ಶಿವಾಜಿ ಗಣೇಶನ್ ಅವರ ವಾರದ ಅಂಕಣ
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಈಗ ಬಿಜೆಪಿಗಿಂತ ಬಲಿಷ್ಠವಾಗಿದೆ
ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆ -ಲಿತಾಂಶ ಬರಲಿರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯೇ? ಖಂಡಿತ ಆಗಲಾರದು. ಈ -ಲಿತಾಂಶವೇ ಮುಂದಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಹೇಳುವುದು ಅಷ್ಟು ಸುಲಭವಲ್ಲ. ಮುಂದಿನ ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಬ, ಗೋವಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ನಾಲ್ಕು ರಾಜ್ಯಗಳ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಒಟ್ಟು ೨೮ ಸ್ಥಾನಗಳಲ್ಲಿ ಬಿಜೆಪಿ ೧೩, ಅದರ ಮಿತ್ರಪಕ್ಷಗಳಾದ ಜನತಾದಳ (ಎಸ್) ಮತ್ತು ಬಿಹಾರದ ಜನತಾದಳ (ಯು) ಮತ್ತು ಮಹಾರಾಷ್ಟ್ರದ ಏಕ್ನಾಥ್ ಶಿಂದೆ ಶಿವಸೇನೆ ಬಣ ತಲಾ ಒಂದೊಂದು ಸೀಟುಗಳನ್ನು ಗೆದ್ದುಕೊಂಡು ಒಟ್ಟು ಎನ್ಡಿಎ ೧೬ ಸೀಟುಗಳನ್ನು ಪಡೆದು ತನ್ನ ಪಾರುಪತ್ಯ ಮೆರೆದಿದೆ.
ಆದರೆ ಕರ್ನಾಟಕದ ನಾಲ್ಕು ಸೀಟುಗಳಲ್ಲಿ ಬಿಜೆಪಿ-೩ ಮತ್ತು ಜನತಾದಳ-೧ ಸೀಟು ಪಡೆಯುವ ಮೂಲಕ ಆಳುವ ಕಾಂಗ್ರೆಸ್ಗೆ ಮುಖಭಂಗ ಉಂಟುಮಾಡಿರುವುದಂತೂ ನಿಜ. ಕರ್ನಾಟಕದಲ್ಲಿ ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರಗಳ ಚುನಾವಣೆ ಇತಿಹಾಸ ನೋಡಿದರೆ ಪ್ರತಿ ಚುನಾವಣೆಯಲ್ಲೂ ಹಿಂದಿನ ಜನಸಂಘ ಕಾಲದಿಂದ ಬಿಜೆಪಿಯೇ ಹೆಚ್ಚು ಸೀಟುಗಳನ್ನು ಗೆಲ್ಲುತ್ತಾ ಬರುತ್ತಿರುವುದು ವಾಸ್ತವ. ಶಿಕ್ಷಕರ ವಿಶೇಷವಾಗಿ ಪದವೀಧರ ಮತದಾರರ ಪಟ್ಟಿಯಲ್ಲಿ ಪ್ರತಿ ವರ್ಷವೂ ಹೆಸರು ಸೇರ್ಪಡೆ ಮಾಡಿಸುವಲ್ಲಿ ಬಿಜೆಪಿ ಕಾರ್ಯಕರ್ತರು ಎತ್ತಿದ ಕೈ. ಇದರ ಪರಿಣಾಮ ಈ ಕ್ಷೇತ್ರಗಳಲ್ಲಿನ ಬಹುತೇಕ ಗೆಲುವು ಅವರದೇ ಆಗುತ್ತಾ ಬಂದಿರುವುದು ವಾಸ್ತವ.
