ಕಳೆದ ವಾರ ವಿಶ್ವಸಂಸ್ಥೆಯ ಅಭಿವೃದ್ಧಿ ಸಂಘಟನೆಯು ತನ್ನ ೨೦೨೫ರ ಮಾನವಾಭಿವೃದ್ಧಿ ವರದಿಯನ್ನು ಪ್ರಕಟಿಸಿದೆ. ಅದರಲ್ಲಿ ೨೦೨೩ಕ್ಕೆ ಸಂಬಂಧಪಟ್ಟಂತೆ ಪ್ರತಿಯೊಂದು ದೇಶದ ಮಾನವಾಭಿವೃದ್ಧಿ ಸೂಚ್ಯಂಕದ (Human Development Index-ಎಚ್.ಡಿ.ಐ.) ಆಧಾರದ ಮೇಲೆ ೧೯೩ ದೇಶಗಳ ಶ್ರೇಣೀಕೃತ ಪಟ್ಟಿಯನ್ನೂ ಪ್ರಕಟಿಸಲಾಗಿದೆ. ಭಾರತ ೦.೬೭೬ ಎಚ್.ಡಿ.ಐ.ನೊಂದಿಗೆ ೧೩೦ನೇ ಸ್ಥಾನದಲ್ಲಿದ್ದು, ಮಧ್ಯಮಾಭಿವೃದ್ಧಿ ದೇಶಗಳ ಗುಂಪಿನಲ್ಲೇ ಮೇಲ್ಮಟ್ಟದಲ್ಲಿದೆ. ಮೊದಲ ಒಂಬತ್ತು ಸ್ಥಾನಗಳಲ್ಲಿ ಐಸ್‌ಲ್ಯಾಂಡ್(೦.೯೭೨), ನಾರ್ವೆ (೦.೯೭೦), ಸ್ವಿಟ್ಜರ್ಲ್ಯಾಂಡ್ (೦.೯೭೦), ಡೆನ್ಮಾರ್ಕ್ (೦.೯೬೨), ಜರ್ಮನಿ (೦.೯೫೯), ಸ್ವೀಡನ್ (೦.೯೫೯), ಆಸ್ಟ್ರೇಲಿಯಾ (೦.೯೫೮), ಹಾಂಕಾಂಗ್ (೦.೯೫೫) ಮತ್ತು ನೆದರ್‌ಲ್ಯಾಂಡ್ಸ್ (೦.೯೫೫) ಈ ದೇಶಗಳಿವೆ. ಜಗತ್ತಿನ ಹಿರಿಯಣ್ಣ ಅನಿಸಿಕೊಳ್ಳುತ್ತಿರುವ ಅಮೆರಿಕ (ಯುಎಸ್‌ಎ )೦.೯೩೫ ಸೂಚ್ಯಂಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಅದರ ಸ್ಥಾನ ೧೭ನೇಯದು. ಎರಡನೇ ದೊಡ್ಡ ಅರ್ಥ ವ್ಯವಸ್ಥೆಯಾಗಿರುವ ಚೀನಾ ೭೫ನೇ ಸ್ಥಾನದಲ್ಲಿದೆ.
ಎಚ್.ಡಿ.ಐ.ಯನ್ನು ಸಂಖ್ಯಾಶಾಸದ ((Statistics) ಸೂತ್ರಗಳನ್ನು ಬಳಸಿ ವಿವಿಧ ಮಾನದಂಡಗಳ ಆಧಾರದ ಮೇಲೆ ತಯಾರಿಸಲಾಗುತ್ತದೆ. ಆರೋಗ್ಯ, ಶಿಕ್ಷಣ ಮತ್ತು ಸಮಾನತೆ ಅಥವಾ ಅಸಮಾನತೆ ಇವು ಪ್ರಮುಖಮಾನದಂಡಗಳು. ಇವುಗಳಲ್ಲಿ ಮತ್ತೆ ಉಪವಿಭಾಗಗಳೂ ಗಮನಿಸಲ್ಪಡುತ್ತವೆ. ಸೂಚ್ಯಂಕವು ೦.೦ಯಿಂದ ೧.೦ವರೆಗೆ ಇರುತ್ತದೆ. ೦.೦ ಇದ್ದರೆ ಮಾನವಾಭಿವೃದ್ಧಿಯಾಗುತ್ತಿಲ್ಲ ಎಂದರ್ಥ. ೧.೦ ಎಂದರೆ ಪೂರ್ಣ ಪ್ರಮಾಣದಲ್ಲಿ ಮಾನವಾಭಿವೃದ್ಧಿಯಾಗಿದೆ ಎಂದರ್ಥ. ವಾಸ್ತವದಲ್ಲಿ ಇವೆರಡೂ ಸ್ಥಿತಿಗಳು ಇರುವುದಿಲ್ಲ. ಎರಡರ ನಡುವೆ ಎಲ್ಲಿಯೋ ಒಂದು ಕಡೆ ಪ್ರತ್ಯಕ್ಷ ಸ್ಥಿತಿ ಇರುತ್ತದೆ. ಉದಾಹರಣೆಗೆ ಶಿಕ್ಷಣವನ್ನೇ ತೆಗೆದುಕೊಂಡರೆ ಎಲ್ಲ ಅರ್ಹ ವಯಸ್ಸಿನವರಿಗೂ ಶಿಕ್ಷಣ ಕೊಟ್ಟಿದ್ದೇವೆ ಎಂದು ಹೇಳಲು ಸಾಧ್ಯವೇ ಇಲ್ಲ. ಏಕೆಂದರೆ ಪ್ರತಿ ವರ್ಷವೂ ಎಲ್ಲ ಹಂತಗಳಲ್ಲೂ ಅರ್ಹ ವಯಸ್ಸಿನವರು ಮತ್ತು ಅರ್ಹತೆಯುಳ್ಳವರು ಬರುತ್ತಲೇ ಇರುತ್ತಾರೆ.
ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಸಂಸ್ಥೆಯ ಎಲ್ಲ ಸದಸ್ಯ ದೇಶಗಳ ಅಧ್ಯಯನವನ್ನು ತನ್ನ ಸಂಶೋಧನಾ ಇಲಾಖೆಯ ಮುಖಾಂತರ ಮಾಡಿ ಎಚ್.ಡಿ.ಐ. ಲೆಕ್ಕ ಹಾಕಿ ಪ್ರಕಟಿಸುತ್ತದೆ. ಆಯಾ ದೇಶಗಳ ಸರ್ಕಾರಗಳು ಮತ್ತು ನೀತಿ ನಿರೂಪಕರಿಗೆ ಈ ಸೂಚ್ಯಂಕ ಮಾರ್ಗದರ್ಶಿಯಾಗಿ ಆರ್ಥಿಕ ಮತ್ತು ಸಾಮಾಜಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲವಾಗುತ್ತದೆ. ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕ್ರಮಗಳನ್ನು ಮಾನವಾಭಿವೃದ್ಧಿ ಹೆಚ್ಚಿಸುವ ಸಲುವಾಗಿ ಜಾರಿಗೊಳಿಸಲು ಸಾಧ್ಯವಾಗುತ್ತದೆ. ಸಂಶೋಧಕರಿಗೂ ಒಂದು ಅಧಿಕೃತ ಮಾಹಿತಿಯಾಗುತ್ತದೆ.
ಸೂಚ್ಯಂಕವು ೦.೦೦೧ರಿಂದ ೦.೪೦೦ವರೆಗೆ ಇದ್ದರೆ ಅದನ್ನು ಮಂದಗತಿಯ ಅಥವಾ ಕೆಳ ಮಟ್ಟದ ಮಾನವಾಭಿವೃದ್ಧಿ ಎಂದು ಕರೆಯಲಾಗುವುದು. ಇಂಥ ದೇಶಗಳಲ್ಲಿ ಮಾನವ ಕಲ್ಯಾಣಕ್ಕಾಗಿ ಕಠಿಣ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಳ ತುರ್ತು ಅವಶ್ಯಕತೆ ಇದೆ ಎಂದು ಅರ್ಥೈಸಬಹುದು. ಸೂಚ್ಯಂಕ ೦.೪೦೧ರಿಂದ ೦.೬೯೯ರವರೆಗೆ ಮಧ್ಯಮ ಗತಿಯ ಅಥವಾ ಸಾಧಾರಣ ಬೆಳವಣಿಗೆಯ ಮಾನವಾಭಿವೃದ್ಧಿ ಎನ್ನಲಾಗುತ್ತದೆ. ಈ ಗುಂಪಿನ ದೇಶಗಳಲ್ಲಿ ಮಾನವ ಕಲ್ಯಾಣಕ್ಕೆ ಹೆಚ್ಚು ಅವಕಾಶಗಳಿದ್ದು ಸರ್ಕಾರಗಳು ಮತ್ತು ಸಮಾಜ ಸೂಕ್ತ ಕ್ರಮಗಳನ್ನು ಅಳವಡಿಸಿಕೊಂಡರೆ ಅಭಿವೃದ್ಧಿ ಹೊಂದಿದ ದೇಶಗಳ ಮಟ್ಟದಲ್ಲಿಯೇ ಕಡಿಮೆ ಅವಧಿಯಲ್ಲಿ ಉತ್ತಮ ಮಾನವಾಭಿವೃದ್ಧಿ ಸಾಧಿಸಬಹುದು.
