುಟ್ಟಾದ ಬಿದಿರಿನ ಗಳ ಬಳಸಿಕೊಂಡು ಅದರ ಸುತ್ತ ಟೊಳ್ಳಾದ ಬಳೆಗಳನ್ನು ಒಂದರ ಮೇಲೊಂದರಂತೆ ಇರಿಸಿ, ಈ ಬಳೆಗಳ ಟೊಳ್ಳಿನೊಳಗೆ ಚಿಕ್ಕಕಲ್ಲುಅಥವಾ ಹುಣಸೆ ಬೀಜತುಂಬಿರುತ್ತಾರೆ. ಇವು ಖಣಿಖಣಿ ಸದ್ದು ಮಾಡುತ್ತವೆ. ಕಂಬದಲ್ಲಿನ ಪೀಠದಲ್ಲಿ ನಂದೀ ವಿಗ್ರಹಇರುತ್ತದೆ, ಪೀಠದ ಮೇಲೆಯೇ ಇರುವ ಈ ಬಳೆಗಳಿಗೆ ಗಗ್ಗರ, ಹರಡೆ, ಗಗ್ಗ ಎಂಬ ಹೆಸರಿವೆ. ಹರಡೆ ಮೇಲೆ, ಕೆಳಗೆ ಕೊಳಗ ಎಂದು ಕರೆಯುವತಟ್ಟೆಯಾಕಾರದ ಲೋಹದ ಉಂಗುರಗಳು ಇರುತ್ತವೆ. ನಂದಿ ಕಂಬಕ್ಕೂ ಬಿರಡೆ ಕಂಬ, ವ್ಯಾಸಗೋಲು, ನಂದಿಕಂಬ, ನಂದಿಪಟ ಎಂದೂ ಕರೆಯಲಾಗುತ್ತಿದೆ.

ದಸರಾದಲ್ಲಿ ಬಳಸುವ ನಂದಿಕಂಬ ೩೩ ಅಡಿ ಎತ್ತರವಿದ್ದು, ೧೨೫ ಕೆ.ಜಿ.ತೂಗುತ್ತದೆ. ಇದರಲ್ಲಿ ಹತ್ತು ವರ್ಣಗಳ ಧ್ವಜವಿದ್ದು, ಇದರ ಮೇಲೆ ಪಂಚಕಳಶವಿದೆ.

ಈ ಕುಣಿತಕ್ಕೆಕರಡೆ, ಡೊಳ್ಳು, ಸೊನಾಮಿ, ತಾಳ, ಚಮ್ಮಾಳ ಎಂಬ ವಾದ್ಯಗಳ ಹಿನ್ನೆಲೆ ಇರುತ್ತದೆ. ಇದೊಂದು ಕಲೆಯೂ ಆಗಿದ್ದು, ಕುಣಿಯುವವರು ಭಾರದ ನಂದೀಧ್ವಜವನ್ನುಎದೆ, ನೆತ್ತಿ, ಗಲ್ಲದದ ಮೇಲೆ ನಿಲ್ಲಿಸಿಕೊಂಡು ಚಮತ್ಕಾರ ಪ್ರದರ್ಶಿಸುವುದೂ ಉಂಟು.

ಈ ಕುಣಿತ ಸಾಮಾನ್ಯವಾಗಿ ವೀರಶೈವರಲ್ಲಿ ಹೆಚ್ಚಾಗಿದ್ದು, ರಾಜ್ಯದ ಬಹುತೇಕಕಡೆಕಾಣಬರುತ್ತದೆ.ಇದಕ್ಕೆಧಾರ್ಮಿಕ ನಂಬಿಕೆಯೂಇದ್ದು, ವೀರಭದ್ರಚೆಂಡಾಡಿದ ಋಷಿಮುನಿಗಳ ತಲೆ  ಹರಡೆ ಎಂಬ ನಂಬಿಕೆ ಇಂದಿಗೂ ಜೀವಂತವಾಗಿ ಉಳಿದುಬಂದಿದೆ.

andolana

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಭಾಷೆ, ಬದುಕು ಕಲಿಸಿದ ನನ್ನಪ್ಪ

ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…

11 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಮತಗಳ ಪರಿಚಯ

ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…

11 hours ago

ರೆಟ್ರೋ ಫೋಟೋಗಳ ಹೊಸ ಅಲೆ

ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…

12 hours ago

ಮಹಾಪಂಚ್‌ ಕಾರ್ಟೂನ್‌

  ಮಹಾಪಂಚ್‌ ಕಾರ್ಟೂನ್‌ | ಸೆಪ್ಟಂಬರ್‌ 12 ಶನಿವಾರ

12 hours ago

ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಜಾತಿ ಮಾನದಂಡ ಅಲ್ಲ

ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…

12 hours ago

ಓದುಗರ ಪತ್ರ | ‘ಅಕ್ಕ’ ಸಮ್ಮೇಳನದಲ್ಲೂ ‘ನಂದಿನಿ’ ಮಿಂಚಿಂಗ್!

ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…

12 hours ago