ಕರ್ನಾಟಕದಲ್ಲಿ ಈ ನಾಲ್ಕು ಕ್ಷೇತ್ರಗಳು ಬಿಜೆಪಿ ಮತ್ತು ಜಾ.ದಳ ಮೈತ್ರಿಕೂಟದ ಪಾಲಾಗಿರುವುದರಿಂದ ಮುಂದಿನ ಎರಡು ವರ್ಷಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದು ಎರಡೂ ಪಕ್ಷಗಳ ನಾಯಕರು ಮರಗಾಲು ಕಟ್ಟಿಕೊಂಡು ಕುಣಿಯುತ್ತಿzರೆ. ತಾವು ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದುಕೊಂಡಿರುವ ಈ ಎರಡು ಪಕ್ಷಗಳ ನಾಯಕರು, ಮುಂದಿನ ದಿನಗಳಲ್ಲಿ ತಮ್ಮ ಆಡಳಿತದಲ್ಲಿ ಈಗ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ಸಿನ ನಾಯಕರಿಗೆ ತಕ್ಕಪಾಠ ಕಲಿಸುವ ಜೊತೆಗೆ ಹಲವು ಪ್ರಕರಣಗಳಲ್ಲಿ ಕಾನೂನಿನ ಮೂಲಕ ಶಿಕ್ಷೆ ನೀಡುವ ಅಹಂಕಾರದ ಮಾತುಗಳನ್ನು ಆಡುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಕಳೆದ ಏಪ್ರಿಲ್ನಲ್ಲಿ ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ನೇರವಾಗಿ ಜನರಿಂದ ನಡೆದ ಚುನಾವಣೆಯ ಫಲಿತಾಂಶವನ್ನೂ ಅವರು ಗಮನಿಸಬೇಕು. ಕೇವಲ ಶಿಕ್ಷಕರು ಮತ್ತು ಪದವೀಧರ ಮತದಾರರಿಂದ ನಡೆದ ಚುನಾವಣೆಯು ಎಂದಿಗೂ ದಿಕ್ಸೂಚಿ ಆಗಲಾರದು. ಇನ್ನೂ ಒಂದೂವರೆ ವರ್ಷಗಳಲ್ಲಿ ರಾಜಕೀಯ ಬೆಳವಣಿಗೆಗಳು ಏನಾಗುತ್ತವೆ ಎನ್ನುವುದು ಮುಂದಿನ ಚುನಾವಣೆಗೆ ದಿಕ್ಸೂಚಿ ಆಗಬಲ್ಲದೆ ಹೊರತು, ಈ ಕ್ಷಣದ ಬೆಳವಣಿಗೆಯೇ ಮುಂದಿನ ಚುನಾವಣೆಗೆ ಅಡಿಗಲ್ಲು ಎನ್ನುವುದೆಲ್ಲ ಭ್ರಮೆಯಷ್ಟೇ ಎನ್ನುವುದು ರಾಜಕಾರಣದ ಇತಿಹಾಸ ಬಲ್ಲವರಿಗಷ್ಟೇ ಗೊತ್ತು.
ಬಿಜೆಪಿಗೆ ಈಗ ಮುಖ್ಯವಾಗಿರುವುದು ದೊಡ್ಡ ರಾಜ್ಯವಾದ ಮತ್ತು ಕೇಂದ್ರ ಸರ್ಕಾರಕ್ಕೆ ಹೆಚ್ಚು ಲೋಕಸಭೆ ಸದಸ್ಯರನ್ನು ಕಳುಹಿಸಿಕೊಡುವ ಉತ್ತರ ಪ್ರದೇಶ. ಈ ರಾಜ್ಯದಲ್ಲಿ ವಿಧಾನ ಪರಿಷತ್ನ ಹದಿಮೂರು ಸೀಟುಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತದಲ್ಲಿರುವ ಬಿಜೆಪಿ ಆರು ಸ್ಥಾನಗಳನ್ನು ಗೆದ್ದರೆ ಪ್ರಮುಖ ವಿರೋಧ ಪಕ್ಷ ಸಮಾಜವಾದಿ ಪಕ್ಷ ಐದು ಸೀಟುಗಳನ್ನು ಪಡೆದುಕೊಂಡು ಬಿಜೆಪಿಗೆ ಬಿಸಿ ಮುಟ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷವು ಗೆಲುವು ಸಾಧಿಸಿರುವುದು ಬಿಜೆಪಿಗೆ ನುಂಗಲಾರದ ತುತ್ತು. ಹಾಗೆಯೇ ಲಖನೌ ಮತ್ತು ಬಿಜೆಪಿಯ ಕೈಯಲ್ಲಿದ್ದ ಆಗ್ರಾ ಶಿಕ್ಷಕರ ಕ್ಷೇತ್ರದಲ್ಲೂ ಸಮಾಜವಾದಿ ಪಕ್ಷವು ಗೆಲುವು ಸಾಧಿಸಿದೆ.
