Andolana originals

ಹಾಲಿನ ದರ ಏರಿಕೆ ನಡುವೆಯೂ ೫ ರೂ.ಗೆ ಟೀ, ಕಾಫಿ!

ಎಂ.ನಾರಾಯಣ

ತಿ.ನರಸೀಪುರ: ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿರುವ ಟೀ ಅಂಗಡಿ ಮಾಲೀಕ ಚಿನ್ನಸ್ವಾಮಿ

ತಿ.ನರಸೀಪುರ: ಮಂಡ್ಯದ ವೈದ್ಯ ಡಾ.ಶಂಕರೇಗೌಡರು ಕೇವಲ ೫ ರೂ.ಗೆ ವೈದ್ಯಕೀಯ ಸೇವೆ ನೀಡುವ ಮೂಲಕ ಜನಮನ್ನಣೆ ಗಳಿಸಿದ್ದರೆ, ತಿ.ನರಸೀಪುರದ ಚಿನ್ನಸ್ವಾಮಿ ಅವರು ಹಾಲಿನ ದರ ಏರಿಕೆಯ ನಡುವೆಯೂ ಕೇವಲ ಐದು ರೂ.ಗೆ ಟೀ ಮತ್ತು ಕಾಫಿ ನೀಡುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನ.೧ರಿಂದ ಪ್ರತಿ ಲೀಟರ್ ಹಾಲಿನ ದರದಲ್ಲಿ ೮ ರೂ. ಏರಿಕೆಯಾಗುತ್ತಿರುವುದು ಜನಸಾಮಾನ್ಯರಿಗೆ ಹೊರೆಯಾಗಲಿದೆ. ಹಾಲಿನ ದರ ಏರಿಕೆಯ ನೇರ ಪರಿಣಾಮ ಹೋಟೆಲ್‌ಗಳು, ಟೀ ಅಂಗಡಿಗಳು ಹಾಗೂ ಸಣ್ಣಪುಟ್ಟ ಕ್ಯಾಂಟೀನ್‌ಗಳ ಮೇಲೂ ಬೀಳಲಿದ್ದು, ಈಗಾಗಲೇ ಟೀ ಮತ್ತು ಕಾಫಿ ದರಗಳು ಗ್ರಾಹಕರಿಗೆ ಹೊರೆಯಾಗಿವೆ. ಸಣ್ಣ ಟೀ ಅಂಗಡಿಗಳಲ್ಲಿ ೧೦ ರೂ. ಹಾಗೂ ಸಾಮಾನ್ಯ ಹೋಟೆಲ್ಗಳಲ್ಲಿ ೧೫ ರೂ. ಇರುವ ಟೀ, ಕಾಫಿ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಆದರೆ, ಬೆಲೆ ಏರಿಕೆಯ ಈ ಹೊತ್ತಿನಲ್ಲಿ ಪಟ್ಟಣದ ನ್ಯಾಯಾಲಯದ ಸಮೀಪವಿರುವ ಪುಟ್ಟ ಗುಡಿಸಲಿನ ಮಾದರಿಯ ಕ್ಯಾಂಟೀನ್‌ನಲ್ಲಿ ‘ಮಲೆ ಮಹದೇಶ್ವರ ಟೀ ಕಾರ್ನರ್’ ಹೆಸರಿನಲ್ಲಿ ವ್ಯಾಪಾರ ನಡೆಸುತ್ತಿರುವ ಚಿನ್ನಸ್ವಾಮಿ ಮಾತ್ರ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟದಂತೆ ನೋಡಿಕೊಳ್ಳುತ್ತಿದ್ದಾರೆ. ಹಾಲಿನ ದರ ಹೆಚ್ಚಾದರೂ ತಮ್ಮ ಅಂಗಡಿಯಲ್ಲಿ ಈ ಹಿಂದಿನಂತೆಯೇ ಕೇವಲ ಐದು ರೂಪಾಯಿಗೆ ಟೀ ಮತ್ತು ಕಾಫಿ ನೀಡುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಒಂದು ಕಾಲದಲ್ಲಿ ಪಟ್ಟಣದ ಮಹದೇಶ್ವರ ಭವನ ಹೋಟೆಲ್‌ನಲ್ಲಿ ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿದ್ದ ಚಿನ್ನಸ್ವಾಮಿ, ಇದೀಗ ಸ್ವಂತವಾಗಿ ಪುಟ್ಟ ಟೀ ಅಂಗಡಿ ಆರಂಭಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಟೀ ನಡೆಸುತ್ತಿದ್ದರೂ ತಮ್ಮ ಮೂಲ ವೃತ್ತಿಯನ್ನು ಮರೆತಿಲ್ಲ. ಬಿಡುವಿನ ವೇಳೆಯಲ್ಲಿ ಮದುವೆ, ವಿವಿಧ ಶುಭ ಸಮಾರಂಭಗಳಲ್ಲಿ ಅಡುಗೆ ಕೆಲಸ ಹಾಗೂ ದೋಸೆ ಹಾಕುವ ಭಟ್ಟರಾಗಿ ದುಡಿಯುತ್ತಿದ್ದಾರೆ.

