ವಾಣಿಜ್ಯ

ರೆಪೋ ದರ ಮತ್ತೆ ಹೆಚ್ಚಳ, ತುಟ್ಟಿಯಾಗಲಿದೆ ಗೃಹ ಸಾಲ

ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೋ ದರವನ್ನು ಮತ್ತೆ 35 ಮೂಲಾಂಕಗಳಷ್ಟು ಏರಿಕೆ ಮಾಡಿದ್ದು ಶೇಕಡ 6.25ಕ್ಕೆ ತಲುಪಿದೆ. ಇದರೊಂದಿಗೆ ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ವಾಹನ ಸಾಲ ಮತ್ತೆ ಏರಿಕೆಯಾಗಲಿದೆ. ಈ ಹಿಂದೆ ನಾಲ್ಕು ಬಾರಿ ಆರ್ಬಿಐ ರೆಪೋ ದರ ಏರಿಸಿರುವ ಆರ್‌ಬಿ ಐ ಈಗ ಸತತ ಐದನೇ ಬಾರಿಗೆ ಬಡ್ಡಿ ದರ ಏರಿಸಿದೆ.

ದೇಶದಲ್ಲಿ ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಆರ್ಬಿಐ ರೆಪೋ ದರವನ್ನು ಏರಿಕೆ ಮಾಡಿದೆ. 2022ರ ಏಪ್ರಿಲ್ ತನಕ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿದ್ದ ಆರ್ಬಿಐ ಮೇ ತಿಂಗಳಿನಲ್ಲಿ ರೆಪೋ ದರವನ್ನು ಶೇ.೦.40ರಷ್ಟು ಏರಿಕೆ ಮಾಡಿತ್ತು. ಜೂನ್ ತಿಂಗಳಿನಲ್ಲಿಶೇ. 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿತ್ತು. ಆಗಸ್ಟ್ನಲ್ಲಿ ಮತ್ತೆ 50 ಮೂಲಾಂಕದಷ್ಟು ಏರಿಕೆ ಮಾಡಲಾಗಿತ್ತು. ಬಳಿಕ ಸೆಪ್ಟೆಂಬರ್ನಲ್ಲಿ ರೆಪೋ ದರವನ್ನು 50 ಮೂಲಾಂಕ ಹೆಚ್ಚಳ ಮಾಡಲಾಗಿತ್ತು.

ರೆಪೋ ದರ ಎಂದರೇನು?
ಆರ್ಬಿಐ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ.
ಡಿಸೆಂಬರ್ 5ರಿಂದ 7ರವರೆಗೆ ಹಣಕಾಸು ನೀತಿ ನಿರೂಪಣಾ ಸಮಿತಿಯ (ಎಂಪಿಸಿ) ಸಭೆ ನಡೆದಿದ್ದು ಈ ಸಭೆಯ ಅಂತ್ಯದಲ್ಲಿ ಆರ್ಬಿಐ ರೆಪೋ ದರ ಪರಿಷ್ಕರಣೆ ಮಾಡಿದೆ.

ಹೆಚ್ಚಲಿದೆ ಇಎಂಐ ಹೊರೆ

ಆರ್ಬಿಐ ರೆಪೋ ದರಗಳನ್ನು ಏರಿಕೆ ಮಾಡಿರುವುದರಿಂದ ಗೃಹ ಸಾಲ, ಕಾರಿನ ಸಾಲ ಸೆರಿದಂತೆ ಇತರ ಸಾಲಗಳ ಇಎಂಐ ಏರಿಕೆಯಾಗುವ ಎಲ್ಲಾ ಸಾಧ್ಯತೆ ಇದೆ. ಆರ್ಬಿಐ ದರ ಏರಿಕೆ ಮಾಡಿದ ಬೆನ್ನಲ್ಲೇ ಬ್ಯಾಂಕುಗಳೂ ಸಾಲದ ಮೇಲಿನ ಬಡ್ಡಿಯನ್ನು ಹೆಚ್ಚಿಸುತ್ತವೆ. ಇದರಿಂದ ಸಾಲಗಳ ಮಾಸಿಕ ಕಂತು ಹೆಚ್ಚಲಿದೆ.

andolanait

Recent Posts

ಹೆಸರುಘಟ್ಟ ನೈಸರ್ಗಿಕ ಹುಲ್ಲುಗಾವಲು ಸಂರಕ್ಷಣೆಗೆ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ಸರ್ಕಾರ ಕೆಲವು ತಿಂಗಳ ಹಿಂದೆ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿರುವ ಹೆಸರುಘಟ್ಟ ಕೆರೆ ಸೇರಿದಂತೆ 5678 ಎಕರೆ ಹುಲ್ಲುಗಾವಲು…

5 mins ago

ಕಾಸರಗೋಡು| ಹಳಿ ದಾಟುವಾಗ ರೈಲು ರಿಕ್ಕಿ: ಕೊಡಗು ಮೂಲದ ಯುವಕ ಸಾವು

ಕಾಸರಗೋಡು: ಹಳಿ ದಾಟುವಾಗ ಯುವಕ ಸಾವನ್ನಪ್ಪಿರುವ ಘಟನೆ ಕಾಸರಗೋಡು ನಿಲ್ದಾಣದಲ್ಲಿ ನಡೆದಿದೆ. ಕೊಡಗು ಜಿಲ್ಲೆ ಗೋಣಿಮಾಗೂರಿನ ಸೋಮವಾರಪುರದ ಚೆನ್ನಯ್ಯ ಅವರ…

14 mins ago

ಉತ್ತರ ಪ್ರದೇಶದಂತೆ ಬುಲ್ಡೋಜರ್‌ ಬಳಸಿ ಮುಸ್ಲಿಮರ ಮನೆ ಧ್ವಂಸ: ಕರ್ನಾಟಕದ ವಿರುದ್ಧ ಪಿಣರಾಯಿ ವಿಜಯನ್‌ ಆಕ್ರೋಶ

ಬೆಂಗಳೂರು: ಕರ್ನಾಟಕದಲ್ಲಿ ಬುಲ್ಡೋಜರ್‌ ಬಳಸಿ ಮುಸ್ಲಿಮರ ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಕಾಂಗ್ರೆಸ್‌ ಸರ್ಕಾರದ…

22 mins ago

ಮೈಸೂರು | ಹೀಲಿಯಂ ಸ್ಫೋಟ ಪ್ರಕರಣ: ಶವಗಾರದಲ್ಲಿ ಮೃತ ಲಕ್ಷ್ಮಿಯ ಕುಟುಂಬಸ್ಥರ ಆಕ್ರಂದನ

ಮೈಸೂರು: ಅರಮನೆ ಮುಂಭಾಗ ಸಂಭವಿಸಿದ ಹೀಲಿಯಂ ಸ್ಫೋಟ ದುರಂತದಲ್ಲಿ ಮೃತಪಟ್ಟ ಬೆಂಗಳೂರಿನ ಲಕ್ಷ್ಮಿ ಅವರ ಮೃತದೇಹವನ್ನು ಶವಗಾರದಲ್ಲಿ ಇರಿಸಲಾಗಿದೆ. ಸುದ್ದಿ…

33 mins ago

ಮಂಡ್ಯ| ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಮಂಡ್ಯ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವಿಸ್‌ ರಸ್ತೆಯಲ್ಲಿ…

44 mins ago

ಕಥೆಗಾರ್ತಿ, ಖ್ಯಾತ ಅನುವಾದಕಿ ಸರಿತಾ ಜ್ಞಾನಾನಂದ ನಿಧನ

ಬೆಂಗಳೂರು: ಕನ್ನಡ ಕವಯತ್ರಿ, ಬರಹಗಾರ್ತಿ ಸರಿತಾ ಜ್ಞಾನಾನಂದ ಅವರು ಆರ್‌.ಆರ್.ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಲೇಖಕಿ, ಅನುವಾದಕಿಯಾಗಿದ್ದ ಸರಿತಾ ಅವರು…

1 hour ago