ಹಾಗೆಯೇ ಆರ್ ಎಸ್ ಎಸ್ ಮುಖ್ಯಕಾರ್ಯಸ್ಥಾನವಾಗಿರುವ ಮಹಾರಾಷ್ಟ್ರದ ನಾಗಪುರದ ಪದವೀಧರರ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದುಕೊಂಡಿದ್ದು, ಬಿಜೆಪಿಗೆ ಪ್ರಮುಖ ಕ್ಷೇತ್ರಗಳಲ್ಲಿಯೇ ಮುಖಭಂಗವಾಗಿರುವುದನ್ನು ತಳ್ಳಿಹಾಕುವಂತಿಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಸ್ಲಿಮರು ಮತ್ತು ಪರಿಶಿಷ್ಟ ಜತಿ ಸೇರಿದಂತೆ ಹಿಂದುಳಿದ ಜತಿಗಳ ಮೇಲೆ ನಡೆಸುತ್ತಿರುವ ದಮನಕಾರಿ ನೀತಿಯಿಂದಾಗಿ ಬಿಜೆಪಿಯ ವರ್ಚಸ್ಸು ಪ್ರತಿ ಲೋಕಸಭೆ ಚುನಾವಣೆಯಲ್ಲಿಯೂ ಕುಗ್ಗುತ್ತಾ ಬಂದಿದೆ. ೨೦೧೪ರ ಲೋಕಸಭೆ ಚುನಾವಣೆಯಲ್ಲಿ ಒಟ್ಟು ೮೦ ಸ್ಥಾನಗಳ ಪೈಕಿ ೭೧ ಸ್ಥಾನಗಳನ್ನು ಪಡೆದಿದ್ದ ಬಿಜೆಪಿ, ೨೦೧೯ರಲ್ಲಿ ೬೨ ಗಳಿಸಿದ್ದರೆ ೨೦೨೪ರ ಚುನಾವಣೆಯಲ್ಲಿ ಅದರ ಸಂಖ್ಯಾಬಲ ೩೩ಕ್ಕೆ ಕುಸಿದಿದೆ.
ಸಮಾಜವಾದಿ ಪಕ್ಷ ಈಗ ೩೭ ಸ್ಥಾನಗಳನ್ನು ಪಡೆದಿದ್ದು ಬಿಜೆಪಿಗಿಂತ ಬಲಿಷ್ಠವಾಗಿದೆ. ಇದೇ ಸ್ಥಿತಿ ಮುಂದುವರಿದರೆ ಉತ್ತರ ಪ್ರದೇಶದಲ್ಲಿ ಮುಂದೆ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಮತ್ತು ಕಾಂಗ್ರೆಸ್ ಮೈತ್ರಿಕೂಟವು ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ನಿರ್ಲಕ್ಷಿಸಲಾಗದು. ಅಯೋಧ್ಯೆಯಲ್ಲಿ ಬಿಜೆಪಿಯ ಚುನಾವಣೆಯ ಪ್ರಬಲ ಅಸವಾಗಿದ್ದ ಶ್ರೀರಾಮ ಮಂದಿರ ನಿರ್ಮಾಣವಾದರೂ ಅಯೋಧ್ಯೆಯ ಸಾಮಾನ್ಯ ಲೋಕಸಭೆ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷವು ಪರಿಶಿಷ್ಟ ಜತಿಯ ನಾಯಕರೊಬ್ಬರನ್ನು ನಿಲ್ಲಿಸಿ ಬಿಜೆಪಿಯ ವಿರುದ್ಧ ಜಯಸಾಧಿಸಿರುವುದು ಸಾಮಾನ್ಯ ಸಂಗತಿಯಲ್ಲ. ಮುಸ್ಲಿಮರ ವಿರುದ್ಧ ನಡೆಸುವ ಮುಖ್ಯಮಂತ್ರಿ ಯೋಗಿಯ ಬುಲ್ಡೋಜರ್ ನೀತಿ ಮತ್ತು ಈಗ ಪ್ರಸ್ತುತ ಆಡಳಿತ ವ್ಯವಸ್ಥೆಯನ್ನು ಬದಲಾಯಿಸುವ ಮಾತನಾಡುತ್ತಿರುವ ಯುವಕರಿಗೆ ರಾಜ್ಯದಲ್ಲಿ ಉದ್ಯೋಗ ಸಿಗದಂತೆ ಕಾಯ್ದೆಯೊಂದನ್ನು ಮಾಡುವ ಉದ್ದೇಶ ಆ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದನ್ನು ನಿರಾಕರಿಸಲಾಗದು. ಜೊತೆಗೆ ಈ ಉದ್ದೇಶಿತ ಕಾಯ್ದೆಯು ಸಂವಿಧಾನಬಾಹಿರ ಅಗುವ ಸಾಧ್ಯತೆಯೇ ಹೆಚ್ಚು. ಪ್ರಜಪ್ರಭುತ್ವದಲ್ಲಿ ಭಿನ್ನಮತ, ಪ್ರತಿಭಟನೆಯನ್ನು ಹತ್ತಿಕ್ಕುವ ಮತ್ತು ಯುವಕರಲ್ಲಿ ಸರ್ಕಾರವನ್ನು ಪ್ರಶ್ನಿಸುವ ಮತ್ತು ವಿರುದ್ಧ ಮಾತನಾಡುವ ಹಕ್ಕನ್ನು ಚಿವುಟಿಹಾಕುವ ಪ್ರಯತ್ನಕ್ಕೆ ಯಶಸ್ಸು ಸಿಗುವುದಿಲ್ಲ ಎನ್ನುವುದನ್ನು ದೇಶದ ರಾಜಕೀಯ ಇತಿಹಾಸ ನೋಡಿದರೆ ಅರ್ಥವಾದೀತು.
ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಸಮಾಜವಾದಿ ಪಕ್ಷವು ಅಲ್ಲಲ್ಲಿ ನೆಲೆ ಇರುವ ಕಾಂಗ್ರೆಸ್ ಪಕ್ಷವನ್ನು ಜೊತೆಗಿಟ್ಟುಕೊಳ್ಳುವ ತಂತ್ರಗಾರಿಕೆ ಮಾಡುತ್ತಿದೆ. ಬಹುತೇಕ ರಾಜ್ಯಗಳಲ್ಲಿ ನೆಲೆ ಕಳೆದುಕೊಂಡಿರುವ ಒಂದು ಕಾಲಕ್ಕೆ ಹಲವಾರು ವರ್ಷ ಇಡೀ ದೇಶವನ್ನೇ ಆಳಿದ ಕಾಂಗ್ರೆಸ್ಸಿಗೂ ಇದೇ ಬೇಕಾಗಿದೆ. ಕಾಂಗ್ರೆಸ್ ಈಗ ಪ್ರಾದೇಶಿಕ ಪಕ್ಷಗಳ ಜೊತೆ ಪರಾವಲಂಬಿ ರಾಜಕಾರಣ ಮಾಡುವ ಸ್ಥಿತಿಗೆ ತಲುಪಿರುವುದು ವಿಪರ್ಯಾಸ. ಸಮಾಜವಾದಿ ಪಕ್ಷವು ಈಗಾಗಲೇ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ವರ್ಗಗಳ ರಾಜಕೀಯ ಒಕ್ಕೂಟವನ್ನು ರಚಿಸಿಕೊಂಡಿದೆ. ತಂದೆಯ ಮರಣದ ನಂತರವೂ ಅಖಿಲೇಶ್ ಯಾದವ್ ಪಕ್ಷವನ್ನು ಬಲಗೊಳಿಸುವಲ್ಲಿ ಚುರುಕಾಗಿಯೇ ಇದ್ದಾರೆ. ಲೋಕಸಭೆಯಲ್ಲೂ ಸಮಾಜವಾದಿ ಪಕ್ಷವು ಕ್ರಿಯಾಶೀಲವಾಗಿರುವಂತೆ ಅವರು ಮುತುವರ್ಜಿ ವಹಿಸಿರುವುದು ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಆಳುವ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ರಾಜಕೀಯ ಶಕ್ತಿಯನ್ನು ಮೈಗೂಡಿಸಿಕೊಂಡಿರುವುದು ಅವರ ರಾಜಕೀಯ ನಡೆಯಿಂದ ಕಾಣುತ್ತದೆ.