ಕಡಿಮೆ ಬೆಲೆಗೆ ಟೀ, ಕಾಫಿ ನೀಡುತ್ತಿದ್ದಾರೆ ಎಂದ ಮಾತ್ರಕ್ಕೆ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಕಡಿಮೆ ದರದಲ್ಲಿ ಉತ್ತಮ ಗುಣ ಮಟ್ಟದ ಟೀ, ಕಾಫಿ ದೊರೆಯುತ್ತಿರುವುದರಿಂದ ಅವರ ಪುಟ್ಟ ಅಂಗಡಿಯ ಮುಂದೆ ಪ್ರತಿನಿತ್ಯ ಗ್ರಾಹಕರ ದಂಡೇ ಕಂಡು ಬರುತ್ತದೆ. ಲಾಭವನ್ನೇ ಮುಖ್ಯವಾಗಿಸಿ ಕೊಂಡಿರುವ ಇಂದಿನ ವ್ಯಾಪಾರಿ ಜಗತ್ತಿನಲ್ಲಿ ಗ್ರಾಹಕರ ಹಿತ ಮತ್ತು ಸಂತೃಪ್ತಿಗೆ ಆದ್ಯತೆ ನೀಡುತ್ತಿರುವ ಚಿನ್ನಸ್ವಾಮಿ ಅವರ ನಡೆ ನಿಜಕ್ಕೂ ಶ್ಲಾಘನೀಯ.

” ಲಾಭಾಂಶ ಸ್ವಲ್ಪ ಕಡಿಮೆಯಾದರೂ ಪರವಾಗಿಲ್ಲ, ತಮ್ಮ ಅಂಗಡಿಗೆ ಬರುವ ಗ್ರಾಹಕರು ತೃಪ್ತಿಯಿಂದ ಟೀ, ಕಾಫಿ ಸೇವಿಸಿ ಸಂತೋಷದಿಂದ ತೆರಳಬೇಕು ಎಂಬುದು ನನ್ನ ಆಶಯ.”

-ಚಿನ್ನಸ್ವಾಮಿ, ಟೀ ಅಂಗಡಿ ಮಾಲೀಕ 

 

 

ಆಂದೋಲನ ಡೆಸ್ಕ್

Recent Posts

ದೆಹಲಿಯಲ್ಲಿ ಮಾಲಿನ್ಯಕ್ಕೆ ಕಡಿವಾಣ: ಶೇ.50 ಸಿಬ್ಬಂದಿಗೆ ಮನೆಯಿಂದಲೇ ಕೆಲಸ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ವರದಿಯಾಗಿದೆ.…

3 mins ago

ಕರ್ನಾಟಕಕ್ಕೆ ₹4,504 ಕೋಟಿ ಹೆಚ್ಚುವರಿ ತೆರಿಗೆ ಪಾಲು ಬಿಡುಗಡೆ!

ನವದೆಹಲಿ: ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೆಚ್ಚುವರಿ ತೆರಿಗೆ ಪಾಲಿನ ಕಂತನ್ನು ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ 4,504 ಕೋಟಿ ರೂಪಾಯಿ ಹಂಚಿಕೆಯಾಗಿದೆ…

7 mins ago

ಎಲ್ಲೆಡೆ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮ!

ಮೈಸೂರು: ಹಳದಿ–ಕೆಂಪಿನ ರಂಗು… ಕನ್ನಡದ ಕಂಪು… ಕರುನಾಡೆಲ್ಲ ರಾಜ್ಯೋತ್ಸವದ ಸಂಭ್ರಮ! ನಮ್ಮ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಹೆಮ್ಮೆಯಿಂದ…

9 mins ago

ಧಾರವಾಡದ ‘ಅಗ್ದಿ ಖರೆ’ ಕನ್ನಡ

‘ಅವರಿಲ್ರಿ ಮನ್ಯಾಗ ಹಿಂದಾಗಡೆ ಬರ್ರಿ’ ಎಂದು ಹೇಳಿದ ಧಾರವಾಡ ಮಹಿಳೆಗೆ ಬೆಂಗಳೂರಿಗನೊಬ್ಬ ಹಿಂದಗಡೆ ಹೋಗಿದ್ದನಂತೆ ‘ಹವಣಿ ಇರಲಿ’ ಉಳ್ಳಾಗಡ್ಡಿ ಹೆಚ್ಚುವ…

13 mins ago

ಕುಂದಾಪ್ರ ಕನ್ನಡವೆಂದರೆ ‘ಭಾಷಿ ಅಲ್ಲ; ಬದ್ಕ್

‘ಒಣ ಮೀನ್ ಚಟ್ನಿ, ಕೊಚ್ಚಕ್ಕಿ ಗಂಜಿ ಇದ್ರೆ ಉಂಡಾತ್’ ಎನ್ನುವ ನಮ್ಮೂರವರಿಗೆ ಕುಂದಾಪ್ರ ಕನ್ನಡ ಬದುಕೇ ಹೌದು ಆಷಾಢ ಮಾಸದ…

16 mins ago

‘ಬಾ ಯಾ ಬಾ, ಉಂಬಟ್ ಬಾ ಮಗಾ’

ಅವ್ವನ ಬೀದರ ಭಾಷೆ ಕಿವಿಯಲ್ಲೇ ಇದ್ದಂತೆ, ಅವಳ ದನಿ ಗುನುಗಿದಂತೆ ಈಗಲೂ ಭಾಸವಾಗುತ್ತದೆ ಬೀದರಿನ ಭಾಷೆಯಲ್ಲಿ ದೇಶೀಯತೆ ನೆನಪಿಸಿಕೊಂಡರೆ, ಅವ್ವನ…

18 mins ago