ಮೂರನೆಯ ಗುಂಪಿನಲ್ಲಿ ಸೂಚ್ಯಂಕವು ೦.೭೦೦ರಿಂದ ೦.೯೯೯ರವರೆಗೆ ಇರುತ್ತದೆ. ಅಂದರೆ ಈ ದೇಶಗಳಲ್ಲಿ ಈಗಾಗಲೇ ಸಾಕಷ್ಟು ಸಾಧಿಸಲಾಗಿದೆ ಮತ್ತು ಸಾಧಿಸಬೇಕಾದದ್ದು ಇನ್ನೂ ಇದೆ ಎಂದರ್ಥ. ಅಭಿವೃದ್ಧಿ ಕ್ರಿಯೆ ನಿರಂತರ. ಸಾಧಿಸಿದ್ದನ್ನು ಉಳಿಸಿಕೊಂಡು ಹೆಚ್ಚಿನದನ್ನು ಸಾಧಿಸಲು ಸರ್ಕಾರಗಳು ಮತ್ತು ಸಮಾಜ ಮುಂದಿನ ಹೆಜ್ಜೆ ಇಡಬೇಕು. ಭಾರತದಲ್ಲಿ ಮಾನವಾಭಿವೃದ್ಧಿ ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಅರಸರಂತಹ ಪ್ರಗತಿಶೀಲ ಮತ್ತು ಉದಾರವಾದಿ ಹಲವು ಸಂಸ್ಥಾನಿಕರು ಬಹಳಷ್ಟು ಜನ ಕಲ್ಯಾಣ ಕಾರ್ಯಗಳನ್ನು ಮಾಡಿರುವುದನ್ನು ಕಾಣುತ್ತಿದ್ದೇವೆ. ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ರವರ ಹೆಸರು ಈ ವಿಷಯದಲ್ಲಿ ಎಂದೂ ಮರೆಯಲಾರದಂತಹುದು. ಬ್ರಿಟಿಷ್ ಆಡಳಿತಗಾರರು ತಮ್ಮ ಆಡಳಿತದ ಅನುಕೂಲಕ್ಕಾಗಿ ಎಂದು ಇಂಗ್ಲಿಷ್ ಶಿಕ್ಷಣ ತಂದು ಹಲವು ಸುಧಾರಣೆಗಳನ್ನು ಮಾಡಿದರು. ಆದರೆ ಇವೆಲ್ಲ ದೂರದ ಹಳ್ಳಿಗಳವರೆಗೆ ತಲುಪಿರಲಿಲ್ಲ.
ಸ್ವಾತಂತ್ರ್ಯಾನಂತರ ನಮ್ಮ ಸರ್ಕಾರಗಳು ಆರ್ಥಿಕಾಭಿವೃದ್ಧಿಯಲ್ಲಿ ಮಾನವಾಭಿವೃದ್ಧಿಗೆ ಒತ್ತು ಕೊಡುತ್ತ ಬಂದಿವೆ. ಪಂಚ ವಾರ್ಷಿಕ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅಂದು ಆಹಾರ ಧಾನ್ಯಗಳೂ ಸೇರಿದಂತೆ ಅನೇಕ ಬಾಬುಗಳಲ್ಲಿ ಪರಾವಲಂಬಿಯಾಗಿದ್ದ ದೇಶವನ್ನು ಸ್ವಾವಲಂಬಿ ಮತ್ತು ಆತ್ಮ ನಿರ್ಭರ ಆಗುವತ್ತ ಮುನ್ನಡೆಸುತ್ತಿವೆ. ಆದರೂ ಮಾನವಾಭಿವೃದ್ಧಿಯಲ್ಲಿ ನಾವು ಸ್ವಲ್ಪ ಹಿಂದಿದ್ದೇವೆ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. ಆದರೂ ಪ್ರಗತಿಯ ವೇಗ ಹೆಚ್ಚಿದೆ.