ಉತ್ತರ ಪ್ರದೇಶದ ಒಟ್ಟು ವಿಧಾನಸಭೆ ಸ್ಥಾನಗಳು ೪೦೩ ಇದ್ದು , ಇದರಲ್ಲಿ ಬಿಜೆಪಿ ೨೫೫ ಇದ್ದರೆ ಸಮಾಜವಾದಿ ಪಕ್ಷದ ಸಂಖ್ಯಾಬಲ ೧೦೦ ಇದೆ. ಒಂದು ಕಾಲಕ್ಕೆ ಮೂರು ಬಾರಿ ಅಧಿಕಾರ ನಡೆಸಿದ ಬಿಎಸ್ಪಿ ಪ್ರಸ್ತುತ ವಿಧಾನಸಭೆಯಲ್ಲಿ ಒಂದೇ ಸ್ಥಾನ ಪಡೆದಿದ್ದು ೨೦೨೪ರ ಚುನಾವಣೆಯಲ್ಲಿ ಲೋಕಸಭೆಯಲ್ಲಿ ಒಂದು ಸ್ಥಾನವನ್ನೂ ಪಡೆದಿಲ್ಲದಿರುವುದನ್ನು ಗಮನಿಸಿದರೆ ಮುಂದಿನ ಚುನಾವಣೆಯಲ್ಲಿ ಆ ಪಕ್ಷದ ರಾಜಕೀಯ ಭವಿಷ್ಯದ ಬಗೆಗೆ ಲೆಕ್ಕಾಚಾರ ಹಾಕುವುದು ಕಷ್ಟದ ಮಾತು. ಅದೀಗ ಶೂನ್ಯದಿಂದ ರಾಜಕೀಯ ಆರಂಭಿಸಬೇಕಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಧೂಳಿಪಟವಾಗಿರುವ ಬಿಎಸ್ಪಿಯನ್ನು ಬಲಪಡಿಸಲು ಆ ಪಕ್ಷದ ನಾಯಕಿ ಮಾಯಾವತಿ ಅವರ ಕಾರ್ಯತಂತ್ರ ಮಾತ್ರ ಇನ್ನೂ ಗೌಪ್ಯವಾಗಿಯೇ ಇದೆ. ಇತ್ತ ಚುನಾವಣಾ ತಂತ್ರದ ಚಾಣಕ್ಯ ಎಂದೇ ಖ್ಯಾತಿಪಡೆದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈಗಾಗಲೇ ವಿಧಾನಸಭೆ ಚುನಾವಣೆಗೆ ಪ್ರತಿಯೊಂದು ರಾಜ್ಯಕ್ಕೂ ಪ್ರತ್ಯೇಕ ಚುನಾವಣಾ ತಂತ್ರಗಾರಿಕೆ ಹೆಣೆಯುವ ಮತ್ತು ಸ್ಥಳೀಯ ಅವಶ್ಯಕತೆಗಳಿಗನುಗುಣವಾಗಿ ವಿರೋಧಿ ರಾಜಕೀಯ ಪಕ್ಷಗಳನ್ನು ಮಣಿಸುವ ಕಾರ್ಯತಂತ್ರವನ್ನು ಸಿದ್ಧಗೊಳಿಸುತ್ತಿದ್ದಾರೆ. ಈಗಾಗಲೇ ಅವರು ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ನಾಗರಿಕ ತಿದ್ದುಪಡಿ ಕಾಯ್ದೆಯನ್ನು ಜರಿಗೆ ತರುವ ಮೂಲಕ ವಿದೇಶಿ ನಾಗರಿಕರನ್ನು ಹೊರಗಟ್ಟುವುದಾಗಿ ಘೋಷಿಸಿದ್ದಾರೆ. ಹಾಗೆಯೇ ಪಂಜಬ್ ಮೇಲೆ ಕಣ್ಣಿಟ್ಟಿರುವ ಅವರು, ಯುವಜನರು ಡ್ರಗ್ಸ್ಗೆ ಶರಣಾಗಿದ್ದು ಆ ಡ್ರಗ್ಸ್ ದಂಧೆಯನ್ನು ಹೇಳ ಹೆಸರಿಲ್ಲದಂತೆ ಮಾಡುವುದಾಗಿ ಈಗಾಗಲೇ ಭರವಸೆ ಕೊಡಲು ಆರಂಭಿಸಿದ್ದಾರೆ.
