ಜಿಲ್ಲೆಗಳು

ಮೈಸೂರು ಕಾರಾಗೃಹ ವಾಸಿಗಳಿಗೆ ಕೌಶಲ ತರಬೇತಿ

ಮೈಸೂರು ಜಿಲ್ಲಾ ಕಾರಾಗೃಹದಲ್ಲಿ ೧೪೦ ಕೈದಿಗಳಿಗೆ ಸುಧಾರಿತ ಕೌಶಲ ಕಲಿಕೆ

-ಬಿ.ಎನ್.ಧನಂಜಯಗೌಡ

ಮೈಸೂರು: ಜೈಲಿನಿಂದ ಬಂಧಮುಕ್ತರಾದ ನಂತರ ಸಾಮಾನ್ಯರಂತೆ ದುಡಿದು ಬದುಕಲು ಪೂರಕವಾಗುವಂತೆ ಸುಧಾರಿತ ಕೌಶಲ ತರಬೇತಿಯನ್ನು ೧೪೦ ಕೈದಿಗಳಿಗೆ ಮೈಸೂರು ಕೇಂದ್ರ ಕಾರಾಗೃಹದಲ್ಲಿ ನೀಡಲಾಗುತ್ತಿದೆ.

ತಿಳಿದೋ, ತಿಳಿಯದೆಯೋ ನಾನಾ ತರದ ತಪ್ಪುಗಳನ್ನು ಮಾಡಿ, ಕಾರಾಗೃಹ ಸೇರುವ ಕೈದಿಗಳಿಗೆ ಬಂಧಮುಕ್ತರಾದ ನಂತರ ಎಲ್ಲರಂತೆ ನ್ಯಾಯಯುತ ಮಾರ್ಗದಲ್ಲಿ ಬದುಕಲು ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ ಮತ್ತು ಕಾರಾಗೃಹ ಇಲಾಖೆ ಜಂಟಿಯಾಗಿ ನಾನಾ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ.

ಪುರುಷ, ಮಹಿಳಾ ಕಾರಾಗೃಹ ವಾಸಿಗಳಿಗೆ ಟೈಲರಿಂಗ್, ಎಲೆಕ್ಟ್ರಿಷಿಯನ್, ತೋಟಗಾರಿಕೆ, ಡೇಟಾ ಎಂಟ್ರಿ, ಬ್ಯೂಟಿಷಿಯನ್, ಕೇಶ ವಿನ್ಯಾಸದಂತಹ ಸುಧಾರಿತ ಕೌಶಲ ತರಬೇತಿಯನ್ನು ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮವು (ಕೆಎಸ್‌ಡಿಸಿ) ನೀಡಲಾಗುತ್ತಿದೆ.

ಸರ್ಟಿಫಿಕೇಟ್ ಕೋರ್ಸ್: ಈ ತರಬೇತಿಗಳನ್ನು ಸರ್ಟಿಫಿಕೇಟ್ ಕೋರ್ಸ್ ಆಧಾರದಲ್ಲಿ ಹಮ್ಮಿಕೊಂಡಿದ್ದು, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮವೇ ತರಬೇತಿ ಪಡೆಯುವ ಕೈದಿಗಳ ಕಲಿಕೆಯ ಮಟ್ಟವನ್ನು ನಿರ್ಧರಿಸಿ, ಸರ್ಟಿಫಿಕೇಟ್ ನೀಡಲಿದೆ. ವಿದ್ಯಾರ್ಹತೆ ಮತ್ತು ಆಸಕ್ತಿಯನ್ನು ಆಧರಿಸಿ, ೧೪೦ ಕೈದಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ.

ತರಬೇತಿಯ ವಿವರ: ಜನಶಿಕ್ಷಣ ಸಂಸ್ಥೆಯ ಎನ್‌ಎಸ್‌ಡಿಸಿ ಅಡಿಯಲ್ಲಿ ೨೦ ಪುರುಷ ಕೈದಿಗಳಿಗೆ ೧೦೫ದಿನಗಳ ಎಲೆಕ್ಟ್ರಿಷಿಯನ್ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಗೆ ಎನ್‌ಎಸ್‌ಡಿಸಿಯಿಂದಲೇ ಸರ್ಟಿಫಿಕೇಟ್ ನೀಡಲಾಗುತ್ತದೆ.

ಇನ್ನು ಜೆಕೆ ಟೈರ್ಸ್‌ ಸಿಎಸ್‌ಆರ್ ಫಂಡ್‌ನಿಂದ ೨೦ ಮಹಿಳಾ ಕೈದಿಗಳಿಗೆ ೨೫೦ ಗಂಟೆಗಳ ಬ್ಯೂಟಿಷಿಯನ್, ೨೦ ಪುರುಷ ಕೈದಿಗಳಿಗೆ ೨೫೦ ಗಂಟೆಗಳ ಕೇಶ ವಿನ್ಯಾಸ, ೨೦ ಪುರುಷ ಕೈದಿಗಳಿಗೆ ೩೦೦ ಗಂಟೆಗಳ ಡೊಮೆಸ್ಟಿಕ್ ಹೆಲ್ಫ್ ಡೆಸ್ಕ್ ತರಬೇತಿಯನ್ನು ನೀಡಲಾಗುತ್ತಿದೆ. ಈ ತರಬೇತಿಗಳನ್ನು ಸಿಎಸ್‌ಆರ್ ಚಟುವಟಿಕೆಯಡಿ ಹಮ್ಮಿಕೊಂಡಿದ್ದರೂ ಕಲಿಕೆಯ ಮಟ್ಟವನ್ನು ನಿರ್ಧರಿಸಿ, ಕೆಎಸ್‌ಡಿಸಿ ಸರ್ಟಿಫಿಕೇಟ್ ನೀಡಲಿದೆ.