೨೦೨೨ರಲ್ಲಿ ೦.೬೭೬ ಇದ್ದ ನಮ್ಮ ಎಚ್.ಡಿ.ಐ.೨೦೨೩ರಲ್ಲಿ ೦.೬೮೫ಕ್ಕೆ ಏರಿದೆ. ಅಂದರೆ ೦.೦೦೯ ಹೆಚ್ಚಾಗಿದೆ ಎಂದಂತಾಯಿತು. ಇನ್ನೆರಡು ವರ್ಷಗಳಲ್ಲಿ ೦.೭೦೦ ದಾಟಿ ತೀವ್ರತರ ಮಾನವಾಭಿವೃದ್ಧಿ ದೇಶಗಳ ಗುಂಪಿಗೆ ಸೇರುವ ಆಶಾಭಾವನೆಯನ್ನು ಇಟ್ಟುಕೊಳ್ಳಬಹುದು. ಎಚ್.ಡಿ.ಐ. ಲೆಕ್ಕ ಹಾಕುವ ಸಂಸ್ಥೆಯೇ ಹೇಳಿರುವಂತೆ ನಮ್ಮ ಎಚ್.ಡಿ.ಐ. ೧೯೯೦ರಿಂದ ೨೦೨೩ರ ಅವಧಿಯಲ್ಲಿ ಶೇ. ೫೩ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಜಾಗತಿಕ ಎಚ್.ಡಿ.ಐ. ಬೆಳವಣಿಗೆ ಸ್ವಲ್ಪ ನಿಧಾನಗತಿಯಲ್ಲಿದೆ ಎಂದೂ ಹೇಳಲಾಗಿದೆ. ಆದರೂ ನಮ್ಮಲ್ಲಿರುವ ಆದಾಯದಲ್ಲಿಯ ಅಸಮಾನತೆ ಎಚ್. ಡಿ.ಐ.ಯನ್ನು ಶೇ.೩೦.೭ರಷ್ಟು ಕಡಿಮೆ ಮಾಡಿದೆ ಎಂದು ಸಂಸ್ಥೆ ಹೇಳಿದೆ ವಾರ್ಷಿಕ ತಲಾ ಆದಾಯ ಹೆಚ್ಚುತ್ತಿದ್ದರೂ ಈ ಅಸಮಾನತೆ ಒಂದು ನ್ಯೂನತೆ ದೊಡ್ಡ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸಲು ಸರ್ಕಾರಗಳು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಸರಾಸರಿ ತಲಾ ಆದಾಯ ಬೆಳೆದರಷ್ಟೇ ಸಾಲದು. ಅದು ಸಮಾಜದ ಕೊನೆಯ ವ್ಯಕ್ತಿಯವರೆಗೆ ತಲುಪಿ ಅವರ ಜೀವನಮಟ್ಟ ಸುಧಾರಿಸಿ ಎಲ್ಲ ಸೌಲಭ್ಯಗಳನ್ನೂ ಅನುಭವಿಸುವಂತಾಗಬೇಕು.
ಮಹಿಳಾ ಸಬಲೀಕರಣದಲ್ಲೂ ಸುಧಾರಣೆಗಳು ಆಗಬೇಕು. ಮಹಿಳೆಯರು ದುಡಿಯುವ ಪ್ರಮಾಣ (Participation in Labour force ) ಹೆಚ್ಚಬೇಕು ರಾಜಕೀಯ ಕ್ಷೇತ್ರಗಳಲ್ಲೂ ಅವರ ಪಾಲುದಾರಿಕೆ ಹೆಚ್ಚಬೇಕು. ಸಂಸತ್ ಮತ್ತು ವಿಧಾನ ಮಂಡಲಗಳಲ್ಲಿ ಶೇ.೩೦ ಮೀಸಲಿಟ್ಟರೆ ಸಾಲದು. ಅದಕ್ಕಾಗಿ ಪ್ರೋತ್ಸಾಹ ಬೇಕು.
” ೨೦೨೨ರಲ್ಲಿ ೦.೬೭೬ ಇದ್ದ ನಮ್ಮ ಎಚ್.ಡಿ.ಐ.೨೦೨೩ರಲ್ಲಿ ೦.೬೮೫ಕ್ಕೆ ಏರಿದೆ. ಅಂದರೆ ೦.೦೦೯ ಹೆಚ್ಚಾಗಿದೆ ಎಂದಂತಾಯಿತು. ಇನ್ನೆರಡು ವರ್ಷಗಳಲ್ಲಿ ೦.೭೦೦ ದಾಟಿ ತೀವ್ರತರ ಮಾನವಾಭಿವೃದ್ಧಿ ದೇಶಗಳ ಗುಂಪಿಗೆ ಸೇರುವ ಆಶಾಭಾವನೆಯನ್ನು ಇಟ್ಟುಕೊಳ್ಳಬಹುದು. ಎಚ್.ಡಿ.ಐ. ಲೆಕ್ಕ ಹಾಕುವ ಸಂಸ್ಥೆಯೇ ಹೇಳಿರುವಂತೆ ನಮ್ಮ ಎಚ್.ಡಿ.ಐ. ೧೯೯೦ರಿಂದ ೨೦೨೩ರ ಅವಧಿಯಲ್ಲಿ ಶೇ. ೫೩ರಷ್ಟು ಹೆಚ್ಚಾಗಿದೆ. ಈ ಅವಽಯಲ್ಲಿ ಜಾಗತಿಕ ಎಚ್.ಡಿ.ಐ. ಬೆಳವಣಿಗೆ ಸ್ವಲ್ಪ ನಿಧಾನಗತಿಯಲ್ಲಿದೆ ಎಂದೂ ಹೇಳಲಾಗಿದೆ.”
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…