ಇನ್ನು ನಾಲ್ಕು ತಿಂಗಳಲ್ಲಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಎದುರಿಸಲು ಸಿದ್ಧವಾಗಿರುವ ಬಿಜೆಪಿಗೆ ತನ್ನ ಪಕ್ಷ ಅಧಿಕಾರದಲ್ಲಿರುವ ಗೋವಾ ಮತ್ತು ಉತ್ತರಾಖಂಡದ ಚುನಾವಣೆ ಎದುರಿಸುವುದು ಕಷ್ಟವೇನಲ್ಲ. ಆದರೆ ಬದಲಾವಣೆಯ ಸೂಚನೆ ಇರುವ ಉತ್ತರ ಪ್ರದೇಶದ ಅಧಿಕಾರವನ್ನು ಉಳಿಸಿಕೊಳ್ಳಲು ತನ್ನೆಲ್ಲ ತಂತ್ರಗಾರಿಕೆಯನ್ನು ಬಿಜೆಪಿ ಬಳಸಬೇಕಿದೆ. ಪಂಜಬ್ನಲ್ಲಿ ಆಮ್ ಆದ್ಮಿ ಪಕ್ಷವು ಅಧಿಕಾರ ನಡೆಸುತ್ತಿದ್ದು ಅಕಾಲಿದಳದ ಜೊತೆಗಿನ ಮೈತ್ರಿಯಿಂದ ಈ ರಾಜ್ಯದ ಅಧಿಕಾರವನ್ನು ತನ್ನದಾಗಿಸಿಕೊಳ್ಳಬೇಕೆನ್ನುವುದು ಗೃಹ ಸಚಿವ ಅಮಿತ್ ಶಾ ಬಯಕೆ. ದೆಹಲಿಯ ಅಧಿಕಾರ ಕಳೆದುಕೊಂಡು, ಇಡಿ ಮತ್ತು ಸಿಬಿಐ ದಾಳಿಯಿಂದ ತತ್ತರಿಸಿರುವ ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಎಎಪಿಯ ನಾಯಕ ಕೇಜ್ರಿವಾಲ್ ರಾಜಕೀಯವಾಗಿ ಮೊದಲಿನಷ್ಟು ಶಕ್ತರಾಗಿಲ್ಲ.
ದೆಹಲಿ ಮದ್ಯದ ಅಂಗಡಿಗಳ ಪರವಾನಗಿ ಹಗರಣದಲ್ಲಿ ಕೇಜ್ರಿವಾಲ್ ಮತ್ತು ಎಎಪಿಯ ಕೆಲವು ನಾಯಕರನ್ನು ಇಡಿ ಮತ್ತು ಸಿಬಿಐ ದಾಳಿಯ ಮೂಲಕ ದುರ್ಬಲಗೊಳಿಸಿರುವುದರಿಂದ ಬಿಜೆಪಿಗೆ ಈಗ ಶಕ್ತಿ ಬಂದಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಪಂಜಬ್ನಲ್ಲಿಯೂ ಹಲವು ಉಚಿತ ಕಾರ್ಯಕ್ರಮಗಳನ್ನು ಜರಿಗೆ ತರುವ ಮೂಲಕ ರಾಜ್ಯದ ಅಭಿವೃದ್ಧಿಯೂ ಸಮಾಧಾನಕರವಾಗಿಲ್ಲದಿರುವುದು ಮತ್ತು ಆರ್ಥಿಕವಾಗಿ ಬಿಕ್ಕಟ್ಟು ಎದುರಿಸುತ್ತಿರುವುದರಿಂದ ಈ ಬಾರಿಯ ಚುನಾವಣೆ ಎಎಪಿ ಗೆ ಮೊದಲಿನಷ್ಟು ಸುಲಭವಾಗಿಲ್ಲದಿರುವುದು ಬಿಜೆಪಿಗೆ ಅನುಕೂಲಕರ ವಾತಾವರಣ ಕಲ್ಪಿಸಿದೆ. ಆದರೆ ಸುಖ್ಬೀರ್ ಸಿಂಗ್ ನೇತೃತ್ವದ ಅಕಾಲಿ ದಳದ ನೇತೃತ್ವದಲ್ಲಿಯೇ ಬಿಜೆಪಿಯು ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ. ಬಿಜೆಪಿಯು ಏಕಪಕ್ಷವಾಗಿ ಅಧಿಕಾರ ಹಿಡಿಯುವುದಕ್ಕೆ ಪಂಜಬ್ನ ಸಿಖ್ ಮತದಾರರು ಅಷ್ಟು ಸುಲಭದಲ್ಲಿ ಮಣಿಯುವವರಲ್ಲ ಎನ್ನುವುದು ಸತ್ಯ