ಕೆಎಸ್‌ಡಿಸಿ, ಕಾರಾಗೃಹ ಇಲಾಖೆಯ ತರಬೇತಿ: ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ ಮತ್ತು ಕಾರಾಗೃಹ ಇಲಾಖೆಯಿಂದ ೩೦ ಕೈದಿಗಳಿಗೆ ೨೭೦ ಗಂಟೆಗಳ ಟೈಲರಿಂಗ್, ೩೦ ಕೈದಿಗಳಿಗೆ ೩೦೦ ತೋಟಗಾರಿಕೆ ತರಬೇತಿ ನೀಡಲಾಗುತ್ತಿದೆ. ಈ ೬೦ ಮಂದಿಯೂ ಪುರುಷ ಕೈದಿಗಳಾಗಿದ್ದಾರೆ. ಇದಕ್ಕೂ ಕೆಎಸ್‌ಡಿಸಿ ಸರ್ಟಿಫಿಕೇಟ್ ನೀಡಲಿದೆ.

ವೆಚ್ಚ: ಈ ಎಲ್ಲ ತರಬೇತಿಗಳು ಪ್ರತಿದಿನ ೩ರಿಂದ ೪ ಗಂಟೆಗಳ ಕಾಲ ನಡೆಯಲಿದೆ. ಜನಶಿಕ್ಷಣ ಸಂಸ್ಥೆಯು ತರಬೇತಿ ನೀಡಲು ಒಬ್ಬರನ್ನು ನಿಯೋಜಿಸಿದ್ದು, ಬಹಳ ಹಿಂದಿನಿಂದಲೂ ಸಂಸ್ಥೆ ತರಬೇತಿ ನೀಡುತ್ತಾ ಬರುತ್ತಿದೆ. ಇನ್ನುಳಿದ ಎಲ್ಲ ತರಬೇತಿ ಕಾರ್ಯಕ್ರಮಗಳಿಗೂ ತರಬೇತಿ ನೀಡಲು ತಲಾ ಇಬ್ಬರನ್ನು ನಿಯೋಜಿಸಲಾಗಿದೆ. ಜೆಕೆ ಟೈರ್ಸ್‌ನಿಂದ ಹಮ್ಮಿಕೊಂಡಿರುವ ಮೂರು ತರಬೇತಿ ಕಾರ್ಯಕ್ರಮಗಳಿಗೆ ೬.೬೨ ಲಕ್ಷ ರೂ., ಕೆಎಸ್‌ಡಿಸಿ, ಕಾರಾಗೃಹ ಇಲಾಖೆ ಮತ್ತು ಕಾರಾಗೃಹ ಇಲಾಖೆ ಸಹಯೋಗದ ಎರಡು ತರಬೇತಿ ಕಾರ್ಯಕ್ರಮಗಳಿಗೆ ೭.೦೪ ಲಕ್ಷ ರೂ. ವೆಚ್ಚವಾಗಲಿದೆ.

ಈ ಎಲ್ಲ ತರಬೇತಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸರ್ಟಿಫಿಕೇಟ್ ಕೋರ್ಸ್‌ಗಳಾಗಿವೆ. ಈ ಪ್ರಮಾಣ ಪತ್ರಗಳಿಗೆ ಲೈಫ್ ಟೈಮ್ ವಾರಂಟಿ ಇರಲಿದೆ. ಬಂಧಮುಕ್ತವಾದ ನಂತರ ಇದರ ಆಧಾರದಲ್ಲಿ ಸಾಲ ಸೌಲಭ್ಯ ಪಡೆದು ಉದ್ಯಮ ನಡೆಸಬಹುದು. ಕೈದಿಗಳ ಮನಃಪರಿವರ್ತನೆ ಜೊತೆಗೆ ಕ್ರಿಯಾಶೀಲವಾಗಿಟ್ಟು, ಅವರ ಜೀವನೋಪಾಯಕ್ಕೂ ನೆರವಾಗುವ ಕೌಶಲ ತರಬೇತಿ ನೀಡಿ ದುಡಿಮೆಯಲ್ಲಿ ತೊಡಗಿಸಿಕೊಳ್ಳಲು ಈ ಮೂಲಕ ನೆರವು ನೀಡಲಾಗುತ್ತಿದೆ. – ದಿವ್ಯಶ್ರೀ, ಮುಖ್ಯ ಅಧೀಕ್ಷಕರು, ಮೈಸೂರು ಕೇಂದ್ರ ಕಾರಾಗೃಹ

 

 

andolana

Recent Posts

ಸಾಲ ಬಾಧೆ ; ದಂಪತಿ ಆತ್ಮಹತ್ಯೆ

ಮಂಡ್ಯ : ಸಾಲ ಬಾಧೆಯಿಂದ ದಂಪತಿಗಳಿಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಬಿ.ಹಟ್ಟಣ ಗ್ರಾಮದಲ್ಲಿ…

6 hours ago

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

19 hours ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

20 hours ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

20 hours ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

20 hours ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

20 hours ago