” ಇನ್ನು ನಾಲ್ಕು ತಿಂಗಳಲ್ಲಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಎದುರಿಸಲು ಸಿದ್ಧವಾಗಿರುವ ಬಿಜೆಪಿಗೆ ತನ್ನ ಪಕ್ಷ ಅಧಿಕಾರದಲ್ಲಿ ರುವ ಗೋವಾ ಮತ್ತು ಉತ್ತರಾಖಂಡದ ಚುನಾವಣೆ ಎದುರಿಸುವುದು ಕಷ್ಟವೇನಲ್ಲ. ಆದರೆ ಬದಲಾವಣೆಯ ಸೂಚನೆ ಇರುವ ಉತ್ತರ ಪ್ರದೇಶದ ಅಧಿಕಾರವನ್ನು ಉಳಿಸಿಕೊಳ್ಳಲು ತನ್ನೆಲ್ಲ ತಂತ್ರಗಾರಿಕೆಯನ್ನು ಬಿಜೆಪಿ ಬಳಸಬೇಕಿದೆ.”
ಹಾಸನ: ಹಾಸನದಲ್ಲಿ ಹಾಸನಾಂಬೆ ದರ್ಶನದ ಸಂಭ್ರಮ ಮುಂದುವರಿದಿದೆ. ದರ್ಶನದ ಮೂರನೇ ದಿನವಾದ ಇಂದು ತಾಯಿಯ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ…
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ವರದಿಯಾಗಿದೆ.…
ನವದೆಹಲಿ: ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೆಚ್ಚುವರಿ ತೆರಿಗೆ ಪಾಲಿನ ಕಂತನ್ನು ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ 4,504 ಕೋಟಿ ರೂಪಾಯಿ ಹಂಚಿಕೆಯಾಗಿದೆ…
ಮೈಸೂರು: ಹಳದಿ–ಕೆಂಪಿನ ರಂಗು… ಕನ್ನಡದ ಕಂಪು… ಕರುನಾಡೆಲ್ಲ ರಾಜ್ಯೋತ್ಸವದ ಸಂಭ್ರಮ! ನಮ್ಮ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಹೆಮ್ಮೆಯಿಂದ…
‘ಅವರಿಲ್ರಿ ಮನ್ಯಾಗ ಹಿಂದಾಗಡೆ ಬರ್ರಿ’ ಎಂದು ಹೇಳಿದ ಧಾರವಾಡ ಮಹಿಳೆಗೆ ಬೆಂಗಳೂರಿಗನೊಬ್ಬ ಹಿಂದಗಡೆ ಹೋಗಿದ್ದನಂತೆ ‘ಹವಣಿ ಇರಲಿ’ ಉಳ್ಳಾಗಡ್ಡಿ ಹೆಚ್ಚುವ…
‘ಒಣ ಮೀನ್ ಚಟ್ನಿ, ಕೊಚ್ಚಕ್ಕಿ ಗಂಜಿ ಇದ್ರೆ ಉಂಡಾತ್’ ಎನ್ನುವ ನಮ್ಮೂರವರಿಗೆ ಕುಂದಾಪ್ರ ಕನ್ನಡ ಬದುಕೇ ಹೌದು ಆಷಾಢ ಮಾಸದ…